• Home
  • »
  • News
  • »
  • state
  • »
  • Yadagiri: ನನಗೂ ಸಿಎಂ ಆಗುವ ಆಸೆ ಇದೆ, ದಲಿತ ವ್ಯಕ್ತಿ ಸಿಎಂ ಆಗಬಹುದು ಎಂದ ಶಾಸಕ ಶರಣ ಬಸಪ್ಪ ಗೌಡ 

Yadagiri: ನನಗೂ ಸಿಎಂ ಆಗುವ ಆಸೆ ಇದೆ, ದಲಿತ ವ್ಯಕ್ತಿ ಸಿಎಂ ಆಗಬಹುದು ಎಂದ ಶಾಸಕ ಶರಣ ಬಸಪ್ಪ ಗೌಡ 

ಶಾಸಕ ಶರಣಬಸಪ್ಪ ಗೌಡ

ಶಾಸಕ ಶರಣಬಸಪ್ಪ ಗೌಡ

ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಕೂಡ ನಾನು ಸಿಎಂ ಆಗುವ ಆಸೆ ಹೊಂದಿದ್ದೇನೆ ಎನ್ನುವ ಮೂಲಕ ಪಕ್ಷ ಬಯಸಿದರೇ ನಾನು ಯಾಕೆ ಸಿಎಂ ಆಗಬಾರದೆಂದು ಅಭಿಲಾಷೆ ಹೊಂದಿದ್ದಾರೆ. 

  • Share this:

ಯಾದಗಿರಿ(ಜು.23): ರಾಜ್ಯದಲ್ಲಿಗ ಮುಖ್ಯಮಂತ್ರಿ (CM) ಪಟ್ಟದ ಮೇಲೆ ಕಾಂಗ್ರೆಸ್ (Congress), ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಪಕ್ಷದ ನಾಯಕರು ಕಣ್ಣಿಟ್ಟಿದ್ದು ಆಯಾ ಪಕ್ಷದಲ್ಲಿ ವಿಧಾನಸಭೆ ಚುನಾವಣೆ ಮುನ್ನವೇ  ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಇದರ ನಡುವೆ ಶಾಸಕ ಶರಣ ಬಸಪ್ಪ ಗೌಡ (Sharanabasappa Gouda) ದರ್ಶನಾಪುರ ಅವರು ಕೂಡ ನಾನು ಸಿಎಂ ಆಗುವ ಆಸೆ ಹೊಂದಿದ್ದೇನೆ ಎನ್ನುವ ಮೂಲಕ ಪಕ್ಷ ಬಯಸಿದರೇ ನಾನು ಯಾಕೆ ಸಿಎಂ ಆಗಬಾರದೆಂದು ಅಭಿಲಾಷೆ ಹೊಂದಿದ್ದಾರೆ. ಯಾದಗಿರಿ ನಗರದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಶರಣ ಬಸಪ್ಪ ಗೌಡ ದರ್ಶನಾಪುರ ಅವರು ಮಾತನಾಡಿ, ಸಿಎಂ ಆಗಬೇಕೆಂಬುದು ಎಲ್ಲರಿಗೂ ಆಸೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ,ಜಿ.ಪರಮೇಶ್ವರ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ಹಾಗೂ ಇನ್ನಷ್ಟು ಬಹಳಷ್ಟು ಜನ‌ ಸಿಎಂ ಆಕಾಂಕ್ಷಿಗಳು ಇದ್ದಾರೆ ಎಂದರು.


ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿಯನ್ನು ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ.ಬಿಜೆಪಿ ಪಕ್ಷದಲ್ಲಿ ಸಿಎಂ ಆಗುವ ಅಕಾಂಕ್ಷಿಗಳು ಬಹಳಷ್ಟು ಜನ‌ ಇದ್ದಾರೆ.


ಕಾಂಗ್ರೆಸ್ ನಿಂದ ದಲಿತ ಸಿಎಂ ಆಗಬಹುದು


ಸಮಾಜಿಕ ನ್ಯಾಯ ದೊರಕಿಸುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ದಲಿತ ಸಿಎಂ ನೀಡಲು ಸಾಧ್ಯ.ಬೇರೆ ರಾಜ್ಯದಲ್ಲಿ ದಲಿತರನ್ನು ಕಾಂಗ್ರೆಸ್ ಸಿಎಂ ಮಾಡಿದೆ.ಅದರಂತೆ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಬಹುದು ಎಂದರು.ದಲಿತರನ್ನು ಬಿಜೆಪಿ ಸಿಎಂ ಮಾಡಿ ತೊರಿಸಲಿ ಎಂದು ದರ್ಶನಾಪುರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


224 ಸ್ಥಾನದಲ್ಲಿ 420 ಸ್ಥಾನ‌ ಗೆಲ್ಲುವದು ಹೇಗೆ ಸಾಧ್ಯ


ಎಲ್ಲ ಪಕ್ಷದವರು ಕೂಡ  ಹೆಚ್ಚಿನ ಸ್ಥಾನ‌ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.ರಾಜ್ಯದಲ್ಲಿ 224  ವಿಧಾನಸಭೆ ಕ್ಷೇತ್ರಗಳು ಮಾತ್ರ ಇದ್ದು,ಜೆಡಿಎಸ್ ನವರು 120 ಸ್ಥಾನ ಗೆಲ್ಲುತ್ತೆವೆ ಎನ್ನುತ್ತಾರೆ.ಇನ್ನೂ ಬಿಜೆಪಿ 150 ಸ್ಥಾನ ಬರುತ್ತವೆ ಎನ್ನುತ್ತಾರೆ.ನಾವು 150 ಸ್ಥಾನ ಬರುತ್ತವೆ ಎನ್ನುತ್ತಿದ್ದೆವೆ ,224 ಸ್ಥಾನಗಳಲ್ಲಿ 420 ಸ್ಥಾನ ಹೇಗೆ ಬರುತ್ತವೆ ಎಂದು ಪ್ರಶ್ನೆ ಮಾಡಿದರು.


ಅತಂತ್ರ ಪರಿಸ್ಥಿತಿ ಒಳ್ಳೆದಲ್ಲ


ರಾಜ್ಯದ ಅಭಿವೃದ್ಧಿ ಹೀತ ದೃಷ್ಟಿಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗದೆ ರಾಜ್ಯದ ಮತದಾರರು ಒಂದು ಪಕ್ಷಕ್ಕೆ ಸ್ಪಷ್ಟಬಹುಮತ ನೀಡಿದರೆ .ಅನುಕೂಲವಾಗುತ್ತದೆ ಎಂದರು.


ಇದನ್ನೂ ಓದಿ: Parrot: ಕೊನೆಗೂ ಮಾಲೀಕರ ಕೈ ಸೇರಿದ ನಾಪತ್ತೆಯಾಗಿದ್ದ ಗಿಣಿ, 50ರ ಬದಲು 75 ಸಾವಿರ ರೂ. ಬಹುಮಾನ!


ಬಿಎಸ್ ವೈ ವಿರುದ್ಧ ವಾಗ್ದಾಳಿ


ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗದ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರಗೆ ತ್ಯಾಗ ಮಾಡಿದ ವಿಚಾರಕ್ಕೆ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಬಿ.ಎಸ್.ವೈ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ತನ್ನ ಮಗನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದು ಘನಂದಾರಿ ಕೆಲಸನಾ ? ಪುತ್ರನಿಗೆ ಬಿಟ್ಟು ಕೊಡುವುದು ದೊಡ್ಡ ಮಾತಾ? ಕಾರ್ಯಕರ್ತರಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರೆ ದೊಡ್ಡ ಮಾತಾಗುತಿತ್ತು.


ಮೋದಿ ಮಾತಿಗೆ ಬೆಲೆ ಇಲ್ಲ


ಬಿಎಸ್ ವೈ ಅವರನ್ನು ಗೆಲ್ಲಿಸಿದ ಯಾವ ಕಾರ್ಯಕರ್ತರು ಇಲ್ವಾ? ಅವರಿಗೆ ಕ್ಷೇತ್ರ ಬಿಡಬೇಕಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಟಿಕೆಟ್ ಕೊಡಲ್ಲ ಅಂತ ಹೇಳ್ತಾರೆ. ಆದರೆ, ಯಡಿಯೂರಪ್ಪ ತನ್ನ ಮಗನಿಗೆ ಬಿಟ್ಟು ಕೊಟ್ಟಿದ್ದಾರೆ. ಮೋದಿ ಮಾತಿಗೆ ಬೆಲೆ ಇಲ್ಲವೆಂಬುದು ಅರ್ಥವಾಗುತ್ತದೆ.


ಇದನ್ನೂ ಓದಿ: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ


ಕುಟುಂಬ ರಾಜಕೀಯ ಮಾಡಲ್ಲವೆಂದು ಮೋದಿ ಹೇಳುತ್ತಾರೆ. ಆದರೆ, ಯಡಿಯೂರಪ್ಪ ಇಲ್ಲಿ ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿ.ಎಸ್ ವೈ ವಿರುದ್ಧ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Published by:Divya D
First published: