HOME » NEWS » State » MLA RENUKACHARYA HITS OUT AT MINISTER K SUDHAKAR ABOUT MINISTRY POST LG

ಸಚಿವ ಸುಧಾಕರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಾಸಕ ರೇಣುಕಾಚಾರ್ಯ

ನಮ್ಮ ಪೂರ್ವಜರು ತೆಂಗಿನ ಮರ ನೆಟ್ಟಿದ್ರು, ಬೇರೆಯವರು ಎಳನೀರು ಕುಡಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಸುಧಾಕರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

news18-kannada
Updated:January 29, 2021, 12:45 PM IST
ಸಚಿವ ಸುಧಾಕರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಾಸಕ ರೇಣುಕಾಚಾರ್ಯ
ಎಂಪಿ ರೇಣುಕಾಚಾರ್ಯ
  • Share this:
ಬೆಂಗಳೂರು(ಜ.29): ಹಿರಿಯ ಬಿಜೆಪಿ ಶಾಸಕರು ಸಭೆ ಸೇರಿದ್ದಾರೆ ಎನ್ನುವ ವಿಚಾರಕ್ಕೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ನೇತೃತ್ವದಲ್ಲಿ ಅಂತ ಇಲ್ಲ, ನಾವೆಲ್ಲಾ ಸಮಾನ ಮನಸ್ಕರು. ಬಹಳ ಜನ ಬಿಜೆಪಿ ಶಾಸಕರಿದ್ದೇವೆ. ಪಕ್ಷ ಹಾಗೂ ಸಿಎಂಗೆ ಮುಜುಗರ ಆಗಬಾರದು ಅಂತ ಇದ್ದೇವೆ. ಇನ್ನೂ ಎರಡು ವರ್ಷ ಸ್ಥಿರ ಸರ್ಕಾರ ಇರಬೇಕು. ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು, ಬಂದ್ರೆ ಅದರ ವಿರುದ್ಧ ನಿಲ್ಲುತ್ತೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬೇಕು ಎನ್ನುವ ಅಪೇಕ್ಷೆ ಇದೆ. ಮೊದಲು ರಾಜೀನಾಮೆ ಕೊಟ್ಟು ಬಂದಿದ್ದು ಆನಂದ್ ಸಿಂಗ್. ಅವರಿಗೆ ನಿಮ್ಮ ಪರವಾಗಿ ಇರೋದಾಗಿ ಹೇಳಿದ್ದೆವು. ಸರ್ಕಾರ, ನಾಯಕತ್ವ ವಿರುದ್ಧ ನಮ್ಮ ಹೋರಾಟ ಅಲ್ಲ. ಕೆಲವರು ಇಂತದ್ದೇ ಖಾತೆ ಬೇಕು ಅಂತ ಕುಳಿತಿದ್ದಾರೆ.  ವ್ಯಾಪಾರಕ್ಕಾಗಿ ದೊಡ್ಡ ಸಚಿವ ಸ್ಥಾನ ಬೇಕಾ.? ಎಂದು ಪ್ರಶ್ನಿಸಿದ ಅವರು ಗುಡುಗಿದ್ದಾರೆ.

ಮುಂದುವರೆದ ಅವರು, ಮಂತ್ರಿಗಳು ಹಾಗೂ ಸರ್ಕಾರದ ವರ್ಚಸ್ಸು ಕಡಿಮೆಯಾಗಲಿದೆ. ಎಲ್ಲಾ ಸಚಿವರು ಅಂತ ಹೇಳಲ್ಲ, ಕೆಲವರು ಈ ರೀತಿ ಮಾಡ್ತಿದ್ದಾರೆ. ಕೆಲವರು ಬಹಳ ಉದ್ಧಟತನ ಮಾಡ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರಬೇಕು ಅಂತ ಸಂಘಟನೆ ಮಾಡಿತ್ತು. ಆದ್ರೆ ಕೆಲವರು ಎರಡು ಮೂರು ಖಾತೆ ಬೇಕು ಅಂತ ಕುಳಿತಿದ್ದಾರೆ. ಅಂದು ಅಮಾಲಿ ಕೆಲಸ ಮಾಡಿದ್ದು ನಾವು. ಅಧಿಕಾರ ಬೇರೆಯವರು ಅನುಭವಿಸುತ್ತಿದ್ದಾರೆ. ನನ್ನ ಕ್ಷೇತ್ರದ ಜನತೆ ಕಾಯ್ತಿದ್ದಾರೆ, ಮೂರು ಬಾರಿ ಗೆಲ್ಲಿಸಿದ್ದಾರೆ. ಅಬಕಾರಿ ಖಾತೆ ಕೊಟ್ಟಾಗ ಉತ್ತಮವಾಗಿ ನಿಭಾಯಿಸಿದೆ ಎಂದರು.

ಟೊಯೋಟಾ ಕಾರ್ಮಿಕರ ಪಾದಯಾತ್ರೆಗೆ ಕೈ ನಾಯಕರ ಬೆಂಬಲ; ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ

ನನಗೆ ಕಳೆದ ವಾರ ನಡೆದ ಘಟನೆ ನೋವು ತಂದಿದೆ. ಬೇರೆ ಪಕ್ಷದಿಂದ ಬಂದವರನ್ನ ಗೌರವಿಸುತ್ತಾರೆ. ನಾವು ಹಿರಿಯರಲ್ವಾ, ನಮಗಿಂತ ಹಿರಿಯರಿಲ್ವಾ.? ನಾನು ಬಹಿರಂಗವಾಗಿ ಹೇಳಿಕೆ ನೀಡಲ್ಲ. ಸಿಎಂ ಶಾಸಕಾಂಗ ಸಭೆ ಕರೆದಾಗ, ನೇರವಾಗಿ ಅಲ್ಲಿಯೇ ಹೇಳುತ್ತೇನೆ. ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಳಿ ಹೇಳುತ್ತೇನೆ. ಸಚಿವ ಸ್ಥಾನ ಕೊಡುವುದು ಗೌರವಕ್ಕಾಗಿ, ದೊಡ್ಡ ಖಾತೆ ಯಾಕೆ? ಎಂದ ರೇಣುಕಾಚಾರ್ಯ ಎರಡು, ಮೂರು ಖಾತೆ ಪಡೆದವರ ವಿರುದ್ಧ ಗರಂ ಆದರು.

ನಮ್ಮ ಪೂರ್ವಜರು ತೆಂಗಿನ ಮರ ನೆಟ್ಟಿದ್ರು, ಬೇರೆಯವರು ಎಳನೀರು ಕುಡಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಸುಧಾಕರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
Published by: Latha CG
First published: January 29, 2021, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories