• Home
  • »
  • News
  • »
  • state
  • »
  • Murugha Swamy: ಹೆಣ್ಮಕ್ಕಳು ಸ್ವಾಮಿಗಳ ಬಳಿ ಹೋಗದ ಪರಿಸ್ಥಿತಿ ನಿರ್ಮಾಣ: ಶಾಸಕ ಶಾಮನೂರು ಶಿವಶಂಕರಪ್ಪ

Murugha Swamy: ಹೆಣ್ಮಕ್ಕಳು ಸ್ವಾಮಿಗಳ ಬಳಿ ಹೋಗದ ಪರಿಸ್ಥಿತಿ ನಿರ್ಮಾಣ: ಶಾಸಕ ಶಾಮನೂರು ಶಿವಶಂಕರಪ್ಪ

ಮುರುಘಾ ಸ್ವಾಮಿ ಮತ್ತು ಶಾಮನೂರು ಶಿವಶಂಕರಪ್ಪ

ಮುರುಘಾ ಸ್ವಾಮಿ ಮತ್ತು ಶಾಮನೂರು ಶಿವಶಂಕರಪ್ಪ

ನಮ್ಮ ಹೆಣ್ಣು ಮಕ್ಕಳು ಸಹ ಎಚ್ಚರವಾಗಿರಬೇಕು. ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಕೈಗೊಳ್ಳಲಿದೆ  ಎಂದರು. ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂಬುದು ವೀರಶೈವರು ಅರಿಯಬೇಕು. ಒಳಪಂಗಡ ಬೇಧ ಮರೆತು ವೀರಶೈವರು ಒಂದಾಗಬೇಕು ಎಂದು ಕರೆ ನೀಡಿದರು.

  • News18 Kannada
  • Last Updated :
  • Davanagere (Davangere), India
  • Share this:

ಚಿತ್ರದುರ್ಗದ ಮುರುಘಾ ಸ್ವಾಮಿ (Murugha Swamy) ವಿರುದ್ಧ ದಾಖಲಾದ ಮೊದಲ ಪೋಕ್ಸೋ ಪ್ರಕರಣಕ್ಕೆ (POCSO Case) ಸಂಬಂಧಿಸಿದ ದೋಷಾರೋಪ ಪಟ್ಟಿಯನ್ನು (Charge sheet) ನ್ಯಾಯಾಲಯಕ್ಕೆ (Court) ಸಲ್ಲಿಕೆ ಮಾಡಲಾಗಿದೆ. ನವೆಂಬರ್ 4ರಂದು ಈ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಸದ್ಯ  ನ್ಯಾಯಾಂಗ ಬಂಧನದಲ್ಲಿ (Judicial Custody) ಮುರುಘಾ ಸ್ವಾಮಿಯ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ದೋಷಾರೋಪ ಪಟ್ಟಿಯ ಅಂಶಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ರಾಜಕೀಯ ನಾಯಕರು (Political Leaders) ಮತ್ತು ಸಮಾಜದ ಮುಖಂಡರು (Community Leader) ಬಹಿರಂಗವಾಗಿ ಮುರುಘಾ ಸ್ವಾಮಿ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆಯಷ್ಟೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಸಹ ಮುರುಘಾ ಸ್ವಾಮಿ ವಿರುದ್ಧ  ಮಾತನಾಡಿದ್ದರು.


ಸಾಣೇಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕ, ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ತರಳಬಾಳು ಮಠದಿಂದ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಇವತ್ತು ದಿನಪೂರ್ತಿ ಟಿವಿಗಳಲ್ಲಿ ನೋಡುತ್ತಿದ್ದೇವೆ. ಹೆಣ್ಣು ಮಕ್ಕಳು ಸ್ವಾಮಿಗಳ ಬಳಿ ಹೋಗದಂತ ಸ್ಥಿತಿ‌‌ ನಿರ್ಮಾಣ. ಇಂಥ ಪರಿಸ್ಥಿತಿ ಬರಬಾರದು ಎಂದು ಹೇಳಿದರು.


ನಮ್ಮ ಹೆಣ್ಣು ಮಕ್ಕಳು ಸಹ ಎಚ್ಚರವಾಗಿರಬೇಕು. ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಕೈಗೊಳ್ಳಲಿದೆ  ಎಂದರು. ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂಬುದು ವೀರಶೈವರು ಅರಿಯಬೇಕು. ಒಳಪಂಗಡ ಬೇಧ ಮರೆತು ವೀರಶೈವರು ಒಂದಾಗಬೇಕು ಎಂದು ಕರೆ ನೀಡಿದರು.


ಸ್ವಶಕ್ತಿ ಪ್ರದರ್ಶಿಸಬೇಕು


ಇವತ್ತಿನ ಸಮಾರಂಭದಲ್ಲಿ ಎಲ್ಲರೂ ಸರ್ಕಾರದ ಸಹಾಯ ಕೇಳುತ್ತಿದ್ದಾರೆ. ಸರ್ಕಾರದಿಂದ ಸಹಾಯ ಬೇಕೆಂದು ಕೇಳುವುದು ನಾಚಿಕೆಗೇಡು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಸ್ವಾಭಿಮಾನದಿಂದ ಇರಬೇಕು, ಸ್ವಶಕ್ತಿ ಪ್ರದರ್ಶಿಸಬೇಕು. ಸರ್ಕಾರದ ಮೇಲೆ ಡಿಪೆಂಡ್ ಆದರೆ ಎಂದೂ ಕೆಲಸ ಆಗಲ್ಲ. ಹತ್ತು ರೂಪಾಯಿ ದುಡಿದರೆ ಒಂದು ರೂಪಾಯಿ ದಾನ ಧರ್ಮ ಮಾಡಬೇಕು. ದಾನ ಧರ್ಮದಿಂದಲೇ ನಾವು ಶ್ರೀಮಂತರಾಗಿದ್ದೇವೆ ಎಂದು ತಿಳಿಸಿದರು.


MLA shamanuru shivashankarappa reacts on murugha swamy case mrq
ಮುರುಘಾ ಸ್ವಾಮಿ


ನಾಟಕೋತ್ವವ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶ್ರೀ, ಸಿಎಂ ಬೊಮ್ಮಾಯಿ ಸೇರಿ ಗಣ್ಯರು ಉಪಸ್ಥಿತರಿದ್ದರು.


ಬಿಎಸ್​ ಯಡಿಯೂರಪ್ಪ ಹೇಳಿದ್ದೇನು?


ಮುರುಘಾ ಮಠದ (Murugh Math) ಡಾ. ಶಿವಮೂರ್ತಿ ಸ್ವಾಮಿ (Dr. Shivamurthy Swamy) ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ” ಅಂತ ಆಕ್ರೋಶದ ಮಾತನ್ನಾಡಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, “ಮುರುಘಾ ಸ್ವಾಮಿ ಮಾಡಿದ್ದು ಅಕ್ಷಮ್ಯ ಅಪರಾಧ” ಅಂತ ಹೇಳಿದ್ದಾರೆ.


ಇದನ್ನೂ ಓದಿ: Murugha Swamy Case: ಮುರುಘಾ ಸ್ವಾಮಿ ಕೇಸ್; ಪೊಲೀಸರಿಂದ ಒಡನಾಡಿ ಸಂಸ್ಥೆ ಮುಖ್ಯಸ್ಥರ ವಿಚಾರಣೆ


ಮುರುಘಾ ಸ್ವಾಮೀಜಿ ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ನಿರೀಕ್ಷೆ ಮಾಡಿರಲಿಲ್ಲ ಅಂತ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.


“ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು”


ಮುರುಘಾ ಶ್ರೀಗಳು ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿರುವ ಬಿಎಸ್ ಯಡಿಯೂರಪ್ಪ, ಇದನ್ನು ಎಲ್ಲರೂ ಖಂಡಿಸಬೇಕು ಅಂತ ಹೇಳಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.


MLA shamanuru shivashankarappa reacts on murugha swamy case mrq
ಮುರುಘಾ ಸ್ವಾಮಿ


694 ಪುಟಗಳ ಚಾರ್ಜ್‌ಶೀಟ್!


ಮುರುಘಾ ಸ್ವಾಮಿ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 694 ಪುಟಗಳ ಚಾರ್ಜ್ ಶೀಟ್ ನಲ್ಲಿ ಮಠದಲ್ಲಿ ನಡೆಯುತ್ತಿದೆ ಎನ್ನಲಾದ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.


ಇದನ್ನೂ ಓದಿ:  Murugha Swamy: ಬಿಳಿ ಪೌಡರ್​ಗಾಗಿ ಗೋಡೆ ಮುಂದೆ ಅಳ್ತಿದ್ದ ಬಾಲಕಿ; ಡ್ರಗ್ಸ್​ ದಾಸರನ್ನಾಗಿಸಿ ವಿಕೃತವಾಗಿ ಬಳಕೆ


ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‌ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

Published by:Mahmadrafik K
First published: