ರಾಮನಗರ (ಡಿ.13): ಬಿಜೆಪಿ ಪಕ್ಷ (BJP Party) ಸೇರಿ ದೋಸ್ತಿ ಸರ್ಕಾರವನ್ನೇ (Government) ಪತನ ಮಾಡಿದ ಶಾಸಕರಲ್ಲಿ ಎಚ್ ವಿಶ್ವನಾಥ್ (H. Vishwanath) ಕೂಡ ಒಬ್ಬರು, ಬಿಜೆಪಿಯಲ್ಲಿ ಒಳ್ಳೆ ಸ್ಥಾನಮಾನ ಬಯಸಿ ಪಕ್ಷಕ್ಕೆ ಸೇರಿದ ಎಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ (Minister Position) ಕೂಡ ಸಿಗಲಿಲ್ಲ. ಬಿಜೆಪಿಯಿಂದ ಮೂಲೆ ಗುಂಪಾಗುವ ಭೀತಿಯಿಂದ ಪಕ್ಷದಿಂದ ಹಳ್ಳಿ ಹಕ್ಕಿ ಎಚ್ ವಿಶ್ವನಾಥ್ ಹೊರ ಬರ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಬಿಜೆಪಿ ವಿರುದ್ಧವೇ ಎಚ್.ವಿಶ್ವನಾಥ್ ಕೆಂಡಕಾರಿದ್ದಾರೆ. ಜೊತೆಗೆ ರೆಬೆಲ್ಸ್ ಕಾಂಗ್ರೆಸ್ (Congress) ಸೇರ್ಪಡೆ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಸಚಿವ ಸ್ಥಾನ ಕೊಟ್ಟರೂ ನನಗೆ ಬೇಡ
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಸಿಂಗರಾಜಿಪುರ ಗ್ರಾಮದಲ್ಲಿ ಮಾತಾಡಿದ ಬಿಜೆಪಿ MLC ಎಚ್. ವಿಶ್ವನಾಥ್ ಅವರು, ಸಚಿವ ಸ್ಥಾನ ಕೊಟ್ಟರೂ ನನಗೆ ಬೇಡ, ನಾನು ಸಚಿವಾಕಾಂಕ್ಷಿಯೂ ಅಲ್ಲ. ಬಿಜೆಪಿ ಸರ್ಕಾರವನ್ನು ನಾವೆಲ್ಲಾ ಸೇರಿ ತಂದದ್ದು, ನಾವು ಹೊರಗೆ ಬರದಿದ್ದರೆ ಈ ಬಿಜೆಪಿ ಸರ್ಕಾರ ಎಲ್ಲಿ ಬರುತ್ತಿತ್ತು ಎಂದು ಪ್ರಶ್ನೆ ಮಾಡಿದ್ರು.
ಹೊಸ ಬಾಂಬ್ ಸಿಡಿಸಿದ ಹಳ್ಳಿ ಹಕ್ಕಿ
ಬಿಜೆಪಿ ಸರ್ಕಾರದಿಂದ ಒಳ್ಳೆಯ ಯೋಜನೆ ಹಾಗೂ ಕಾರ್ಯಕ್ರಮಗಳನ್ನ ನಿರೀಕ್ಷೆ ಮಾಡಿದ್ದೆವು, ಅದೆಲ್ಲವೂ ಸುಳ್ಳಾಯಿತು ಎಂದು ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ. ಮತ್ತೆ ಕಾಂಗ್ರೆಸ್ ಗೆ ರೆಬೆಲ್ಸ್ ವಾಪಸ್ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು, ಅದು ನನಗೆ ಗೊತ್ತಿಲ್ಲ, ನಾನು ಯಾರ ಜೊತೆಯೂ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೆ ನೋಡೋಣ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ನಮ್ಮ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ
ಚನ್ನಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಚ್ ವಿಶ್ವನಾಥ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ಅವರು, ನಮ್ಮ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ನಾನು ಡಿ ಕೆ ಶಿವಕುಮಾರ್ 40 ವರ್ಷದ ಸ್ನೇಹಿತರು. ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ಲಾ ಮಾಡಿದವರು. ಖರ್ಗೆಯವರ ಜೊತೆಗೆ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದ್ರು.
ಹಳ್ಳಿಹಕ್ಕಿ ಕಾಂಗ್ರೆಸ್ ಸೇರುವುದು ಪಕ್ಕಾನಾ?
ಕಾಂಗ್ರೆಸ್ ಪಕ್ಷ ಸೇರುವ ವಿಚಾರವಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್, ಯಾರು ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ, ನಾನು ಯಾವ ನಿರ್ಧಾರವನ್ನು ಮಾಡಿಲ್ಲ. ಮುಂದೆ ನೋಡೋಣ ಸರ್, ಈ ಅಸೆಂಬ್ಲಿ ಮುಗಿಯಲಿ. ಯಾವುದೇ ಪಕ್ಷದಲ್ಲಿ ಗೌರವ ಬಯಸುತ್ತೇವೆ, Politics commands the Respect, not demand ಎಂದು ಹೇಳಿದ್ದಾರೆ.
ನಾವು ಬಯಸಿದ ಕಾರ್ಯಕ್ರಮಗಳು ಆಗಲಿಲ್ಲ
ನಾವು ಬಯಸಿದ ಕಾರ್ಯಕ್ರಮಗಳು ಬಿಜೆಪಿಯಲ್ಲಿ ಆಗಲಿಲ್ಲ. ಸರ್ಕಾರ ಜನರ ಸರ್ಕಾರವಾಗಿ ಉಳಿಯಲಿಲ್ಲ. ಯಾವುದೋ ಮಸೀದಿಗೆ ನುಗ್ಗುವುದು, ದೇವಸ್ಥಾನಕ್ಕೆ ಮುಸ್ಲಿಂರು ಬರಬಾರದು ಅನ್ನೋದು ಧರ್ಮಾತೀತ, ಜಾತ್ಯಾತೀತ ರಾಷ್ಟ್ರ ಅಲ್ಲ.ದೇಶದಲ್ಲಿ 30 ಕೋಟಿ ಮುಸ್ಲಿಂರಿದ್ದಾರೆ. ಅವರನ್ನೆಲ್ಲಾ ಆಚೆ ಕಳುಹಿಸಿತ್ತೀರಾ. ಈ ವಿಚಾರವೆಲ್ಲವೂ ಮನಸ್ಸಿಗೆ ಬೇಜಾರಾಗುತ್ತದೆ.
ಇದನ್ನೂ ಓದಿ: Karnataka Congress: 2023ರ ಚುನಾವಣೆ ಗೆಲ್ಲಲು ಕರ್ನಾಟಕ ಕಾಂಗ್ರೆಸ್ಗೆ ಖರ್ಗೆ ದಶಸೂತ್ರ; ಸಭೆಯಲ್ಲಿ ಮಹತ್ವದ ನಿರ್ಧಾರಗಳು
ಕೆಲ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ನೋವಾಗಿದೆ
ಯಾವುದನ್ನ ಮಾಡಬೇಕು ಅದನ್ನ ಮಾಡೋಣ. ಟಿಪ್ಪು ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಬಡವರಿಗೆ ಅನುಕೂಲ ಆಯ್ತಾ? ಏನು ಮಾಡಬೇಕೋ ಅದನ್ನ ಮಾಡಲಿ. ಇದರಿಂದ ನನ್ನ ಮನಸ್ಸಿಗೆ ಬೇಜಾರಾಗಿದೆ ಎಂದು ಬಿಜೆಪಿ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ