ಶಾಂತಿ ಕದಡೋ ದುರುದ್ದೇಶದಿಂದ ಮಾಜಿ ಶಾಸಕರಿಂದ ಪ್ರತಿಭಟನೆ ; ಸತೀಶ್ ಸೈಲ್ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಕಿಡಿ

ಉದ್ದೇಶ ಪೂರ್ವಕವಾಗಿ ಮಾಜಿ ಶಾಸಕ ಸತೀಶ್ ಸೈಲ್ ಅಲ್ಲಿನ ಜನರನ್ನು ಎತ್ತುಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾರವಾರದ ಬೀಚ್ ಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ನಾನು ಆ ಭಾಗದ ಶಾಸಕಳಾಗಿ ಅಲ್ಲಿನ‌ ಜನರ ಹಿತ ಕಾಯುತ್ತೇನೆ

news18-kannada
Updated:January 16, 2020, 2:41 PM IST
ಶಾಂತಿ ಕದಡೋ ದುರುದ್ದೇಶದಿಂದ ಮಾಜಿ ಶಾಸಕರಿಂದ ಪ್ರತಿಭಟನೆ ; ಸತೀಶ್ ಸೈಲ್ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಕಿಡಿ
ಮಾಜಿ ಶಾಸಕ ಸತೀಶ್ ಸೈಲ ಹಾಗೂ ಶಾಸಕಿ ರೂಪಾಲಿ ನಾಯ್ಕ
  • Share this:
ಬೆಂಗಳೂರು(ಜ.16) : ಕಾರವಾರದಲ್ಲಿ ಮಾಜಿ ಶಾಸಕರು ಪ್ರತಿಭಟನೆ ಮೂಲಕ ಅಲ್ಲಿನ ಜನರ ಶಾಂತಿ ಕದಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರು ಕೇವಲ ರಾಜಕೀಯಕ್ಕಾಗಿ ಈ ರೀತಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಸೈಲ್​​​​ ವಿರುದ್ದ ಶಾಸಕಿ ರೂಪಾಲಿ ನಾಯ್ಕ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಹಿಂದೆ ಅವರೇ ಕಾಮಗಾರಿ ಉದ್ಘಾಟನೆ  ಸಹಕಾರ ಕೊಟ್ಟಿದ್ದರು. ಅಂದು  ಸಿಎಂ ಆಗಿದ್ದ ಸಿದ್ದರಾಮಯ್ಯನವರು ಕಾಮಗಾರಿ ಶಿಲಾನ್ಯಾಸ ಮಾಡಿದ್ದಾರೆ. ಇವಾಗ ಅದೇ ಕಾಮಾಗಾರಿಗೆ ಸತೀಶ್ ಸೈಲ್ ವಿರೋಧ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ದೇಶ ಪೂರ್ವಕವಾಗಿ ಮಾಜಿ ಶಾಸಕ ಸತೀಶ್ ಸೈಲ್ ಅಲ್ಲಿನ ಜನರನ್ನು ಎತ್ತುಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾರವಾರದ ಬೀಚ್ ಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ನಾನು ಆ ಭಾಗದ ಶಾಸಕಳಾಗಿ ಅಲ್ಲಿನ‌ ಜನರ ಹಿತ ಕಾಯುತ್ತೇನೆ. ಕಾರವಾರದಲ್ಲಿ ಇರೋದೇ ಒಂದು ಕಡಲ ತೀರ. ರವೀಂದ್ರನಾಥ್ ಟಾಗೋರ್ ಬೀಚ್ ಎಲ್ಲವೂ ನಮಗೆ. ಇದನ್ನ ಹಾಳಾಗಲು ನಾವು ನಾನು ಬಿಡುವುದಿಲ್ಲ ಎಂದರು.

ಮೀನುಗಾರರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ : ಕೋಟಾ ಶ್ರೀನಿವಾಸ್ ಪೂಜಾರಿ 

ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ಸೊಬಗಿಗೂ‌ ಈ ಯೋಜನೆಯಿಂದ ಯಾವುದೇ ಹಾನಿ ಆಗುವುದಿಲ್ಲ. ಈ ವಾಣಿಜ್ಯ ಬಂದರಿನ ಯೋಜನೆ ಕೇಂದ್ರದ ಸಾಗರಮಾಲ ಯೋಜನೆ. ಇದಕ್ಕೆ ಈ ಹಿಂದೆ ಶಿಲಾನ್ಯಾಸ ಮಾಡಿದ್ದವರು ಸಿಎಂ ಆಗಿದ್ದ ಸಿದ್ದರಾಮಯ್ಯ. ಅವತ್ತು ಶಾಸಕರಾಗಿದ್ದವರು ಇವಾಗ ವಿರೋಧ ಮಾಡುತ್ತಿರುವ ಸತೀಶ್ ಶೈಲ್ ಆವರೇ. ಅವರೇ ಈ ಶಿಲಾನ್ಯಾಸ ಕಾರ್ಯಕ್ರಮದ ನೇತೃತ್ವ‌ ವಹಿಸಿದ್ದರು. ಇವಾಗ ಅವರೇ ಇವಾಗ ಇಲ್ಲ ಸಲ್ಲದ ಗೊಂದ ಸೃಷ್ಟಿ ಮಾಡ್ತಿದ್ದಾರೆ. ಯಾವುದೇ ಮೀನುಗಾರರ ಕುಟುಂಬಕ್ಕೆ ಧಕ್ಕೆ ಆಗದ ರೀತಿ ಸರ್ಕಾರ ಕ್ರಮ ವಹಿಸಲಿದೆ ಎಂದರು.

ಮೀನುಗಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ವಾಣಿಜ್ಯ ಬಂದರು ನಿರ್ಮಾಣ ಮಾಡುವುದರಿಂದ ಸಮಸ್ಯೆಯಾಗುತ್ತದೆ ಎಂದು ಅಲ್ಲಿನ ಮೀನುಗಾರು, ಹಾಗೂ ಮುಖಂಡರು ಹೇಳುತ್ತಿದ್ದಾರೆ. ಅಲ್ಲಿನ ಮೀನುಗಾರರಿಗೆ, ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದ ರೀತಿ ಸರ್ಕಾರ ಕ್ರಮ ವಹಿಸುತ್ತದೆ.. ರವೀಂದ್ರ ನಾಥ್ ಠಾಕೂರ್ ಕಡಲ ತೀರಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ ಈ ಬಗ್ಗೆ ಮೀನುಗಾರರು, ಅಲ್ಲಿನ ಜನರ ಕರೆದು ಸಭೆ ಮಾಡ್ತೇನೆ ಎಂದು ತಿಳಿಸಿದರು.

ವಿರೋಧ ಯಾಕೆ ?ಸಾಗರಮಾಲಾ ಯೋಜೆಯಡಿ ಬಂದರು ವಿಸ್ತರಣೆ ಕೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಅಲೆ ತಡೆಗೊಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದೆ. ಟ್ಯಾಗೋರ್​​ ಕಡಲ ತೀರದಲ್ಲಿ ಈ ಕಾಮಗಾರಿ ನಡೆಯುತ್ತಿರುವುದರಿಮದ ಮೀನುಗಾರಿಗೆ ತೊಂದತೆಯಾಗಲಿದೆ. ಜತೆಗೆ, ತೀರದ ಸೌಂದರ್ಯ ಹಾಳಾಗಲಿದೆ ಎಂದು ಹೇಳುತ್ತಾರೆ ಸ್ಥಳೀಯ ಮೀನುಗಾರರು.

ಇದನ್ನೂ ಓದಿ ; ರಾಜ್ಯದ ಪ್ರಮುಖ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಕುರಿತು ಶೀಘ್ರದಲ್ಲಿಯೇ ತೀರ್ಮಾನ; ಕೋಟಾ ಶ್ರೀನಿವಾಸ ಪೂಜಾರಿ

ವಿವಿಧ ಯೋಜನೆಯ ಹೆಸರಿನಲ್ಲಿ ಈಗಾಗಲೇ ಕಾರವಾರದ 12 ತೀರಗಳನ್ನು ಕಳೆದುಕೊಳ್ಳಲಾಗಿದೆ. ಈಗಿರುವ ಏಕೈಕ ಟ್ಯಾಗೋರ್​​ ತೀರವನ್ನು ಈ ಬಂದರು ವಿಸ್ತರಣೆಯಿಂದ ಕಳೆದುಕೊಳ್ಳವಂತಾಗಲಿದ್ದು,ಇದರಿಂದ ಮೀನುಗಾರರು ಸೇರಿದಂತೆ ಸ್ಥಳೀಯರಿಗೂ ನಷ್ಟ ಉಂಟಾಗಲಿದೆ ಎಂದು ಕಾಮಹಗಾರಿ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading