• Home
  • »
  • News
  • »
  • state
  • »
  • Gubbi Srinivas: ರಾಜೀನಾಮೆ ಕೇಳೋಕೆ ಅವನ್ಯಾರು; H.D ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶ್ರೀನಿವಾಸ್ ವಾಗ್ದಾಳಿ

Gubbi Srinivas: ರಾಜೀನಾಮೆ ಕೇಳೋಕೆ ಅವನ್ಯಾರು; H.D ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶ್ರೀನಿವಾಸ್ ವಾಗ್ದಾಳಿ

ಶ್ರೀನಿವಾಸ್, ಕುಮಾರಸ್ವಾಮಿ

ಶ್ರೀನಿವಾಸ್, ಕುಮಾರಸ್ವಾಮಿ

ಜೆಡಿಎಸ್​ ನಲ್ಲಿ ಮೂರು ಮತ್ತೊಂದು ಜನ ಅವರೇ ನನ್ನ ಮೇಲೆ ಮುತ್ತಿಗೆ ಏನ್ ಹಾಕ್ತಾರಾ?, ಒಬ್ಬನು ನನ್ನ ಮತದಾರರಿಲ್ಲ, ಕುಮಾರಸ್ವಾಮಿ ಹತ್ರ ಕಾಸು ಇಸ್ಕೊಂಡು ಬಂದಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಮತ್ತೆ ಎಸ್.ಆರ್.ಶ್ರೀನಿವಾಸ್ ಹರಿಹಾಯ್ದಿದ್ದಾರೆ.

  • Share this:

ತುಮಕೂರು (ಜೂ.11): ರಾಜ್ಯಸಭೆ ಚುನಾವಣೆ (Rajya Sabha Election) ಬಳಿಕ ಜೆಡಿಎಸ್​ನಲ್ಲಿ ಕೋಲಾಹಲ ಸೃಷ್ಟಿ ಆಗಿದೆ. ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಜೆಡಿಎಸ್​ ವರಿಷ್ಠ, ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ವಾಗ್ದಾಳಿ ನಡೆಸಿದ್ರು. ಇದೀಗ ಬಂಡಾಯ ಶಾಸಕರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಜೆಡಿಎಸ್​ ನಲ್ಲಿ ಮೂರು ಮತ್ತೊಂದು ಜನ ಅವರೇ ನನ್ನ ಮೇಲೆ ಮುತ್ತಿಗೆ ಏನ್ ಹಾಕ್ತಾರಾ?, ಒಬ್ಬನು ನನ್ನ ಮತದಾರರಿಲ್ಲ, ಕುಮಾರಸ್ವಾಮಿ ಹತ್ರ ಕಾಸು ಇಸ್ಕೊಂಡು ಬಂದಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಮತ್ತೆ ಎಸ್.ಆರ್.ಶ್ರೀನಿವಾಸ್ (S.R Srinivas) ಹರಿಹಾಯ್ದಿದ್ದಾರೆ. ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶ್ರೀನಿವಾಸ್​, ಕಾಸು ಹೊಡೆಯುವುದೇ ಅವ್ನ ಕೆಲಸ, ಸೀಟ್ ಕೊಡಿಸ್ತೀನಿ ಅಂತಾ ಕಾಸು ಹೊಡೀತಾನೆ ಎಂದ್ರು.


ಕಾಸು ಕೊಟ್ರೆ ಟಿಕೆಟ್, ಕಾಸು ಕೊಟ್ರೆ ಕಾರ್ಯಕರ್ತರು


ಹಳ್ಳಿ ಕಡೆ ಜನ ಜೀವನಕ್ಕೆ 5 ಎಕರೆ ಇಟ್ಟುಕೊಂಡಂಗೆ ಅವ್ರು ಪಕ್ಷ ಇಟ್ಟುಕೊಂಡವರೇ, ಇವರು ಬದುಕೋದಕ್ಕಾಗಿ ಇಟ್ಟುಕೊಂಡಿರೋ ಪಕ್ಷ ಇದು. ಕಾಸು ಕೊಟ್ರೆ ಟಿಕೆಟ್, ಕಾಸು ಕೊಟ್ರೆ ಕಾರ್ಯಕರ್ತರು. ಅಡ್ಡ ಮತದಾನ ಮಾಡಿದೋನಾ ಕರೆದುಕೊಂಡು ಬರಲಿ. ಕುಮಾರಸ್ವಾಮಿಗೆ ಮಾನ ಮಾರ್ಯದೆ ಇದ್ದಿದ್ರೆ ಇದೆಲ್ಲಾ ಹೇಳ್ತಾ ಇರಲಿಲ್ಲ.ಅವನಿಗೆ ತಾಕತ್ತಿದ್ರೆ ಗುಬ್ಬಿಲೀ ಬಂದು ನಿಲ್ಲಲಿ. ಚುನಾವಣೆಗೆ ಬಂದು ನಿಂತುಕೊಳ್ಳಲಿ ಅವನು. ಇದಕ್ಕೆಲ್ಲಾ ನಾನೇನು ಹೆದರೋನಲ್ಲ ಎಂದು ಏಕವಚನದಲ್ಲೇ ಕುಮಾರಸ್ವಾಮಿ ವಿರುದ್ಧ ಶ್ರೀನಿವಾಸ ಕಿಡಿಕಾರಿದ್ರು.


ಅವನ್ಯಾರು ರಾಜೀನಾಮೆ ಕೇಳೋಕೆ


ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀನಿವಾಸ್​ ಅವನ್ಯಾರು ರಾಜೀನಾಮೆ ಕೇಳೋಕೆ, ನನ್ನ ಕ್ಷೇತ್ರದ ಜನ ಕೇಳಬೇಕು. ನನ್ನ ಕ್ಷೇತ್ರದೋರು ಇಲ್ಲಿ ಯಾರು ಬಂದಿಲ್ಲ ರಾಜೀನಾಮೆ ಕೊಡ್ರಿ ಅಂತ ಕೇಳೋಕೆ. ಫೋನ್ ಮಾಡಿ ಹೇಳಿದ್ದಾನೆ ಅವರೆಲ್ಲಾ ನನಗೆ ಹೇಳಿದ್ದಾರೆ ಬರ್ತೀವಿ ಅಂತಾ.ಬರಪ್ಪಾ ಅಂತಾ ನಾನೇ ಕರೆದಿದ್ದೇನೆ. ಬಂದವರೇ ಹೋಗ್ತಾರೆ ಅಷ್ಟೇ. ಕುಮಾರಸ್ವಾಮಿ ಒತ್ತಡಕ್ಕೆ ಬಂದವರೇ ಫೋಟೋ ಕಳಿಸಿ ಹೋಗ್ತಾರೆ.


ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್​ ನ್ಯೂಸ್​; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ


ಅವ್ರ ಮುಖ ನೋಡಿ ಜನ ನನಗೆ ವೋಟ್ ಹಾಕಿಲ್ಲ.


ನಾನು ಕುಮಾರಸ್ವಾಮಿ ಕರೆದುಕೊಂಡು ಬಂದು ಯಾವತ್ತು ಪ್ರಚಾರ ಮಾಡಿಲ್ಲ. ನಾನು ಅಪ್ಪ-ಮಕ್ಕಳ ಫೋಟೋ ಹಾಕಿ ಬ್ಯಾನರ್ ಕೂಡ ಹಾಕಿಲ್ಲ. ಅವರ ಮುಖ ನೋಡಿ ಜನ ನನಗೆ ವೋಟ್ ಹಾಕಿಲ್ಲ. ನನ್ನ ರಾಜೀನಾಮೆ ಕೇಳೋಕೆ ಅವರು ಯಾರು ಎಂದು ಕುಮಾರಸ್ವಾಮಿ ವಿರುದ್ಧ ಶ್ರೀನಿವಾಸ್​ ಕಿಡಿಕಾರಿದ್ರು.


ನನ್ನ ವಿರುದ್ಧ ಮಾತಾಡೋ ಹಕ್ಕು ಜೆಡಿಎಸ್​ಗಿಲ್ಲ- ಶ್ರೀನಿವಾಸಗೌಡ


ಕೋಲಾರ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ‌ ವಿರುದ್ದ ಮಾತಾಡಲು ಜೆಡಿಎಸ್​​​ನವರಿಗೆ ಯಾವುದೇ ಹಕ್ಕಿಲ್ಲ. ನನ್ನ ವಿರುದ್ದ ಪ್ರತಿಭಟನೆ‌ ಮಾಡಿದ್ದಾರೆ. ನನಗೆ ಅಭ್ಯಂತರ‌ ಇಲ್ಲ ಎಂದರು.
ಇನ್ನು ಎಂ‌ಎಲ್‌ಸಿ ಗೋವಿಂದ್ ರಾಜು ವಿರುದ್ಧ ಕೂಡ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರು ಶಿರಸಿಯಲ್ಲಿದ್ದಾಗ ನನಗೆ ವರ್ಗಾವಣೆ ಮಾಡಿ ಅಂತ‌ ನನ್ನ‌ ಹಿಂದೆ ಬಿದ್ದಿದ್ದರು. ಅವರೂ ಕೂಡ ನನ್ನ‌ ವಿರುದ್ಧ ಮಾತಾಡಿದ್ದಾರೆ ಎಂದರು.


ಇದನ್ನೂ ಓದಿ: Basavaraj Bommai: ‘ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆ; ಶೂಟ್ ಆನ್​ ಸೈಟ್ ಆರ್ಡರ್ ಕೊಡೋ ಅಗತ್ಯವಿಲ್ಲ‘


ನಾನು‌ ಯಾವುದೇ ಪಕ್ಷಕ್ಕಾದರೂ ಹೋಗಬಹುದು. ಅದು ನನ್ನ‌ಹಕ್ಕು. ನಾನು‌ ಕಾಂಗ್ರೆಸ್‌ನಲ್ಲಿ ಮೂರು ಬಾರಿ ಶಾಸಕ ನಾಗಿದ್ದೆ, ಧರಂಸಿಂಗ್‌ ಸರ್ಕಾರದಲ್ಲಿ‌ ಮಂತ್ರಿಯಾಗಿದ್ದೆ. ಕುಮಾರ್ ಸ್ವಾಮಿಯವರು ನನಗೆ‌ ಮಂತ್ರಿ ಮಾಡಲೇ‌ ಇಲ್ಲ. ನನ್ನನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಇನ್ನು ಅವರಿಗೆ ಅವರ ಕುಟುಂಬ ಮತ್ತು ಅವರ ಜಿಲ್ಲೆ‌ ಮಾತ್ರ ಕಾಣುತ್ತೆ. ಅವರು ಡಿಕ್ಡೇಟರ್ ತರಹ ಮಾಡುತ್ತಾರೆ. ನನಗೆ‌ ನನ್ನ‌ ಕ್ಷೇತ್ರವೇ ಮುಖ್ಯ. ಅದಕ್ಕಾಗಿ ಪಕ್ಷ‌ ಬಿಟ್ಟಿದ್ದೇನೆ ಎಂದು ಇದೇ ವೇಳೆ ಸಮಜಾಯಿಷಿ ಕೂಡಾ ಕೊಟ್ಟರು.

Published by:Pavana HS
First published: