ಬೆಂಗಳೂರು: ಈಗಾಗಲೇ ವಿಜಯನಗರ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವಂತೆ ಸಚಿವ ಆನಂದ್ ಸಿಂಗ್ ಅವರು ಸಿಎಂ ಬಿಎಸ್ವೈಗೆ ದುಂಬಾಲು ಬಿದ್ದಿದ್ದರೆ, ಇದೀಗ ಮತ್ತೆ ಅದೇ ಜಿಲ್ಲೆಯ ಬಿಜೆಪಿ ಶಾಸಕರು ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ಮನವಿ ಸಲ್ಲಿಸಿರುವುದು ಬಿಎಸ್ವೈಗೆ ತಲೆನೋವಾಗಿ ಪರಿಣಮಿಸಿದೆ.
ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಅದೇ ಕ್ಷೇತ್ರದ ಬಿಜೆಪಿ ಶಾಸಕ ಕರುಣಾಕರ್ ರೆಡ್ಡಿ ನೇತೃತ್ವದಲ್ಲಿ 30ಕ್ಕೂ ಅಧಿಕ ಮಂದಿಯ ನಿಯೋಗ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ.
ಈಗಾಗಲೇ ಸಚಿವ ಆನಂದ್ ಸಿಂಗ್ ಅವರು ಬಳ್ಳಾರಿಯ ಜಿಲ್ಲೆಯ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಬಲವಾಗಿ ಪಟ್ಟುಹಿಡಿದಿದ್ದಾರೆ. ಆದರೆ, ಆನಂದ್ ಸಿಂಗ್ ಅವರ ಬೇಡಿಗೆಗೆ ಬಳ್ಳಾರಿಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಇದೇ ಕರಣಾಕರ್ ರೆಡ್ಡಿ ಬಳ್ಳಾರಿಯಿಂದ ವಿಜಯನಗರವನ್ನು ಪ್ರತ್ಯೇಕಗೊಳಿಸಿ ಜಿಲ್ಲೆ ಮಾಡುವುದಕ್ಕೆ ಬಲವಾಗಿ ವಿರೋಧಿಸಿದ್ದರು. ಇದೀಗ ಆನಂದ್ ಸಿಂಗ್ ಅವರಿಗೆ ಸೆಡ್ಡು ಹೊಡೆಯಲು ಕರುಣಾಕರ್ ರೆಡ್ಡಿ ಪ್ರತ್ಯೇಕ ಜಿಲ್ಲೆಯ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.
ಇದನ್ನು ಓದಿ: ವಿಜಯನಗರ ನೂತನ ಜಿಲ್ಲೆಯಾಗಬೇಕೆಂಬುದು ದೇವರ ಇಚ್ಛೆ; ಅನರ್ಹ ಶಾಸಕ ಆನಂದ್ ಸಿಂಗ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ