ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಆಗಿರಲಿಲ್ಲ, ದುಶ್ಮನ್ ಸರ್ಕಾರ ಆಗಿತ್ತು; ಈಶ್ವರಪ್ಪ

ಅತೃಪ್ತ ಶಾಸಕರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಆದರೆ ಯಾರನ್ನು ಬಲವಂತ ಮಾಡಿ ಕರೆಯೋಲ್ಲ‌. ಬಿಜೆಪಿ ಸರ್ಕಾರ ಸ್ಥಿರ ಸರ್ಕಾರವಾಗಿ ನಿಲ್ಲಲಿದೆ. ಇನ್ನೊಂದು ತಿಂಗಳಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಒಂದು ಹಂತಕ್ಕೆ ಬರಲಿದೆ.

G Hareeshkumar | news18
Updated:July 24, 2019, 5:21 PM IST
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಆಗಿರಲಿಲ್ಲ, ದುಶ್ಮನ್ ಸರ್ಕಾರ ಆಗಿತ್ತು; ಈಶ್ವರಪ್ಪ
ಶಾಸಕ ಕೆ ಎಸ್​ ಈಶ್ವರಪ್ಪ
G Hareeshkumar | news18
Updated: July 24, 2019, 5:21 PM IST
ಮೈಸೂರು (ಜುಲೈ 24): ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರ ಆಗಿರಲಿಲ್ಲ. ಅದು ದುಶ್ಮನ್ ಸರ್ಕಾರ ಆಗಿತ್ತು. ಲೋಕಸಭೆಯಲ್ಲೇ ಅವರ ದೋಸ್ತಿ ಏನಾಗಿತ್ತು ಅಂತ ಗೊತ್ತಾಗಿದೆ. ಡಿಕೆಶಿ ಮಾಧ್ಯಮ, ಪತ್ರಿಕೆಗಳ ಮುಂದೆ ಟ್ರಬಲ್ ಶೂಟರ್. ಜನರು ಅವರನ್ನು ಟ್ರಬಲ್ ಶೂಟರ್ ಅನ್ನಬೇಕು. ಆಗ ಮಾತ್ರ ಲೀಡರ್ ಆಗೋದು. ಇವರೆಲ್ಲ ಸ್ವಯಂ ಘೋಷಿತ ಲೀಡರ್‌ಗಳು ಎಂದು ಶಾಸಕ ಕೆ ಎಸ್​​ ಈಶ್ವರಪ್ಪ ಹೇಳಿದರು.

ಅತೃಪ್ತ ಶಾಸಕರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಆದರೆ ಯಾರನ್ನು ಬಲವಂತ ಮಾಡಿ ಕರೆಯೋಲ್ಲ‌. ಬಿಜೆಪಿ ಸರ್ಕಾರ ಸ್ಥಿರ ಸರ್ಕಾರವಾಗಿ ನಿಲ್ಲಲಿದೆ. ಇನ್ನೊಂದು ತಿಂಗಳಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಒಂದು ಹಂತಕ್ಕೆ ಬರಲಿದೆ. ನಮ್ಮ ಮೊದಲ ಆದ್ಯತೆ ರೈತರ ಸಾಲ ಮನ್ನಾದ ಬಗ್ಗೆ ಚರ್ಚೆ ನಡೆಸೋದು. ಬಿಎಸ್‌ವೈ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಆರ್.ಎಸ್.ಎಸ್‌ನಿಂದ ನಾವು ಸಲಹೆ ಮಾತ್ರ ಪಡೆಯುತ್ತೇವೆ. ಆರ್.ಎಸ್.ಎಸ್ ಏನು ಹೇಳಿದ್ದಾರೆ ಅಂತ ಮಾಧ್ಯಮದವರು ಹೇಳೋದನ್ನ ನಾನು ನಂಬೋಲ್ಲ. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಸ್ಪೀಕರ್ ಬದಲಾವಣೆ ಬಗ್ಗೆ ನಾಯಕರ ಜೊತೆ ಕೂತು ಚರ್ಚೆ ಮಾಡುತ್ತೇವೆ. ಆ ನಂತರ ಹೊಸ ಸ್ಪೀಕರ್, ಹಳೆ ಸ್ಪೀಕರ್ ಮುಂದುವರಿಕೆ ಬಗ್ಗೆ ತಿರ್ಮಾನ ಮಾಡಲಾಗುವುದು.ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಚರ್ಚಿಸಿ ಸಂಪುಟ ರಚನೆ ಮಾಡುತ್ತಾರೆ ಎಂದರು.

ಯಡಿಯೂರಪ್ಪ್ ಅವರೇ ರಾಜ್ಯದ ಮುಖ್ಯಮಂತ್ರಿ  : ಸದಾನಂದ ಗೌಡ

ಇತ್ತ ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಸಚಿವ ಡಿ.ವಿ. ಸದಾನಂದಗೌಡ 'ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಸಂಪ್ರದಾಯವಷ್ಟೇ. ಸಭೆಗೆ ಅವರು ಬರದಿದ್ದರೂ ಅವರೇ ಸಿಎಂ. 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಿತ್ತು. ಅತೃಪ್ತ ಶಾಸಕರು ಹೊಸ ಸರ್ಕಾರದಲ್ಲಿ ಮಂತ್ರಿಗಿರಿ ಕೇಳಿಲ್ಲ ಅವರು ಮರಳಿ ಕಾಂಗ್ರೆಸ್-ಜೆಡಿಎಸ್ ಜೊತೆ ಕೈಜೋಡಿಸಲ್ಲ. ಬಿಜೆಪಿ ಹಿಂದೆ ಆದ ತಪ್ಪುಗಳಿಂದ ಪಾಠ ಕಲಿತಿದೆ ಈ ಭಾರಿ ಎಲ್ಲವೂ ವ್ಯವಸ್ಥಿತವಾಗಿರಲಿವೆ' ಎಂದು ಕೇಂದ್ರ ಸಚಿವರು ತಿಳಿಸಿದರು.

ಇದನ್ನೂ ಓದಿ : ಮೈತ್ರಿ ಮುಂದುವರೆಸುವುದು ಕಾಂಗ್ರೆಸ್​ಗೆ ಬಿಟ್ಟ ವಿಚಾರ; ಎಚ್​ಡಿ ಕುಮಾರಸ್ವಾಮಿ

First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...