Rahul Gandhi ಅಫೀಮ್ ನಲ್ಲಿರ್ತಾರೆ, HDK ರಹಸ್ಯ ನನ್ನ ಬಳಿಯಲ್ಲಿದೆ: ಶಾಸಕ Yatnal

ರಾಹುಲ್ ಗಾಂಧಿ ಒಬ್ಬ ಹುಚ್ಚ, ಯಾವಾಗಲೂ ಅಫೀಮ್ ನಲ್ಲಿರುತ್ತಾರೆ ಎಂದಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ರಹಸ್ಯ ನನ್ನ ಬಳಿಯಲ್ಲಿದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ(Siddaramaiah)ನವರ ಬಗ್ಗೆ ನಮಗೆಲ್ಲ ಗೊತ್ತಿದೆ

ಬಸನಗೌಡ ಪಾಟೀಲ್ ಯತ್ನಾಳ

ಬಸನಗೌಡ ಪಾಟೀಲ್ ಯತ್ನಾಳ

  • Share this:
ವಿಜಯಪುರ: ಸಿಂದಗಿ ಉಪಚುನಾವಣಾ (Sindagi By Election) ಕಣ ರಂಗೇರುತ್ತಿದ್ದು, ಏಟು-ಏದಿರೇಟು ಮುಂದುವರಿದಿದೆ. ಇಂದು ಬೆಳಗ್ಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೈ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basangouda Patil Yatnal) ಮತ್ತೊಂದು ಹೇಳಿಕೆ ಮೂಲಕ ವಿವಾದವನ್ನು ಎಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಹುಚ್ಚ, ಯಾವಾಗಲೂ ಅಫೀಮ್ ನಲ್ಲಿರುತ್ತಾರೆ ಎಂದಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ರಹಸ್ಯ ನನ್ನ ಬಳಿಯಲ್ಲಿದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ(Siddaramaiah)ನವರ ಬಗ್ಗೆ ನಮಗೆಲ್ಲ ಗೊತ್ತಿದೆ. ಆ ಬಗ್ಗೆ ಮಾತನಾಡೋದು ಬೇಡ. ಮಾತನಾಡಿದರೆ ಬೇರೆ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಬೊಮ್ಮಾಯಿ ಬಂದ್ಮೇಲೆ ಧೈರ್ಯ ಬಂದಿದೆ

ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮುಖ್ಯಮಂತ್ರಿಗಳಾದ ಮೇಲೆ ನನಗೆ ಒಂದು ಧೈರ್ಯ ಬಂದಿದೆ. ಮುಖ್ಯಮಂತ್ರಿಗಳ ಕೈ ಹಿಡಿದು ಕೆಲಸ ಮಾಡಿಸಿಕೊಳ್ಳುವ ಧೈರ್ಯ ಬಂದಿದೆ. ಬೊಮ್ಮಾಯಿ ಅವರೇ 18 ತಿಂಗಳು ಸಿಎಂ ಆಗಿ ಮುಂದುವರಿಯಬೇಕು. ಬೊಮ್ಮಾಯಿ ಅವರ ನೇತೃತ್ವದಲ್ಲಿ ಹೋಗುತ್ತೇವೆ ಎಂದರು. ಇದೇ ವೇಳೆ ವೇದಿಕೆಯ ಮೇಲಿದ್ದ ಸಚಿವ ವಿ.ಸೋಮಣ್ಣ ಅವರನ್ನು ಶಾಸಕ ಯತ್ನಾಳ್ ಹೊಗಳಿದರು. ವಿ.ಸೋಮಣ್ಣ (Minister V Somanna) ಕಾಲಿಟ್ಟ ಕಡೆ ಎಲ್ಲ ಗೆಲುವು ಎಂದರು. ಇನ್ನು ಶಾಸಕ ಯತ್ನಾಳ್ ವೇದಿಕೆಗೆ ಆಗಮಿಸುತ್ತಿದ್ದಂತೆ ಜನರು ಹುಲಿ ಹುಲಿ ಎಂದು ಕೂಗಿದರು.

ಇದನ್ನೂ ಓದಿ: Rahul Gandhi ಡ್ರಗ್​ ಪೆಡ್ಲರ್​ ಎಂಬ ಹೇಳಿಕೆ: ಬಿಜೆಪಿ ಅಧ್ಯಕ್ಷ ಕಟೀಲ್​ ಒಬ್ಬ ಅವಿವೇಕಿ ಎಂದ ಗುಂಡೂರಾವ್​

ನಾಳೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಬ್ಬರದ ಪ್ರಚಾರ

ನಾಳೆ ಮೂರು ಪಕ್ಷಗಳು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳು ಅಬ್ಬರದ  ಪ್ರಚಾರ ನಡೆಸಲಿವೆ.  ಸಿಂದಗಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಆಗಮಿಸಲಿದ್ದು, ಎರಡು ದಿನ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಮೊರಟಗಿ ಗ್ರಾಮದಲ್ಲಿ ಆಯೋಜಿಸಿರುವ ಬಹಿರಂಗ ಪ್ರಚಾರದ ಸಭೆಯಲ್ಲಿ ಯಡಿಯೂರಪ್ಪನವರು ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಗೋಲಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿ ಗ್ರಾಮಗಳ ಕಾರ್ಯಕರ್ತರ  ಸಾರ್ವಜನಿಕರ ಸಭೆ ನಡೆಸಲಿದ್ದಾರೆ. ಯಡಿಯೂರಪ್ಪನವರಿಗೆ ಸಚಿವರು, ಜಿಲ್ಲಾ ಶಾಸಕರು ಬಿಎಸ್ವೈಗೆ ಸಾಥ್‌ ನೀಡಲಿದ್ದಾರೆ.

ಜೆಡಿಎಸ್, ಕಾಂಗ್ರೆಸ್ ಪ್ರಚಾರ

ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮಾಜಿ‌ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಬುಧವಾರ ಬೆಳಗ್ಗೆ 11-30 ಕ್ಕೆ ಬಳಗಾನೂರು ಗ್ರಾಮದಲ್ಲಿ ಕುಮಾರಸ್ವಾಮಿ ಅವರು ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಮದ್ಯಾಹ್ನ 4 ಗಂಟೆಗೆ ಚಾಂದಕವಟೆ ಗ್ರಾಮದಲ್ಲಿ ಸಾರ್ವಜನಿಕ ಸಭೆಯ ನಂತರ ಸಾಯಂಕಾಲ 6 ಕ್ಕೆ ಆಲಮೇಲ ಪಟ್ಟಣದಲ್ಲಿ  ಬಹಿರಂಗ ಸಭೆ  ನಡೆಸಲಿದ್ದಾರೆ. ಮಾಜಿ‌ ಪ್ರಧಾನಿ ದೇವೇಗೌಡರೂ (HD Devegowda) ಸಹ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಸ್ಥಳಿಯ ಶಾಸಕರಾದ  ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್ ರಿಂದ ಮತಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ:  ಜಮೀರ್ ಗೆ ರಾಜಕೀಯ ನೆಲೆ ಕಲ್ಪಿಸಿ, ಮುಖ್ಯವಾಹಿನಿಗೆ ತಂದವರು HDK: ಸೈಯದ್ ಅಕ್ರಂ

ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?

ರಾಹುಲ್ ಗಾಂಧಿ(Rahul Gandhi) ಒಬ್ಬ ಡ್ರಗ್ ಅಡಿಕ್ಟ್(Drug Addict), ಡ್ರಗ್  ಪೆಡ್ಲರ್(Drug Peddler) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(BJP State President Nalin Kumar Kateel) ವಿವಾದಾತ್ಮಕ ಹೇಳಿಕೆ(Controversial Statement) ನೀಡಿದ್ದಾರೆ. ಹುಬ್ಬಳ್ಳಿ(Hubli)ಯಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತೆ ಸಭೆ(Pre-Poll Election preparation meeting)ಯಲ್ಲಿ ಮಾತನಾಡಿದ ಕಟೀಲ್, ರಾಹುಲ್ ಗಾಂಧಿ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ ಎಂದು ಆರೋಪಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ(National Congress President)ರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿದ್ದರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋದ್ರಾ..? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ರಾ..?ಇಂಥವರು ನಮ್ಮ ಮೋದಿ ಬಗ್ಗೆ ಟೀಕಿಸ್ತಾರೆ ಎಂದು ಕಿಡಿಕಾರಿದರು.
Published by:Mahmadrafik K
First published: