• Home
  • »
  • News
  • »
  • state
  • »
  • ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ; ಪ್ರಕರಣದ ತನಿಖೆ ಚುರುಕು!

ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ; ಪ್ರಕರಣದ ತನಿಖೆ ಚುರುಕು!

ಆರೋಪಿ ಯುವರಾಜ್

ಆರೋಪಿ ಯುವರಾಜ್

ಕೇವಲ ಪೊಲೀಸರು ಅಲ್ಲದೆ, ಜೈಲಾಧಿಕಾರಿಗಳು ಸಹ ಯುವರಾಜ್ ಸ್ವಾಮಿಯನ್ನು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ವಾರಕ್ಕೊಮ್ಮೆ ಕೊಡುವ ಫೋನ್ ದುರ್ಬಳಕೆ ಮಾಡಲಾಗಿದೆಯೇ ಎಂದು ವಿಚಾರಣೆ ಮಾಡಿದ್ದು, ಆರೋಪ ತಳ್ಳಿ ಹಾಕಿದ್ದಾನೆ.

  • Share this:

ಬೆಂಗಳೂರು: ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ‌ ಕೇಸ್ ತನಿಖೆ ಚುರುಕುಗೊಳಿಸಲಾಗಿದೆ. ಈ ನಡುವೆ ಅರವಿಂದ್ ಬೆಲ್ಲದ್ ಹೇಳಿಕೆ ಪಡೆದ ಬೆನ್ನಲ್ಲೇ ಅಧಿಕಾರಿಗಳು ಜೈಲಿನಲ್ಲಿ ಯುವರಾಜ್ ಸ್ವಾಮಿಯನ್ನು ವಿಚಾರಣೆ ಮಾಡಿದ್ದಾರೆ. ಶಾಸಕ ಅರವಿಂದ್ ಬೆಲ್ಲದ್ ಮಾಡಿರುವ ಫೋನ್ ಕದ್ದಾಲಿಕೆ‌ ಕೇಸ್ ಅನ್ನ ಪೊಲೀಸ್ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ನಡುವೆ ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಬೆಲ್ಲದ್ ಬಳಿ ಸಂಪೂರ್ಣವಾಗಿ ಹೇಳಿಕೆ ಪಡೆಯಲಾಗಿದೆ. ಈಗಿರುವಾಗಲೇ ಸೆಂಟ್ರಲ್ ಜೈಲಿಗೆ ತನಿಖಾಧಿಕಾರಿಗಳು ತೆರಳಿ ಬರೋಬ್ಬರಿ ಒಂದು ಗಂಟೆಗಳ ಕಾಲ‌ ಯುವರಾಜನನ್ನು ವಿಚಾರಣೆ ಮಾಡಿದೆ‌.


ಮಹಿಳಾ ಎಸಿಪಿ ನೇತೃತ್ವದಲ್ಲಿ ನಡೆದ ವಿಚಾರಣೆ ನಡೆದಿದೆ. ಈ ವೇಳೆ ನನಗೂ , ಈ ಕರೆಗೂ ಯಾವುದೇ ಸಂಬಂಧವಿಲ್ಲ. ನನ್ನ ಬಳಿ ಫೋನಿಲ್ಲ, ನಾನ್ಯಾರಿಗೂ ಕರೆ ಮಾಡಿಲ್ಲ, ಬೆಲ್ಲದ್ ಗೊತ್ತೇ ಇಲ್ಲ ಅಂತ ಸಾರಾಸಗಟಾಗಿ ತಳ್ಳಿಹಾಕಿದ್ದಾನೆ ಎನ್ನಲಾಗಿದೆ. ಇನ್ನು ಅರವಿಂದ್ ಬೆಲ್ಲದ್ ಆರೋಪ ಹಾಗೂ ಅವರ ಬಗ್ಗೆ ಕೆಲ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಆಗ ನನ್ನ ಹೆಸರನ್ನ ಬಳಸಿ ಯಾರೋ ಈ ರೀತಿ ಮಾಡಿರಬಹುದು. ನಾನು ಯಾರೊಂದಿಗೂ ಮಾತಾಡಿಲ್ಲ, ನನ್ನ ಬಳಿ ಯಾವುದೇ ಫೋನಿಲ್ಲ ಸ್ವಾಮಿ  ಎಂದು ಉತ್ತರಿಸಿದ್ದಾನೆ. ಸದ್ಯ ಸ್ವಾಮಿಯ ಹೇಳಿಕೆ ದಾಖಲಿಸಿಕೊಂಡಿದ್ದು ವಿಡಿಯೋ ಸಹ ಮಾಡಿಕೊಳ್ಳಲಾಗಿದೆ.


ಸದ್ಯ ಅರವಿಂದ್ ಬೆಲ್ಲದ್ ಕೊಟ್ಟ ಆ ನಂಬರ್ ಟ್ರ್ಯಾಕ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ಕರೆ ಮಾಡಿದ ನಂಬರ್ ಸಿಡಿಆರ್ ಮಾಹಿತಿ ಪಡೆಯಲು  ಪೊಲೀಸರು ಮುಂದಾಗಿದ್ದಾರೆ. ಹೀಗೆ ಟವರ್ ಲೊಕೇಶನ್ ಮತ್ತು ನಂಬರ್ ಯಾರ ಹೆಸರಿನಲ್ಲಿದೆ ಅನ್ನೋದರ ಮಾಹಿತಿ ಕೂಡ ಸಂಗ್ರಹ ಮಾಡಲಾಗ್ತಿದೆ. ಇದಲ್ಲದೆ ಎರಡು ಆಯಾಮದಲ್ಲಿ ತನಿಖೆ ನಡೆಸ್ತಿದ್ದು, ಕರೆ ಮಾಡಿದ್ದು ಯುವರಾಜ್ ನಾ..? ಇಲ್ಲ ಆತನ ಹೆಸರಿನಲ್ಲಿ ಬೇರೆಯವರು ಕರೆ ಮಾಡಿದ್ರಾ ಎಂದು ಪರಿಶೀಲಿಸಲಾಗ್ತಿದೆ. ಒಂದು ವೇಳೆ ಯುವರಾಜ್ ನೇ ಕರೆ ಮಾಡಿದ್ದು ದೃಢಪಟ್ಟರೆ ಜೈಲು ಸಿಬ್ಬಂದಿಗೆ ಸಮಸ್ಯೆ ಎದುರಾಗಲಿದೆ. ಜೈಲಿನಲ್ಲಿದ್ದ ಯುವರಾಜ್ ಗೆ ಮೊಬೈಲ್ ಸಿಕ್ಕಿದ್ದು ಹೇಗೆ? ಆತನಿಗೆ ಮೊಬೈಲ್ ಕೊಟ್ಟಿದ್ದು ಯಾರು ಎಂದು ತನಿಖೆ ಮತ್ತೊಂದು ಆಯಾಮ ಪಡೆಯಲಿದೆ. ಇನ್ನು ಇದೆಲ್ಲದರ ನಡುವೆ ಬೆಲ್ಲದ್ ಬಳಿ ಮತ್ತೆ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಶೀಘ್ರದಲ್ಲೇ ತನಿಖಾ ರಿಪೋರ್ಟ್ ನೀಡಲು ಸೂಚಿಸಿದೆ.


ಇದನ್ನು ಓದಿ: ದೆಹಲಿಯಲ್ಲಿ ಮೂರು ದಿನ ಕಾದು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಡಿ.ಕೆ. ಶಿವಕುಮಾರ್!


ಕೇವಲ ಪೊಲೀಸರು ಅಲ್ಲದೆ, ಜೈಲಾಧಿಕಾರಿಗಳು ಸಹ ಯುವರಾಜ್ ಸ್ವಾಮಿಯನ್ನು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ವಾರಕ್ಕೊಮ್ಮೆ ಕೊಡುವ ಫೋನ್ ದುರ್ಬಳಕೆ ಮಾಡಲಾಗಿದೆಯೇ ಎಂದು ವಿಚಾರಣೆ ಮಾಡಿದ್ದು, ಆರೋಪ ತಳ್ಳಿ ಹಾಕಿದ್ದಾನೆ. ಜೊತೆಗೆ ತನ್ನ ಬಳಿ ಯಾವುದೇ ಫೋನ್ ಇಲ್ಲ, ಬೇಕಿದ್ದರೆ ಪರಿಶೀಲಿಸಿ ಎಂದಿದ್ದಾನೆ. ಈ ನಡುವೆ ಯುವರಾಜ್ ಬ್ಯಾರಕ್ ಅನ್ನ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಯಾವುದೇ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ. ಸದ್ಯ ಒಂದು ಬಾರಿ ವಿಚಾರಣೆ ನಡೆದಿದ್ದು, ಮತ್ತೆ ಅವಶ್ಯಕತೆ ಇದ್ದರೆ ವಿಚಾರಣೆ ಮಾಡೋದಾಗಿ ತಿಳಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು