• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Gift Politics:  ಕುಕ್ಕರ್, ಸೀರೆ ಹಂಚಿಕೆ ಆಯ್ತು; ಈಗ ಹೊಸ ತೊಡಕಿಗೆ ಮನೆ ಮನೆಗೂ ಕೋಳಿ ಗಿಫ್ಟ್

Gift Politics:  ಕುಕ್ಕರ್, ಸೀರೆ ಹಂಚಿಕೆ ಆಯ್ತು; ಈಗ ಹೊಸ ತೊಡಕಿಗೆ ಮನೆ ಮನೆಗೂ ಕೋಳಿ ಗಿಫ್ಟ್

ಶಾಸಕ ಸತೀಶ್ ರೆಡ್ಡಿ ಆಪ್ತರಿಂದ ಕೋಳಿ, ಸೀರೆ, ಟಿಫಿನ್ ಬಾಕ್ಸ್ ಹಂಚಿಕೆ

ಶಾಸಕ ಸತೀಶ್ ರೆಡ್ಡಿ ಆಪ್ತರಿಂದ ಕೋಳಿ, ಸೀರೆ, ಟಿಫಿನ್ ಬಾಕ್ಸ್ ಹಂಚಿಕೆ

ಇನ್ನು ಮಹಿಳಾ ಮತದಾರರಿಗೆ ಕೋಳಿ ಜೊತೆ ಸೀರೆ ಹಾಗೂ ಟಿಫಿನ್ ಬಾಕ್ಸ್ ನೀಡಲಾಗುತ್ತಿದೆ. ಸೀರೆ ಮತ್ತು ಟಿಫಿನ್ ಬಾಕ್ಸ್​ ಮೇಲೆ ಶಾಸಕ ಸತೀಶ್ ರೆಡ್ಡಿ ಅವರ ಫೋಟೋ ಹಾಕಿಸಲಾಗುತ್ತಿದೆ. ಸೀರೆ, ಕೋಳಿ, ಟಿಫಿನ್ ಬಾಕ್ಸ್ ಪಡೆಯಲು ಮಹಿಳೆಯರು ಕ್ಯೂನಲ್ಲಿ ನಿಂತಿದ್ದರು.

  • Share this:

ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಮತದಾರರನ್ನು (Voters) ಸಳೆಯಲು ರಾಜಕೀಯ ಮುಖಂಡರು (Political Leaders) ಗಿಫ್ಟ್​ ಮೇಲೆ ಗಿಫ್ಟ್ ನೀಡುತ್ತಿದ್ದಾರೆ. ಕುಕ್ಕರ್, ಸೀರೆ, ಟಿವಿ, ವಾಷಿಂಗ್ ಮಷಿನ್, ಇಸ್ತ್ರಿ ಪೆಟ್ಟಿಗೆ, ಶಾಲಾ ಬ್ಯಾಗ್​ಗಳನ್ನು ವಿತರಣೆ ಮಾಡಲಾಗುತ್ತಿದೆ. ಸದ್ಯ ಪೊಲೀಸರು ಅಲರ್ಟ್​  ಆಗಿದ್ದು, ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿರುವ ಹಣ (Money), ಚಿನ್ನ (Gold), ಸೀರೆ (Saree) ಹೀಗೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಇಂದು ಯುಗಾದಿ ಹೊಸ ವರ್ಷ ತೊಡಕು ಹಿನ್ನೆಲೆ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ (Bommanahalli Constituency) ಕೋಳಿಗಳನ್ನು ಹಂಚಲಾಗುತ್ತಿದೆ. ಕ್ಷೇತ್ರದ ಮತದಾರರ ಮನೆಗಳಿಗೆ ಕೋಳಿಗಳನ್ನು ವಿತರಣೆ ಮಾಡಲಾಗುತ್ತಿದೆ.


ಶಾಸಕ ಸತೀಶ್ ರೆಡ್ಡಿ ಆಪ್ತ ವಲಯದಲ್ಲಿ  ಗುರುತಿಸಿಕೊಂಡಿರುವ ಮಾಜಿ ಉಪಮೇಯರ್ ರಾಮ್ ಮೋಹನ್ ರಾಜು ಕೋಳಿಗಳನ್ನು ಹಂಚಿಕೆ ಮಾಡುತ್ತಿದ್ದಾರೆ.


ಶಾಸಕ ಸತೀಶ್ ರೆಡ್ಡಿ ಆಪ್ತರಿಂದ ಕೋಳಿ, ಸೀರೆ, ಟಿಫಿನ್ ಬಾಕ್ಸ್ ಹಂಚಿಕೆ


ಇನ್ನು ಮಹಿಳಾ ಮತದಾರರಿಗೆ ಕೋಳಿ ಜೊತೆ ಸೀರೆ ಹಾಗೂ ಟಿಫಿನ್ ಬಾಕ್ಸ್ ನೀಡಲಾಗುತ್ತಿದೆ. ಸೀರೆ ಮತ್ತು ಟಿಫಿನ್ ಬಾಕ್ಸ್​ ಮೇಲೆ ಶಾಸಕ ಸತೀಶ್ ರೆಡ್ಡಿ ಅವರ ಫೋಟೋ ಹಾಕಿಸಲಾಗುತ್ತಿದೆ. ಸೀರೆ, ಕೋಳಿ, ಟಿಫಿನ್ ಬಾಕ್ಸ್ ಪಡೆಯಲು ಮಹಿಳೆಯರು ಕ್ಯೂನಲ್ಲಿ ನಿಂತಿದ್ದರು.


ಹೊಸತೊಡಕು ಸಂಭ್ರಮ


ನಾಡಿನೆಲ್ಲೆಡೆ ಯುಗಾದಿ ಹಬ್ಬದ 2ನೇ ದಿನ ಹೊಸತೊಡಕು ಸಂಭ್ರಮ ಮನೆ ಮಾಡಿದೆ. ರಾಮನಗರ ಜಿಲ್ಲೆಯಲ್ಲಿ ಹೊಸತೊಡಕು ಮಾಡಲು ಚಿಕನ್ - ಮಟನ್ ಖರೀದಿಸಲು ಜನರು ಮುಗಿಬಿದ್ದಿದ್ರು. ಕುರಿ ಮತ್ತು ಮೇಕೆ ಮಾಂಸಕ್ಕೆ ಬಾರೀ ಡಿಮ್ಯಾಂಡ್ ಇತ್ತು.
ಲಕ್ಷಾಂತರ ರೂ. ಮೌಲ್ಯದ ಸೀರೆ ಜಪ್ತಿ


ಚಿಕ್ಕಮಗಳೂರಿನ ಜಯನಗರದಲ್ಲಿರೋ VRL ಲಾಜಿಸ್ಟಿಕ್ಸ್ ಗೋದಾಮಿನ ಮೇಲೆ ಪೊಲೀಸರ ದಾಳಿ ಮಾಡಿದ್ದಾರೆ. ಮತದಾರರಿಗೆ ಹಂಚಲು ‌VRL ಟ್ರಾನ್ಸ್‌ಪೋರ್ಟ್ ಮೂಲಕ ಸೀರೇ ತರಿಸಲಾಗಿತ್ತು. ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ತರಿಸಿದ್ದ ಲಕ್ಷಾಂತರ ಮೌಲ್ಯದ ಸಾವಿರಾರು ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


ಇದನ್ನೂ ಓದಿ: Prediction: ರಾಜ್ಯ ರಾಜಕಾರಣದ ಬಗ್ಗೆ ಗೊಂಬೆ ಭವಿಷ್ಯ; ಧಾರವಾಡ ಜಿಲ್ಲೆಯಲ್ಲೊಂದು ವಿಸ್ಮಯ


ಸೂರತ್‌ನ ಸ್ಯಾರಿ ಫ್ಯಾಕ್ಟರಿಯಿಂದ‌ ಚಂದನ್ ಕುಮಾರ್ ಜೈನ್ ಹೆಸರಿನಲ್ಲಿ ಸೀರೆಗಳು ಚಿಕ್ಕಮಳೂರಿಗೆ ಬಂದಿದ್ವು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published: