ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ಅವರ ಜಟಾಪಟಿ ಇಲ್ಲಿಗೆ ಕೊನೆಯಾಗುವಂತೆ ಕಾಣುತ್ತಿಲ್ಲ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಇಬ್ಬರ ನಡುವಿನ ಬೀದಿ ಜಗಳ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಜಟಾಪಟಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆಯ ಆಗಮನವಾಗಿ ಆನಂತರ ಇದು ಇಬ್ಬರು ಅಧಿಕಾರಿಗಳ ಜಗಳವಾಗಿ ಬದಲಾಗಿತ್ತು.
ಈ ಎಲ್ಲಾ ಬೆಳವಣಿಗೆಗೆಳ ನಂತರ ಈ ಜಗಳವು ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅಂಗಳಕ್ಕೆ ಬಿದ್ದು ನಂತರ ಇಬ್ಬರೂ ಅದಿಕಾರಿಗಳನ್ನ ಬೇರೆ, ಬೇರೆ ಇಲಾಖೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿ ಈ ವಿವಾದಕ್ಕೆ ಅಂತಿಮ ತೆರೆ ಎಳೆಯುವುದಕ್ಕೆ ಹೊರಟಿತ್ತು. ಆದರೆ ಮತ್ತೆ ಈ ಜಗಳ ಮುನ್ನೆಲೆಗೆ ಬಂದಿದ್ದು. ಈ ಎಲ್ಲಾ ವಿವಾದಗಳ ಕೇಂದ್ರ ಬಿಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಈಗ ಮತ್ತೆ ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿ ಮೇಲೆ ಗುಡುಗಿದ್ದಾರೆ.
ಭೂ ಹಗರಣದಿಂದ ನನ್ನ ವರ್ಗಾವಣೆ ಮಾಡಿದರು ಅನ್ನುವುದು ನೀವು ಕಟ್ಟಿದ ಕತೆ.
ನೀವು ಯಾವುದೇ ಭೂಮಿ ಉಳಿಸುವ ಕೆಲಸ ಮಾಡಿಲ್ಲ. ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ದಲಿತ ಸಮುದಾಯದ ಶರತ್ ಅವರನ್ನು 28 ದಿನಗಳಲ್ಲಿ ವರ್ಗಾವಣೆ ಮಾಡಿಸಿದ ನೀವು ಯಾವ ರೀತಿಯಲ್ಲಿ ಸಜ್ಜನ ಅಧಿಕಾರಿ ಎಂದು ಕಿಡಿಕಾರಿದ್ದಾರೆ.
ವಾಲ್ಮೀಕಿ ಜಯಂತಿಯಂದು ನಾಗರಹೊಳೆಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ, ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದರು. ಕೋವಿಡ್ ಸಾವಿನ ಸಂಬಂಧ ತಪ್ಪು ಲೆಕ್ಕ ನೀಡಿದ್ದರು.
ಸಾ.ರಾ. ಕಲ್ಯಾಣ ಮಂಟಪ ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣ ಮಾಡಿದೆ ಅಂತ ಸುಳ್ಳು ಆರೋಪ ಮಾಡಿದ್ದರು. ಆನಂತರ ಇದರ ಬಗ್ಗೆ ತನಿಖೆಯಾಗಿ ಯಾವುದೇ ಉಲ್ಲಂಘನೆ ಆಗಿಲ್ಲ ಅಂತ ಜಿಲ್ಲಾಧಿಕಾರಿಗಳಿಂದೇ ವರದಿ ಬಂದಿದೆ. ಲಿಂಗಾಂಬುದಿ ಕೆರೆಯ ಜಾಗ ಒತ್ತುವರಿ ಆಗಿಲ್ಲ, ರೋಹಿಣಿ ಸಿಂಧೂರಿ ಅವರೇ ನನ್ನ ಮೇಲೆ ಬೇಕಂತಲೇ ಹಗೆ ಸಾಧಿಸಿದರು. ಆದರೆ ಯಾವುದೇ ಆರೋಪಗಳು ಕೂಡ ಹೆಚ್ಚು ದಿನ ಬಾಳಿಕೆ ಬರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಆರ್.ಟಿ.ನಗರದಲ್ಲಿ ಒಬ್ಬರಿಗೆ ಹೆಚ್ಚುವರಿಯಾಗಿ ಪರಿಹಾರ ಕೊಟ್ಟಿದ್ದರು. ಇದನ್ನು ನೀವು ಬರುವುದಕ್ಕೂ ಹಿಂದೆಯೇ ಮುಡಾ ಅಧ್ಯಕ್ಷರು ಪತ್ತೆ ಮಾಡಿದ್ದರು.
ಸರ್ವೇ ನಂ.4 ವಿಚಾರದಲ್ಲಿ ನೀವು ಸುಪ್ರೀಂಕೋರ್ಟ್ನಲ್ಲಿ ಖಾಸಗಿ ಲಾಯರ್ ಇಟ್ಟಿದ್ದೀರಿ,
ಅದಕ್ಕಾಗಿ ಮುಡಾದಿಂದ 24 ಲಕ್ಷ ರೂ.ಗಳನ್ನು ನಿಯಮ ಮೀರಿ ಕೊಟ್ಟಿದ್ದಿರಿ.
ನಿಮ್ಮ ಕೇಸ್ ಕೋರ್ಟ್ನಲ್ಲಿ ಡಿಸ್ಮಿಸ್ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಸಾ.ರಾ.ಮಹೇಶ್ ಆರೋಪ ಮಾಡಿದ್ದಾರೆ.
ಅಧಿಕಾರಿಗಳನ್ನ ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳೋದು. ಸುದ್ದಿಗೋಷ್ಠಿ ಮಾಡಿಕೊಂಡು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಆಮಿಷ ತೋರಿಸುವ ಪ್ರವೃತ್ತಿ ಬೆಳೆಸಿಕೊಂಡು ಬಂದಿದ್ದಾರೆ ಎಂದು ನೇರವಾಗಿಯೇ ಸಾರಾ ಮಹೇಶ್ ಹಾಗೂ ರಾಜೀವ್ ವಿರುದ್ಧ ಸಿಂಧೂರಿ ಅವರು ಮೈಸೂರು ಡಿಸಿಯಿಂದ ವರ್ಗಾವಣೆ ಮಾಡಿದ ಬೆನ್ನಲ್ಲಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Airtel- Vodafone: ದುಬಾರಿಯಾಗಲಿವೆ ಏರ್ಟೆಲ್, ವೋಡಾಫೋನ್: ರಿಚಾರ್ಜ್ ಮೌಲ್ಯ ಹೆಚ್ಚಳಕ್ಕೆ ಚಿಂತನೆ
ಅಲ್ಲದೇ ಎಲ್ಲಾ ಪಕ್ಷಗಳ ನಾಯಕರು ಪಕ್ಷ ಬೇಧ ಮರೆತು ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಿಸಲು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು, ಮೈಸೂರಿನಿಂದ ಕೊರೋನಾ ಓಡಿಸುವ ಬದಲು ಡಿಸಿಯನ್ನೇ ಓಡಿಸಿದರು ಎಂದು ಆಗ ಟ್ರೋಲ್ ಆಗಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ