• Home
  • »
  • News
  • »
  • state
  • »
  • Renukacharya Dance: ಮಹಿಳೆಯರ ಜೊತೆ ರೇಣುಕಾಚಾರ್ಯ ಸಖತ್​ ಡ್ಯಾನ್ಸ್​; ಶಾಸಕರಿಗೆ ಪತ್ನಿ, ಮಗಳು ಸಾಥ್​

Renukacharya Dance: ಮಹಿಳೆಯರ ಜೊತೆ ರೇಣುಕಾಚಾರ್ಯ ಸಖತ್​ ಡ್ಯಾನ್ಸ್​; ಶಾಸಕರಿಗೆ ಪತ್ನಿ, ಮಗಳು ಸಾಥ್​

ರೇಣುಕಾಚಾರ್ಯ ಡ್ಯಾನ್ಸ್​

ರೇಣುಕಾಚಾರ್ಯ ಡ್ಯಾನ್ಸ್​

ಬಂಜಾರ ಸಮುದಾಯದ ಮೆರವಣಿಗೆಯಲ್ಲಿ  ಕುಟುಂಬ ಸಮೇತರಾಗಿ ಶಾಸಕ ರೇಣುಕಾಚಾರ್ಯ ಭಾಗಿಯಾಗಿದ್ದರು. ಶಾಸಕರು ಹಾಗೂ ಕುಟುಂಬಸ್ಥರು ಬಂಜಾರ ಸಮುದಾಯದ ಮಹಿಳೆಯರ ಜೊತೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ದೀಪಾವಳಿ ಹಬ್ಬದ ಹಿನ್ನೆಲೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.  ದೀಪಾವಳಿ ಬಲಿಪಾಡ್ಯದ ನಿಮಿತ್ತ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಕೋಟೆಯ ಶ್ರೀಶಂಕರ ಮಠದಲ್ಲಿ ಗೋ ಪೂಜೆ ನಡೆಸಲಾಯ್ತು. ಹೊನ್ನಾಳಿ ಗೋ ರಕ್ಷಾ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ‌‌ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌. ರೇಣುಕಾಚಾರ್ಯ (Renukacharya) ಪಾಲ್ಗೊಂಡಿದ್ದರು. ಬಳಿಕ ಬಂಜಾರ ಸಮುದಾಯದ (Banjara community) ಮಹಿಳೆಯರ ಜೊತೆ ಶಾಸಕರು ಸಖತ್ ಡ್ಯಾನ್ಸ್ ಮಾಡಿದ್ದಾರೆ. ​


ರೇಣುಕಾಚಾರ್ಯ ಮಸ್ತ್​ ಡ್ಯಾನ್ಸ್​


ಬಂಜಾರ ಸಮುದಾಯದಿಂದ ವಿಶೇಷ ದೀಪಾವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಂಜಾರ ಸಮುದಾಯದ ಮೆರವಣಿಗೆಯಲ್ಲಿ  ಕುಟುಂಬ ಸಮೇತರಾಗಿ ಶಾಸಕ ರೇಣುಕಾಚಾರ್ಯ ಭಾಗಿಯಾಗಿದ್ದರು. ಶಾಸಕ ರೇಣುಕಾಚಾರ್ಯ ಹಾಗೂ ಕುಟುಂಬಸ್ಥರು  ಬಂಜಾರ ಸಮುದಾಯದ ಮಹಿಳೆಯರ ಜೊತೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ.


MLA Renukacharya dances with the women of Banjara community
ರೇಣುಕಾಚಾರ್ಯ ಡ್ಯಾನ್ಸ್​


ರೇಣುಕಾಚಾರ್ಯ ಪತ್ನಿ, ಮಗಳು ಭಾಗಿ


ಹೊನ್ನಾಳಿ ತಾಲೂಕಿನ ಕುಂಬಳೂರು ತಾಂಡದಲ್ಲಿ ರೇಣುಕಾಚಾರ್ಯ ಅಂಡ್​ ಫ್ಯಾಮಿಲಿ ಡ್ಯಾನ್ಸ್ ಮಾಡಿದ್ದಾರೆ. ಶಾಸಕ ರೇಣುಕಾಚಾರ್ಯ ಪತ್ನಿ ಸುಮಾ ಹಾಗೂ ಮಗಳು ಚೇತನಾ ಕೂಡ ಸ್ಟೆಪ್ಸ್​ ಹಾಕಿದ್ದಾರೆ.
ರೇಣುಕಾಚಾರ್ಯ ಅನೇಕ ಬಾರಿ ಹೀಗೆ ಡ್ಯಾನ್ಸ್ ಮಾಡಿದ್ದಾರೆ
ದಾವಣಗೆರೆಯಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಿದ್ಯಾರ್ಥಿಗಳ ಜೊತೆ ಸಖತ್‌ ಸ್ಟೆಪ್ಸ್‌ ಹಾಕುವ ಮೂಲಕ ಗಮನ ಸೆಳೆದಿದ್ದರು. ವಿಕ್ರಾಂತ್‌ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಹೊನ್ನಾಳಿ ಹುಲಿ ಸಖತ್‌ ಆಗಿಯೇ ಹುಕ್‌ ಸ್ಟೆಪ್‌ ಹಾಕಿರುವುದು ಈಗ ವೈರಲ್‌ ಆಗಿದೆ. ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಎಂಪಿ ರೇಣುಕಾಚಾರ್ಯ ಕುಣಿದು ಕುಪ್ಪಳಿಸಿದ್ದರು. ಈ ಹಿಂದೆಯೂ ಕೂಡ ಎಂಪಿ ರೇಣುಕಾಚಾರ್ಯ ಹಲವು ಕಡೆ ಕುಣಿದಿರುವುದು ವೈರಲ್‌ ಆಗಿತ್ತು.


ರೇಣುಕಾಚಾರ್ಯ ಆಪ್ತ ಸಹಾಯಕರ ಮೇಲೆ ಹಲ್ಲೆ
ಹೊನ್ನಾಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ (BJP MLA MP Renukacharya) ಆಪ್ತ ಸಹಾಯಕ ಪ್ರಜ್ವಲ್ ಮೇಲೆ ಹಲ್ಲೆ ನಡೆಸಲಾಗಿದೆ. ಶಾಸಕ ರೇಣುಕಾಚಾರ್ಯ ಅವರಿಗೆ ಕೊಲೆ ಬೆದರಿಕೆ (Life Threat) ಬೆನ್ನಲ್ಲೇ ಆಪ್ತ ಸಹಾಯಕ‌ನ ಮೇಲೆ ಹಲ್ಲೆ ನಡೆದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ತುಮ್ಮಿನಕಟ್ಟಿ ರಸ್ತೆ ಬಳಿ ಪ್ರಜ್ವಲ್ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಪ್ರಜ್ವಲ್ ತಲೆಗೆ ಗಾಯವಾಗಿದ್ದು ಹೊನ್ನಾಳಿ (Honnali Hospital) ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಹೊನ್ನಾಳಿ ಆಸ್ಪತ್ರೆಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ ಪ್ರಜ್ವಲ್ ಆರೋಗ್ಯ ವಿಚಾರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ರೇಣುಕಾಚಾರ್ಯ ಒತ್ತಾಯಿಸಿದ್ದರು.


ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂಆರ್ ಮಹೇಶ್ ಮತ್ತು ಶಾಸಕರ ರೇಣುಕಾಚಾರ್ಯ ಮಧ್ಯೆ ಕಳೆದ 3 ದಿನಗಳ ಹಿಂದೆ ಗಲಾಟೆ ಆಗಿತ್ತು. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಆಪ್ತ ಪ್ರಜ್ವಲ್ ನನ್ನ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ಮೂವರ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು

ಯಾವುದಕ್ಕೂ ಭಯ ಪಡೋದಿಲ್ಲ

ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಕೊಲೆ ಬೆದರಿಕೆ ಹಾಕಲಾಗಿದೆ. 10-12 ಜನರ ತಂಡದಿಂದ ಶಾಸಕರ ಮೇಲೆ ಅಟ್ಯಾಕ್ ಮಾಡಲು ಸಂಚು ರೂಪಿಸಿದ್ದಾರಂತೆ. ನಿಮಗೆ ಕೊಲೆ ಬೆದರಿಕೆ ಇದೆ ನೀವು ಭದ್ರತೆ ತೆಗೆದುಕೊಳ್ಳಿ ಅಂತ ಪೊಲೀಸರು, ಶಾಸಕರಿಗೆ ಹೇಳಿದ್ದರಂತೆ.


Published by:ಪಾವನ ಎಚ್ ಎಸ್
First published: