• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shrimant Patil: ಕಾಮಗಾರಿಗೆ ಸರ್ಕಾರದಿಂದ ಸಿಗದ ಹಣ; ₹3 ಕೋಟಿ ಸ್ವಂತ ಹಣದಿಂದ ಯೋಜನೆ ಪೂರ್ಣಗೊಳಿಸಿದ ಶಾಸಕ

Shrimant Patil: ಕಾಮಗಾರಿಗೆ ಸರ್ಕಾರದಿಂದ ಸಿಗದ ಹಣ; ₹3 ಕೋಟಿ ಸ್ವಂತ ಹಣದಿಂದ ಯೋಜನೆ ಪೂರ್ಣಗೊಳಿಸಿದ ಶಾಸಕ

ಶಾಸಕ ಶ್ರೀಮಂತ ಪಾಟೀಲ್

ಶಾಸಕ ಶ್ರೀಮಂತ ಪಾಟೀಲ್

ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಚೆಕ್ ಮುಖಾಂತರ ಶಾಸಕ ಶ್ರೀಮಂತ ಪಾಟೀಲ್ ಅವರು ಹಣ ನೀಡಿದ್ದು, ಬಸವೇಶ್ವರ ಏತ ನೀರಾವರಿಗೆ ಯೋಜನೆಯ ಕಾಮಗಾರಿ ಈಗಾಗಲೇ ಕೊನೆಯ ಹಂತದಲ್ಲಿರುವ ಕಾರಣ ಚುನಾವಣೆಯ ನೀತಿ ಸಂಹಿತೆ ಘೋಷಣೆ ಆಗುವ ಮೊದಲೇ ಯೋಜನೆಯನ್ನು ಅನಾವರಣಗೊಳಿಸಲು ನಿರ್ಧರಿಸಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕೋಡಿ: ಚುನಾವಣೆ ಹತ್ತಿರ ಬರುತ್ತಿದೆ. (Karnataka Assembly Election) ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಚುನಾವಣೆಗೂ ಮುನ್ನ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ತರಾತುರಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು (Development Work) ನಡೆಸೋದು ಸಾಮಾನ್ಯ. ಆ ಅಭಿವೃದ್ಧಿ ಕೆಲಸಗಳು ಎಷ್ಟು ಗುಣಮಟ್ಟದ್ದು ಅನ್ನೋದು ಎರಡನೇ ಮಾತು. ಆದರೆ ಜನರ ಕಣ್ಣಿಗೆ ಕೆಲಸ ಮಾಡ್ತಿದ್ದಾರೆ ಎಂದು ತೋರಿಸಲಾದರೂ ಕೆಲಸ ಕಾರ್ಯಗಳ ಸದ್ದು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಣೋಕೆ ಸಿಗುತ್ತದೆ.


ಇದೆಲ್ಲ ಒಂದು ಕಡೆಯಾದರೆ ಅಭಿವೃದ್ಧಿ ಮಾಡೋಕೆ ಹಣವೇ ಮಂಜೂರಾಗದಿದ್ದರೆ ಏನ್ ಮಾಡೋದು? ವಿರೋಧ ಪಕ್ಷದವರಾದರೆ ಆಡಳಿತ ಪಕ್ಷದ ವಿರುದ್ಧ ಗೂಬೆ ಕೂರಿಸಿ ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಬಹುದು. ಆದರೆ ಆಡಳಿತ ಪಕ್ಷದ ಶಾಸಕರಿಗೇ ಹಣ ಸಿಗದಿದ್ದರೆ ಏನೂ ಮಾಡೋಕಾಗಲ್ಲ. ಒಂದು ಸಿಎಂ, ಸಚಿವರಿಗೆ ಒತ್ತಡ ಹಾಕಿಸಿ ಅನುದಾನ ತರಬಹುದು, ಅಥವಾ ದುಡ್ಡಿಲ್ಲದೆ ಕೆಲಸ ಮಾಡದೇ ಇರಬಹುದು. ಆದರೆ ಇಲ್ಲೊಬ್ಬ ಶಾಸಕರು ಕಾಮಗಾರಿಗಳ ಮುಕ್ತಾಯಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಣ ನೀಡದ ಕಾರಣ ಸ್ವತಃ ತಾನೇ ಕೈಯಿಂದ ಹಣ ಹಾಕಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.


ಇದನ್ನೂ ಓದಿ: Supreme Court: ಒಬ್ಬ ಅಭ್ಯರ್ಥಿ ಏಕಕಾಲಕ್ಕೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು: ಸುಪ್ರೀಂ ಕೋರ್ಟ್‌


ಮೂರೂವರೆ ಕೋಟಿ ಹಾಕಿದ ಶ್ರೀಮಂತ ಪಾಟೀಲ್


ಹೌದು.. ಶಾಸಕ ಶ್ರೀಮಂತ ಪಾಟೀಲ್ ಅವರು ಬಸವೇಶ್ವರ ಏತ ನೀರಾವರಿಗೆ ಯೋಜನೆ ಮುಕ್ತಾಯಕ್ಕೆ ರಾಜ್ಯ ಸರ್ಕಾರ ಹಣ ನೀಡದ ಕಾರಣ ಸ್ವತಃ ತಾನೇ 3.5 ಕೋಟಿ ಸ್ವಂತ ಹಣ ನೀಡಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಒಡೆತನದ ಅಥಣಿ ಶುಗರ್ ಕಾರ್ಖಾನೆ ವತಿಯಿಂದ 3.50 ಕೋಟಿ ಹಣವನ್ನು ಗುತ್ತಿಗೆದಾರರಿಗೆ ನೀಡಲು ನಿರ್ಧರಿಸಿದ್ದು, ಆ ಮೂಲಕ ಬಸವೇಶ್ವರ ಏತ ನೀರಾವರಿಗೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ.


ಕೊನೆ ಹಂತದಲ್ಲಿರುವ ಕಾಮಗಾರಿ


ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಚೆಕ್ ಮುಖಾಂತರ ಶಾಸಕ ಶ್ರೀಮಂತ ಪಾಟೀಲ್ ಅವರು ಹಣ ನೀಡಿದ್ದು, ಬಸವೇಶ್ವರ ಏತ ನೀರಾವರಿಗೆ ಯೋಜನೆಯ ಕಾಮಗಾರಿ ಈಗಾಗಲೇ ಕೊನೆಯ ಹಂತದಲ್ಲಿರುವ ಕಾರಣ ವಿದ್ಯುತ್ ಪರಿಕರಗಳ ಅಳವಡಿಕೆ, ಕೇಬಲ್ ಅಳವಡಿಕೆ ಮಾತ್ರ ಬಾಕಿ ಇದೆ. ಹೀಗಾಗಿ ಚುನಾವಣೆಯೂ ಹತ್ತಿರ ಬರುತ್ತಿರುವುದರಿಂದ ನೀತಿ ಸಂಹಿತೆ ಘೋಷಣೆ ಆಗುವ ಮೊದಲೇ ಯೋಜನೆಯನ್ನು ಅನಾವರಣಗೊಳಿಸಲು ನಿರ್ಧರಿಸಿದ್ದಾರೆ.


ಬಹುನಿರೀಕ್ಷಿತ ಯೋಜನೆ


ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಯೋಚಿಸಿದ್ದು, ಆ ಮೂಲಕ ಗಡಿ ಭಾಗದ ರೈತರ 32 ಹಳ್ಳಿಗಳ 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಬಹುನಿರೀಕ್ಷಿತ ಯೋಜನೆಯನ್ನು ಕಾರ್ಯರೂಪಕ್ಕೆ ತಂದಂತಾಗುತ್ತದೆ. ಈ ಬಾರಿಯ ಚುನಾವಣೆ ಕೂಡ ಪ್ರತಿಷ್ಠೆಗೆ ಕಾರಣವಾಗಿರುವುದರಿಂದ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಲೋಕಾರ್ಪಣೆಗೊಳಿಸಲು ಶ್ರೀಮಂತ ಪಾಟೀಲ್ ಪಣ ತೊಟ್ಟಿದ್ದಾರೆ.


ಇದನ್ನೂ ಓದಿ: HD Revanna: ಹೈವೋಲ್ಟೇಜ್‌ ಕ್ಷೇತ್ರ ಹಾಸನದಿಂದ ಚುನಾವಣೆಗೆ ಸ್ಪರ್ಧಿಸಲು ಎಚ್‌ಡಿ ರೇವಣ್ಣಗೆ ಸಿಕ್ತಾ ಗ್ರೀನ್‌ ಸಿಗ್ನಲ್?


ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಶ್ರೀಮಂತ ಪಾಟೀಲ್


ಅಂದ ಹಾಗೆ ಶ್ರೀಮಂತ ಪಾಟೀಲ್ ಈ ಹಿಂದೆ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಕಳೆದ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ಬೇಸರಗೊಂಡು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದರು. ಆಗ ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಶಾಸಕ ಶ್ರೀಮಂತ ಪಾಟೀಲ್ ಸಹಿತ ಬಿಜೆಪಿಗೆ ಹೋಗಿದ್ದ ಎಲ್ಲಾ 14 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಜೊತೆಗೆ ಮುಂದಿನ 5 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಪು ನೀಡಿದ್ದರು. ಆದರೆ ಬಳಿಕ ಸುಪ್ರೀಂ ಕೋರ್ಟ್‌ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿತ್ತು.


ಆದರೆ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ನಿರ್ಧಾರವನ್ನು ಅನೂರ್ಜಿತಗೊಳಿಸಿ ಮತ್ತೆ ಚುನಾವಣೆಗೆ ನಿಲ್ಲುವಂತೆ ಅವಕಾಶ ಮಾಡಿಕೊಟ್ಟಿತ್ತು.

Published by:Avinash K
First published: