Renukacharyaರ ನೋಟ್-ವೋಟ್ ವಿಡಿಯೋ ವೈರಲ್.. ಹೌದು ಏನೀಗ ಎಂದು ಸಮರ್ಥನೆಗಿಳಿದ ಶಾಸಕ

ಆಣೆ  ಪ್ರಮಾಣದ ವಿಡಿಯೋ ವಿವಾದಕ್ಕೀಡಲಾಗುತ್ತಲೇ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಡಿಯೋ ಕುರಿತು ಸ್ಪಷ್ಟನೆ ನೀಡಿ ನಾನು ಮತ ಕೇಳಿದ್ದೇನೆ ಎಂದು  ಒಪ್ಪಿಕೊಂಡಿದ್ದಾರೆ.

ಶಾಸಕ ರೇಣುಕಾಚಾರ್ಯ

ಶಾಸಕ ರೇಣುಕಾಚಾರ್ಯ

  • Share this:
ದಾವಣಗೆರೆ: ಕೋವಿಡ್‌‌ ನಿಂದ‌ ಮೃತಪಟ್ಟವರ (Covid Deaths) ಕುಟುಂಬಸ್ಥರಿಗೆ ಸರ್ಕಾರದಿಂದ (State BJP Government) ನೀಡುವ 1 ಲಕ್ಷ ರೂ. ಚೆಕ್ ಅನ್ನು  ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ (MLA MP Renukacharya) ವಿತರಿಸಿದರು. ಈ ವೇಳೆ ಶಾಸಕ ಮಾತನಾಡಿದ ವಿಡಿಯೋ(Video) ಸದ್ಯ ವೈರಲ್(Viral)​ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ 1 ಲಕ್ಷ ಕೋವಿಡ್ ಪರಿಹಾರ ನೀಡುತ್ತಿದೆ. ಇದರ ಜೊತೆಗೆ ನಾನು ನಿಮಗೆ 10 ಸಾವಿರ ರೂ. ವೈಯಕ್ತಿಕ ಹಣ ನೀಡುತ್ತಿದ್ದೇನೆ. ನೀವು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕು ಎಂದು ಮನೆ ಬಾಗಿಲಿಗೆ ಕೋವಿಡ್ ಸಂತ್ರಸ್ಥರನ್ನು ಕರೆಸಿಕೊಂಡು ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಶಾಸಕ ರೇಣುಕಾಚಾರ್ಯ ಕೊವಿಡ್ ಪರಿಹಾರ ಹಣ ನೀಡುವಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ಆಣೆ ಪ್ರಮಾಣ ಮಾಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ತಾಕೀತು ಮಾಡಿರೋದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ನನಗೆ ವೋಟು ಹಾಕಬೇಕು

ಸರ್ಕಾರದಿಂದ 1 ಲಕ್ಷ ಹಣ ನಿಮ್ಮ ಅಕೌಂಟ್​​ಗೆ  ಬರುತ್ತದೆ . ನಾನು ವೈಯಕ್ತಿಕವಾಗಿ 10 ಸಾವಿರ ಹಣ ನೀಡುತ್ತಿದ್ದೇನೆ. ನೀನು ಮುಂದಿನ ಸಲ ನನಗೆ ವೋಟು ಹಾಕಬೇಕು, ನಿಮ್ಮ ಊರಿನಲ್ಲಿ ಹೋಗಿ ಎಲ್ಲರಿಗೂ ಹೇಳಿ. ಯಡಿಯೂರಪ್ಪನವರು ಘೋಷಣೆ‌ ಮಾಡಿದ್ದರು , ಬೊಮ್ಮಾಯಿ ಈಗ ಹಣ ನೀಡುತ್ತಿದೆ. ನಾನು ನಿಮಗೆ ವೈಯಕ್ತಿವಾಗಿ 10 ಸಾವಿರ ನೀಡುತ್ತಿದ್ದೇನೆ ನೀವು ನನಗೆ ವೋಟು ಹಾಕಬೇಕು ಎಂಬ ಆಡಿಯೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ Congress ಗಮನ ಹಿಂದೂ ಕಾರ್ಯಕರ್ತರ ದಮನ, ಟಿಪ್ಪು ಸುಲ್ತಾನ ವೈಭವೀಕರಣದ ಮೇಲಿತ್ತು: ಬಿಜೆಪಿ

ತಪ್ಪೇನಿದೆ ಎಂದು ಸಮರ್ಥಿಸಿಕೊಂಡ ಶಾಸಕ ರೇಣುಕಾಚಾರ್ಯ

ಆಣೆ  ಪ್ರಮಾಣದ ವಿಡಿಯೋ ವಿವಾದಕ್ಕೀಡಲಾಗುತ್ತಲೇ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಡಿಯೋ ಕುರಿತು ಸ್ಪಷ್ಟನೆ ನೀಡಿ ನಾನು ಮತ ಕೇಳಿದ್ದೇನೆ ಎಂದು  ಒಪ್ಪಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನನ್ನದೇ ಆದ ಕಮಿಟ್ ಮೆಂಟ್ ಇರುತ್ತದೆ, ಹಾಗಾಗಿ ನಾನು ಹೇಳಲೇಬೇಕು. ಸಭೆಯಲ್ಲೇ ಹೇಳಿದ್ದೇನೆ ಮನೆಯ ಹತ್ತಿರ ಬಂದಾಗಲೂ ಹೇಳಿದ್ದೇನೆ. ನಾನು ನನ್ನ ಕ್ಷೇತ್ರಕ್ಕೆ  ಮಾಡಿದ ಸಾಧನೆಯಿಂದ ಮತ ಕೇಳಿದ್ದೇನೆ. ನನಗೆ ಮುಂದಿನ ಚುನಾವಣೆಯಲ್ಲಿ ಮತ ನೀಡಿ ಅಂತ ಕೇಳಿದ್ದು ಸತ್ಯ ಎಂದು ಒಪ್ಪಿಕೊಂಡು, ಅದರಲ್ಲಿ ತಪ್ಪೇನಿದೆ ಎಂಬ ದಾಟಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Mekedatu ಪಾದಯಾತ್ರೆಗೆ ಡಿಕೆಶಿ ತಯಾರಿ.. ಈಗ್ಯಾಕೆ ಮೈಪರಚಿಕೊಳ್ಳೋದು ಎಂದು ಕಾಲೆಳೆದ ಸಚಿವ ಅಶೋಕ್

ಕೊರೊನಾ ಸಮಯದಲ್ಲೂ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಲಾಕ್​​​ ಡೌನ್​ ವೇಳೆ ಜನಸಾಮಾನ್ಯರಿಗೆ ನೆರವಾಗುವ ಮೂಲಕ ಶಾಸಕರು ಸಾಕಷ್ಟು ಸುದ್ದಿಯಾಗಿದ್ದರು. ಈಗ ವೈಯಕ್ತಿಯವಾಗಿ 10 ಸಾವಿರ ರೂ. ಕೊಟ್ಟು ವೋಟ್​ ಕೇಳಿರುವ ವಿಡಿಯೋ ವೈರಲ್​ ಆಗಿದೆ.

ರಾಜ್ಯದಲ್ಲಿ ಮತ್ತೆ ಲಾಕ್​ಡೌನ್​? 

ಇನ್ನು ರಾಜ್ಯದಲ್ಲಿ ಕೊರೊನಾ 3ನೇ ಅಲೆ ಭೀತಿ ಎದುರಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಏರಿಕೆ ಮತ್ತು ಮತ್ತೊಂದು ಕಡೆ ಒಮೈಕ್ರಾನ್ ವೈರಸ್  ನ ಹರಡುವಿಕೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ ಆಗುತ್ತಾ ಅನ್ನೋದ ಪ್ರಶ್ನೆ ಮೂಡಿದೆ.  ಕೊರೋನಾ ಸೋಂಕು ಹೀಗೆ ಏರಿದ್ರೆ ಮುಂದೆ ಕಠಿಣ ನಿಯಮಗಳನ್ನು ತೆಗೆದುಕೊಳ್ಳಬೇಕು. ಪಾಸಿಟಿವಿಟಿ ದರ (ಸೋಂಕು ಹರಡುವಿಕೆ ಪ್ರಮಾಣ – Positivity Rate) ಎಷ್ಟು ಹೆಚ್ಚಳ ಆದ್ರೆ ಲಾಕ್ ಡೌನ್ ಮಾಡಬೇಕೆಂದು ತಜ್ಞರು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎನ್ನಲಾಗಿದೆ.ತಾಂತ್ರಿಕ ಸಲಹಾ ಸಮಿತಿ ಈ ಎರಡು ಅಂಶಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿದೆ. ಈ ಹಂತಕ್ಕೆ ಹೋಗಬಾರದು ಅಂದರೆ ಜನ ನಿರ್ಬಂಧಗಳಿಗೆ ರೆಡಿ ಆಗಬೇಕಿದೆ ಕಲರ್ ಕೋಡ್ ಆಧಾರದ ನಿರ್ಭಂಧಗಳಿಗೆ ರಾಜ್ಯ ರೆಡಿಯಾಗಬೇಕಿದೆ. ಯಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಣೆ ಆದರೆ ನಿರ್ಬಂಧಗಳು ಜಾರಿಯಾಗಲಿದೆ.
Published by:Kavya V
First published: