ನಿರಾಶ್ರಿತರಿಗೆ 5 ಸಾವಿರ ಮನೆ ನಿರ್ಮಿಸಿಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಚಿಂತನೆ

ಒಂದು ಮನೆ ನಿರ್ಮಾಣಕ್ಕೆ 30 ಸಾವಿರ ರೂ. ವೆಚ್ಚ ಆಗಲಿದೆ.  ಸ್ನೇಹಿತರ ಜೊತೆ ಸೇರಿ 5 ಸಾವಿರ ಮನೆ ನಿರ್ಮಾಣ ಮಾಡುತ್ತೇನೆ. ಈ ಹಿನ್ನೆಲೆ 15 ಕೋಟಿ ರೂ. ಸಂಗ್ರಹಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

Latha CG | news18
Updated:August 12, 2019, 12:27 PM IST
ನಿರಾಶ್ರಿತರಿಗೆ 5 ಸಾವಿರ ಮನೆ ನಿರ್ಮಿಸಿಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಚಿಂತನೆ
ಬಾಲಚಂದ್ರ ಜಾರಕಿಹೊಳಿ
  • News18
  • Last Updated: August 12, 2019, 12:27 PM IST
  • Share this:
ಬೆಳಗಾವಿ,(ಆ.12): ಕೃಷ್ಣಾ ನದಿ ಪ್ರವಾಹಕ್ಕೆ ಅತಿ ಹೆಚ್ಚು ನಲುಗಿದ ಜಿಲ್ಲೆ ಎಂದರೆ ಬೆಳಗಾವಿ. ಜಿಲ್ಲೆಯ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದು, ಜನರ ಬದುಕು ಬೀದಿಗೆ ಬಿದ್ದಿದೆ.  ನೆರೆ ಸಂತ್ರಸ್ತರ ಪಾಡು ಶೋಚನೀಯ ಸ್ಥಿತಿ ತಲುಪಿದೆ. ಮನೆ-ಮಠಗಳು ಪ್ರವಾಹದಲ್ಲಿ ಕೊಚ್ಚಿಹೋಗುವುದರ ಜೊತೆಗೆ ಜನರ ಬದುಕೂ ಕೊಚ್ಚಿಹೋಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 25 ಗ್ರಾಮಗಳಲ್ಲಿ ಮನೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ನೆರೆ ಸಂತ್ರಸ್ತರ ನೆರವಿಗೆ ನಿಂತ ಶಾಸಕ ಬಾಲಚಂದ್ರ ಜಾರಕಿಹೊಳಿ 5 ಸಾವಿರ ಮನೆ ನಿರ್ಮಾಣ ಮಾಡಿಕೊಡಲು ಮುಂದಾಗಿದ್ದಾರೆ.

ನ್ಯೂಸ್​18 ಕನ್ನಡದ ಜೊತೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿಯಲ್ಲಿ ಸುಮಾರು 25 ಹಳ್ಳಿಗಳು ಮುಳುಗಡೆಯಾಗಿ ಮನೆಗಳು ಕೊಚ್ಚಿಹೋಗಿವೆ. ಸಂತ್ರಸ್ತರಿಗೆ 5 ಸಾವಿರ ಮನೆ ನಿರ್ಮಿಸಿಕೊಡಲು ಚಿಂತನೆ ನಡೆಸುತ್ತಿದ್ದೇನೆ ಎಂದರು.

ಘಟಪ್ರಭಾ ಜಲಪ್ರಳಯಕ್ಕೆ ಗೋಕಾಕ್​​ ನಗರಕ್ಕೆ​ ತೀವ್ರ ಹಾನಿಯಾಗಿದೆ. ತಾತ್ಕಾಲಿಕ ಶೆಡ್​ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದೇವೆ. ಒಂದು ಮನೆ ನಿರ್ಮಾಣಕ್ಕೆ 30 ಸಾವಿರ ರೂ. ವೆಚ್ಚ ಆಗಲಿದೆ.  ಸ್ನೇಹಿತರ ಜೊತೆ ಸೇರಿ 5 ಸಾವಿರ ಮನೆ ನಿರ್ಮಾಣ ಮಾಡುತ್ತೇನೆ. ಈ ಹಿನ್ನೆಲೆ 15 ಕೋಟಿ ರೂ. ಸಂಗ್ರಹಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಕಳೆದ ಬಾರಿಯೂ ಯಡಿಯೂರಪ್ಪ ಸಿಎಂ ಆಗಿದ್ದಾಗ ಉ.ಕ.ದಲ್ಲಿ ಪ್ರವಾಹ ಆಗಿತ್ತು; ಕುಮಾರಸ್ವಾಮಿ

ನಿರಾಶ್ರಿತರಿಗೆ ಶಾಲಾ-ಕಾಲೇಜಿನಲ್ಲಿ ವ್ಯವಸ್ಥೆ

ಸದ್ಯ ನೂರಾರು ಜನ ನಿರಾಶ್ರಿತರಿಗೆ ಶಾಲಾ- ಕಾಲೇಜಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮುಂದೆ ಶಾಲಾ ಕಾಲೇಜು ಆರಂಭವಾದರೆ ಸಮಸ್ಯೆ ಹೆಚ್ಚಾಗಲಿದೆ. ಈ ಬಗ್ಗೆ ಶಿಕ್ಷಣ ‌ಇಲಾಖೆ ಅಧಿಕಾರಿಗಳ‌ ಜತೆಗೆ ಮಾತುಕತೆ ನಡೆಸಿದ್ದೇನೆ. ಭಾರೀ ಪ್ರವಾಹಕ್ಕೆ ಶಾಲಾ- ಕಾಲೇಜುಗಳು ಸಹ ಕುಸಿಯುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಅರಬಾವಿ ಕ್ಷೇತ್ರದಲ್ಲಿ ಗೋಡೆ ಕುಸಿದು ಓರ್ವ ಯುವತಿ ಮೃತಪಟ್ಟಿದ್ದಾಳೆ.ಉಳಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ನಿರಾಶ್ರಿತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ನನ್ನ ಮನೆಯೂ ಜಲಾವೃತ

ಭಾರೀ ಪ್ರವಾಹಕ್ಕೆ ನನ್ನ ಮನೆ ಸಹ ಕಳೆದ ಮಂಗಳವಾರದಿಂದ ಜಲಾವೃತ ಗೊಂಡಿದೆ. ಸದ್ಯ ನಾನು ಗೋಕಾಕ್ ನಗರದ ಕಚೇರಿಯಲ್ಲಿ ಇದ್ದೇನೆ. ಮನೆ ಬಹುತೇಕ ಮುಳುಗಡೆ ಆಗಿದೆ. ಇಂದು ನೀರು ಕಡಿಮೆಯಾಗಿದ್ದು, ಸ್ವಚ್ಛತೆ ಮಾಡುತ್ತೇವೆ. ಮನೆಯಲ್ಲಿ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಆದರೆ ದೇವರ ಪೋಟೋಕ್ಕೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ದೇವರು ನಮ್ಮ ಜತೆಗೆ ಇದ್ದಾನೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.

First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ