ಪ್ರವಾಹ ಪರಿಹಾರ ಕುರಿತ ತೇಜಸ್ವಿ ಸೂರ್ಯ ಹೇಳಿಕೆಗೆ ಬಸನಗೌಡ ಪಾಟೀಲ ಯತ್ನಾಳ ಗರಂ

ಪರಿಹಾರಕ್ಕೆ ಕೇಂದ್ರದ ಹಣದ ನೆರವಿನ ಅಗತ್ಯವಿಲ್ಲ ಎಂಬ ಅವರ ಹೇಳಿಕೆಯನ್ನು ತೇಜಸ್ವಿ ಹಿಂಪಡೆಯಬೇಕು. ಈ ರೀತಿಯಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದರೆ ಉತ್ತರ ಕರ್ನಾಟಕದ ಮಂದಿ ಕಣ್ಣು ಮಚ್ಚಿಕೊಂಡು ಕೂರುವುದಿಲ್ಲ. ಕೇಂದ್ರದಿಂದ ನಾವೇನು ಭಿಕ್ಷೇ ಕೇಳುತ್ತಿಲ್ಲ.  ಎಲ್ಲೋ ಕುಳಿತು ಈ ರೀತಿಯ ಹೇಳಿಕೆ ನೀಡುವ ಮೊದಲು ಇಲ್ಲಿಗೆ ಬಂದು ಪರಿಸ್ಥಿತಿ ನೋಡಲಿ

Seema.R | news18-kannada
Updated:September 28, 2019, 4:54 PM IST
ಪ್ರವಾಹ ಪರಿಹಾರ ಕುರಿತ ತೇಜಸ್ವಿ ಸೂರ್ಯ ಹೇಳಿಕೆಗೆ ಬಸನಗೌಡ ಪಾಟೀಲ ಯತ್ನಾಳ ಗರಂ
ತೇಜಸ್ವಿ ಸೂರ್ಯ-ಬಸನಗೌಡ ಪಾಟೀಲ ಯತ್ನಾಳ್​​
  • Share this:
ವಿಜಯಪುರ (ಸೆ.28): ಪ್ರವಾಹ ಪರಿಹಾರಕ್ಕೆ ಕೇಂದ್ರ ಸರ್ಕಾರದ ಹಣಕಾಸಿನ ನೆರವಿನ ಅವಶ್ಯಕತೆಯಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. 

ಉತ್ತರಕ ಕರ್ನಾಟಕದ ಜನರು ಭೀಕರ ಪ್ರವಾಹದಿಂದ ಕಣ್ಣೀರು ಹಾಕುತ್ತಿದ್ದಾರೆ. ಪ್ರವಾಹ ಕಳೆದು ಎರಡು ತಿಂಗಳಾದರೂ ಕೂಡ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಅವರ ನೆರವಿಗೆ ಆಗಮಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಇಂತಹ ಸಮಯದಲ್ಲಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕೆ ಕೇಂದ್ರದ ಹಣದ ನೆರವಿನ ಅಗತ್ಯವಿಲ್ಲ ಎಂಬ ಅವರ ಹೇಳಿಕೆಯನ್ನು ತೇಜಸ್ವಿ ಹಿಂಪಡೆಯಬೇಕು. ಈ ರೀತಿಯಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದರೆ ಉತ್ತರ ಕರ್ನಾಟಕದ ಮಂದಿ ಕಣ್ಣು ಮಚ್ಚಿಕೊಂಡು ಕೂರುವುದಿಲ್ಲ. ಕೇಂದ್ರದಿಂದ ನಾವೇನು ಭಿಕ್ಷೇ ಕೇಳುತ್ತಿಲ್ಲ.  ಎಲ್ಲೋ ಕುಳಿತು ಈ ರೀತಿಯ ಹೇಳಿಕೆ ನೀಡುವ ಮೊದಲು ಇಲ್ಲಿಗೆ ಬಂದು ಪರಿಸ್ಥಿತಿ ನೋಡಲಿ ಎಂದು ಸವಾಲು ಹಾಕಿದರು

ಇದನ್ನು ಓದಿ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಹೊನ್ನಾಂಬಿಕೆ ದೇವಿಗೆ ಸಿಎಂ ವಿಶೇಷ ಪೂಜೆ; ದೂತರಾಯನ ಭವಿಷ್ಯ ಕೇಳಿದ ಬಿಎಸ್​ವೈ

 

ಉತ್ತರ ಕರ್ನಾಟಕದ ಬಗ್ಗೆ ಕೀಳು ಮಟ್ಟದ ಮಾತು ಕೇಳಿದರೆ ಜನಪ್ರತಿನಿಧಿಗಳು ಸುಮ್ಮನಿರಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ಉತ್ತರ ಕರ್ನಾಟಕದ ಪ್ರವಾಹ ಪರಿಹಾರಕ್ಕೆ ತಕ್ಷಣಕ್ಕೆ ಕೇಂದ್ರ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಸಿಎಂ ಎಲ್ಲ ಸಂಸದರು, ಸಚಿವರ ನಿಯೋಗವನ್ನು ಪ್ರಧಾನಿ ಮೋದಿ ಹತ್ತಿರ ನಿಯೋಗ ತೆಗೆದುಕೊಂಡು ತೆಗೆದುಕೊಂಡು ಹೋಗಿ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಇದರಲ್ಲಿ ರಾಯಕೀಯ ಬೇಡ ಎಂದು ಸಿಎಂಗೆ ಮನವಿ ಮಾಡಿದರು.

First published: September 28, 2019, 4:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading