ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಸಮಾಜಕ್ಕೆ ಕೆಟ್ಟ ಹುಳ. ಅದನ್ನ ಹೇಗಾದರೂ ಮಾಡಿ ತೆಗೆಯಬೇಕು ಎಂದು ಗುಡುಗಿದ್ದ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಮೇಶ್ ಜಾರಕಿಹೊಳಿಯ ಸಂಸ್ಕೃತಿಯನ್ನು ತೋರಿಸುತ್ತೆ. ನಾನು ಇಡೀ ಬಿಜೆಪಿ (BJP Party) ಪಕ್ಷವನ್ನು ಬೈಯಲಿಕ್ಕೆ ಹೋಗಲ್ಲ. ಅವರು ಮಾತನಾಡಿದ್ರೆ ಬಿಜೆಪಿ ಪಕ್ಷ ಏಕೆ, ಅವರು ಮುಂಚೆಯಿಂದ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅದು ಅವರ ಸಂಸ್ಕೃತಿ (Culture) ತೋರಿಸುತ್ತೆ ಎಂದು ಹೇಳಿದರು.
'ನನ್ನ ಗಿಫ್ಟ್ ಅಷ್ಟೇ ಏಕೆ ನೋಡ್ತೀರಾ?'
ಅಭಿವೃದ್ಧಿ ಮಾಡಿದ್ರೆ ಗಿಫ್ಟ್ ಏಕೆ ಹಂಚುತ್ತಿದ್ರಿ ಎಂಬ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಇದರ ಬಗ್ಗೆ ಇನ್ನೊಂದು ಸಂದರ್ಭದಲ್ಲಿ ಉತ್ತರ ಕೊಡ್ತೀನಿ. ನಾನು ಯಾರಿಗೂ ಗಿಫ್ಟ್ ಅಂತಾ ಏನು ಕೊಡ್ತಿಲ್ಲ. ನಾನು ಮುಂಚೆಯಿಂದ ರಂಗೋಲಿ, ಹಳದಿ ಕುಂಕುಮ ಕಾರ್ಯಕ್ರಮ ಮಾಡ್ತಿದೀನಿ. ಒಬ್ಬ ಮಹಿಳೆಯಾಗಿ ಮಹಿಳೆಯರ ಜೊತೆ ಪ್ರೀತಿ ವಿಶ್ವಾಸ ಬಾಂಧವ್ಯ ಅಂತಾ ಮಾಡಿದೀನಿ. ಗಿಫ್ಟ್ ಅಂತಾ ಆಗಿದ್ರೆ ನಾನು ಪುರುಷರಿಗೂ ಕೊಡಬೇಕಾಗಿತ್ತಲ್ವಾ? ಮತದಾರರು ಕೇವಲ ಮಹಿಳೆಯರಷ್ಟೇ ಇಲ್ಲ, ಪುರುಷರೂ ಇದ್ದಾರೆ. ಆದ್ರೆ ಒಬ್ಬಳು ಮನೆ ಮಗಳು ಅಂತಾ ನಾನಿವತ್ತು ಕರೆಸಿಕೊಳ್ಳುತ್ತೇನೆ. ನನ್ನ ಗಿಫ್ಟ್ ಅಷ್ಟೇ ಏಕೆ ನೋಡ್ತೀರಾ? ನಾನು ಮಾಡಿದ ಒಳ್ಳೆಯ ಕಾರ್ಯ ಏಕೆ ನೋಡ್ತಿಲ್ಲ? ಗುಡಿಗಳನ್ನು, ಜೈನ ಬಸದಿಗಳನ್ನು ಕಟ್ಟಿಸಿದ್ದು ಏಕೆ ನೋಡ್ತಿಲ್ಲ? ಕೋವಿಡ್ ಸಂದರ್ಭದಲ್ಲಿ ಇಡೀ ಕ್ಷೇತ್ರಕ್ಕೆ ಕಿಟ್ ಕೊಟ್ಟಿದ್ದು ಏಕೆ ನೋಡ್ತಿಲ್ಲ? ಕೋವಿಡ್ ವೇಳೆ ಇವರೆಲ್ಲಾ ಯಾರು ಇದ್ರು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Ramesh Jarkiholi: ಲಕ್ಷ್ಮೀ ಹೆಬ್ಬಾಳ್ಕರ್ 3 ಸಾವಿರ ಕೊಟ್ರೆ ನಾನು 6 ಸಾವಿರ ಕೊಡ್ತೀನಿ! ಜಾರಕಿಹೊಳಿ ಓಪನ್ ಆಫರ್!
ಇನ್ನು ಈಗ ಫ್ಲೆಕ್ಸ್ ಹಾಕಿ ನನ್ನ ಬಗ್ಗೆ ಮಾತನಾಡ್ತಾ ಇದ್ದಾರಲ್ಲ ಇವರಿಗೆ ಏನು ನೈತಿಕತೆ ಇದೆ? ಎಂದು ಪ್ರಶ್ನಿಸಿದ ಹೆಬ್ಬಾಳ್ಕರ್, ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇವರು ಎಲ್ಲಿದ್ರು? ಏನ್ ಮಾಡಿದ್ರು? ಯಾರ ಸಹಾಯಕ್ಕೆ ಬಂದ್ರು? ಎಷ್ಟು ಆಸ್ಪತ್ರೆಗೆ ಬಂದ್ರು? ಎಷ್ಟು ಆಕ್ಸಿಜನ್ ಎಷ್ಟುಇಂಜೆಕ್ಷನ್ ಕೊಡಿಸಿದ್ರು? ಪ್ರವಾಹ ವೇಳೆ ನನ್ನ ಕ್ಷೇತ್ರದಲ್ಲಿ ಮನೆಗಳು ಬಿದ್ದಾಗ ಎಲ್ಲಿ ಇದ್ರು? ಒಳ್ಳೆಯ ಕೆಲಸ ಏಕೆ ನೆನೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Ramesh Jarkiholi: ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ಕರೆ ಕೊಟ್ಟ ರಮೇಶ್ ಜಾರಕಿಹೊಳಿ
'ಚರ್ಚೆಗೆ ಕೂತರೆ ಸಾವಿರ ವಿಚಾರ ಬರುತ್ತೆ'
ಬಿಜೆಪಿಯವರ ಪ್ರಶ್ನೆಗೆ ಖಂಡಿತ ಉತ್ತರ ಕೊಡ್ತೇನೆ ಆದ್ರೆ ಈಗ ಕೊಡಲ್ಲ ಎಂದ ಅವರು, ಒಂದು ಉದಾಹರಣೆ ಹೇಳ್ತೀನಿ ಅಷ್ಟೇ. ಚುನಾವಣೆ ಮುಂಚೆ ರಾಜ್ಯದಲ್ಲಿ ಅಭಿವೃದ್ಧಿ ಮಾಡಿದ್ರೆ ಪ್ಯಾಕೇಜ್ ಏಕೆ ಘೋಷಣೆ ಮಾಡ್ತಾರೆ. ಒಂದು ಲಕ್ಷ ಕೋಟಿ ಎರಡು ಲಕ್ಷ ಕೋಟಿ ಪ್ಯಾಕೇಜ್ ಏಕೆ ಘೋಷಣೆ ಮಾಡ್ತಾರೆ. ಬಿಹಾರ, ಪಶ್ಚಿಮ ಬಂಗಾಳ, ಗುಜರಾತ್ನಲ್ಲಿ ಏಕೆ ಘೋಷಣೆ ಮಾಡಿದ್ರು? ಆ ಬಗ್ಗೆ ಚರ್ಚೆಗೆ ಕೂತರೆ ಸಾವಿರಾರು ವಿಚಾರ ಬರುತ್ತೆ ಎಂದರು.
'ಶಾಂತ ರೀತಿಯಲ್ಲಿ ಚುನಾವಣೆ ಎದುರಿಸುತ್ತೇನೆ'
ಇನ್ನು ನಾನು ಬಹಳ ಶಾಂತ ರೀತಿಯಿಂದ ಚುನಾವಣೆ ಮಾಡಲು ಬಯಸುವೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಕ್ಷೇತ್ರದ ಜನ ನನ್ನ ಮನೆ ಮಗಳು ಅಂತಾ ಒಪ್ಪಿಕೊಂಡಿದ್ದಾರೆ. ನಾನು ಮಾಡಿದ ಅಭಿವೃದ್ಧಿ ನೋಡಿ ಅಪ್ಪಿಕೊಂಡಿದ್ದಾರೆ. ಆ ಒಂದು ದೃಷ್ಟಿಕೋನದಲ್ಲಿ ನಾನು ಎಲೆಕ್ಷನ್ ಹೋಗಬೇಕು ಅಂತಿದೀನಿ. ಆ ಮಾತು ಈ ಮಾತು ಬಗ್ಗೆ ರಿಯಾಕ್ಟ್ ಮಾಡಲು ಟೈಮೂ ಇಲ್ಲ, ನಾನು ಡೈವರ್ಟ್ ಮಾಡಕ್ಕೂ ಇಚ್ಛೆನೂ ಪಡಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ