ಮರಾಠಿಗರ ಓಲೈಕೆ ಜೊತೆಗೆ ಸರ್ಕಾರದ ಅನುದಾನವನ್ನು ಸ್ವಂತ ಜೇಬಿಂದ ಕೊಟ್ಟಿದ್ದೆಂದು ಬಿಂಬಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್

ಶಿವಾಜಿ ಮೂರ್ತಿ ಪ್ರತಿಷ್ಠಾನೆಗೆ 50 ಲಕ್ಷ ಹಾಗೂ ರಾಜಹಂಸ ಗಡ ಕೋಟೆ ಅಭಿವೃದ್ಧಿಗೆ 3 ಕೋಟಿ ರೂಪಾಯಿಯನ್ನು ತಮ್ಮ ಕೈಯಿಂದಲೇ ಕೊಟ್ಟಂತೆ ಬಿಂಬಿಸಿದ್ದಾರೆ. ಕನ್ನಡ ಮತ್ತು ಮರಾಠಿಯಲ್ಲಿ ಭಾಷಣ ಮಾಡುತ್ತೇನೆಂದು ಹೇಳಿ ಕನ್ನಡ ಬಿಟ್ಟು ಮರಾಠಿಯಲ್ಲೇ ಭಾಷಣ ಮಾಡಿದ್ದಾರೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​.

  • Share this:
ಬೆಳಗಾವಿ(ಜ. 27): ಸದಾ ವಿವಾದದಲ್ಲಿ ಇರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಬೃಹತ್ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದಾರೆ. ಶಂಕುಸ್ಥಾಪನೆ ವೇಳೆ ಮಾಡಿದ ಭಾಷಣದಲ್ಲಿ ಸಂಪೂರ್ಣ ಮರಾಠಿಯಲ್ಲೇ ಮಾತನಾಡಿ ಪರಭಾಷೆ ಅಭಿಮಾನ ತೋರ್ಪಡಿಸಿದ್ದಾರೆ. ಈ ಮೂಲಕ ಮರಾಠಿಗರ ಓಲೈಕೆಗೆ ಮಾಡಿದ್ದಾರೆ. ಹಾಗೆಯೇ, ಸರ್ಕಾರಿ ಕಾರ್ಯಕ್ರಮವನ್ನು ತಮ್ಮ ವೈಯಕ್ತಿಕ ಕಾರ್ಯಕ್ರದ ರೀತಿಯಲ್ಲಿ ಬಿಂಬಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.


ರಾಜ್ಯ ಸರ್ಕಾರವು ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ 50 ಲಕ್ಷ ಹಾಗೂ ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಮೂರು ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಕಾರ್ಯಕ್ರಮದಲ್ಲಿ ಎಲ್ಲಿಯೂ ಸರ್ಕಾರದ್ದಾಗಲೀ ಅಥವಾ ಕನ್ನಡದ್ದಾಗಲೀ ಬೋರ್ಡ್ ಹಾಕಲಿಲ್ಲ. ಇದು ಸರ್ಕಾರಿ ಕಾರ್ಯಕ್ರಮ ಎಂಬುದನ್ನೇ ಮರೆಮಾಚಿ ತಮ್ಮ ವೈಯಕ್ತಿಕ ಕಾರ್ಯಕ್ರಮವೆಂಬಂತೆ ವರ್ತಿಸಿದ್ದಾರೆ. ಶಿವಾಜಿ ಮೂರ್ತಿ ಪ್ರತಿಷ್ಠಾನೆಗೆ 50 ಲಕ್ಷ ಹಾಗೂ ರಾಜಹಂಸ ಗಡ ಕೋಟೆ ಅಭಿವೃದ್ಧಿಗೆ 3 ಕೋಟಿ ರೂಪಾಯಿಯನ್ನು ತಮ್ಮ ಕೈಯಿಂದಲೇ ಕೊಟ್ಟಂತೆ ಬಿಂಬಿಸಿದ್ದಾರೆ. ಕನ್ನಡ ಮತ್ತು ಮರಾಠಿಯಲ್ಲಿ ಭಾಷಣ ಮಾಡುತ್ತೇನೆಂದು ಹೇಳಿ ಕನ್ನಡ ಬಿಟ್ಟು ಮರಾಠಿಯಲ್ಲೇ ಭಾಷಣ ಮಾಡಿದ್ದಾರೆ.

ರಾಜಕಾರಣಕ್ಕಾಗಿ ಶಿವಾಜಿ ಪುತ್ಥಳಿ ಸ್ಥಾಪಿಸುತ್ತಿಲ್ಲ. ಸಂಸ್ಕೃತಿ ಉಳಿವಿಗೆ ಮೂರ್ತಿ ಸ್ಥಾಪನೆ ಮಾಡುತ್ತಿದ್ದೇನೆ. ಕೇವಲ ಮೂರ್ತಿ ಪ್ರತಿಷ್ಠಾಪಿಸಿದರೆ ಸಾಲದು, ಸಂಪ್ರದಾಯ ಸಾರಬೇಕು. ರಾಜಕಾರಣಿಗಳನ್ನು ಸ್ವಾರ್ಥಿಗಳೆನ್ನುತ್ತಾರೆ. ಆದರೆ, ಪ್ರತಿಯೊಂದು ಗ್ರಾಮದಲ್ಲೂ ಹಣ ಕೊಟ್ಟು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್​ಗೆ ರಾಣಿ ಚೆನ್ನಮ್ಮ ಮತ್ತು ಜೀಜಾ ಮಾತಾ ಅಂತಾರೆ. ಇಚ್ಛಾಶಕ್ತಿ ಇಟ್ಟುಕೊಂಡು ರಾಜಕೀಯದಲ್ಲಿ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕಿ ಪಣತೊಟ್ಟಿದ್ದಾರೆ.

ಸರ್ಕಾರಕ್ಕೆ 15 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೂರೂವರೆ ಕೋಟೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರ ಅಸ್ಥಿರವಾಗಿದ್ದಾಗಲೇ ಮೂರೂವರೆ ಕೋಟಿ‌ ಅನುದಾನ ತಂದಿದ್ದೇನೆ. ಶಾಸಕಿಯಾದ 18 ತಿಂಗಳಲ್ಲಿ 12 ಕೋಟಿ ರೂ ಅನುದಾನ ತಂದಿದ್ದೇನೆ ಎಂದವರು ಹೇಳಿಕೊಂಡಿದ್ಧಾರೆ.

ಇದನ್ನೂ ಓದಿ : ಪಾಠದೊಂದಿಗೆ ಪರಿಸರ ಪ್ರೀತಿ ಹೇಳುವ ಕಲ್ಮಡ ಸರ್ಕಾರಿ ಪ್ರಾಥಮಿಕ ಶಾಲೆ

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಸ್ವತ್ತು ಎಂದು ರಮೇಶ್ ಜಾರಕಿಹೊಳಿ ಮಾಡಿದ್ದ ಆರೋಪವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಅಲ್ಲಗಳೆದಿದ್ದಾರೆ. ಈ ಕ್ಷೇತ್ರ ಕನ್ನಡ ಮತ್ತು ಮರಾಠಿ ಭಾಷಿಕರ ಸಂಗಮ ಎಂದವರು ಬಣ್ಣಿಸಿದ್ಧಾರೆ.
First published: