• Home
  • »
  • News
  • »
  • state
  • »
  • Pratap Simha Vs Puttaraju; ಪ್ರತಾಪ್ ಸಿಂಹಗೆ ಗಡುವು ನೀಡಿದ ಶಾಸಕ ಪುಟ್ಟರಾಜು

Pratap Simha Vs Puttaraju; ಪ್ರತಾಪ್ ಸಿಂಹಗೆ ಗಡುವು ನೀಡಿದ ಶಾಸಕ ಪುಟ್ಟರಾಜು

ಪ್ರತಾಪ್ ಸಿಂಹ ಮತ್ತು ಪುಟ್ಟರಾಜು

ಪ್ರತಾಪ್ ಸಿಂಹ ಮತ್ತು ಪುಟ್ಟರಾಜು

ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಾವಿರಾರು ಜನರ ಅನ್ನ ಕಿತ್ತುಕೊಂಡಿದೆ. ಪ್ರತಾಪ್ ಸಿಂಹ ಕಾಂಟ್ರ್ಯಾಕ್ಟರ್ ಮೇಲೆ ಈತನೊಬ್ಬ ಕಾಂಟ್ರ್ಯಾಕ್ಟರ್. ಕಳಪೆ ಕಾಮಗಾರಿ ಅನ್ನೋದು ಈಗ ಬಟಾ ಬಯಲಾಗಿದೆ ಎಂದು ಆರೋಪಿಸಿದರು.

  • Share this:

ಮೇಲುಕೋಟೆ ಕ್ಷೇತ್ರದ (Melukote) ರಸ್ತೆಗಳನ್ನು ದುರಸ್ತಿ ಮಾಡಲು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಅವರಿಗೆ ಜೆಡಿಎಸ್ ಶಾಸಕ ಪುಟ್ಟರಾಜು (JDS MLA Puttaraju) ಗಡುವು ನೀಡಿದ್ದಾರೆ. ರಸ್ತೆಗಳ ದುರಸ್ತಿ ಕಾರ್ಯ (Road Repair Work) ನಡೆಯದಿದ್ದರೆ ಸಂಸದರ ಮನೆ ಮುಂದೆ ಧರಣಿ ಕುಳಿತು ಪ್ರತಿಭಟನೆ (Protest) ನಡೆಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬೆಂಗಳೂರು- ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ (Bangalore Mysore 10 Lane Highway) ನಿರ್ಮಾಣದ ವೇಳೆ ಮೇಲುಕೋಟೆ ಕ್ಷೇತ್ರದ ಬಹುತೇಕ ರಸ್ತೆಗಳು ಹಾಳಾಗಿ ಹೋಗಿದೆ. ಭಾರೀ ಗಾತ್ರದ ವಾಹನಗಳು ಸಂಚರಿಸಿ ರಸ್ತೆಯಲ್ಲಿ ಗುಂಡಿಗಳು (Potholes) ಉಂಟಾಗಿದೆ. ಬೆಂಗಳೂರು ಮೈಸೂರು ಕಾಮಗಾರಿ ಬಹುತೇಕ ಅಂತ್ಯವಾಗಿ ಹೋಗಿದೆ. ಹೆದ್ದಾರಿ ಕೆಲಸ ಮುಗಿದ ಬಳಿಕ ರಸ್ತೆ ದುರಸ್ತಿ ಮಾಡಿಸಿ ಕೊಡುವುದಾಗಿ ಸಂಸದ ಪ್ರತಾಪ್ ಸಿಂಹ ಮಾತು ಕೊಟ್ಟಿದ್ದರು. ಈಗ ಸಂಸದ ಪ್ರತಾಪ್ ಸಿಂಹ ಮಾತು ಉಳಿಸಿಕೊಳ್ಳದೆ ಹೋದ್ರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಪುಟ್ಟರಾಜು ಗುಡುಗಿದ್ದಾರೆ.


ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಾವಿರಾರು ಜನರ ಅನ್ನ ಕಿತ್ತುಕೊಂಡಿದೆ. ಪ್ರತಾಪ್ ಸಿಂಹ ಕಾಂಟ್ರ್ಯಾಕ್ಟರ್ ಮೇಲೆ ಈತನೊಬ್ಬ ಕಾಂಟ್ರ್ಯಾಕ್ಟರ್. ಕಳಪೆ ಕಾಮಗಾರಿ ಅನ್ನೋದು ಈಗ ಬಟಾ ಬಯಲಾಗಿದೆ ಎಂದು ಆರೋಪಿಸಿದರು.


ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ


ಕೆಆರ್​​ಎಸ್ ಬೃಂದಾವನಕ್ಕೆ ಚಿರತೆ ನುಗ್ಗಿ ಆತಂಕ ಸೃಷ್ಠಿಸಿದ್ದ ಪ್ರಕರಣದ ಕುರಿತು ಶಾಸಕ ಪುಟ್ಟರಾಜು ಪ್ರತಿಕ್ರಿಯಿಸಿದರು. ಕಳೆದ 15 ದಿನಗಳಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಸಮಯ ವ್ಯರ್ಥ ಮಾಡುತ್ತಿರುವ ಅರಣ್ಯ ಇಲಾಖೆಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.


ಮಂಡ್ಯ ಜೆಡಿಎಸ್​ ಪಕ್ಷದ ಭದ್ರಕೋಟೆ


2023ರ ವಿಧಾನಸಭಾ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಶಾಸಕ ಪುಟ್ಟರಾಜು , ಮಂಡ್ಯ ಜೆಡಿಎಸ್ ಭದ್ರಕೋಟೆ 7 ಕ್ಕೆ 7 ಕ್ಷೇತ್ರ ಗೆದ್ದೆ ಗೆಲ್ಲುತ್ತೇವೆ. ಹೋದ ಬಾರಿ ಕಾಂಚಾಣದ ಬಲದಿಂದ ಚುನಾವಣೆಯನ್ನ ಕೆ.ಆರ್.ಪೇಟೆಯಲ್ಲಿ ಗೆದ್ದರು. ಈ ಬಾರಿ ಹಾಗೆ ಆಗಲ್ಲ. ಕೆ.ಆರ್ ಪೇಟೆಯಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಹೇಳಿದರು.


ಇದನ್ನೂ ಓದಿ:  Voters Data Steal: ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಜೊತೆ ಬಿಜೆಪಿ ಶಾಸಕನ ಲೇವಾದೇವಿ


ಕೋಲಾರ ಜಿಲ್ಲೆಯಲ್ಲಿ ಹೆಚ್​​ಡಿಕೆ ಗ್ರಾಮ ವಾಸ್ತವ್ಯ


ಕೋಲಾರದ ಮುಳಬಾಗಿಲಿನಲ್ಲಿ ದಳಪತಿಗಳು ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಜೆಡಿಎಸ್ ‘ಪಂಚರತ್ನ ರಥಯಾತ್ರೆ’ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ರು. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಒಂದೇ ಒಂದು ಅವಕಾಶ ನೀಡಿ, ನಾನು 10 ವರ್ಷ ಅಧಿಕಾರ ಕೇಳಿಲ್ಲ, ಒಂದು ಬಾರಿ ಅವಕಾಶ ನೀಡಿ, 40 ರಿಂದ 50 ಸ್ಥಾನ ತರಿಸಿ ಮತ್ತೆ ಬೇರೆಯವರ ಮನೆ ಮುಂದೆ ನಿಲ್ಲುವ ತರ ಮಾಡಬೇಡಿ ಅಂತ ಮತದಾರರಿಗೆ ಹೆಚ್‌ಡಿಕೆ ಮನವಿ ಮಾಡಿದ್ರು.


ಕೋಲಾರ ಜಿಲ್ಲೆಯ  ಮುಳಬಾಗಿಲು ತಾಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್‌ಡಿಕೆ, ವಸತಿ ಸೌಕರ್ಯ, ಪತ್ರಿ ಮನೆಗೂ ಉದ್ಯೋಗ, ಕಲ್ಪಿಸುವುದು ಪಂಚರತ್ನ ಯೋಜನೆಯ ಉದ್ದೇಶ ಅಂತ ಹೇಳಿದರು.


ಇದನ್ನೂ ಓದಿ:  Voter Data Steal: ಮತದಾರರ ಮಾಹಿತಿಗೆ ಕನ್ನ, ತನಿಖೆಗೆ ಇಳಿದ ಖಾಕಿಗೆ ಶಾಕ್; ಬಗೆದಷ್ಟು ತೆರೆದುಕೊಳ್ಳುತ್ತಿದೆ ಚಿಲುಮೆಯ ಕರಾಳ ಮುಖ


ಎರಡನೇ ದಿನಕ್ಕೆ ಪಂಚರತ್ನ ರಥಯಾತ್ರೆ


ಜೆಡಿಎಸ್ ಪಂಚರತ್ನ ರಥಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದೆ. ಕೋಲಾರದ ಬಂಗಾರಪೇಟೆಯ ತಂಬಳ್ಳಿಗೆ ಪಂಚರತ್ನ ರಥಯಾತ್ರೆ ತಲುಪಿದೆ. ಈ ವೇಳೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ರು.

Published by:Mahmadrafik K
First published: