MLA Raju Gowda: ನಿಷೇಧದ ನಡುವೆಯೂ ಡ್ಯಾಂ ಬಳಿ ನಿಂತು ಪೋಸ್! ಶಾಸಕ ರಾಜುಗೌಡ ಪುತ್ರನಿಗಿದೆಯಾ ಬೇರೆ ರೂಲ್ಸ್?

ಡ್ಯಾಂ ಗೇಟ್ ಮುಂಭಾಗದಲ್ಲಿ ಹಾಗೂ ಜಲಾಶಯದ ಮೇಲೆ ಜನಸಾಮಾನ್ಯರಿಗೆ ತೆರಳಲು ಜಲಾಶಯದ ಅಧಿಕಾರಿಗಳು ಬಿಡುವುದಿಲ್ಲ. ಆದರೆ ಎಂಎಲ್‌ಎ ಪುತ್ರನಿಗೆ ಈ ರೂಲ್ಸ್ ಅನ್ವಯಿಸಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಸಕರ ಪುತ್ರನ ಹುಟ್ಟುಹಬ್ಬ

ಶಾಸಕರ ಪುತ್ರನ ಹುಟ್ಟುಹಬ್ಬ

  • Share this:
ಯಾದಗಿರಿ: ಜನಸಾಮಾನ್ಯರಿಗೆ (Common People) ಒಂದು ನಿಯಮ (Rules), ಉಳ್ಳವರಿಗೆ ಒಂದು ಕಾನೂನು ಎಂಬಂತಾಗಿದೆ. ಯಾಕೆಂದ್ರೆ ಬಸವಸಾಗರ ಜಲಾಶಯದ (Basavasagar Dam) ಮೇಲೆ ಹಾಗೂ ಬಸವಸಾಗರ ಜಲಾಶಯದ ಮುಂಭಾಗದಲ್ಲಿ ಜನಸಾಮಾನ್ಯರಿಗೆ ನಿಷೇಧ (Prohibition) ಹೇರಲಾಗಿದೆ. ಆದರೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ ಶಾಸಕ (Surapur MLA) ರಾಜುಗೌಡ (Raju Gowda) ಅವರ ಪುತ್ರ ಮಣಿಕಂಠ ನಾಯಕ ಅವರ ವಿಡಿಯೋ ಶೂಟಿಂಗ್ (Video Shooting) ಅಲ್ಲೇ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದ ಗೇಟ್ ಮುಂಭಾಗ ಹಾಗೂ ಜಲಾಶಯದ ಮೇಲೆ ಸುರಪುರ ಶಾಸಕ ರಾಜುಗೌಡ ಅವರ ಪುತ್ರ ಮಣಿಕಂಠ ನಾಯಕ ಅವರ ವಿಡಿಯೋ ಶೂಟಿಂಗ್ ಮಾಡಲಾಗಿದೆ.

ಜನರಿಗೇ ಒಂದು ಕಾನೂನು

ಡ್ಯಾಂ ಗೇಟ್ ಮುಂಭಾಗದಲ್ಲಿ ಹಾಗೂ ಜಲಾಶಯದ ಮೇಲೆ ಜನಸಾಮಾನ್ಯರಿಗೆ ತೆರಳಲು ಜಲಾಶಯದ ಅಧಿಕಾರಿಗಳು  ಬಿಡುವುದಿಲ್ಲ. ಆದರೆ ಎಂಎಲ್‌ಎ ಪುತ್ರನಿಗೆ ಈ ರೂಲ್ಸ್ ಅನ್ವಯಿಸಿಲ್ಲ. ಶಾಸಕ ರಾಜುಗೌಡ ಅವರ ಪುತ್ರ ಮಣಿಕಂಠ ನಾಯಕ ಅವರ ವಿಡಿಯೋ ಶೂಟಿಂಗ್ ಮಾಡಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರಿಗೆ ಒಂದು ನಿಯಮ ಹಾಗೂ ಉಳ್ಳವರಿಗೆ ಒಂದು ನಿಯಮನಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕರ ಪುತ್ರನ ಹುಟ್ಟುಹಬ್ಬ


ಜಲಾಶಯದ ಬಳಿ ಎಂಎಲ್‌ಎ ಪುತ್ರನ ಶೂಟಿಂಗ್

ಜಲಾಶಯದ ಮೇಲೆ ಹಾಗೂ ಮುಂಭಾಗದಲ್ಲಿ ಮಣಿಕಂಠ ನಾಯಕ ಅವರ ವಿಡಿಯೋ ಶೂಟಿಂಗ್ ಮಾಡಿದ್ದು ಯಾವಾಗ, ನಿಷೇಧದ ನಡುವೆಯು ಅದು ಹೇಗೆ ವಿಡಿಯೋ ಶೂಟಿಂಗ್ ಮಾಡಿದರು, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು,  ಜಲಾಶಯದ ಅಧಿಕಾರಿಗಳು ಅದು ಹೇಗೆ ಅನುಮತಿ ನೀಡಿದ್ದರು, ಎಲ್ಲವು ಗೋತ್ತಿದ್ದರು ಜಲಾಶಯದ ಅಧಿಕಾರಿಗಳು ಮೌನವಹಿಸಿದ್ದು ಯಾಕೆ ಎಂಬುದು ಹಲವಾರು ಪ್ರಶ್ನೆ ಕಾಡುತ್ತಿದೆ.

ಇದನ್ನೂ ಓದಿ: Siddaramaiah Tweet: ಮೊಟ್ಟೆ ಎಸೆದವ ಕಾಂಗ್ರೆಸ್‌ನವನಾಗಿದ್ರೆ ಜೈಲಿಗೆ ಕಳಿಸಿ! ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್

ಹುಟ್ಟುಹಬ್ಬದ ಅಂಗವಾಗಿ ವಿಡಿಯೋ ಶೂಟಿಂಗ್

ಶಾಸಕರ ಪುತ್ರ ಮಣಿಕಂಠ ನಾಯಕ ಜನ್ಮ ದಿನದ ಮುನ್ನ ಜಲಾಶಯದ ಮೇಲೆ ಹಾಗೂ ಮುಂಭಾಗದಲ್ಲಿ ವಿಡಿಯೋ ಶೂಟಿಂಗ್ ಮಾಡಲಾಗಿತ್ತು ಎನ್ನಲಾಗಿದೆ. ಕಾರ್ ತೆಗೆದುಕೊಂಡು ವಿಡಿಯೋ ಶೂಟಿಂಗ್ ಮಾಡಲಾಗಿದೆ.

ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ

ಸುರಪುರ ಕ್ಷೇತ್ರದಲ್ಲಿ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸುರಪುರ ಶಾಸಕ ರಾಜುಗೌಡ ಅವರು ತಮ್ಮ ಪುತ್ರನಾದ ಮಣಿಕಂಠ ನಾಯಕ ಅವರ ಜನ್ಮ ದಿನದಂದು 100 ಹಾಸಿಗೆಯ  ಮಲ್ಟಿ ಸ್ಪೆಷಾಲಿಟಿ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.  ಶಾಸಕ ರಾಜುಗೌಡ ಅವರ ತಾಯಿಯಾದ ದಿ. ತಿಮ್ಮಮ್ಮ ತಾಯಿ ಅವರ ಸ್ಮರಣಾರ್ಥ ಹಾಗೂ ಪುತ್ರನ ಜನ್ಮ ದಿನ ಪ್ರಯುಕ್ತ ಶಾಸಕ ರಾಜುಗೌಡ ಅವರು, ಹುಣಸಗಿ ಪಟ್ಟಣದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಗುರಿ

ಸುರಪುರ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ನೀಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಅಮ್ಮ ಆಸ್ಪತ್ರೆ ಹೆಸರಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ.ಒಂದು ವರೆ ವರ್ಷದೊಳಗೆ ಈ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: Student Suicide: ಎಲ್​ಎಲ್​ಬಿ ಮಾಡಲು ಸೀಟ್ ಸಿಗದ್ದಕ್ಕೆ ಯುವಕ ಸೂಸೈಡ್!

ಕೊಟ್ಟ ಮಾತು ಈಡೇರಿಸಿದ ಶಾಸಕ

ಹುಣಸಗಿ ತಾಲೂಕಿನ ಸಿದ್ದಾಪುರ ಬಿ ಗ್ರಾಮದ ಜಮೀನಿನಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಪರಮಣ್ಣ ಪೂಜಾರಿ ಎಂಬುವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶಾಸಕ ರಾಜುಗೌಡ ಅವರು ಕಳೆದ ವರ್ಷ ಡಿಸೆಂಬರ್ 21 ರಂದು ಭೇಟಿ ನೀಡಿ, ಪರಮಣ್ಣನವರ ಕಷ್ಟ ಆಲಿಸಿದರು. ಈ ವೇಳೆ ಪರಮಣ್ಣ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿ ಕೊಡಿ, ಮನೆ ಕಟ್ಟಿಸಿಕೊಡಿ ಅಂತ ಕೇಳಿಕೊಂಡಿದ್ದರು.

ಬಡ ವ್ಯಕ್ತಿಗೆ ನೀರಿನ ಸೌಲಭ್ಯ ನೀಡಿದ ಶಾಸಕರು


ಅಂದು ಕೊಟ್ಟ ಮಾತಿನಂತೆ ಪುತ್ರನ ಜನ್ಮ ದಿನದ ಸಂದರ್ಭದಲ್ಲಿ ಕೊವೆ ಬಾವಿ ಕೊರೆಸುವ ಜೊತೆ ಮನೆ ನಿರ್ಮಾಣಕ್ಕೆ 1.5 ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಿದ್ದಾರೆ. ಶಾಸಕ ರಾಜುಗೌಡ ಅವರ ಮಾನವೀಯ ಕಾಳಜಿಗೆ ಪರಮಣ್ಣ ಧನ್ಯವಾದಗಳು ಸಲ್ಲಿಸಿದ್ದಾರೆ.
Published by:Annappa Achari
First published: