ನರೇಗಾ ಕಾರ್ಮಿಕರ ಜೊತೆ ಭಾನುವಾರ ಕಳೆದ ಲಕ್ಷ್ಮೀ ಹೆಬ್ಬಾಳ್ಕರ್; ಸಮಸ್ಯೆ ಕೇಳಿ, ಜತೆಗೆ ಊಟ ಮಾಡಿದ ಶಾಸಕಿ

ಮಹಿಳೆ ಅಬಲೆಯಲ್ಲ, ಸಬಲೆ. ಇಂತಹ ಕಠಿಣ ಕೆಲಸಗಳ ಮೂಲಕ ಇಡೀ ಕುಟುಂಬದ ಜೀವಾನಾಧಾರವಾಗಿರುವ ಮಹಿಳೆಯರು, ಇಡೀ ಸಮಾಜಕ್ಕೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ ಎಂದು  ಹೇಳಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ನರೇಗಾ ಕಾರ್ಮಿಕರ ಜೊತೆ ಊಟ ಮಾಡುತ್ತಿರುವ ದೃಶ್ಯ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ನರೇಗಾ ಕಾರ್ಮಿಕರ ಜೊತೆ ಊಟ ಮಾಡುತ್ತಿರುವ ದೃಶ್ಯ

  • Share this:
ಬೆಳಗಾವಿ(ಫೆ.8): ಬೆಳಗಾವಿ ತಾಲೂಕಿನ ಬಿ ಕೆ ಕಂಗ್ರಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಉದ್ಯೋಗ ಖಾತ್ರಿಯಡಿ ಸುಮಾರು 400ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ನರೇಗಾ ಕಾರ್ಮಿಕರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭೇಟಿ ಮಾಡಿ ಅವರ ಸಂಕಷ್ಟಗಳನ್ನು ಆಲಿಸಿದರು.  ಭಾನುವಾರದ ದಿನ ಕಾರ್ಮಿಕರ ಜೊತೆಗೆ ಊಟ ಮಾಡಿ ಅವರ ಜತೆಗೆ ಬೆರೆಯುವ ಕೆಲಸ ಮಾಡಿದ್ದಾರೆ.

ಕೆಲಸದ ಸ್ಥಳಕ್ಕೆ ತೆರಳಿದ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆಯರ ಆರೋಗ್ಯ ಮತ್ತು ಕುಂದು-ಕೊರತೆಗಳ ಬಗ್ಗೆ ವಿಚಾರಿಸಿದರು. ಅವರೊಂದಿಗೆ ಸುದೀರ್ಘ ಸಮಯ ಕಳೆದ ಹೆಬ್ಬಾಳ್ಕರ್​​​​, ಕೆಲಸ ಮಾಡುವ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ವಿಚಾರಿಸಿದರು. ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Team India: 2023ರವರೆಗಿನ ವೇಳಾಪಟ್ಟಿ ಪ್ರಕಟ: ಬಿಡುವಿಲ್ಲದೆ ಕ್ರಿಕೆಟ್ ಆಡಲಿದೆ ಟೀಮ್ ಇಂಡಿಯಾ..!

ಮಹಿಳೆ ಅಬಲೆಯಲ್ಲ, ಸಬಲೆ. ಇಂತಹ ಕಠಿಣ ಕೆಲಸಗಳ ಮೂಲಕ ಇಡೀ ಕುಟುಂಬದ ಜೀವಾನಾಧಾರವಾಗಿರುವ ಮಹಿಳೆಯರು, ಇಡೀ ಸಮಾಜಕ್ಕೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ ಎಂದು  ಹೇಳಿದರು.

ನಿಮ್ಮ ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಿಸಿದ್ದಕ್ಕೆ ಮನಸ್ಸಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅವರ ಬದುಕಿನ ಕಷ್ಟಗಳು ಆದಷ್ಟು ಬೇಗ ನಿವಾರಣೆಯಾಗಲಿ ಎಂದು ಹೆಬ್ಬಾಳ್ಕರ್​ ಆಶಿಸಿದರು.

ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿಗೆ ಸಂಬಂಧಪಟ್ಟ ಅಧಿಕಾರಿಗಳು, ಪಿಡಿಓ ಬರ್ಗಿ, ಇಂಜಿನಿಯರ್ ಬಸವರಾಜ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Published by:Latha CG
First published: