ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದ ಕೆ. ಮಹದೇವ್; ರಾಜೀನಾಮೆಗಾಗಿ ರಮೇಶ್ 80 ಕೋಟಿ ಕೇಳಿದ್ದು ನಿಜಾನ?

ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಪಕ್ಷಕ್ಕೆ ಸೇರಲು ರಮೇಶ್ ಬಿಜೆಪಿಯವರ ಮುಂದೆ 80 ಕೋಟಿ ಹಣದ ಬೇಡಿಕೆ ಇಟ್ಟಿದ್ದರು. ನನಗೂ ಸಹ 40 ಕೋಟಿ ಆಫರ್ ಮಾಡಿ ಬಿಜೆಪಿಗೆ ಬಂದುಬಿಡಿ ಎಂದಿದ್ದರು. ಅಲ್ಲದೆ ನನ್ನ ಟೇಬಲ್ ಮುಂದೆ ಹಣ ತಂದು ಇಟ್ಟಿದ್ರು. ಆದರೆ, ನಾನು ಈ ಆಮಿಷಕ್ಕೆ ಬಲಿಯಾಗಿರಲಿಲ್ಲ ಎಂದು ಹೇಳುವ ಮೂಲಕ ಶಾಸಕ ಕೆ. ಮಹದೇವ್ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

MAshok Kumar | news18
Updated:July 3, 2019, 4:34 PM IST
ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದ ಕೆ. ಮಹದೇವ್; ರಾಜೀನಾಮೆಗಾಗಿ ರಮೇಶ್ 80 ಕೋಟಿ ಕೇಳಿದ್ದು ನಿಜಾನ?
ಶಾಸಕ ಕೆ. ಮಹದೇವ್ ಮತ್ತು ರಮೇಶ್ ಜಾರಕಿಹೊಳಿ.
  • News18
  • Last Updated: July 3, 2019, 4:34 PM IST
  • Share this:
ಮೈಸೂರು (ಜುಲೈ.03); ಕಾಂಗ್ರೆಸ್ ಪಕ್ಷದಲ್ಲಿನ ಶಾಸಕರ ರಾಜೀನಾಮೆ ಪ್ರಸಂಗದಿಂದಾಗಿ ರಾಜ್ಯ ರಾಜಕೀಯ ವಲಯದಲ್ಲಿ ಈಗಾಗಲೇ ದೊಡ್ಡ ಕೋಲಾಹಲವೇ ಸೃಷ್ಟಿಯಾಗಿದೆ. ಇದರ ಬೆನ್ನಿಗೆ ಕಾಂಗ್ರೆಸ್ ಆಪರೇಷನ್ ಕಮಲದ ಆರೋಪ ಮಾಡುತ್ತಿದೆ. ಈ ಆರೋಪಕ್ಕೆ ಇಂಬು ನೀಡುವಂತೆ "ಬಿಜೆಪಿ ಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ತಲಾ 40 ಕೋಟಿ ಆಫರ್ ಮಾಡಿತ್ತು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಎದುರು 80 ಕೋಟಿ ಬೇಡಿಕೆ ಇಟ್ಟಿದ್ದರು ಎಂದು ಹೇಳುವ ಮೂಲಕ ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ. ಮಹದೇವ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬುಧವಾರ ಪಿರಿಯಾಪಟ್ಟಣದಲ್ಲಿ ನಡೆದ ಒಂದು ಸಭೆಯಲ್ಲಿ ಮಾತನಾಡಿರುವ ಅವರು, “ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಪಕ್ಷಕ್ಕೆ ಸೇರಲು ರಮೇಶ್ ಬಿಜೆಪಿಯವರ ಮುಂದೆ 80 ಕೋಟಿ ಹಣದ ಬೇಡಿಕೆ ಇಟ್ಟಿದ್ದರು. ನನಗೂ ಸಹ 40 ಕೋಟಿ ಆಫರ್ ಮಾಡಿ ಬಿಜೆಪಿಗೆ ಬಂದುಬಿಡಿ ಎಂದಿದ್ದರು. ಅಲ್ಲದೆ ನನ್ನ ಟೇಬಲ್ ಮುಂದೆ ಹಣ ತಂದು ಇಟ್ಟಿದ್ರು. ಆದರೆ, ನಾನು ಈ ಆಮಿಷಕ್ಕೆ ಬಲಿಯಾಗಿರಲಿಲ್ಲ. ಈಗಲೇ ಹೋಗ್ತೀರ? ಇಲ್ಲ ಎಸಿಬಿಗೆ ಹೇಳಬೇಕ? ಎಂದು ಗದರಿಸಿ ಕಳಿಸಿದ್ದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹುಲಿ ಬಂತು ಹುಲಿ ಕಥೆ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಎಂಬ ನಾಟಕ; ಅನುಮಾನಕ್ಕೊಳಗಾದ ಸರದಾರನ ನಡೆ!

“ಶಾಸಕರು ಹಣಕ್ಕೆ ಮಾರಾಟ ಆಗಬಾರದು, ಕ್ಷೇತ್ರದ ಜನರ ಆರ್ಶಿವಾದದಿಂದ ಶಾಸಕನಾಗಿದ್ದೇನೆ ಅವರ ಕೆಲಸ ಮಾಡಬೇಕು. 40 ಕೋಟಿ ಹಣ ಪಡೆದು ನಾನು ಸುಮ್ಮನಿರಬಹುದಿತ್ತು. ಆದರೆ, ಆ 40 ಕೋಟಿ ಹಣವನ್ನ ಹೇಗೆ ಬಳಸೋದು ಅಂತಾನು ಗೊತ್ತಿಲ್ಲ ನನಗೆ” ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಹಣದ ಆಮಿಷವನ್ನು ಮುಂದಿಟ್ಟು ಶಾಸಕರ ಖರೀದಿಗೆ ಮುಂದಾಗಿದ್ದರು ಎಂದು ನೇರಾನೇರ ಆರೋಪಿಸಿದ್ದಾರೆ. ಆದರೆ, ಈ ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೆ ಬೆಳಕಿಗೆ ಬರಬೇಕಿದೆ.

ಇದನ್ನೂ ಓದಿ : ರಾಜೀನಾಮೆ ಯಾರಿಗೆ, ಹೇಗೆ ಕೊಡಬೇಕು ಎಂಬ ಅರಿವಿಲ್ಲ ಎಂದರೆ ಹೇಗೆ?; ಆನಂದ್​ ಸಿಂಗ್​ ವಿರುದ್ಧ ಗರಂ ಆದ ಸ್ಪೀಕರ್​

First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ