ಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MLA Madal Virupakshappa) ಬಂಧನವಾಗಿದೆ. ಚನ್ನಗಿರಿಯಿಂದ (Channagiri) ಬೆಂಗಳೂರಿಗೆ (Bengaluru) ಬರುವ ಮಾರ್ಗದಲ್ಲಿ ತುಮಕೂರು ಬಳಿಯ ಕ್ಯಾತ್ಸಂದ್ರ ಬಳಿ ಲೋಕಾಯುಕ್ತ ಪೊಲೀಸರು (Lokayukta Police) ಬಂಧಿಸಿದ್ದಾರೆ. ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲೇ ಅರೆಸ್ಟ್ ಮಾಡಿದ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಬಂಧನಕ್ಕೆ ಒಳಗಾಗುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ಎದೆನೋವು ಅಂತ ಹೈಡ್ರಾಮಾ ಮಾಡಿದ್ದಾರೆ. ನಂತರ ಆರೋಗ್ಯ ತಪಾಸಣೆಗಾಗಿ ಶಿವಾಜಿ ನಗರ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಂದು ಜಡ್ಡ್ ಮುಂದೆ ಹಾಜರುಪಡಿಸಿ ಇನ್ನಷ್ಟು ದಿನ ಲೋಕಾಯುಕ್ತ ಪೊಲೀಸರ ವಶಕ್ಕೆ ಕೇಳುವ ಸಾಧ್ಯತೆಗಳಿವೆ.
ಮಾರ್ಚ್ 2ರಂದು ಮಾಡಾಳ್ ವಿರೂಪಾಕ್ಷಪ್ಪ ಕಚೇರಿ, ಮನೆ, ಮಗ ಪ್ರಶಾಂತ್ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿತ್ತು. ಪುತ್ರ ಪ್ರಶಾಂತ್ ಕಚೇರಿಯಲ್ಲಿ 2.02 ಕೋಟಿ ನಗದು, ಶಾಸಕರ ನಿವಾಸದಲ್ಲಿ 6 ಕೋಟಿಗೂ ಅಧಿಕ ನಗದು ಪತ್ತೆಯಾಗಿತ್ತು. ಈ ಕೇಸ್ನಲ್ಲಿ ಈಗಾಗಲೇ ಮಾಡಾಳು ಪುತ್ರ ಪ್ರಶಾಂತ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಇಲ್ಲಿಯವರೆಗೆ ಏನೇನು ಆಯ್ತು?
ಮಾರ್ಚ್ - 02 - ಶಾಸಕ ಮಾಡಾಳ್ ಪುತ್ರನ ಕಚೇರಿ ಮೇಲೆ ದಾಳಿ
ಮಾರ್ಚ್ - 02 - ಪುತ್ರ ಪ್ರಶಾಂತ್ ಕಚೇರಿಯಲ್ಲಿ 2.02 ಕೋಟಿ ನಗದು ಪತ್ತೆ
ಮಾರ್ಚ್ - 02 - ಶಾಸಕರ ನಿವಾಸದಲ್ಲೂ ಲೋಕಾಯುಕ್ತ ದಾಳಿ
ಮಾರ್ಚ್ - 02 - ಶಾಸಕರ ನಿವಾಸದಲ್ಲಿ 6 ಕೋಟಿಗೂ ಅಧಿಕ ನಗದು ಪತ್ತೆ
ಮಾರ್ಚ್ - 03 - ನ್ಯಾಯಾಂಗ ಬಂಧನಕ್ಕೆ ಮಾಡಾಳ್ ಪುತ್ರ ಪ್ರಶಾಂತ್
ಮಾರ್ಚ್ - 03 -KSDL ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ರಾಜೀನಾಮೆ
ಮಾರ್ಚ್ - 03 - ಬಂಧನ ಭೀತಿಯಿಂದ ತಲೆಮರೆಸಿಕೊಂಡ ಮಾಡಾಳ್
ಮಾರ್ಚ್ 07 - ಮಾಡಾಳು ವಿರೂಪಾಕ್ಷಪ್ಪಗೆ ಹೈಕೋರ್ಟ್ ಜಾಮೀನು
ಮಾರ್ಚ್ 07 - ಬಿಜೆಪಿಯಿಂದ ಮಾಡಾಳ್ ವಿರೂಪಾಕ್ಷಪ್ಪ ಉಚ್ಛಾಟನೆ
ಮಾರ್ಚ್ 08 - ಚನ್ನಗಿರಿಯಲ್ಲಿ ಭವ್ಯ ಸ್ವಾಗತ, ಅಡಿಕೆ ದುಡ್ಡು ಎಂದು ಸಬೂಬು
ಮಾರ್ಚ್ 09 - ಲೋಕಾಯುಕ್ತ ಕಚೇರಿಗೆ ಬಂದ ಮಾಡಾಳ್, ವಿಚಾರಣೆ
ಮಾರ್ಚ್ 15 - ಸತತ ಐದು ದಿನಗಳ ಕಾಲ ವಿಚಾರಣೆಗೆ ಮಾಡಾಳ್ ಹಾಜರು
ಮಾರ್ಚ್ 17 - ಹೈಕೋರ್ಟ್ನಲ್ಲಿ ಜಾಮೀನು ತಕರಾರು ಅರ್ಜಿ ವಿಚಾರಣೆ
ಮಾರ್ಚ್ 27 - ಹೈಕೋರ್ಟ್ನಲ್ಲಿ ಮಾಡಾಳ್ ಜಾಮೀನು ಅರ್ಜಿ ವಜಾ
ಮಾರ್ಚ್ 27 - ಲೋಕಾಯುಕ್ತ ಪೊಲೀಸರಿಂದ ಮಾಡಾಳ್ ಬಂಧನ
ಮಾರ್ಚ್ 27 - ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಮಾಡಾಳ್
ಈಗಾಗಲೇ ಹೈಕೋರ್ಟ್ ನಲ್ಲಿ ಜಾಮೀನು ರದ್ದಾಗಿದೆ. ಇಂದು ಲೋಕಾಯುಕ್ತ ಅಧಿಕಾರಿಗಳು ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಹೇಳಿ ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ. ಮತ್ತೊಂದೆಡೆ ಮಾಡಾಳ್ ವಿರೂಪಾಕ್ಷಪ್ಪ ಪರ ವಕೀಲರಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: Madal Virupakshappa ಹಗರಣದಿಂದ ತೀವ್ರ ಮುಜುಗರ; ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಕೇಸರಿ ಪಡೆ
ಮಾಡಾಳ್ ಕುಟುಂಬದ ಸಂಪತ್ತು
*ಡಾಲರ್ಸ್ ಕಾಲೋನಿಯಲ್ಲಿ 1 ಮನೆ
*ಸಂಜಯನಗರದಲ್ಲಿ 1 ಮನೆ
*ವಿಜಯನಗರದಲ್ಲಿ 2 ಐಷಾರಾಮಿ ಮನೆಗಳು
*ಚನ್ನಗಿರಿಯಲ್ಲಿ 112 ಎಕರೆ ಅಡಿಕೆ ತೋಟ
*ದಾವಣಗೆರೆಯಲ್ಲಿ ಒಟ್ಟು 17 ವಾಣಿಜ್ಯ ಕಟ್ಟಡಗಳು
*ದಾವಣಗೆರೆ ಬಿನ್ನಿ ಮಿಲ್ ರಸ್ತೆಯಲ್ಲಿ 4 ಅಂತಸ್ತಿನ ಬಿಲ್ಡಿಂಗ್
*ಜಿಎಂಐಟಿ ಕಾಲೇಜಿನ ಹಿಂಭಾಗ 50,000 ಅಡಿ ಸೈಟು
*ಕುಂದವಾಡದ ಸರ್ವೇ ನಂ. 255/1 ರಲ್ಲಿ 4.5 ಎಕರೆ ಜಮೀನು
*ಚಿಕ್ಕತೊಗಲೇರಿ ಬಳಿ 47 ಎಕರೆ ಜಮೀನು
*ಮಾದೇನಹಳ್ಳಿ ಬಳಿ 47 ಎಕರೆ ಅಡಿಕೆ ತೋಟ
2018ರಲ್ಲಿ ಘೋಷಿಸಿದ್ದು 5.73 ಕೋಟಿ ಆಸ್ತಿ ಮಾತ್ರ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ