ಮೈಸೂರು: ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ (Rohini Sindhuri) ಅವರು ಶಾಸಕ ಸಾ.ರಾ ಮಹೇಶ್ (Sa Ra Mahesh) ಅವರ ವಿರುದ್ಧ ಭೂ ಕಬಳಿಕೆ ಆರೋಪವನ್ನು ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಾ.ರಾ ಮಹೇಶ್ ಅವರು ಕೂಡ ಪ್ರತಿಕ್ರಿಯೆಗಳನ್ನು ನೀಡುತ್ತಾ ಬರುತ್ತಿದ್ದರು. ಇಬ್ಬರ ನಡುವಿನ ಜಟಾಪಟಿ ಇಡೀ ರಾಜ್ಯದ ಗಮನವನ್ನು ಸೆಳೆದಿತ್ತು. ಸದ್ಯ ಈ ಜಟಾಪಟಿಗೆ ಹೊಸ ಬೆಳವಣಿಗೆಯೊಂದು ನಡೆದಿದ್ದು, ಐಎಎಸ್ ಅಧಿಕಾರಿ (IAS Officer) ರೋಹಿಣಿ ಸಿಂಧೂರಿ, ಜೆಡಿಎಸ್ ಶಾಸಕ (JDS MLA), ಮಾಜಿ ಸಚಿವ ಸಾ.ರಾ ಮಹೇಶ್ ಅವರ ಜೊತೆಗೆ ಸಂಧಾನಕ್ಕೆ ಮುಂದಾದಾರ ಎಂಬ ಪ್ರಶ್ನೆ ಮಾಡಿದ್ದು, ಈ ಕುರಿತ ಫೋಟೋವೊಂದು (Photo) ಸಖತ್ ವೈರಲ್ ಆಗಿದೆ. ಅಲ್ಲದೆ, ಈ ಬಗ್ಗೆ ಮಹೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ರೋಹಿಣಿ ಅವರೊಂದಿಗೆ ಸಂಧಾನ ಮಾಡಿಕೊಳ್ಳಲು ಅವರು ನನ್ನ ಸಹೋದ್ಯೋಗಿ ಅಲ್ಲ, ಸರ್ಕಾರಿ ಅಧಿಕಾರಿ (Government Officer) ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಾ.ರಾ ಮಹೇಶ್ ಅವರು, ರೋಹಿಣಿ ಸಿಂಧೂರಿ ಸರ್ಕಾರಿ ಅಧಿಕಾರಿ. ಸಂಧಾನ ಮಾಡಿಕೊಳ್ಳಲು ಅವರು ನನ್ನ ಸಹೋದ್ಯೋಗಿ ಅಲ್ಲ. ಡಿಸೆಂಬರ್ 27ರಂದು ಮಣಿವಣ್ಣನ್ ಬಂದಿದ್ದರು. ಅವರ ಸಮ್ಮುಖದಲ್ಲಿ ಮಾತನಾಡಿದರು. ಅಲ್ಲದೇ ಸಿಎಂ ಬೊಮ್ಮಾಯಿ, ಕುಮಾರಸ್ವಾಮಿ ಸೇರಿದಂತೆ ಅನೇಕರ ಬಳಿಗೆ ರೋಹಿಣಿ ಸಿಂಧೂರಿ ಹೋಗಿದ್ದರು. ನಾನು ರೋಹಿಣಿ ವಿರುದ್ಧ ಮಾಡಿದ್ದ ಆರು ಆರೋಪಗಳ ಪೈಕಿ ನಾಲ್ಕು ಸಾಬೀತಾಗಿವೆ ಎಂದು ಹೇಳಿದ್ದಾರೆ.
ಅಲ್ಲದೆ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರ ಬಳಿಗೆ ಹೋಗಿದ್ದರು. ಬಿಜೆಪಿ ಸಚಿವ ಮಾಧುಸ್ವಾಮಿ ನಿಮ್ಮಂದ ತಪ್ಪಾಗಿದೆ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲರ ಮಾತಿಗೆ ಬೆಲೆ ಕೊಟ್ಟಿದ್ದೇನೆ. ಯಾವುದನ್ನು ವೈಯುಕ್ತಿಕವಾಗಿ ತೆಗೆದುಕೊಂಡಿದ್ದು ನಾನಲ್ಲ.
ನನ್ನ ಸಾ.ರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ಇಲ್ಲ ಅಂತ ಜಿಲ್ಲಾಧಿಕಾರಿಗಳೇ ಆರ್‌ಸಿ ವರದಿ ಕೊಟ್ಟಿದ್ದಾರೆ. ಆದರೆ ನಾನು ರೋಹಿಣಿ ವಿರುದ್ಧ ಮಾಡಿದ್ದ ಆರು ಆರೋಪಗಳ ಪೈಕಿ ನಾಲ್ಕು ಸಾಬೀತಾಗಿವೆ. ಸರ್ಕಾರಕ್ಕೆ 1,800 ಪುಟಗಳ ದಾಖಲೆ ಸಹಿತ ದೂರು ಕೊಟ್ಟಿದ್ದೇನೆ. ಅವರ ವಿರುದ್ಧ ಕ್ರಮಕೈಗೊಳ್ಳುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿರುವ ತೀರ್ಮಾನ ಎಂದು ಹೇಳಿದ್ದಾರೆ.
ಅಂದಹಾಗೆ, ರೋಹಿಣಿ ಸಿಂಧೂರಿ ಅವರು ಮೈಸೂರಿನ ಜಿಲ್ಲಾಧಿಕಾರಿಯಾಗಿ ನಿರ್ಗಮಿಸಿದ ಬಳಿಕವೂ ಇಬ್ಬರ ನಡುವಿನ ಜಟಾಪಟಿ ಮುಂದುವರೆದಿತ್ತು. ಪ್ರಮುಖವಾಗಿ ರೋಹಿಣಿ ಅವರು ಮೈಸೂರಿನ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಸಾ.ರಾ ಕಲ್ಯಾಣ ಮಂಟಪ ನಿರ್ಮಾಣದ ವೇಳೆ ಭೂ ಕಬಳಿಕೆ ಆಗಿದೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಪ್ರತಿಭಟನೆ ರೂಪದಲ್ಲಿ ಶಾಸಕರು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಜಿಲ್ಲಾಧಿಕಾರಿಗಳು ಕಡಿಮೆ ಲೆಕ್ಕ ಕೊಟ್ಟಿದ್ದಾರೆ. ಅದೇ ರೀತಿ ಪಾರಂಪರಿಕ ಕಟ್ಟಡವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮೈಸೂರಿನ ಅಧಿಕೃತ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಅನಧಿಕೃತವಾಗಿ ಈಜುಕೊಳ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರೊಂದಿಗೆ ಹಲವು ಆರೋಪಗಳನ್ನು ಕೂಡ ಸಾ.ರಾ ಮಹೇಶ್ ಅವರು ಅಂದಿನ ಜಿಲ್ಲಾಧಿಕಾರಿಗಳ ವಿರುದ್ಧ ಮಾಡಿದ್ದರು.
ಇದನ್ನೂ ಓದಿ: Acid Attack: ಅಪ್ರಾಪ್ತೆ ಮೇಲೆ ಆ್ಯಸಿಡ್ ಎರಚಿದ ಪಾಗಲ್ ಪ್ರೇಮಿ, ಪ್ರೀತ್ಸೇ ಅಂತ ಪ್ರಾಣ ತಿನ್ನುತ್ತಿದ್ದವನಿಂದ ಪಾಪದ ಕೃತ್ಯ!
ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಗಳಾಗಿ ನಿರ್ಗಮಿಸಿದ ಬಳಿಕವೂ ಮುಂದುವರಿದಿದ್ದ ಜಟಾಪಟಿಗೆ ಸದ್ಯ ಹೊಸ ರೂಪ ಸಿಕ್ಕಿದೆ. ಈ ಸಂಬಂಧ ಫೋಟೋವೊಂದು ವೈರಲ್ ಆಗಿದೆ. ಫೋಟೋದಲ್ಲಿ ಸಾ.ರಾ ಮಹೇಶ್, ರೋಹಿಣಿ ಸಿಂಧೂರಿ ಅವರು ಹಿರಿಯ ಐಎಎಸ್ ಅಧಿಕಾರಿಯೊಂದಿಗೆ ಕುಳಿತುಕೊಂಡು ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರೊಂದಿಗೆ ಇಬ್ಬರ ನಡುವೆ ಸಂಧಾನ ನಡೆಸಲಾಗಿದೆಯಾ ಎಂಬ ಪ್ರಶ್ನೆ ಉದ್ಭವವಾಗಿತ್ತು. ಈ ಬಗ್ಗೆ ಇಂದು ಸಾ.ರಾ ಮಹೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.
ಗಣ್ಯರೊಂದಿಗೆ ನನ್ನ ಬಳಿ ಸಂಧಾನಕ್ಕೆ ಬಂದಿದ್ದರು. ಆದರೆ ಅವರು ಅಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿ, ಈಗ ಭೇಟಿಯಾಗಿ ಮಾತನಾಡಿದ್ರೆ ಏನು ಪ್ರಯೋಜನವಿಲ್ಲ. ನೀವು ಏನೇ ಹೇಳಿದ್ರು ಸಾರ್ವಜನಿಕರ ಎದುರು ಹೇಳಿ. ನನಗೆ ಕ್ಷಮೆ ಕೇಳುವ ಅಗತ್ಯವಿಲ್ಲ. ಏಕೆಂದರೆ ಈಗಾಗಲೇ ಕಾನೂನು ಹೋರಾಟ ಮುಂದುವರಿದಿದೆ, ನಾನು ಮಾಡಿರುವ ಆರೋಪಗಳಲ್ಲಿ ಕೆಲವು ಸಾಬೀತು ಕೂಡ ಆಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಸಾ.ರಾ ಮಹೇಶ್ ಅವರು ಸಂಧಾನಕ್ಕೆ ಒಪ್ಪಿಲ್ಲ ಎಂಬ ಸಂಗತಿ ಗೊತ್ತಾಗುತ್ತದೆ. ಆದ್ದರಿಂದ ಇಬ್ಬರ ನಡುವಿನ ಜಟಾಪಟಿ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ