HOME » NEWS » State » MLA BASANAGOUDA PATIL YATNAL REACTION ON BJP HIGH COMMAND SHOW CAUSE NOTICE SESR

ಯಾವುದಕ್ಕೂ ಅಂಜುವವನಲ್ಲ, ಸತ್ಯದ ಪರ ಮಾತನಾಡುತ್ತೇನೆ; ಬಸನಗೌಡ ಪಾಟೀಲ ಯತ್ನಾಳ್​

ನನ್ನನ್ನ ಮೂರುಬಾರಿ ಉಚ್ಛಾಟನೆ ಮಾಡಿದ್ದಾರೆ. ನಾನು ಯಾವತ್ತೂ ಹೆದರಿದವನಲ್ಲ. ಪಕ್ಷೇತರನಾಗಿ ನಾನು ಪರಿಷತ್ ಗೆ ಬಂದಿದ್ದೆ. ನನ್ನನ್ನ ಅಮಿತ್ ಶಾ ಅವರೇ ಕರೆದು ಅವಕಾಶ ಕೊಟ್ಟರು. 

news18-kannada
Updated:February 12, 2021, 5:04 PM IST
ಯಾವುದಕ್ಕೂ ಅಂಜುವವನಲ್ಲ, ಸತ್ಯದ ಪರ ಮಾತನಾಡುತ್ತೇನೆ; ಬಸನಗೌಡ ಪಾಟೀಲ ಯತ್ನಾಳ್​
ಶಾಸಕ ಬಸನಗೌಡ ಪಾಟೀಲ ಯತ್ನಾಳ
  • Share this:
ಬೆಂಗಳೂರು(ಫೆ. 12): ಸಿಎಂ ಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಹಿನ್ನಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ಗೆ ಪಕ್ಷದ ಶಿಸ್ತು ಸಮಿತಿ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು, ನನಗೆ ಯಾವುದೇ ನೋಟಿಸ್ ಬಂದಿಲ್ಲ. ಬಂದ ಮೇಲೆ ಮಾತಾಡುತ್ತೇನೆ. ಸುಮ್ಮನೆ ವದಂತಿಗಳಿಗೆ ನಾನು ಪ್ರತಿಕ್ರಿಯಿಸಲ್ಲ. ನಾನಂತೂ ಯಾರ ವಿರುದ್ದವೂ ಮಾತಾಡಿಲ್ಲ. ನಾನು ಯಾವುದಕ್ಕೂ ಅಂಜುವುದಿಲ್ಲ. ಸತ್ಯದ ಪರ ಮಾತಾಡುತ್ತೇನೆ. ಕ್ಷಮೆ, ವಿಷಾದ ಎನ್ನುವ ಪದಗಳನ್ನೂ ನಾನು ಬಳಸಲ್ಲ. ನಾನು ಮಂತ್ರಿ ಆಗಬೇಕು ಎಂದು ಎಲ್ಲೂ, ಯಾವತ್ತೂ ಹೇಳಿಲ್ಲ. ನಾನು ಜನಪರ, ಜನಪರ ಹೇಳಿಕೆ ಕೊಟ್ಟಿದೀನಿ ಅಷ್ಟೇ. ನಾನು ಯಾರ ಮುಲಾಜಿನಲ್ಲೂ ಇಲ್ಲ. ಸಿದ್ದರಾಮಯ್ಯ, ಜೆ ಎಚ್ ಪಟೇಲ್, ವೀರೇಂದ್ರ ಪಾಟೀಲರೇ ನನ್ನ ಹೊಗಳಿದ್ದಾರೆ ಎಂದರು. 

ಸ್ವಾರ್ಥಕ್ಕಾಗಿ ನಾನು ರಾಜಕಾರಣ ಮಾಡಿದವನಲ್ಲ. ಮೋದಿಯವರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯಲಿಲ್ಲ ಅಂದರೆ ನಾನು ಟೀಕೆ ಮಾಡುತ್ತೇನೆ.  ಯಾರೂ ಇಲ್ಲದಿದ್ರೂ ನಾನು ಒಂಟಿ ಸಲಗನೇ. ಅಟಲ್ ಬಿಹಾರಿ ವಾಜಪೇಯಿಯವರು ಇದನ್ನೇ ಹೇಳಿದ್ದಾರೆ. ನಿನ್ನ ಜತೆ ಯಾರೂ ಇಲ್ಲ ಅಂದರೆ, ನೀನೊಬ್ಬನೇ ನಡಿ ಅಂತ ವಾಜಪೇಯಿ ಹೇಳಿದ್ದಾರೆ

ಕ್ರಾಂತಿಯಾಗಲಿದೆಸಿಎಂ ಔತಣಕೂಟಕ್ಕೆ ಶಾಸಕರ ಗೈರು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಔತಣಕೂಟಕ್ಕೆ 41 ಮಂದಿ ಶಾಸಕರು ಹೋಗಿಲ್ಲ. ಕೆಲವರು ನಾಮಕಾವಸ್ತೆಗೆ ಮಾತ್ರ ಹೋಗಿದ್ದರು. ಕ್ರಾಂತಿಯನ್ನ ಯಾರೂ ತಡೆಯಲು ಆಗಲ್ಲ. ಆದರೆ,  ಒಂದೇ ಬಾರಿಗೆ ಸ್ಫೋಟವಾಗಲ್ಲ. ನಿಧಾನವಾಗಿ‌ಹೋಗಿ ಸ್ಫೋಟವಾಗುತ್ತೆ. ನಾನು ನಾನೇ ಸಿಎಂ ಆಗುತ್ತೇನೆ ಎಂದು  ಹೇಳಿಲ್ಲ. ಉತ್ತರ ಕರ್ನಾಟಕದವರು ಆಗುತ್ತಾರೆಂದು ಹೇಳಿದ್ದೇನೆ. ಕ್ರಾಂತಿ ಆದಮೇಲೆ ಶಾಂತಿಯಾಗಲಿದೆ. ನೀವು ಪಾರದರ್ಶಕವಾಗಿ ರಾಜ್ಯದ ವಿಚಾರ ತೆರೆದಿಡಿ. ಆಗಲೇ ಕ್ರಾಂತಿಯಾಗುತ್ತದೆ ಎಂದರು

ಪತ್ರದಿಂದ ಏನು ಆಗಲ್ಲ

ನಾಳೆ ಲಿಂಗಾಯತ ಮಠಾಧೀಶರ ಸಭೆ ವಿಚಾರ ಕುರಿತು ಮಾತನಾಡಿದ ಅವರು, ಎಲ್ಲರಿಗೂ ಮೀಸಲಾತಿ ಕೊಡಲಿ. ಮಠಾಧೀಶರು ಕರೆದಿರುವ ಸಭೆ ಒಳ್ಳೆಯದೇ. ಇಡೀ ವೀರಶೈವ, ಲಿಂಗಾಯತರಿಗೆ ಮೀಸಲಾತಿ ಕೊಡಲಿ. ನಮ್ಮಂತವರಿಗೆ ಅಲ್ಲ,ಬಡವರಿಗೆ ಮೀಸಲಾತಿ ಕೊಡಲಿ ಎಂದು ಒತ್ತಾಯಿಸಿದರು.

ಇದನ್ನು ಓದಿ: ವಿವಾದಾತ್ಮಕ ಹೇಳಿಕೆ: ಶಾಸಕ ಯತ್ನಾಳ್​ ವಿರುದ್ಧ ಶೋಕಾಸ್​ ನೋಟಿಸ್​ ಜಾರಿ ಮಾಡಿದ ಬಿಜೆಪಿ ಹೈ ಕಮಾಂಡ್​ಪಂಚಮಸಾಲಿ ಹೋರಾಟ ವಿಚಾರದಲ್ಲಿ ಸಿಎಂ ಕೇವಲ ಪತ್ರ ಅಷ್ಟೇ ಬರೆದಿದ್ದಾರೆ. ಪತ್ರವೇನು ಎಷ್ಟು ಬೇಕಾದರೂ ಬರೆಯಬಹುದು. ಪತ್ರಕ್ಕೆ ಜೀವ ಇರಬೇಕಲ್ಲ. ಹಿಂದುಳಿದ ಆಯೋಗ ವರದಿ ಕೊಡಬೇಕಲ್ಲವೇ. ಸಿಎಂ ಶಾಸಕರಿಗೆ ಎಷ್ಟು ಅನುದಾನದ ಪತ್ರ ಬರೆದಿಲ್ಲ. ಜಮೀರ್,ಡಿಕೆಶಿ ಇಷ್ಟು ಅಂತ ಪತ್ರ ಕೊಟ್ಟಿಲ್ವೇ. ನಮಗೇಕೆ ಅನುದಾನವನ್ನ ಸಿಎಂ ಕೊಡಲಿಲ್ಲ ಎಂದು ಇದೇ ವೇಳೆ ಆಪಾದಿಸಿದರು.

ನನ್ನ ಮಾತಿಗೆ ಬೇಡಿಕೆ ಹೆಚ್ಚು 

ನನಗೆ ಅರುಣ್ ಸಿಂಗ್ ನೊಟೀಸ್ ಕೊಟ್ಟಿರುವ ಕ್ರಮವನ್ನು ಸ್ವಾಗತ ಮಾಡುತ್ತೇನೆ.  ಅದಕ್ಕೆ ಬೇಕಾದ ಉತ್ತರವನ್ನೂ ನಾನು ಕೊಡುತ್ತೇನೆ. ನನಗೆ ನೊಟೀಸ್ ಕೊಡುವುದಕ್ಕೆ ಬೇಡಿಕೆ ಇತ್ತು. ನನ್ನನ್ನ ಮೂರುಬಾರಿ ಉಚ್ಛಾಟನೆ ಮಾಡಿದ್ದಾರೆ. ನಾನು ಯಾವತ್ತೂ ಹೆದರಿದವನಲ್ಲ. ಪಕ್ಷೇತರನಾಗಿ ನಾನು ಪರಿಷತ್ ಗೆ ಬಂದಿದ್ದೆ. ನನ್ನನ್ನ ಅಮಿತ್ ಶಾ ಅವರೇ ಕರೆದು ಅವಕಾಶ ಕೊಟ್ಟರು. ಅವರ ಸೂಚನೆ ಮೇರೆಗೆ ನಾನು ಬಿಜೆಪಿಗೆ ಸೇರಿದ್ದು. ಯತ್ನಾಳ್ ಪಕ್ಷಕ್ಕೆ ಲಾಭ ಅಂತಾನೇ ತೆಗೆದುಕೊಂಡಿದ್ದು ಎಂದರು.
Published by: Seema R
First published: February 12, 2021, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories