Mandya Politics: ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ನೀವೇನೂ ಟೆಕ್ನಿಕಲ್ ಎಕ್ಸಫರ್ಟಾ?: ಸುಮಲತಾ ವಿರುದ್ಧ ಅನ್ನದಾನಿ ಕಿಡಿ

ಮಳವಳ್ಳಿ ಸೊಸೆ ಅಂತ ಹೇಳಿ 30 ಸಾವಿರ ವೋಟ್ ಲೀಡ್ ತೆಗೆದುಕೊಂಡ್ರಿ. ಸೊಸೆ ಅಂತ ಜನ ಕೊಟ್ಟ ಗೌರವವನ್ನು ಉಳಿಸಿಕೊಳ್ಳಿ‌. ಮಾಜಿ ಪ್ರಧಾನಿ ದೇವೇಗೌಡ್ರು ಕೊಟ್ಟ ರೈಲು ಯೋಜನೆ ದಯಮಾಡಿ ಕೈ ಮುಗಿಯುತ್ತೇವೆ ತಂದು ಕೊಡಿ. ನೀವು ಹೇಳುವುದ್ದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಶಾಸಕ ಅನ್ನದಾನಿ, ಸಂಸದೆ ಸುಮಲತಾ ಅಂಬರೀಶ್

ಶಾಸಕ ಅನ್ನದಾನಿ, ಸಂಸದೆ ಸುಮಲತಾ ಅಂಬರೀಶ್

  • Share this:
ಮಂಡ್ಯದಲ್ಲಿ (Mandya) ಜೆಡಿಎಸ್ ಶಾಸಕರು ಮತ್ತು ಸಂಸದರ (JDS MLAs vs MP Sumalatha Ambareesh) ನಡುವಿನ ಟಾಕ್ ಫೈಟ್ ಮುಂದುವರಿದಿದೆ. ಇಂದು ಮಾಧ್ಯಮಗಳ  ಜೊತೆ ಮಾತನಾಡಿದ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಅನ್ನದಾನಿ (JDS MLA K Annadani) ಅವರು ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸದೆ ಸುಮಲತಾ ಕೇವಲ ಫೋಸ್ ಕೊಡುವ ಕೆಲಸ ಮಾಡ್ತಾರೆ. ಎಂಪಿನಾ ಜನ ಮರೆತು ಬಿಡ್ತಾರೆ ಅಂತ ಮಂಡ್ಯಕ್ಕೆ ಬರುತ್ತಾರೆ. ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ ಎಂದು ಕಿಡಿಕಾರಿದ್ದಾರೆ. ಸಂಸದೆ ಸುಮಲತಾ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ನಾವು ಯಾರ ಹತ್ರನೂ ಆ ಕೆಲಸ ಮಾಡ್ತಿಲ್ಲ. ನೀವು ಕಮಿಷನ್ (Commission Allegation) ಪಡೆಯುತ್ತಿರೋದನ್ನು ನೆನಪಿಸಿಕೊಂಡು ಆ ಮಾತುಗಳನ್ನಾ ಹೇಳಿದ್ರಾ ಎಂದು ಪ್ರಶ್ನೆ ಮಾಡಿದರು.

ಕಾಮಗಾರಿಗೆ ನಾವೆಲ್ಲ ಪೂಜೆ ಮಾಡಿದ ಮೇಲೆ ಏನು ಪರಿಶೀಲನೆ ಮಾಡುತ್ತೀರಿ? ಮಂಡ್ಯಕ್ಕೆ ಕೇಂದ್ರ ಸರ್ಕಾರದಿಂದ ಏನು ಅನುದಾನ ತಂದಿದ್ದೀರಿ? ಆದರ್ಶ ಗ್ರಾಮ, PMJSY ನೀವು ತಂದಿರೋದು ಅನುದಾನನಾ? ಕೇಂದ್ರ ಶೇ.25, ರಾಜ್ಯ ಸರ್ಕಾರದಿಂದ ಶೇ.75 ಅನುದಾನ ಕೊಡಲಾಗುತ್ತಿದೆ. ಆದರ್ಶ ಗ್ರಾಮದಲ್ಲಿ ನಮ್ಮ ಪಾಲೂ ಸಹ ಇದೆ. ಜಿಲ್ಲೆಗೆ ಅಂತ ನಿಮ್ಮ ಪೂರ್ಣ ಪ್ರಮಾಣದ ಕೆಲಸ ಏನಿದೆ ಎಂದು ಕೇಳಿದರು.

ಜನರು ಕೊಟ್ಟ ಗೌರವ ಉಳಿಸಿಕೊಳ್ಳಿ

ಮಳವಳ್ಳಿ ಸೊಸೆ ಅಂತ ಹೇಳಿ 30 ಸಾವಿರ ವೋಟ್ ಲೀಡ್ ತೆಗೆದುಕೊಂಡ್ರಿ. ಸೊಸೆ ಅಂತ ಜನ ಕೊಟ್ಟ ಗೌರವವನ್ನು ಉಳಿಸಿಕೊಳ್ಳಿ‌. ಮಾಜಿ ಪ್ರಧಾನಿ ದೇವೇಗೌಡ್ರು ಕೊಟ್ಟ ರೈಲು ಯೋಜನೆ ದಯಮಾಡಿ ಕೈ ಮುಗಿಯುತ್ತೇವೆ ತಂದು ಕೊಡಿ. ನೀವು ಹೇಳುವುದ್ದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

JDS MLA Reacts MP Sumalatha Ambareesh Commission allegations mrq
ಸಂಸದೆ ಸುಮಲತಾ


ಕಮಿಷನ್ ತೆಗೆದುಕೊಳ್ತಾರೆ ಅಂತ ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ. ನೀವೂ ಸಂಸದರಾಗಿದ್ದು, ಸ್ವಲ್ಪ ತೂಕವಾಗಿ ಇರೋದನ್ನ ಕಲಿಯಿರಿ. ನಾಲ್ಕು ತಿಂಗಳಿಗೆ ಬಂದು ನಾವು ಮಾಡಿರುವ ಕೆಲಸಕ್ಕೆ ಬಂದು ಅಲ್ಲಾಡಿಸುವುದು ಬೇಡ. ಪರಿಶೀಲನೆ ಮಾಡುತ್ತೇನೆ ಅನ್ನೋದು ಏನು ತನಿಖೆನಾ? ನೀವೇನೂ ಟೆಕ್ನಿಕಲ್ ಎಕ್ಸಫರ್ಟ್​​​ನಾ? ಎಂದು ಖಾರವಾಗಿ ಕಿಡಿಕಾರಿದರು.

ಬಹಿರಂಗ ಚರ್ಚೆಗೆ ಬನ್ನಿ

ಕಾಮಗಾರಿ ಪರಿಶೀಲನೆ ವೇಳೆ ನಿಮ್ಮ ಜೊತೆ ಯಾವ ಇಂಜಿನಿಯರ್ ಬಂದಿದ್ರು? ಕಾಮಗಾರಿಯಲ್ಲಿ ಏನು ತೊಂದರೆ ಆಗಿತ್ತು? ಯಾರು ದುಡ್ಡು ಇಸ್ಕೊಂಡಿದ್ದಾರೆ, ಯಾರು ಅಂತ ಹೇಳಿ? ಯಾರು ಏನು ಮಾಡಿದ್ದಾರೆ ಅಂತ ಬಹಿರಂಗ ಚರ್ಚೆಗೆ ಬಂದ್ರೆ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

ನಾಲ್ಕು ವರ್ಷದಿಂದ ಕೇಂದ್ರದಿಂದ ಒಂದು ಯೋಜನೆಯನ್ನೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ತರಲಿಲ್ಲ. PMGSY ಹಿಂದಿನಿಂದಲೂ ಬರ್ತಿದೆ,  ನೀವು ತರೋದು ಏನು ಹೊಸದಲ್ಲ. ಬಹಳ ವರ್ಷಗಳ ಹಿಂದೆನೇ ನರೇಗಾ ಬಂದಿದ್ದು‌. ನೀವು ಎಂಪಿ ದ್ಮೇಲೆ ನರೇಗಾ ಬಂದಿದ್ದಾ? ಮಾಡೋ ಕೆಲಸ ಮಾಡಿ, ದೊಡ್ಡ ಪ್ರಾಜೆಕ್ಟ್ ತಂದುಕೊಡಿ ಎಂದರು.

ಇದನ್ನೂ ಓದಿ:  DC Tammanna: ಸುಮಲತಾ ಬಂಡವಾಳ ನಮ್ಗೆ ಗೊತ್ತು, ಬುಡು ಬುಡುಕೆ ಮಾಡ್ಕೊಂಡು ರಾಜಕಾರಣಕ್ಕೆ ಬಂದಿಲ್ಲ: ಡಿ ಸಿ ತಮ್ಮಣ್ಣ

ರೈತರ ಹೋರಾಟದಿಂದ ಮೈಶುಗರ್ ಉಳಿದಿದ್ದು

ನಾವು ಕಷ್ಟ ಪಟ್ಟು ಪಾದಯಾತ್ರೆ ಮಾಡಿ ಮೈಶುಗರ್​ ಕಾರ್ಖಾನೆಗಾಗಿ ಹೋರಾಟ ಮಾಡಿದ್ದು. ಮಂಡ್ಯ ಜಿಲ್ಲೆಯ ರೈತರ ಹೋರಾಟದಿಂದ ಮೈಶುಗರ್ ಉಳಿದಿದೆ. ಖಾಸಗೀಕರಣದ ಪರವಾಗಿ ಇದ್ದವರು ನೀವು ಅಲ್ಲವಾ? ಮೈಶುಗರ್​​ನ್ನು ಸರ್ಕಾರದ ವಿರುದ್ಧ ಗುಡುಗಿ ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿದ್ದವರು. ನೀವು ಬರೀ ಫೋಸ್ ಕೊಡುವ ಕೆಲಸ ಮಾಡ್ತಿದ್ದೀರಿ.

ಸುಮಲತಾ ಆಂಬರೀಶ್


ಸಂಸದರರಾಗಿ ಮಂಡ್ಯಕ್ಕೆ ಕೊಡುಗೆ ಏನು ಇಲ್ಲ. ಮೂರ್ನಾಲ್ಕು ಜನ ಕರ್ಕೊಂಡು ಮಂಡ್ಯಕ್ಕೆ ಬಂದು ಹೋಗುತ್ತಿರುತ್ತೀರಿ. ಜನರರು ಸಂಸದರನ್ನು ಮರೆತ್ತಿದ್ದಾರೆ ಅನ್ನೋ ವೇಳೆಗೆ ಮಂಡ್ಯಕ್ಕೆ ಬಂದು ಹೋಗುತ್ತಿದ್ದೀರಿ. ಜನರು ಚಿತ್ರನಟಿಯನ್ನು ಮರೆಯಲ್ಲ ಬಿಡಿ ಎಂದು ಹೇಳಿದರು.

ಇದನ್ನೂ ಓದಿ:  ಸುಮಲತಾ-ಡಿ.ಸಿ. ತಮ್ಮಣ್ಣ ನಡುವೆ ಮುಂದುವರಿದ ಜಗಳ; ಮಂಡ್ಯ ಸಂಸದೆಯ ಕಾರ್ಯವೈಖರಿಗೆ ಮಾಜಿ ಸಚಿವ ಅಸಮಾಧಾನ

ಜೊತೆಯಲ್ಲಿರೋರ ಮಾತು ಕೇಳಬೇಡಿ

ಮಂಡ್ಯಕ್ಕೆ ದೊಡ್ಡ ಕಾರ್ಖಾನೆ ತಂದು ಗೌರವ ಉಳಿಸಿಕೊಳ್ಳಿ. ಹಾಗಾದಾಗ ಮಾತ್ರ ಜನರು ನಿಮ್ಮನ್ನು ಮರೆಯಲ್ಲ. ದಯವಿಟ್ಟು ಮಳವಳ್ಳಿಗೆ ರೈಲು ತೆಗೆದುಕೊಂಡು ಬನ್ನಿ. ಯಾರದ್ದೋ ಮಾತು ಕೇಳಿಕೊಂಡು ಬರಬೇಡಿ. ನಿಮ್ಮ ಜೊತೆಯಲ್ಲಿರುವವರ ಮಾತು ಕೇಳುವುದನ್ನು ನಿಲ್ಲಿಸಿ ಎಂದು ಶಾಸಕರು ಸಲಹೆ ನೀಡಿದರು.
Published by:Mahmadrafik K
First published: