news18-kannada Updated:January 19, 2021, 4:27 PM IST
ಶಾಸಕ ಶರಣಬಸ್ಸಪ್ಪಗೌಡ
ಯಾದಗಿರಿ(ಜ.19): ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಹೇಳಿಕೆಗೆ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಸವಾಲ್ ಹಾಕಿದ್ದಾರೆ. ಉದ್ದವ್ ಠಾಕ್ರೆ ಕರ್ನಾಟಕಕ್ಕೆ ಬಂದು, ಬೆಳಗಾವಿಯಲ್ಲಿ ಒಂದಿಂಚು ಜಾಗ ತೆಗೆದುಕೊಂಡು ನೋಡಲಿ, ಸಿಎಂ ಉದ್ದವ್ ಠಾಕ್ರೆ ಅವರು ಮಹಾರಾಷ್ಟ್ರದಿಂದ ಜನರನ್ನು ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ. ಕನ್ನಡಿಗರೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ.ಕನ್ನಡಿಗರು ಸುಮ್ಮನೆ ಇದ್ದರೆ ಸುಮ್ಮನೆ ಇರುತ್ತೇವೆ. ನಮಗೆ ತೊಂದರೆ ಕೊಟ್ಟರೆ ನಾವೇನು ಮಾಡುತ್ತೀವಿ ಅಂತ ಇತಿಹಾಸ ತಿಳಿಸುತ್ತದೆ ಎಂದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮೇಲೆ ಹಲವಾರು ಆರೋಪಗಳಿವೆ. ಈಗಾಗಲೇ ಸಚಿವರು ಹಾಗೂ ಬಿಜೆಪಿ ಶಾಸಕರು ಆರೋಪಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಬಿಎಸ್ ವೈ ಅವರನ್ನು ಮುಂದುವರೆಸಲು ಸಾಧ್ಯವಿಲ್ಲ . ಸಿಎಂ ಸ್ಥಾನದಿಂದ ಬಿಎಸ್ ವೈ ಅವರನ್ನು ತೆಗೆಯುತ್ತಾರೆ ಎಂದು ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬೆಟ್ಟಿಂಗ್ ದಂಧೆ; ಉತ್ತರಪ್ರದೇಶ ಬಿಜೆಪಿ ನಾಯಕನ ಬಂಧನ!
ಜನರ ಮೊರೆ ಹೋಗಲಿ..!
ಸಿಎಂ ಬಿಎಸ್ ವೈ ಅವರು ಸಂಕಷ್ಟದಿಂದ ಪಾರಾಗಲು ಇಂದು ಟೆಂಪಲ್ ರನ್ ನಡೆಸಿ ದೇವರ ಮೋರೆ ಹೋಗಿದ್ದಾರೆ. ದೇವರ ಮೊರೆ ಹೋಗುವ ಬದಲು ಸಿಎಂ ಜನರ ಮೊರೆ ಹೋಗಬೇಕಾಗಿದೆ. ಜನರ ಮೊರೆ ಹೋದ್ರೆ ಜನರ ಮನಸ್ಸಿನಲ್ಲಿ ಇರಬಹುದಾಗಿದೆ. ಜನರ ಮನಸ್ಸಿನಲ್ಲಿ ಇದ್ದರೆ ನೀವು ಸರಕಾರ ರಚನೆ ಮಾಡಬಹುದು. ಈಗಾಗಲೇ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಎಂ.ಪಿ.ರೇಣುಕಾಚಾರ್ಯ ಅವರು ಸಿಡಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಕೆಲವರು ಸಿಎಂ ಬಿಎಸ್ ವೈ ಅವರ ವಿಚಾರದ ಸಿಡಿ ಇಟ್ಟುಕೊಂಡು ಸಿಎಂಗೆ ಭಯಹುಟ್ಟಿಸಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆಂದರು.ಕೆಲವರು ಹಣ ಕೊಟ್ಟು ಹಾಗೂ ಸಿಎಂಗೆ ಅಂಜಿಸಿ ಸಚಿವರಾಗಿದ್ದಾರೆ. ಶಾಸಕ ಯತ್ನಾಳ ಅವರು ಸಿಡಿ ನೋಡಿರಬಹುದು ಹೀಗಾಗಿ ವಿಷಯ ಪ್ರಸ್ತಾಪ ಮಾಡಿದ್ದಾರೆಂದರು.
17 ಜನ ಶಾಸಕರು ಬಿಜೆಪಿಗೆ ಬರಲು ಬಿಜೆಪಿ ನಾಯಕರು ಹಣ ಖರ್ಚು ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರೈತರ ಕಾಳಜಿ ಇಲ್ಲ, ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ.ರೈತರು ಮೃತಪಟ್ಟರು ರೈತರ ಸಮಸ್ಯೆಗಳನ್ನು ಕೇಳಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೋದಿ ಅವರಿಗೆ ರೈತರ ಕಾಳಜಿ ಇದ್ದರೆ ಪ್ರತಿಭಟನೆ ಸ್ಥಳಕ್ಕೆ ತೆರಳಿ ರೈತರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲವೆಂದರು.
Published by:
Latha CG
First published:
January 19, 2021, 4:26 PM IST