• Home
  • »
  • News
  • »
  • state
  • »
  • Harish Poonja: ಜಿಹಾದಿಗಳ ಟಾರ್ಗೆಟ್ ಆದ್ರಾ ಹರೀಶ್ ಪೂಂಜಾ? ತಲ್ವಾರ್ ಝಳಪಿಸಿದವರ ಬಗ್ಗೆ ಶಾಸಕರು ಹೇಳಿದ್ದೇನು?

Harish Poonja: ಜಿಹಾದಿಗಳ ಟಾರ್ಗೆಟ್ ಆದ್ರಾ ಹರೀಶ್ ಪೂಂಜಾ? ತಲ್ವಾರ್ ಝಳಪಿಸಿದವರ ಬಗ್ಗೆ ಶಾಸಕರು ಹೇಳಿದ್ದೇನು?

ಶಾಸಕ ಹರೀಶ್ ಪೂಂಜಾ (ಸಂಗ್ರಹ ಚಿತ್ರ)

ಶಾಸಕ ಹರೀಶ್ ಪೂಂಜಾ (ಸಂಗ್ರಹ ಚಿತ್ರ)

ನಿನ್ನೆ ರಾತ್ರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿಗೆ ಯತ್ನಿಸಿದ್ದರು. ಕಾರಿನ ಬಳಿ ಬಂದು ಶಾಸಕರಿಗೆ ಬೆದರಿಕೆ ಹಾಕಿದ್ದರು. ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯವಾಗಿ ಬೈದು ತಲ್ವಾರ್ ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹರೀಶ್ ಪೂಂಜಾ, "ಜಿಹಾದಿ ಶಕ್ತಿಗಳು ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದೆ" ಎಂದಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Beltangadi (Belthangady), India
  • Share this:

ಬೆಳ್ತಂಗಡಿ, ದಕ್ಷಿಣ ಕನ್ನಡ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Belthangadi MLA Harish Poonja) ಜಿಹಾದಿಗಳ ಟಾರ್ಗೆಟ್ (target of Jihadists) ಆಗಿದ್ದಾರಾ? ಹೀಗೊಂದು ಆತಂಕಕಾರಿ ವಿಚಾರವನ್ನು ಖುದ್ದು ಶಾಸಕರೇ ಬಿಚ್ಚಿಟ್ಟಿದ್ದಾರೆ. ಮಂಗಳೂರು ನಗರ (Mangaluru City) ಹೊರವಲಯದ ಫರಂಗಿಪೇಟೆ ಎಂಬಲ್ಲಿ ನಿನ್ನೆ ರಾತ್ರಿ 11.30ರ ವೇಳೆಗೆ ಶಾಸಕ ಹರೀಶ್ ಪೂಂಜಾ ಕಾರಿನ (Car) ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ (Bengaluru To Mangaluru) ಆಗಮಿಸಿ, ಬೆಳ್ತಂಗಡಿಗೆ ಶಾಸಕ ಹರೀಶ್ ಪೂಂಜಾ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಶಾಸಕರ ಕಾರಿನ ಬಳಿ ಬಂದು, ಶಾಸಕರಿಗೆ ಬೆದರಿಕೆ ಹಾಕಿದ್ದರು. ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯವಾಗಿ ಬೈದು ತಲ್ವಾರ್ (Talwar) ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹರೀಶ್ ಪೂಂಜಾ, ಜಿಹಾದಿ ಶಕ್ತಿಗಳು ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದೆ ಎಂದಿದ್ದಾರೆ.


“ನನಗೆ ಜಿಹಾದಿಗಳಿಂದ ಬೆದರಿಕೆ ಇದೆ”


ನನಗೆ ಈ ಹಿಂದೆ ಯಾವುದೇ ರೀತಿಯ ಬೆದರಿಕೆ ಇರಲಿಲ್ಲ. ನಾನೊಬ್ಬ ಹಿಂದೂ ಕಾರ್ಯಕರ್ತನಾಗಿ ಈಗ ಶಾಸಕನಾಗಿದ್ದೇನೆ ಅಂತ ಹರೀಶ್ ಪೂಂಜಾ ಹೇಳಿದ್ದಾರೆ. ಘಟನೆ ಬಗ್ಗೆ ಮಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಜಿಹಾದಿ ಮಾನಸಿಕತೆಯ ಜನರನ್ನು ನಾನು ಯಾವತ್ತೂ ವಿರೋಧಿಸುತ್ತೇನೆ. ಈ ಘಟನೆಯಿಂದ ನನಗೆ ಇನ್ನಷ್ಟು ಕೆಲಸ‌ ಮಾಡಲು ಶಕ್ತಿ ಕೊಟ್ಟಿದೆ, ಇನ್ನು ನಾನು ಹಿಂದುತ್ವದ ಪರವಾಗಿ ಕೆಲಸ ಮಾಡುವ ಶಾಸಕ. ಇದಕ್ಕಾಗಿ ಜಿಹಾದಿ ಶಕ್ತಿಗಳು ನನ್ನ ಮೇಲೆ ಹಗೆ ಸಾಧಿಸುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಹಿಂದುತ್ವದ ವಿಚಾರದಲ್ಲಿ ರಾಜಿಯಿಲ್ಲ ಅಂತ ಅವರು ಸ್ಪಷ್ಟಪಡಿಸಿದ್ದಾರೆ.


ಘಟನೆ ಬಗ್ಗೆ ಶಾಸಕರು ಹೇಳಿದ್ದೇನು?


ಇನ್ನು ಘಟನೆಯನ್ನು ಶಾಸಕರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನಿಂದ ಬಂದು ಬೆಳ್ತಂಗಡಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ರಾತ್ರಿ ಸುಮಾರು 11 ಗಂಟೆ ವೇಳೆಗೆ ದಾಳಿ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತನ ಕಾರಿನಲ್ಲಿದ್ದೆ. ದಾಳಿ ನಡೆಸಲು ಬಂದಿದ್ದ ಆರೋಪಿಗಳು ಮೊದಲು ನನ್ನ ಇನ್ನೋವಾ ಕಾರಿನ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಆ ಕಾರಿನಲ್ಲಿ ನಾನು ಇಲ್ಲದ ಕಾರಣ ಮತ್ತೆ ನಾನಿದ್ದ ಹುಂಡೈ ಐ-20 ಕಾರಿನ ಮೇಲೆ ದಾಳಿ ನಡೆಸಿದ್ದಾನೆ ಎಂದಿದ್ದಾರೆ.


ಇದನ್ನೂ ಓದಿ: Harish Poonja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರ್ ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ದುಷ್ಕರ್ಮಿಗಳು!


ತಲ್ವಾರ್ ಝಳಪಿಸಿ ಶಾಸಕರಿಗೆ ಬೆದರಿಕೆ


ಪಡೀಲ್​ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳ ನಮ್ಮ ಸರ್ಕಾರಿ ಕಾರನ್ನು ಬೆನ್ನಟ್ಟಿದೆ. ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯವಾಗಿ ಬೈದು ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಕ್ಷಣ ಘಟನೆಯ ಬಗ್ಗೆ ದೂರವಾಣಿಯಲ್ಲಿ ಬಂಟ್ವಾಳ ಡಿವೈಎಸ್‌ಪಿಗೆ ತಿಳಿಸಿದ್ದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಫರಂಗಿ ಪೇಟೆಯಲ್ಲಿ ಬ್ಯಾರಿಕೇಡ್ ಹಾಕಿದ್ರು. ಆದರೆ, ನಮ್ಮ ಕಾರ್ ಸೈಡ್ ಹಾಕುತ್ತಿದ್ದಂತೆ ಬೇರೆ ಕಾರುಗಳ ಜೊತೆ ಬ್ಯಾರಿಕೇಡ್ ಪಾಸಾಗಿದ್ದಾನೆ ಎಂದಿದ್ದಾರೆ.


ಕೇರಳ ನೋಂದಣಿಯ ವಾಹನ


ಅದು ಕೇರಳ ನೋಂದಣಿಯ ಕಾರಾಗಿದ್ದು, ನಂಬರ್ ಸಹ ಇದೆ ಅಂತ ಶಾಸಕರು ಹೇಳಿದ್ದಾರೆ. ಪೊಲೀಸರಿಗೆ ವಾಹನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನಿನ್ನೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ಆಗಿದೆ ಎಂದು ಹರೀಶ್ ಪೂಂಜಾ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Karnataka Assembly Elections: ಕುಂದಾಪುರದಲ್ಲಿ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ತಡೆಯೊಡ್ಡುತ್ತಾ ಕಾಂಗ್ರೆಸ್​?


ಗೃಹ ಸಚಿವರಿಂದ ಸೂಕ್ತ ಭದ್ರತೆಯ ಭರವಸೆ


ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನನ್ನ ಬಳಿ ಈ ವಿಚಾರವಾಗಿ ಚರ್ಚಿಸಿದ್ದಾರೆ. ಅಲ್ಲದೇ ಭದ್ರತೆಗೆ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

Published by:Annappa Achari
First published: