HOME » NEWS » State » MLA LAKSHMI HEBBALKAR CHALLENGES TO MINISTER RAMESH JARAKIHOLI WILL CONTEST FROM GOKAK CSB LG

ಪಕ್ಷ ಬಯಸಿದ್ರೆ‌ ಗೋಕಾಕ್​​ನಿಂದ ಸ್ಪರ್ಧೆಗೆ ಸಿದ್ಧ; ರಮೇಶ್​ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲ್..!

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಸಚಿವ ರಮೇಶ ಜಾರಕಿಹೊಳಿ‌ ಟಾಂಗ್ ಕೊಟ್ಟರು. ಹೆಬ್ಬಾಳ್ಕರ್ ಗೋಕಾಕ್ ನಲ್ಲಿ ಸ್ಪರ್ಧೆ ಮಾಡಿದ್ರೆ ಮೋಸ್ಟ್ ವೆಲ್ ಕಮ್. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕು ಇದೆ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಅಲ್ಲ. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲವೋ ಅಲ್ಲಿ ಗೆಲ್ಲಿಸಬೇಕು.

news18-kannada
Updated:February 12, 2021, 3:51 PM IST
ಪಕ್ಷ ಬಯಸಿದ್ರೆ‌ ಗೋಕಾಕ್​​ನಿಂದ ಸ್ಪರ್ಧೆಗೆ ಸಿದ್ಧ; ರಮೇಶ್​ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲ್..!
ರಮೇಶ್ ಜಾರಕಿಹೊಳಿ- ಲಕ್ಷ್ಮೀ ಹೆಬ್ಬಾಳ್ಕರ್
  • Share this:
ಬೆಳಗಾವಿ(ಫೆ. 12): ಸಚಿವ ರಮೇಶ ಜಾರಕಿಹೊಳಿ‌ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೆ ಟಾಕ್ ವಾರ್ ಆರಂಭವಾಗಿದೆ. 2023ರ ಬೆಳಗಾವಿ ಗ್ರಾಮೀಣ ವಿಧಾನಸಭೆ ಚುನಾವಣೆಗೆ ಭರ್ಜರಿ ‌ತಯಾರಿ ನಡೆದಿದೆ. ಈ ಚುನಾವಣೆ ಸಚಿವ ಜಾರಕಿಹೊಳಿ ಹಾಗೂ ಶಾಸಕಿ ಹೆಬ್ಬಾಳ್ಕರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ಸಚಿವ ರಮೇಶ ಜಾರಕಿಹೊಳಿ‌ ಹೇಳಿಕೆಗೆ ಇಷ್ಟು ದಿನ ಮೌನವಾಗಿದ್ದ ಶಾಸಕಿ ಹೆಬ್ಬಾಳ್ಕರ್ ಇಂದು ಟಾಂಗ್ ಕೊಟ್ಟಿದ್ದಾರೆ.  ಪಕ್ಷ ಬಯಸಿದ್ರೆ ಗೋಕಾಕ್​​ನಿಂದ ಸ್ಪರ್ಧಿಸಲು ಸಿದ್ಧ ಎಂಬ ಸವಾಲ್ ಎಸೆದಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದು ಸಚಿವ ರಮೇಶ ಜಾರಕಿಹೊಳಿ‌, ಶಾಸಕಿ ಹೆಬ್ಬಾಳ್ಕರ್ ನಡುವಿನ ಕಿತ್ತಾಟ. ನಂತರವೂ ಇದು ಮುಂದುವರೆದಿದ್ದು, ಹಲವು ಸಂದರ್ಭದಲ್ಲಿ ಶಾಸಕಿ ವಿರುದ್ಧ ಸಚಿವ ರಮೇಶ ಜಾರಕಿಹೊಳಿ‌ ವಾಗ್ದಾಳಿ ನಡೆಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲೇಬೇಕು ಎಂದು ಶಪಥ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನು ಗ್ರಾಮೀಣ ಪ್ರದೇಶದಲ್ಲಿ ಚುನಾವಣೆಗೆ ನಿಲ್ಲಿಸಿ ಗೆಲ್ಲುತ್ತೇವೆ ಎಂದು ರಮೇಶ ಜಾರಕಿಹೊಳಿ‌ ಹೇಳಿದ್ದರು. ಜತೆಗೆ ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ನಾವು ಹೆಚ್ಚು ಸದಸ್ಯರನ್ನು ಗೆದಿದ್ದೇವೆ ಎಂದು ಇಬ್ಬರೂ ಹೇಳಿದ್ದರು.

ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸುವ ಯತ್ನ ಮಾಡಿದ್ರು. ಕೆಲ ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಿಜೆಪಿಗೆ ಕರೆ ತಂದಿದ್ದರು. ಜತೆಗೆ ಕಾಂಗ್ರೆಸ್ ಅನೇಕ ಮುಖಂಡರನ್ನು ಬಿಜೆಪಿಗೆ ಸೆಳೆದಿದ್ದಾರೆ. ಈ ಮೂಲಕ ಶಾಸಕಿ ಹೆಬ್ಬಾಳ್ಕರ್ ಗೆ ಹಿನ್ನಡೆ ಮಾಡಲು ಯತ್ನ ಮಾಡಿದ್ದರು.

ವೈರಲ್ ನ್ಯೂಸ್​: ವಿಡಿಯೋ ಗೇಮ್ ಆಡುವ ಮೂಲಕ ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದ ಹಂದಿಗಳು..!

ಸಚಿವ ರಮೇಶ ಜಾರಕಿಹೊಳಿ‌ ಹೇಳಿಕೆಗೆ ಮೌನವಾಗಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್,  ಇಂದು ಸವಾಲ್ ಎಸೆದಿದ್ದಾರೆ‌. ಬೆಳಗಾವಿ  ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಶಾಸಕಿ ಹೆಬ್ಬಾಳ್ಕರ್, ಪಕ್ಷ ಬಯಸಿದ್ರೆ ಗೋಕಾಕ್​ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಮೇಶ ಜಾರಕಿಹೊಳಿ‌ ಟಾರ್ಗೆಟ್ ವಿಚಾರ ಮಾತನಾಡಿದ ಹೆಬ್ಬಾಳ್ಕರ್, ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯರಿಗೆ ಬಿಜೆಪಿಯಿಂದ ಸನ್ಮಾನ ವಿಚಾರವಾಗಿ, ಸರ್ಕಾರವನ್ನು ಬೀಳಿಸಿದವರಿಗೆ ಗ್ರಾ.ಪಂ. ಯಾವ ಲೆಕ್ಕ. ಎಂಎಲ್​ಎ ಗಳನ್ನೇ ಎಸ್ಕೇಪ್​​ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?  ಕಾಲಾಯ ತಸ್ಮೈ ನಮಃ ಎಂದು ಟಾಂಗ್ ಕೊಟ್ಟರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಸಚಿವ ರಮೇಶ ಜಾರಕಿಹೊಳಿ‌ ಟಾಂಗ್ ಕೊಟ್ಟರು. ಹೆಬ್ಬಾಳ್ಕರ್ ಗೋಕಾಕ್ ನಲ್ಲಿ ಸ್ಪರ್ಧೆ ಮಾಡಿದ್ರೆ ಮೋಸ್ಟ್ ವೆಲ್ ಕಮ್. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕು ಇದೆ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಅಲ್ಲ. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲವೋ ಅಲ್ಲಿ ಗೆಲ್ಲಿಸಬೇಕು. ಯಾಕೆ ಸರ್ಕಾರ ಪತನ ಆಗಿದೆ ಎನ್ನುವುದನ್ನು ಅವರ ಗಾಡ್ ಫಾದರ್ ಗೆ ಕೇಳಿದ್ರೆ ಒಳ್ಳೆಯದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಚುಚ್ಚುವ ಯತ್ನ ಮಾಡಿದರು.
Published by: Latha CG
First published: February 12, 2021, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories