• Home
  • »
  • News
  • »
  • state
  • »
  • Appachu Ranjan: ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ! ಮಾಜಿ ಸಿಎಂ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ

Appachu Ranjan: ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ! ಮಾಜಿ ಸಿಎಂ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ

ಅಪ್ಪಚ್ಚು ರಂಜನ್-ಸಿದ್ದರಾಮಯ್ಯ ಸಂಗ್ರಹ ಚಿತ್ರ

ಅಪ್ಪಚ್ಚು ರಂಜನ್-ಸಿದ್ದರಾಮಯ್ಯ ಸಂಗ್ರಹ ಚಿತ್ರ

"ಆರ್‌ಎಸ್‌ಎಸ್‌ ಅನ್ನೂ ನಿಷೇಧಿಸಬೇಕು" ಎಂದಿರುವ ಮಾಜಿ ಸಿಎಂ ಸಿದ್ಗರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. "ಸಿದ್ದರಾಮಯ್ಯರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ" ಅಂತ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದರೆ, "ಸಿದ್ದರಾಮಯ್ಯ ಮನಸ್ಥಿತಿ ಬದಲಾಯಿಸಿಕೊಳ್ಳಲಿ" ಅಂತ ಸಿಟಿ ರವಿ ಸಲಹೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಮಡಿಕೇರಿ, ಕೊಡಗು: ಪಿಎಫ್‌ಐ ಬ್ಯಾನ್ (PFI Ban) ಆದಂತೆ ಆರ್‌ಎಸ್‌ಎಸ್‌ (RSS) ಕೂಡ ಬ್ಯಾನ್ ಆಗಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದರು. ಇದೀಗ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು (BJP Leaders) ಆಕ್ರೋಶ ಹೊರಹಾಕಿದ್ದಾರೆ. “ಸಿದ್ದರಾಮಯ್ಯಗೆ ತಲೆಕೆಟ್ಟಿದೆ ಎನಿಸುತ್ತೆ, ಮೊದಲು ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು” ಅಂತ ಮಡಿಕೇರಿ ಶಾಸಕ (Madikeri MLA) ಅಪ್ಪಚ್ಚು ರಂಜನ್ (Appachu Ranjan) ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟೀಯ ಚಿಂತನೆಯಲ್ಲಿ ತೋಡಗಿರೊದು ಆರ್‌ಎಸ್‌ಎಸ್‌ ಸಂಘಟನೆ. ನಾವು ಕೂಡ RSS ನಿಂದ ಬಂದವರು. RSS ಕಲಿಸೋದು ದೇಶ ಪ್ರಥಮ ಎನ್ನುವ ತತ್ವವನ್ನು ಹಾಗೂ ದೇಶ ಭಕ್ತಿಯನ್ನ. ದೇಶವನ್ನ ಒಡೆಯುವ ಕೆಲಸವನ್ನ ಆರ್.ಎಸ್.ಎಸ್. ಎಂದಿಗೂ ಮಾಡೋದಿಲ್ಲ, ಆರ್.ಎಸ್.ಎಸ್. ಯಾವುದೇ ಬಾಂಬ್ (Bomb) ಹಾಕಲು ಕೂಡ ಕಲಿಸುವುದಿಲ್ಲ ಅಂತ ಅವರು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ (Election) ಗೆಲ್ಲಲು ಸಿದ್ದರಾಮಯ್ಯ  ಹೀಗೆ ಮಾತನಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯರ ಮಾತನ್ನ ಯಾರು ಕೂಡ ಒಪ್ಪೋದಿಲ್ಲ ಅಂತ ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಹೇಳಿಕೆ ನೀಡಿದ್ದಾರೆ.


“ಕೇಸ್‌ಗಳನ್ನು ಸಿದ್ದರಾಮಯ್ಯ ವಿತ್‌ ಡ್ರಾ ಮಾಡಿದ್ರು”


ಮುಂದುವರೆದು ಮಾತನಾಡಿದ ಅಪ್ಪಚ್ಚು ರಂಜನ್, PFI ಸಂಘಟನೆಯನ್ನ ಏಕಾಏಕಿಯಾಗಿ ಬ್ಯಾನ್ ಮಾಡಲಿಲ್ಲ. ಅವರ ಎಲ್ಲಾ ದಾಖಲೆ ಸಂಗ್ರಹಿಸಿ ಬ್ಯಾನ್ ಮಾಡಲಾಗಿದೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದೆಲ್ಲದರ ಹಿಂದೆ ಪಿಎಫ್ಐ ನೇರ ಹೊಣೆ ಇದೆ. 175 ಪ್ರಕರಣದಲ್ಲಿ 2000 ಕ್ಕೂ ಹೆಚ್ಚು ಜನರ ಕೇಸ್ ಗಳನ್ನ ಸಿದ್ದರಾಮಯ್ಯ ವಿಥ್ ಡ್ರಾ ಮಾಡಿದ್ರು ಅಂತ ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ.
“ಭಯೋತ್ಪಾದನೆಗೆ ಸಿದ್ದರಾಮಯ್ಯ ಕುಮ್ಮಕ್ಕು”


ಎಲ್ಲ‌ ದಾಖಲೆಗಳ ಆಧಾರದಲ್ಲಿ ಸಂಘಟನೆಯನ್ನ ಬ್ಯಾನ್ ಮಾಡಲಾಗಿದೆ. ಕುಟ್ಟಪ್ಪ ಹತ್ಯೆಯಲ್ಲೂ ಕೂಡ ಪಿ‌ಎಫ್ಐ ಪಾತ್ರ ಹೆಚ್ಚಿತ್ತು. ನಿಜವಾದ ಅಪರಾಧಿಗಳನ್ನ ಹಿಡಿಯುವಲ್ಲಿ ಅಂದಿನ ಸರ್ಕಾರ ಎಡವಿತ್ತು‌. ಕುಟ್ಟಪ್ಪ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ರು ಅಂತ ಹೇಳಿದ್ರು‌. ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕೂ ನೀಡುತ್ತಿರೋದೆ ಸಿದ್ದರಾಮಯ್ಯ ಅಂತ ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: PFI Ban: ಪಿಎಫ್‌ಐ ಒಂದೇ ಅಲ್ಲ, ಈ ಹಿಂದೆ ಹಲವು ಸಂಘಟನೆಗಳಿಗೆ ತಟ್ಟಿವೆ ಬ್ಯಾನ್ ಬಿಸಿ! ಕಾರಣ ಮಾತ್ರ ಅದೊಂದೇ!


ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಆಕ್ರೋಶ


ಇನ್ನು ಆರ್ ಎಸ್ ಎಸ್ ಅನ್ನು ನಿಷೇಧಿಸಲಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಶಾಸಕ ಸಿಟಿ ರವಿ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜಾರಿಗೆ ತಂದಿದ್ದ ಉಗ್ರಭಾಗ್ಯ ಯೋಜನೆಯಿಂದಾಗಿ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಸಿದ್ದರಾಮಯ್ಯನವರೇ ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಭಾರತವನ್ನು ನಾಶ ಮಾಡಿ ನೀವೂ ನಾಶವಾಗಬೇಡಿ. ಎಲ್‌ಟಿಟಿಇಯೊಂದಿಗೆ ಹಾವು ಏಣಿ ಆಟದ ಪರಿಣಾಮ ರಾಜೀವ್ ಗಾಂಧಿ ಬಲಿಯಾಗಬೇಕಾಯಿತು ಅಂತ ನೆನಪಿಸಿದ್ದಾರೆ.


ಇದನ್ನೂ ಓದಿ: SDPI ಕಚೇರಿ ಸೇರಿ 5 ಕಡೆ ದಾಳಿ; PFI ನಿಷೇಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್


“ಸಿದ್ದರಾಮಯ್ಯ ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಲಿ”


ಸುಣ್ಣ ಮತ್ತು ಬೆಣ್ಣೆ ಗುರುತಿಸದ ಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ ಅನಿಸುತ್ತೆ. ರಾಷ್ಟ್ರಭಕ್ತರು ಯಾರು? ರಾಷ್ಟ್ರದ್ರೋಹಿಗಳು ಯಾರೆಂದು ತಿಳಿಯಲಾಗದ ಸ್ಥಿತಿ ಇವರಿಗೆ ಬಂದಿದೆ ಅಂತ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರು ಮೊದಲು ಈ ಮನಸ್ಥಿತಿಯಿಂದ ಹೊರಬರಲಿ. ಇಲ್ಲವಾದಲ್ಲಿ ಕಾಂಗ್ರೆಸ್ ಗೆ ಉಳಿಗಾಲವಿಲ್ಲ. ಆರ್ ಎಸ್ ಎಸ್ ಯಾವ ವಿಧ್ವಂಸಕ ಕೃತ್ಯದಲ್ಲಿ ತೊಡಗಿದೆ ಎಂಬುದನ್ನು ಸಿದ್ದರಾಮಯ್ಯ ಹೇಳಲಿ. ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎಂದು ಹೇಗೆ ಅವರು ಹೇಳಿದರು? ಕೇವಲ ರಾಜಕೀಯ ತೆವಲಿಗೆ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

Published by:Annappa Achari
First published: