ಹಲಾಲ್, ಮುಸ್ಲಿಂ ವರ್ತಕರಿಗೆ ನಿರ್ಬಂಧ: ಸಿಎಂ ಬೊಮ್ಮಾಯಿ, ಸಚಿವೆ ಜೊಲ್ಲೆಗೆ ಪತ್ರ ಬರೆದ MLA K.G.Bopaiah

ಹಲಾಲ್ ಸಹಿತ ಅನ್ಯ ಧರ್ಮಗಳಲ್ಲಿ ಹಲವು ಪದ್ಧತಿಗಳು ಜಾತಿಯಲ್ಲಿವೆ. ಧರ್ಮದ ಆಚರಣೆ, ನಂಬಿಕೆ ಹಾಗೂ ಪಾವಿತ್ರ್ಯತೆಯನ್ನು ನಾವು ಗೌರವಿಸುತ್ತೇವೆ. ಅನ್ಯ ಧರ್ಮಗಳಲ್ಲಿನ ಆಹಾರ ಪದ್ದತಿಯಲ್ಲಿ ಗೋ ಮಾಂಸ ಸೇವಿಸುತ್ತಾರೆ. ಹಿಂದೂಗಳಾದ ನಾವು ಗೋವನ್ನು ತಾಯಿ ಎಂದು ಪೂಜಿಸುತ್ತೇವೆ

ಕೆ.ಜಿ.ಬೋಪಯ್ಯ

ಕೆ.ಜಿ.ಬೋಪಯ್ಯ

  • Share this:
ರಾಜ್ಯದಲ್ಲಿ ಹಿಜಾಬ್ ಸಂಘರ್ಷದ (Hijab Row) ಬಳಿಕ ಹಿಂದೂ ದೇವಾಲಯಗಳ (Hindu Temple) ಬಳಿ ಮುಸ್ಲಿಂ ವರ್ತಕರಿಗೆ (Muslim Traders)ನಿರ್ಬಂಧ ಮತ್ತು ಹಲಾಲ್ ಉತ್ಪನ್ನಗಳ (Halal Products) ಬಳಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಹಿಂದೂ ಸಂಘಟನೆಗಳು (Hindu Organization) ಸೋಶಿಯಲ್ ಮೀಡಿಯಾ(Social Media)ದಲ್ಲಿ ಅಭಿಯಾನ(Campaign)ವನ್ನು ಆರಂಭಿಸಿವೆ. ಇನ್ನೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮತ್ತು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ (Minister Shashikala Jolle) ಅವರಿಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ (MLA KG Bopaiah) ಪತ್ರ ಬರೆದಿದ್ದಾರೆ. ಇದರ ಜೊತೆ ಟಿಪ್ಪು ಸುಲ್ತಾನ್ ಪಠ್ಯದ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister BC Nagesh) ಅವರಿಗೂ ಪತ್ರ ಬರೆದಿದ್ದಾರೆ.

ಹಲಾಲ್ ಸಹಿತ ಅನ್ಯ ಧರ್ಮಗಳಲ್ಲಿ ಹಲವು ಪದ್ಧತಿಗಳು ಜಾತಿಯಲ್ಲಿವೆ. ಧರ್ಮದ ಆಚರಣೆ, ನಂಬಿಕೆ ಹಾಗೂ ಪಾವಿತ್ರ್ಯತೆಯನ್ನು ನಾವು ಗೌರವಿಸುತ್ತೇವೆ. ಅನ್ಯ ಧರ್ಮಗಳಲ್ಲಿನ ಆಹಾರ ಪದ್ದತಿಯಲ್ಲಿ ಗೋ ಮಾಂಸ ಸೇವಿಸುತ್ತಾರೆ. ಹಿಂದೂಗಳಾದ ನಾವು ಗೋವನ್ನು ತಾಯಿ ಎಂದು ಪೂಜಿಸುತ್ತೇವೆ

ಜಾತ್ರೆಯ ಸಮಯದಲ್ಲಿ ಅಲ್ಲಿ ಅಂಗಡಿ ಹಾಕುವ ಅನ್ಯಧರ್ಮೀಯರು ಗೋ ಮಾಂಸ ಸೇವಿಸಿ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಆ ಕ್ಷೇತ್ರದ ಪಾವಿತ್ರ್ಯತೆಗೆ ಭಂಗ ಬರುತ್ತದೆ.

ಹಿಂದೂಗಳಲ್ಲದ ಜನರಿಗೆ ಗುತ್ತಿಗೆ ನೀಡಬಾರದು

ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು 2002ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮದಲ್ಲಿ ಉಲ್ಲೇಖಿಸಿರುವ ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ ಎಂಬುದನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪತ್ರದಲ್ಲಿ ಸಿಎಂ ಮತ್ತು ಮುಜರಾಯಿ ಸಚಿವರಿಗೆ ಶಾಸಕ ಬೋಪಯ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Mysuru; ನನಗೆ ಗಾಯಿತ್ರಿ ನೆನಪು ಕಾಡ್ತಿದೆ, ನಾನು ಅವಳ ಬಳಿ ಹೋಗ್ತೀನಿ: ಸಾವಿನಲ್ಲಿ ಪತ್ನಿಯನ್ನ ಹಿಂಬಾಲಿಸಿದ ಪತಿ

ಸಚಿವ ಬಿ.ಸಿ.ನಾಗೇಶ್ ಗೆ ಪತ್ರ

ಪಠ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಕುರಿತ ವಿಚಾರ ಕೈಬಿಡುವ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಗೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಪತ್ರ ಬರೆದಿದ್ದಾರೆ.  ಟಿಪ್ಪು ಕುರಿತು ಪಠ್ಯಕ್ರಮದಲ್ಲಿ ಅಳವಡಿಸಿರುವುದನ್ನು ಕೂಡಲೇ ಕೈ ಬಿಡಬೇಕು. ಟಿಪ್ಪು ಸುಲ್ತಾನ್ ನಡೆಸಿರುವ ಮತಾಂತರ, ಹತ್ಯೆ ಮತ್ತು ಹಿಂದೂ ದೇವಾಲಯಗಳ ನಾಶದ ಬಗ್ಗೆ ಕೊಡಗಿನ ಜನ ಆಕ್ರೋಶದಲ್ಲಿದ್ದಾರೆ.  ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆಗೆ ಪಠ್ಯಕ್ರಮದಲ್ಲಿ ಅಳವಡಿಸಿರುವುದನ್ನು ಕೂಡಲೇ ಕೈ ಬಿಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪಠ್ಯ ಪುಸ್ತಕಗಳ ಪರಿಷ್ಕರಿಸುವ ಕಾರ್ಯ

ಲೇಖಕ ರೋಹಿತ್ ಚಕ್ರತೀರ್ಥ (Rohith Chakrathirtha) ಅವರ ನೇತೃತ್ವದ ಶಾಲಾ ಪಠ್ಯ ಪುಸ್ತಕ ಸಮಿತಿಗೆ, ರಾಜ್ಯದಲ್ಲಿ ಶಾಲಾ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ಕಾರ್ಯವನ್ನು ವಹಿಸಲಾಗಿದೆ. ವರದಿಗಳು ತಿಳಿಸಿರುವ ಪ್ರಕಾರ, ಈ ಸಮಿತಿಯು ತನ್ನ ವರದಿಯನ್ನು ಕರ್ನಾಟಕ ಸರಕಾರಕ್ಕೆ ಈಗಾಗಲೇ ಸಲ್ಲಿಸಿದ್ದು, ಅದರಲ್ಲಿ ಮಾಡಲಾಗಿರುವ ಕೆಲವು ಶಿಫಾರಸ್ಸುಗಳಲ್ಲಿ, ಟಿಪ್ಪುವಿಗೆ ಸಂಬಂಧಿಸಿದ ಅಧ್ಯಾಯಗಳಲ್ಲಿ ಕೆಲವು ಸಂಗತಿಗಳನ್ನು ತೆಗೆದು ಹಾಕುವುದು ಕೂಡ ಒಂದಾಗಿದೆ.

ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಶಿಫಾರಸ್ಸು ಮಾಡಿರುವ ಬದಲಾವಣೆಗಳನ್ನು, 2022-23 ನೇ ಶೈಕ್ಷಣಿಕ ವರ್ಷದಿಂದ 6 ರಿಂದ 10 ನೇ ತರಗತಿಗಳ ವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಸರಕಾರ ತಿಳಿಸಿದೆ.

ಇದನ್ನೂ ಓದಿ:  B.S Yediyurappa: ಸಿಎಂ ಆಗಿದ್ದ ವೇಳೆ ಅಧಿಕಾರ ದುರುಪಯೋಗ; ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು

ಟಿಪ್ಪುವನ್ನು ವೈಭವೀಕರಿಸಿರುವ ಅಂಶ ಕೈಬಿಡಬಹುದು

“ನಮ್ಮ ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಬೋಧಿಸುವುದಕ್ಕೆ ಸಂಬಂಧಿಸಿದಂತೆ, ಅನಾವಶ್ಯಕ ವೈಭವೀಕರಣ, ವಾಸ್ತವಿಕ ದೋಷಗಳು ಮತ್ತು ವಿಷಯಾಂತರಗಳನ್ನು ತೆಗೆದು ಹಾಕುವ ಮೂಲಕ, ನಾವು ಒಂದು ತಟಸ್ಥ ಧ್ವನಿಯನ್ನು ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದೇವೆ.ಇದು ಕೇವಲ ಟಿಪ್ಪುವಿನ ವಿಷಯದಲ್ಲಿ ಮಾತ್ರವಲ್ಲ, ಇತರ ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಗಳ ವಿಷಯದಲ್ಲೂ ಆಗಿದೆ” ಎಂಬ ರೋಹಿತ್ ಚಕ್ರತೀರ್ಥ ಅವರ ಹೇಳಿಕೆಯನ್ನು ಮಾಧ್ಯವೊಂದು ಉಲ್ಲೇಖಿಸಿದೆ.
Published by:Mahmadrafik K
First published: