ಸಮ್ಮಿಶ್ರ ಸರ್ಕಾರ ಬಿದ್ದರೆ ಅಳುವುದಕ್ಕೂ ಜನ ಇರಲ್ಲ; ಸಿ.ಟಿ. ರವಿ ವ್ಯಂಗ್ಯ

Latha CG | news18
Updated:September 4, 2018, 2:15 PM IST
ಸಮ್ಮಿಶ್ರ ಸರ್ಕಾರ ಬಿದ್ದರೆ ಅಳುವುದಕ್ಕೂ ಜನ ಇರಲ್ಲ; ಸಿ.ಟಿ. ರವಿ ವ್ಯಂಗ್ಯ
ಸಾಂದರ್ಭಿಕ ಚಿತ್ರ
Latha CG | news18
Updated: September 4, 2018, 2:15 PM IST
-ವೀರೇಶ್​ ಜಿ. ಹೊಸೂರ್, ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು,(ಸೆ. 04):  ಸರ್ಕಾರವನ್ನ ಬೀಳಿಸಿ ಅಧಿಕಾರ ಹಿಡಿಯಬೇಕೆಂಬ ಯೋಚನೆ ಬಿಜೆಪಿಗಿಲ್ಲ. ಆದರೆ ಇದು ಜನ ಬೆಂಬಲವಿಲ್ಲದೆ, ಯಾರಿಗೂ ಬೇಡವಾಗಿರುವ ಸರ್ಕಾರ. ಈ ಸರ್ಕಾರ ಬಿದ್ದರೆ ಅಳುವುದಕ್ಕೂ ಜನ ಇರಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಹೊರಗಿಡಲು ಮೈತ್ರಿ ಮಾಡಿಕೊಳ್ಳುತ್ತೇವೆಂಬ ಹೇಳಿಕೆ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿ, ಹಿರಿಯರು, ಮುತ್ಸದ್ಧಿ, ಈ ಇಳಿವಯಸ್ಸಲ್ಲೂ ಬಿಜೆಪಿ ದೂರ ಇಟ್ಟು ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ. ಇವರು ಬೇಕಿದ್ದರೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿ. ಈಗ ನಾವಿಬ್ಬರು ಒಂದಾಗೋಣ ಎನ್ನುವುದು ಜನರಿಗೆ ಮಾಡುವ ದ್ರೋಹ ಎಂದು ಗೌಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಇದೇ ವೇಳೆ ಸೀಟು ಕಡಿಮೆಯಾದರೂ ಬೆನ್ನು ತಟ್ಟಿಕೊಳ್ಳುವುದನ್ನ ಕಾಂಗ್ರೆಸ್​ನಿಂದ ಕಲಿಯಬೇಕು. ಕಾಂಗ್ರೆಸ್​ನವರಿಗೆ 154 ಸೀಟು ಕಡಿಮೆಯಾಗಿದ್ದರೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಹಾಸನ ಹಾಗೂ ಅರಸೀಕೆರೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಿದೆ. ಅವರನ್ನ ನೋಡಿ  ನಗಬೇಕೋ ಅಥವಾ ಅವರ ಸ್ಥಿತಿ ಕಂಡು ಮರುಗಬೇಕು ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಹಾಗಾಗಿ ಬಿಜೆಪಿಯನ್ನು ಹೊರತುಪಡಿಸಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನು ದೂರ ಇಡುವ ದೃಷ್ಟಿಯಿಂದ ಈ ಹೊಂದಾಣಿಕೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಿನ್ನೆ ಕಡೂರಿನಲ್ಲಿ ಹೇಳಿಕೆ ನೀಡಿದ್ದರು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ