HOME » NEWS » State » MLA RAJUGOWDA BECOME WARRIOR IN HIS CONSTITUENCY SESR NMPH

ಸೋಂಕಿನ ಜಾಗೃತಿಗೆ ಕ್ಷೇತ್ರದಲ್ಲಿ ವಾರಿಯರ್​ ಆದ ಶಾಸಕ ರಾಜುಗೌಡ

ಕ್ಷೇತ್ರದ ಜನರ ಜೀವಕ್ಕೆ ತೊಂದರೆಯಾದರೆ ಯಾವ ಹುದ್ದೆ ಇದ್ದರೇನು ಫಲ. ನಾನು ಕ್ಷೇತ್ರದ ಜನರ ಉಳಿಸಲು ಬದ್ದನಾಗಿದ್ದೇನೆ

news18-kannada
Updated:May 15, 2021, 9:54 PM IST
ಸೋಂಕಿನ ಜಾಗೃತಿಗೆ ಕ್ಷೇತ್ರದಲ್ಲಿ ವಾರಿಯರ್​ ಆದ ಶಾಸಕ ರಾಜುಗೌಡ
ಕ್ಷೇತ್ರದ ಜನರ ಜೀವಕ್ಕೆ ತೊಂದರೆಯಾದರೆ ಯಾವ ಹುದ್ದೆ ಇದ್ದರೇನು ಫಲ. ನಾನು ಕ್ಷೇತ್ರದ ಜನರ ಉಳಿಸಲು ಬದ್ದನಾಗಿದ್ದೇನೆ
  • Share this:
ಯಾದಗಿರಿ (ಮೇ. 15): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಸ್ಪೋಟಗೊಳ್ಳುತ್ತಿವೆ. ವಲಸೆ ಕಾರ್ಮಿಕರಿಂದ ಹಳ್ಳಿಯಲ್ಲಿ ಈಗ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಸುರಪುರ ಕ್ಷೇತ್ರದಲ್ಲಿ ಕೂಡ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು,ಇದನ್ನು ಕಡಿವಾಣ ಹಾಕಲು ಸುರಪುರ ಶಾಸಕ ರಾಜುಗೌಡ ಜನರಿಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ತಮ್ಮ ಕ್ಷೇತ್ರದ ಹಳ್ಳಿಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ತಾನೇ ಶಾಸಕ ಕೋವಿಡ್ ನಿಂದ ಗುಣಮುಖರಾಗಿದ್ದರು. ಕೊರೋನಾ ಗೆದ್ದು ಬಂದು ಮನೆಯಲ್ಲಿ ಇರದೆ ರಾಜುಗೌಡ ಅವರು, ಕ್ಷೇತ್ರದ ಜನರ ಜೀವಕ್ಕೆ ತೊಂದರೆಯಾದರೆ ಯಾವ ಹುದ್ದೆ ಇದ್ದರೇನು ಫಲ. ನಾನು ಕ್ಷೇತ್ರದ ಜನರ ಉಳಿಸಲು ಬದ್ದನಾಗಿದ್ದೇನೆ ಎಂದು ಇಡೀ ಸುರಪುರ ಕ್ಷೇತ್ರದ್ಯಾಂತ ಹಗಲಿರುಳು ಶ್ರಮವಹಿಸುತ್ತಿದ್ದಾರೆ.

ಅಧಿಕಾರಿಗಳು ಮಾಡುವ ಕೆಲಸವನ್ನು ಈಗ ಶಾಸಕ ರಾಜುಗೌಡ ಅವರೇ ತಾವೇ ಖುದ್ದು ಹಳ್ಳಿಯತ್ತ ತೆರಳಿ ಕೈಯಲ್ಲಿ ಮೈಕ್ ಹಿಡಿದು ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಮುಖವಾಗಿ ಕೈಮುಗಿದು ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು. ಸೋಂಕಿತರು ಯಾವುದೇ ಕಾರಣಕ್ಕೂ ಊರಲ್ಲಿ ಓಡಾಡಿಕೊಂಡು ಇರದೇ ಮನೆಯಲ್ಲಿ ಇರಬೇಕು ಇಲ್ಲದಿದ್ದರೆ ಕ್ವಾರೈಂಟೈನ್ ಕೇಂದ್ರಕ್ಕೆ ತೆರಳಬೇಕೆಂದು ಜನರಿಗೆ ಜಾಗೃತಿ ‌ಮೂಡಿಸುವ ಕಾರ್ಯ ರಾಜುಗೌಡ ಅವರು ಮಾಡುತ್ತಿದ್ದಾರೆ. ಖುದ್ದು ಪಂಚಾಯತಗೆ ತೆರಳಿ ಅಲ್ಲಿಯು ಸಭೆ ನಡೆಸಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ನಿರ್ವಹಣೆ ಬಗ್ಗೆ ಸೂಚನೆ ನೀಡಿದ್ದಾರೆ.

Youtube Video

1. 5 ಲಕ್ಷ ಮಾಸ್ಕ್ ವಿತರಣೆಗೆ ಮುಂದು...!

ಹಳ್ಳಿಗೆ ತೆರಳಿ ರಾಜುಗೌಡ ಅವರು ಮಾಸ್ಕ್ ಧರಣೆ ಬಗ್ಗೆ  ಜನರಿಗೆ ಅರಿವು ಮೂಡಿಸುತ್ತಿದ್ದಾರೆ.  ಬಹುತೇಕರ ಜನರ ಹತ್ತಿರ ಮಾಸ್ಕ್ ಇಲ್ಲದನ್ನು ಅರಿತು ಶಾಸಕ ರಾಜುಗೌಡ ಅವರು 1. 5 ಲಕ್ಷ ಮಾಸ್ಕ್ ಗಳನ್ನು ಖರೀದಿ ಮಾಡಿ ಪ್ರತಿಹಳ್ಳಿಯಲ್ಲಿ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ಇಂದು ಸುರಪುರ ಪೊಲೀಸರಿಗೆ ಮಾಸ್ಕ್ ವಿತರಣೆ ಮಾಡುವ ಜೊತೆ ಜನರಿಗೆ ಕೂಡ ಮಾಸ್ಕ್ ವಿತರಣೆ ಮಾಡಿದರು.

ಈ ಬಗ್ಗೆ ಶಾಸಕ ರಾಜುಗೌಡ ಮಾತನಾಡಿ, ಸುರಪುರ ಪೊಲೀಸರಿಗೆ ನಾಲ್ಕು ಸಾವಿರ ಮಾಸ್ಕ್ ವಿತರಣೆ ಮಾಡಲಾಗಿದೆ. ಪೊಲೀಸರು ಲಾಠಿಯಿಂದ ಹೊಡೆದರು ಜನರು ಬುದ್ದಿ‌ ಕಲಿತಿಲ್ಲ. ಪೊಲೀಸರು ಜನರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಬೇಕೆಂದರು. ಜನರು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಕೋವಿಡ್ ನಿಯಮ ಪಾಲನೆ ಮಾಡಬೇಕು. ಕ್ಷೇತ್ರದ ಜನರಿಗಾಗಿ ನಾನು ಈಗಾಗಲೇ 1 .5 ಲಕ್ಷ ಮಾಸ್ಕ್ ‌ತಂದಿದ್ದು ಎಲ್ಲರಿಗೂ ಮಾಸ್ಕ್ ಹಂಚುತ್ತೇವೆ. ಜನರು ಮಾಸ್ಕ್ ಧರಿಸಿ‌ ಕೋವಿಡ್ ಸೋಂಕಿನ ವಿರುದ್ಧ ಹೋರಾಟ ಮಾಡಬೇಕು ಎಂದರು

ಆಹಾರ, ಹಣ್ಣು ವಿತರಣೆ..!ಇದರ ಜೊತೆಯೇ ಅವರು ಸೋಂಕಿತರ ,ಬಡವರ, ನಿರ್ಗತಿಕರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜುಗೌಡ ಅಭಿಮಾನಿ ಬಳಗದ ಮೂಲಕ ಅನ್ನ, ನೀರು ವಿತರಣೆ ಮಾಡಲಾಗುತ್ತಿದೆ. ಅದೇ ರೀತಿ ಕೋವಿಡ್ ಸೋಂಕಿತರಿಗೂ ಆಹಾರ, ಪೌಷ್ಠಿಕ ಆಹಾರ, ಹಣ್ಣು ಗಳನ್ನು ವಿತರಣೆ ಮಾಡಿ ಕೋವಿಡ್ ಸಂಕಷ್ಟದಲ್ಲಿ ಕೂಡ ನಾವಿದ್ದೆವೆಂದು ಎಂದು ಅಭಯ ನೀಡಿದ್ದಾರೆ. ಬಿಸಿಲಿನಲ್ಲಿ ಕೂಡ  ಶಾಸಕ ರಾಜುಗೌಡ ಅವರು ಕೋವಿಡ್ ಕಡಿವಾಣ ಹಾಕಲು ಹೋರಾಟ ನಡೆಸುತ್ತಿರುವ ಕಾರ್ಯಕ್ಕೆ ಜನರು ಶ್ಲಾಘಿಸಿದ್ದಾರೆ.  ಜನರು ಅನಾವಶ್ಯಕವಾಗಿ ಓಡಾಡದೇ ,ಕೋವಿಡ್ ನಿಯಮವನ್ನು ಪಾಲಿಸಿ ಕೊರೋನಾ ಸೋಂಕಿನ ವಿರುದ್ಧ ಸಾಮೂಹಿಕ ಹೋರಾಟ ನಡೆಸಬೇಕು ಎಂದು ಮನವಿ ಮಾಡುತ್ತಿದ್ದಾರೆ. ಕ್ಷೇತ್ರದ ಜನರಿಗಾಗಿ ಶಾಸಕರು ನಡೆಸುತ್ತಿರುವ ಕಾರ್ಯಕ್ಕೆ ಕ್ಷೇತ್ರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Published by: Seema R
First published: May 15, 2021, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories