ಹಾಸನಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ; ಶಾಸಕ ಪ್ರೀತಂಗೌಡ ಗಂಭೀರ ಆರೋಪ

news18
Updated:August 29, 2018, 12:52 PM IST
ಹಾಸನಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ; ಶಾಸಕ ಪ್ರೀತಂಗೌಡ ಗಂಭೀರ ಆರೋಪ
news18
Updated: August 29, 2018, 12:52 PM IST
-ಅಶೋಕ್, ನ್ಯೂಸ್​ 18 ಕನ್ನಡ

ಹಾಸನ,(ಆ.29): 40 ವರ್ಷಗಳಿಂದ ಹಾಸನಕ್ಕೆ  ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ ಎಂದು ಬಿಜೆಪಿ ಶಾಸಕ ಪ್ರೀತಮ್​ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಆರೋಪದ ಮಾತುಗಳನ್ನಾಡಿದ್ದಾರೆ. ದೇವೇಗೌಡರ ಕುಟುಂಬದವರು ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರಾಗಿದ್ದಾರೆ, ಆದರೆ ಹಾಸನಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ. ದೇವೇಗೌಡರ ಕುಟುಂಬಕ್ಕೆ ದೂರದೃಷ್ಠಿ ಇಲ್ಲ ಎಂದು  ಹೇಳಿರುವ ಅವರು, ಹಾಸನಕ್ಕೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣರ ಕೊಡುಗೆ ಶೂನ್ಯ ಎಂದು ಟೀಕಿಸಿದ್ದಾರೆ.

ಸಚಿವ ಎಚ್​.ಡಿ.ರೇವಣ್ಣ ಹಾಸನದ ರೈಲ್ವೇ ಮೇಲ್ಸೇತುವೆಯನ್ನ ಹೊಳೆನರಸೀಪುರಕ್ಕೆ ವರ್ಗಾವಣೆ ಮಾಡಿದ್ದಾರೆ.  ಕಳೆದ 20 ವರ್ಷಗಳಿಂದ ಹಾಸನದ ವರ್ತುಲ ರಸ್ತೆಯನ್ನು (ರಿಂಗ್​ ರೋಡ್​) ನಿರ್ಮಿಸಿಲ್ಲ. ಹಾಸನಕ್ಕೆ ರೇವಣ್ಣರ ಕೊಡುಗೆ ಶೂನ್ಯ ಎಂದು ಸಚಿವ ರೇವಣ್ಣ ವಿರುದ್ದ ಪ್ರೀತಮ್ ಗೌಡ ಆರೋಪ ಮಾಡಿದ್ದಾರೆ.

ಭೂ ಕಬಳಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರೀತಮ್​​ಗೌಡ ಮಾಜಿ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಭೂ ಕಬಳಿಕೆಯಲ್ಲಿ ನಾನು ಕೆಲವರಿಗೆ ಅರ್ಜಿ ಕೊಟ್ಟಿದ್ದೇನೆ. ನಾನು ಭೂ ಕಬಳಿಕೆಯಲ್ಲಿ ತೊಡಗಿಲ್ಲ, ಮಾಜಿ ಶಾಸಕರು ತಮ್ಮದೇ ಸರ್ಕಾರವಿದೆ ಬೇಕಿದ್ದರೆ ತನಿಖೆ ಮಾಡಿಸಲಿ ಎಂದು ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್​ಗೆ ಸವಾಲ್ ಹಾಕಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ