ರಾಜಕಾರಣದಲ್ಲಿ ಎಚ್ಚರಿಕೆಯಿಂದ ಇರಬೇಕು -ಗುರು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಶಿಷ್ಯ

news18
Updated:August 25, 2018, 4:33 PM IST
ರಾಜಕಾರಣದಲ್ಲಿ ಎಚ್ಚರಿಕೆಯಿಂದ ಇರಬೇಕು -ಗುರು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಶಿಷ್ಯ
news18
Updated: August 25, 2018, 4:33 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ (ಆಗಸ್ಟ್ 25) : ರಾಜಕಾರಣದಲ್ಲಿ ಎಂದರೇ ಎಚ್ಚರಿಕೆಯಿಂದ ಇರಬೇಕು. ಎಲ್ಲಾ ಶತ್ರುಗಳು ಒಟ್ಟಾಗಿ ಅಟ್ಯಾಕ್ ಮಾಡುತ್ತಾರೆ. ಇದನ್ನೇ ರಾಜಕಾರಣ ಅನ್ನೋದು. ಇದು ಗುರು ಸಿದ್ದರಾಮಯ್ಯ ಶಿಷ್ಯ ಶಾಸಕ ಸತೀಶ್ ಜಾರಕಿಹೊಳಿ ಟಾಂಗ್ ನೀಡಿರುವುದು.

ಬೆಳಗಾವಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗುವ ಬಯಕೆ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಹೀಗೆ ಹೇಳಿದರು. ದೇಶದಲ್ಲಿ ಪ್ರಧಾನಿಯೇ ಆಗಲಿ ಗ್ರಾಮ ಪಂಚಾಯತ್ ಅಧ್ಯಕ್ಷನೇ ಆಗಲಿ ಸೋಲಿಸಲು ಎಲ್ಲರೂ ಷಡ್ಯಂತ್ರ ನಡೆಯುತ್ತದೆ. ಆದರೇ ನಾವು ಎಚ್ಚರಿಕೆಯಿಂದ ಇರಬೇಕು. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ.. ಸಮಯಕ್ಕೆ ತಕ್ಕಂತೆ ಎಲ್ಲರೂ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇನ್ನೂ ಕಾಂಗ್ರೆಸ್ ಪಕ್ಷಕ್ಕೆ 120 ಸ್ಥಾನ ಗೆದ್ದಿದರೆ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಾರೆ. ಆದರೇ ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರೇ ಸಿಎಂ ಆಗಲು ಹೈಕಮಾಂಡ್​ ಅನುಮತಿ ಬೇಕು. ಈಗ ರಾಜ್ಯದಲ್ಲಿ ರಚನೆ ಆಗಿರುವ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಿದೆ ಎಂದರು.

 

 
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...