• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?

JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?

ಶಾಸಕ ಶಿವಲಿಂಗೇಗೌಡ

ಶಾಸಕ ಶಿವಲಿಂಗೇಗೌಡ

ಕಳೆದ ಕೆಲ ದಿನಗಳಿಂದ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ನಾಯಕರ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಶಿವಲಿಂಗೇಗೌಡರ ವಿರುದ್ದ ಬಹಿರಂಗ ಸಭೆಯಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ  ಅಸಮಾಧಾನ ಹೊರ ಹಾಕಿದ್ದಾರೆ.

  • Share this:

2023 ಚುನಾವಣೆಯಲ್ಲಿ (Assembly Election 2023) ಬಹುಮತದೊಂದಿಗೆ ಅಧಿಕಾರ ಹಿಡಿಯಲು ಜೆಡಿಎಸ್ (JDS) ಪ್ರಯತ್ನ ನಡೆಯುತ್ತಿದೆ. ಇತ್ತ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ನಾಯಕರು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. YSV ದತ್ತಾ ಬೆನ್ನಲ್ಲೇ ಮತ್ತೋರ್ವ ಜೆಡಿಎಸ್ ಪ್ರಭಾವಿ ಶಾಸಕರಾಗಿರುವ ಕೆ.ಎಂ.ಶಿವಲಿಂಗೇಗೌಡರು (MLA KM Shivalingegowda) ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumarswamy) ಮತ್ತು ಶಿವಲಿಂಗೇಗೌಡರ ನಡುವೆ ಶೀತಲ ಸಮರ ನಡೆಯುತ್ತಿದೆ. ಬಹಿರಂಗವಾಗಿಯೇ ಇಬ್ಬರು ಈ ಸಂಬಂಧ ಹೇಳಿಕೆ ನೀಡಿದ್ದಾರೆ. ಇದೀಗ ಶಿವಲಿಂಗೇಗೌಡರು, ಜೆಡಿಎಸ್‌ನ ಪ್ರಮುಖ ವಾಟ್ಸಪ್ ಗ್ರೂಪ್‌ಗಳಿಂದ (Whatsapp Group) ಎಕ್ಸಿಟ್ ಆಗಿದ್ದಾರೆ.


2023ಕ್ಕೆ ಜನತಾ ಸರ್ಕಾರ ,ಕನ್ನಡ ನಾಡಿನ ಜೆಡಿಎಸ್ ಪಡೆ, ವಿಜಯಪುರ ಜೆಡಿಎಸ್, ದಳಪತಿಗಳ ಗ್ರೂಪ್‌ನಿಂದ  ನಿನ್ನೆ ಸಂಜೆ ಶಿವಲಿಂಗೇಗೌಡರು ಹೊರ ಬಂದಿದ್ದಾರೆ. ಹಲವು ವರ್ಷಗಳಿಂದ ಈ ಗ್ರೂಪ್ ಗಳಲ್ಲಿ ಶಾಸಕರು ಆಕ್ಟಿವ್ ಆಗಿದ್ದರು.


ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದ ದೂರ


ಕಳೆದ ಕೆಲ ದಿನಗಳಿಂದ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ನಾಯಕರ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಶಿವಲಿಂಗೇಗೌಡರ ವಿರುದ್ದ ಬಹಿರಂಗ ಸಭೆಯಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ  ಅಸಮಾಧಾನ ಹೊರ ಹಾಕಿದ್ದಾರೆ. ಇದಾದ ಬಳಿಕ ಜೆಡಿಎಸ್‌ನ ಎಲ್ಲ ಕಾರ್ಯಕ್ರಮಗಳಿಂದ ಕೆ.ಎಂ.ಶಿವಲಿಂಗೇಗೌಡರು ದೂರ ಉಳಿದಿದ್ದರು.


ಇದನ್ನೂ ಓದಿ:  Bengaluru Potholes: ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP


ಈ ಗ್ರೂಪ್​ಗಳಲ್ಲಿ ಜೆಡಿಎಸ್‌ನ ಪ್ರಮುಖ ನಾಯಕರು, ಕೆಲ ಶಾಸಕರು, ಶಾಸಕರ ಆಪ್ತ ಕಾರ್ಯದರ್ಶಿಗಳಿದ್ದರು. ಇದೀಗ ಪಕ್ಷದ ವಾಟ್ಸಪ್ ಗ್ರೂಪ್‌ನಿಂದ ಹೊರ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


ಶಿವಲಿಂಗಣ್ಣ ನಮ್ಮ ಜೊತೆಯಲ್ಲಿರ್ತಾರೆ ಅಂದ್ರು ಪ್ರಜ್ವಲ್ ರೇವಣ್ಣ


ಶಾಸಕ ಶಿವಲಿಂಗೆಗೌಡ ಜೆಡಿಎಸ್ ವಾಟ್ಸಪ್ ಗ್ರೂಪ್‌ನಿಂದ ಎಕ್ಸಿಟ್ ಆಗಿರುವ ವಿಚಾರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ನನ್ನ ವಾಟ್ಸಪ್ ನಲ್ಲಿ 2 ಸಾವಿರ ಗ್ರೂಪ್ ಇತ್ತು. ಹೀಗಾಗಿ ಮೊಬೈಲ್ ಹ್ಯಾಂಗ್ ಆಗ್ತಿತ್ತು. ಅದ್ದರಿಂದ ಎಲ್ಲ ಡಿಲೀಟ್ ಮಾಡಿದ್ದೀನಿ.


ಅದೇ ರೀತಿ ಶಿವರಾಮೇಗೌಡರಿಗೂ ಆಗಿರಬೇಕು. ಶಿವಲಿಂಗಣ್ಣ ನಮ್ಮ ಜೊತೆಯಲ್ಲಿ ಇರುತ್ತಾರೆ. ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಹೇಳಿದರು.


ಅಗ್ನಿಪಥ್ ದಾರಿ ತಪ್ಪಿಸುವ ಸ್ಕೀಮ್


ಇದೇ ವೇಳೆ ಅಗ್ನಿಪಥ್ ಯೋಜನೆ ಕುರಿತು ಭುಗಿಲೆದ್ದ ಆಕ್ರೋಶದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ಯುವ ಜನರನ್ನು ದಾರಿ ತಪ್ಪಿಸುವ ಯೋಜನೆ ಇದಾಗಿದೆ. ಫರ್ಸ್ಟ್ ಲೈನ್ ಆಫ್ ಡಿಫೆನ್ಸ್ ಅನ್ನೋದು CRPF. ಯುವ ಜನರನ್ನ ಹಾಳು ಮಾಡಿ ಹೊರಗೆ ಕಳುಹಿಸಿದ್ರೆ ಅವರ ಭವಿಷ್ಯ ಏನು ಎಂದು ಪ್ರಶ್ನೆ ಮಾಡಿದರು.


ಅಗ್ನಿವೀರ್ ಸೇವೆಯಿಂದ ಹೊರ ಬಂದ ಬಳಿಕ ಪ್ರೈವೇಟ್ ಏಜೆನ್ಸಿಯಲ್ಲಿ ಕೆಲಸ ಕೊಡಿಸೋ ಅಗ್ರಿಮೆಂಟ್ ಮಾಡಿ. ಆ ಬಳಿಕ ಒಪ್ಪಿಕೊಳ್ಳುತ್ತೇವೆ. ಇದು ಗುತ್ತಿಗೆ ಕೆಲಸ ಅಂತ ಕೇಂದ್ರ ಹೇಳಿದೆ. ಹೀಗಾಗಿ ಅಗ್ನಿಪಥ್ ಯೋಜನೆ ಬಳಿಕ ಮುಂದೆ ಕೆಲಸ ನೀಡುವ ಬಗ್ಗೆ ಅಗ್ರಿಮೆಂಟ್ ಮಾಡಿ ಆದೇಶ ಹೊರಡಿಸಬೇಕು.


ಇದನ್ನೂ ಓದಿ:  BRTS Chigari: ಬರೋಬ್ಬರಿ ₹970 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರು, ಮೂರೇ ವರ್ಷದಲ್ಲಿ ಮತ್ತೆ 70 ಕೋಟಿ ವೆಚ್ಚ!


ನಾನು ಆ ಬಗ್ಗೆ ಟೀಕೆ ಮಾಡಲ್ಲ


ನಾನು ಮತ್ತೆ ಸಿಎಂ ಆಗ್ತೀನಿ ಎಂದ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಜ್ವಲ್, ಈ ಬಗ್ಗೆ ಟೀಕೆ ಮಾಡಲ್ಲ.ಆದರೆ ಒಂದು ಚುನಾವಣೆ ಮತ್ತೊಂದು ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ನಾಲ್ಕೈದು ತಿಂಗಳ ಹಿಂದೆ ಮೈನಾರಿಟಿಯಲ್ಲಿ ಮುಂಚೂಣಿಯಲ್ಲಿದ್ದೀವಿ.ಯಾವುದೋ ಚುನಾವಣೆಯಲ್ಲಿ ಎಡವಿದ್ರೆ ಮುಂದೆ ಹಾಗೆ ಆಗಲ್ಲ ಎಂದು ಹೇಳಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು