• Home
  • »
  • News
  • »
  • state
  • »
  • Chandrashekhar Death: ಮಣ್ಣಲ್ಲಿ ಮಣ್ಣಾದ ಚಂದ್ರಶೇಖರ್​; ತನಿಖೆಯಿಂದ ಹೊರ ಬರಬೇಕಿದೆ ಸಾವಿನ ಸತ್ಯ!

Chandrashekhar Death: ಮಣ್ಣಲ್ಲಿ ಮಣ್ಣಾದ ಚಂದ್ರಶೇಖರ್​; ತನಿಖೆಯಿಂದ ಹೊರ ಬರಬೇಕಿದೆ ಸಾವಿನ ಸತ್ಯ!

ರೇಣುಕಾಚಾರ್ಯ, ಚಂದ್ರಶೇಖರ್​

ರೇಣುಕಾಚಾರ್ಯ, ಚಂದ್ರಶೇಖರ್​

ಆಜಾನ್ ವಿಚಾರಕ್ಕೆ ಒಂದ್ಸಲ ಗಲಾಟೆ ಆಗಿತ್ತು. ನನಗೂ, ಚಂದ್ರಶೇಖರ್​ಗೂ ಕೊಲೆ ಬೆದರಿಕೆ ಹಾಕಿದ್ರು. ಅದೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಸಹೋದರ ಪುತ್ರನ ಚಂದ್ರಶೇಖರ್ ಪಾರ್ಥಿವ ಶರೀರದ ಮೆರವಣಿಗೆ ಬಳಿಕ ಕುಂದೂರಿನಲ್ಲಿ ಅಂತ್ಯಸಂಸ್ಕಾರ (Funeral) ನಡೆಸಲಾಯ್ತು. ಲಿಂಗಾಯತ ಸಂಪ್ರದಾಯದಂತೆ (Lingayat Tradition) ಅಂತ್ಯಕ್ರಿಯೆ ನಡೆಯಿತು.  ತಮ್ಮನ ಮಗನನ್ನು ಸ್ವತಃ ಮಗನಂತೆ ಕಾಣುತ್ತಿದ್ದ ಶಾಸಕ ರೇಣುಕಾಚಾರ್ಯ, ಪುತ್ರನನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದಾರೆ. ಕುಟುಂಬಸ್ಥರ (Family) ಆಕ್ರಂದನ ಮುಗಿಲುಮುಟ್ಟಿದೆ. 


ಚಂದ್ರಶೇಖರ್​ ಸಾವಿನ ಸುತ್ತ ಅನುಮಾನದ ಹುತ್ತ


ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್​ರದ್ದು ಕೊಲೆ ಎಂಬ ಅನುಮಾನ ಮೂಡಿದೆ. ಚಂದ್ರಶೇಖರ್​​ ಶವ ಕೈಕಾಲುಗಳನ್ನು ಹಗ್ಗದಲ್ಲಿ ಕಟ್ಟಿ ಕಾರಿನಲ್ಲಿ ಮಲಗಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ದರಿಂದ ಪೊಲೀಸರು ಕೊಲೆ ಮಾಡಿದ್ದಾರೆ ಎನ್ನಲಾದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ. ಚಂದ್ರಶೇಖರ್ ಗೌರಿ ಗದ್ದೆ ಆಶ್ರಮದಿಂದ ಎಲ್ಲೆಲ್ಲಿಗೆ ಭೇಟಿ ಕೊಟ್ಟ ಅನ್ನೋ ಬಗ್ಗೆ ತನಿಖೆ ನಡೆಸಲಾಗ್ತಿದೆ.


bjp mla mp renukacharya brother son chandrashekhar missing mrq
ಶಾಸಕ ರೇಣುಕಾಚಾರ್ಯ ಕಣ್ಣೀರು


ರೇಣುಕಾಚಾರ್ಯ ಗಂಭೀರ ಆರೋಪ


ಚಂದ್ರಶೇಖರ್ ಸಾವಿನ ಬಗ್ಗೆ ಮಾತಾಡಿರೋ ರೇಣುಕಾಚಾರ್ಯ ಸ್ಫೋಟಕ ಆರೋಪವೊಂದನ್ನು ಮಾಡಿದ್ದಾರೆ. ಆಜಾನ್ ವಿಚಾರಕ್ಕೆ ಒಂದ್ಸಲ ಗಲಾಟೆ ಆಗಿತ್ತು. ನನಗೂ, ಚಂದ್ರಶೇಖರ್​ಗೂ ಕೊಲೆ ಬೆದರಿಕೆ ಹಾಕಿದ್ರು. ನಿನ್ನ ಹಾಗೂ ನಿನ್ನ ಮಗನನ್ನು ಮುಗಿಸುತ್ತೇವೆ ಎಂದಿದ್ರು. ಅದೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.


ಇದನ್ನೂ ಓದಿ: Chandrashekar Death: ಆಶ್ರಮಕ್ಕೆ ಬಂದ ಚಂದ್ರಶೇಖರ್​ಗೆ ವಿನಯ್​ ಗುರೂಜಿ ಹೇಳಿದ್ದೇನು? ಸಾವಿನ ಬಗ್ಗೆ ಸುಳಿವು ಕೊಟ್ಟಿದ್ರಾ ಅವಧೂತರು?


ನನ್ನ ಮಗನ ಸಾವಿಗೆ ನ್ಯಾಯ ಬೇಕು


ನನ್ನ ಮಗ ಗೌರಿ ಗದ್ದೆ ಹೋಗಿದ್ದು ಗೊತ್ತಿರಲಿಲ್ಲ. ಆತನನ್ನು ನಾನು ನಿನ್ನೆ ಶವವಾಗಿ ನೋಡಿದ್ದೇನೆ ಎಂದು ಮೃತ ಚಂದ್ರಶೇಖರ್ ತಾಯಿ ಅನಿತಾ ಕಣ್ಣೀರು ಹಾಕಿದ್ದಾರೆ. ನನ್ನ ಮಗನಿಗೆ ಏನು ಮಾಡಿದ್ರೋ ಗೊತ್ತಿಲ್ಲ. ಜೀವಂತವಾಗಿ ಮಗನ ಮುಖವನ್ನ ನಾನು ಮತ್ತು ನನ್ನ ಪತಿ ಸಹ ನೋಡಲಿಲ್ಲ. ಕೊನೆಗೆ ಏನಾಯಿತು ಗೊತ್ತಾಗಲಿಲ್ಲ. ರಾಜಕೀಯವಾಗಿ ಬೆಳೆಯುತ್ತಿದ್ದ ನನ್ನ ಮಗನ ಸಾವಿಗೆ ನ್ಯಾಯ ಬೇಕು ಎಂದು ರೋಧಿಸಿದ್ದಾರೆ. ಇನ್ನು ರೇಣುಕಾಚಾರ್ಯ ಮಕ್ಕಳು ಸಹ ಚಂದ್ರು ಸಾವಿನ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.


ಗಣ್ಯರ ಸಾಂತ್ವನ


ಶಾಸಕ ರೇಣುಕಾಚಾರ್ಯ ಮನೆ ಬಳಿ ಜನಸಾಗರವೇ ಸೇರಿತ್ತು. ರೇಣುಕಾಚಾರ್ಯಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ B.Y ರಾಘವೇಂದ್ರ ಸಾಂತ್ವನ ಹೇಳಿದ್ರು.


ನಿಷ್ಪಕ್ಷಪಾತ ತನಿಖೆ ನಡೆಸಲಿ-ಸಿದ್ದರಾಮಯ್ಯ


ಶಾಸಕ ರೇಣುಕಾಚಾರ್ಯ ಸೋದರನ ಮಗನ ಸಾವಿನ ಸುದ್ದಿ ಕೇಳಿ ಆಘಾತವಾಯಿತು ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಮೃತ ಚಂದ್ರಶೇಖರ್ ತಂದೆ-ತಾಯಿ ಮತ್ತು ಸಂಬಂಧಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅನುಮಾನಾಸ್ಪದವಾಗಿ ಕಾಣುತ್ತಿರುವ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.


ಜಾಗ್ರತೆಯಿಂದ ಮನೆಗೆ ಹೋಗಿ

ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದ ಚಂದ್ರಶೇಖರ್​, ಆಶ್ರಮದಿಂದ ತೆರಳುವ ಮೊದಲು ಜಾಗ್ರತೆಯಿಂದ ಮನೆಗೆ ಹೋಗಿ ಎಂದು ವಿನಯ್ ಗುರೂಜಿ ಹೇಳಿದ್ದರಂತೆ. ಈ ವೇಳೆ ಚಂದ್ರಶೇಖರ್ ಜೊತೆಗೆ ಅವರ ಗೆಳೆಯ ಕಿರಣ್ ಸಹ ಉಪಸ್ಥಿತರಿದ್ದರು ಎಂದು ಆಶ್ರಮದಲ್ಲಿರುವ ಚಂದ್ರಶೇಖರ್ ಗುರೂಜಿ ಅವರ ಅಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾತ್ರಿ 9 ಗಂಟೆಗೆ ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್​
ವಿನಯ್ ಗುರೂಜಿ ಆಶ್ರಮಕ್ಕೆ ಚಂದ್ರಶೇಖರ್ ಅವರು​ ಅಂದು ರಾತ್ರಿ 9 ಗಂಟೆಯ ನಂತರ ಆಶ್ರಮಕ್ಕೆ ಬಂದಿದ್ದರು. ಸುಮಾರು 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು. ಚಂದ್ರಶೇಖರ್​ ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದ ಕಾರಣ ಗುರೂಜಿಗೆ ಚಿರಪರಿಚಿತರಾಗಿದ್ದರು. ಯಾಕೋ ಲೇಟ್ ಆಗಿ ಬಂದೆ, ಇದು ಬರುವ ಟೈಮಾ ಎಂದು ಗುರೂಜಿಗೆ ಸಲುಗೆಯಿಂದಲೇ ಚಂದ್ರಶೇಖರ್​ಗೆ ಗದರಿಸಿದ್ದರಂತೆ.


Published by:ಪಾವನ ಎಚ್ ಎಸ್
First published: