• Home
  • »
  • News
  • »
  • state
  • »
  • Raju Gowda: ರಾಹುಲ್ ಗಾಂಧಿ ಫ್ಲಾಪ್ ಲೀಡರ್! ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ ಎಂದ್ರು ರಾಜುಗೌಡ

Raju Gowda: ರಾಹುಲ್ ಗಾಂಧಿ ಫ್ಲಾಪ್ ಲೀಡರ್! ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ ಎಂದ್ರು ರಾಜುಗೌಡ

ಶಾಸಕ ರಾಜುಗೌಡ

ಶಾಸಕ ರಾಜುಗೌಡ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಪರ್ ಡೂಪರ್ ಹಿಟ್ ಆದವರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫ್ಲಾಪ್ ಲೀಡರ್ ಆಗಿದ್ದು, ಹಿಟ್ ಫಿಲ್ಮ್ ಅನ್ನು ಡಬ್ಬಿಂಗ್ ಮಾಡುತ್ತಾರೆ. ಫ್ಲಾಪ್ ಆದ ಕಾಂಗ್ರೆಸ್ ನವರ ಸಿನಿಮಾವನ್ನು ಯಾರು ಡಬ್ ಮಾಡ್ತಾರೆ ಎಂದು ಶಾಸಕ ರಾಜುಗೌಡ ಎನ್ನುತ್ತಾರೆ.

  • Share this:

ಯಾದಗಿರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ  ಯಾತ್ರೆಯು ಕಾಂಗ್ರೆಸ್ ನಾಯಕರನ್ನು (Congress Leaders) ಜೋಡಿಸುವ ಯಾತ್ರೆಯಾಗಿದೆ. ಕಾಂಗ್ರೆಸ್ ನಾಯಕರು ಪರಸ್ಪರ ಅಸಮಾಧಾನಗೊಂಡಿದ್ದು, ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಈ  ಯಾತ್ರೆ ಮೂಲಕ ಕಾಂಗ್ರೆಸ್ ನಾಯಕರನ್ನು ಕೂಡಿಸುವ ಕೆಲಸ ಮಾಡುತ್ತಿದ್ದಾರೆಂದು ಸುರಪುರ ಶಾಸಕ ರಾಜುಗೌಡ (Raju Gowda) ಅವರು ಹೇಳಿದ್ದಾರೆ. 


ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ್ ಜೋಡೋ ಯಾತ್ರೆಗೆ ಲೆವಡಿ ಮಾಡಿದರುಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಪರ್ ಡೂಪರ್ ಹಿಟ್ ಆದವರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫ್ಲಾಪ್ ಲೀಡರ್ ಆಗಿದ್ದು, ಹಿಟ್ ಫಿಲ್ಮ್ ಅನ್ನು ಡಬ್ಬಿಂಗ್ ಮಾಡುತ್ತಾರೆ. ಫ್ಲಾಪ್ ಆದ ಕಾಂಗ್ರೆಸ್ ನವರ ಸಿನಿಮಾವನ್ನು ಯಾರು ಡಬ್ ಮಾಡ್ತಾರೆ. ಈಗ ಕಾಂತಾರ ಸೂಪರ್ ಡೂಪರ್ ಹಿಟ್ ಆಗ್ತಿದೆ.


ರಾಹುಲ್ ಗಾಂಧಿ ಫೇಸ್ ನಿಂದ ವೋಟ್ ಬರಲ್ಲ


ಇದು ಭಾರತ್ ಜೋಡೋ ಯಾತ್ರೆ  ಆಗಿದೆಯೋ ಇಲ್ಲ, ನಾಯಕರುಗಳ ಕೂಡಿಸುವ ಯಾತ್ರೆಯಾಗಿದೆಯೋ..? ರಾಹುಲ್ ಗಾಂಧಿ ಅವರು ಮೊದಲು ಭಾರತ್ ಜೋಡೋ ಯಾತ್ರೆ ಬದಲು ಮೊದಲು ಕಾಂಗ್ರೆಸ್ ನಾಯಕರನ್ನು ಜೋಡಿಸುವ ಯಾತ್ರೆ ಮಾಡಲಿ ಎಂದರು. ಬಳ್ಳಾರಿ ಜೋಡೋ ಯಾತ್ರೆಯಲ್ಲಿ ಜನ ಸೇರಿಲ್ಲ ಬೇರೆ ದೇಶ ವಿಡಿಯೋ ,ಫೋಟೋ ಹಾಕಿದ್ದಾರೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿ ಫೇಸ್ ನಿಂದ ವೋಟ್ ಬರಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಇಟ್ಟುಕೊಂಡು ವೋಟ್ ಕೇಳುತ್ತಾರೆಂದರು.


ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ


ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಶಾಸಕ ರಾಜುಗೌಡ ಅವರು ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಸಿಎಂ ಅವರು ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಬೇಡಿಕೆ ಈಡೇರಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನನ್ನ ಆಸೆ ಈಡೇರಿಸಿದ್ದಾರೆ. ಕಾರಣ ಈಗ ಮಂತ್ರಿ ಸ್ಥಾನ ಕೇಳುವದಿಲ್ಲ. ಸರಕಾರ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿ ಅಭಿವೃದ್ಧಿಗೆ ಕೊಡುಗೆ ನೀಡಿದೆ.


ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡಲಿ


ಸಚಿವ ಸ್ಥಾನ ಬೇಡವೆಂದು ನಾನು ಸಿಎಂ ಅವರಿಗೆ ಭೇಟಿಯಾಗಿ ಹೇಳಿದ್ದೇನೆ. ಶಾಸಕನಾಗಿದ್ದುಕೊಂಡು ಮಂತ್ರಿ ಮಾಡುವಷ್ಟು ಕೆಲಸ ಮಾಡಿದ್ದೆನೆ‌. ಮಂತ್ರಿ ಸ್ಥಾನ ಬೇಡವೆಂದು ಬಿಜೆಪಿ ವರಿಷ್ಠರಿಗೆ ಹಾಗೂ ಸಿಎಂ ಅವರಿಗೆ ಹೇಳಿದ್ದೆನೆಂದರು.ಸಚಿವ ಸ್ಥಾನ ನೀಡುತ್ತೆವೆಂದು ಮಾತುಕೊಟ್ಟಿದವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನ ನೀಡಿದರೆ ಒಳ್ಳೆದಾಗುತ್ತದೆ. ಶಾಸಕರಾದ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ ಜಾರಕಿಹೋಳಿ ಅವರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆದಾಗುತ್ತದೆ ಎಂದರು.


ಇದನ್ನೂ ಓದಿ: SayCM Campaign: ಪೇಸಿಎಂ ಆಯ್ತು ಇದೀಗ ಸೇಸಿಎಂ ಅಭಿಯಾನ; ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ-ಪ್ರಿಯಾಂಕ್​ ಖರ್ಗೆ


ಬಿಜೆಪಿ 130 ಕ್ಷೇತ್ರ ಗೆಲ್ಲುವ ಟಾರ್ಗೆಟ್ ಹೊಂದಿದೆ


ಬಿಜೆಪಿಗೆ ಸ್ಪಷ್ಟ ಬಹುಮತ ಬರದ ಹಿನ್ನೆಲೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇದ್ದಂಗೆ ಇದೆ. ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿ 130 ಕ್ಷೇತ್ರ ಗೆಲ್ಲುವ ಟಾರ್ಗೆಟ್ ಹೊಂದಲಾಗಿದೆ. ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಅಭಿವೃದ್ಧಿ ಕಾರ್ಯ ಮಾಡುತ್ತಿದೆ ಎಂದು ಶಾಸಕ ರಾಜುಗೌಡ ಅವರು ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: