Kodagu Flood: 2018ರಲ್ಲಿ ಕೊಡಗಿಗೆ ಬಂದ ಹಣವನ್ನು ಬೇರೆ ಜಿಲ್ಲೆಗಳಿಗೆ ಬಳಸಿತೇ ಸರ್ಕಾರ? ಎಲ್ಲಿ ಹೋಯ್ತು ದುಡ್ಡು?

ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಕೊಡಗಿನ ಪುನರ್ ನಿರ್ಮಾಣಕ್ಕೆ ಕೊಡಗು ಅಭಿವೃದ್ಧಿ ಪ್ರಾಧಿಕಾರವನ್ನೇ ರಚಿಸುವುದಾಗಿ ಘೋಷಿಸಿದ್ದರು. ವಿಪರ್ಯಾಸವೆಂದರೆ ಆ ಭೀಕರ ದುರಂತದಲ್ಲಿ ಮನೆಗಳನ್ನು ಕಳೆದುಕೊಂಡ ನೂರಾರು ಕುಟುಂಬಗಳಿಗೆ ಇನ್ನೂ ಮನೆ ನಿರ್ಮಿಸಿಕೊಟ್ಟಿಲ್ಲ.

ಕೊಡಗು ಪ್ರವಾಹ

ಕೊಡಗು ಪ್ರವಾಹ

  • Share this:
ಕೊಡಗು: 2018 ಕೊಡಗು ಜಿಲ್ಲೆಯ (2018 Kodagu Flood) ಇತಿಹಾಸದಲ್ಲಿ ಮರೆಯಲಾರದ ಅತ್ಯಂತ ದುರಂತದ ವರ್ಷ. ಹಿಂದೆಂದೂ ಕಂಡು ಕೇಳರಿಯದಂತಹ ಭೀಕರ ಭೂಕುಸಿತ (landslide), ಪ್ರವಾಹ (Flood) ಕೊಡಗಿನ 36 ಗ್ರಾಮ ಪಂಚಾಯಿತಿಗಳ ನೂರಾರು ಹಳ್ಳಿಗಳನ್ನು ಅಕ್ಷರಶಃ ಕಣ್ಮರೆಯಾದವು ಎನ್ನುವ ಸ್ಥಿತಿಯನ್ನು ನಿರ್ಮಿಸಿತ್ತು. ಸಾವಿರಾರು ಜನರು ಮನೆ, ಮಠ ಆಸ್ತಿಯನ್ನು ಕಳೆದುಕೊಂಡು ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟೋಡಿ ಜೀವ ಉಳಿಸಿಕೊಂಡಿದ್ದರು. ಆ ಘನಘೋರ ದುರಂತವನ್ನು ನೋಡಿ ಮರುಗದವರಿಲ್ಲ. ಹೀಗಾಗಿಯೇ ಜಿಲ್ಲೆಯ ಜನರೊಂದಿಗೆ ನಾವಿದ್ದೇವೆ ಎಂದಿದ್ದ ದೇಶ ಜನತೆ ಸಾವಿರಾರು ಕೋಟಿ ರೂಪಾಯಿಯನ್ನು ಕೊಡಗಿನ ಅಭಿವೃದ್ಧಿಗೆ (Kodagu Development) ಹರಿಸಿದ್ದರು. ಆಗ ರಾಜ್ಯದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ನೇತೃತ್ವದ (Congress-JDS Government) ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಕೊಡಗಿನ ಪುನರ್ ನಿರ್ಮಾಣಕ್ಕೆ ಕೊಡಗು ಅಭಿವೃದ್ಧಿ ಪ್ರಾಧಿಕಾರವನ್ನೇ ರಚಿಸುವುದಾಗಿ ಘೋಷಿಸಿದ್ದರು. ವಿಪರ್ಯಾಸವೆಂದರೆ ಆ ಭೀಕರ ದುರಂತದಲ್ಲಿ ಮನೆಗಳನ್ನು ಕಳೆದುಕೊಂಡ ನೂರಾರು ಕುಟುಂಬಗಳಿಗೆ ಇನ್ನೂ ಮನೆ ನಿರ್ಮಿಸಿಕೊಟ್ಟಿಲ್ಲ.

ತಮ್ಮ ತೋಟ, ಹೊಲ ಗದ್ದೆಗಳನ್ನು ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ಧನ ಸಿಗಲಿಲ್ಲ. ಕೊನೆಗೆ ಕೊಡಗು ಅಭಿವೃದ್ಧಿ ಪ್ರಾಧಿಕಾರವೂ ಆಗಲಿಲ್ಲ. ಈ ನಡುವೆ ಈಗ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ (MLA Appachu Ranjan) ಅವರು ಕೊಡಗಿನ ಅಭಿವೃದ್ಧಿಗೆ ಬಂದ ಸಾವಿರಾರು ಕೋಟಿ ರೂಪಾಯಿ ಸಿಎಂ ಪರಿಹಾರ ನಿಧಿಗೆ ಹೋಯಿತು. ಅದೆಲ್ಲವನ್ನೂ ಕೊಡಗಿನ ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ಹೇಳಲಾಗಿತ್ತಾದರೂ, ಆ ಹಣ ಕೊಡಗಿನ ಅಭಿವೃದ್ಧಿಗೆ ಬಳಕೆಯಾಗದೆ ಬೇರೆಲ್ಲಾ ಕೆಲಸಗಳಿಗೆ ಬಳಕೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಂದು ಕೊಡಗಿಗೆ ಬಂದ ಹಣವೆಷ್ಟು?

ಸರ್ಕಾರಿ ನೌಕರರ ಸಂಘವೊಂದರಿಂದಲೇ 100 ಕೋಟಿ ರೂಪಾಯಿ ಬಂದಿತ್ತು. ಕೊಡಗಿಗಾಗಿ ಬಂದಿದ್ದ ಹಣವನ್ನು ಬೇರೆ ಎಲ್ಲಾ ಜಿಲ್ಲೆಗಳ, ಬೇರೆ ಕೆಲಸಗಳಿಗೂ ಉಪಯೋಗಿಸಿರುವ ಅನುಮಾನವಿದೆ.

MLA Appachu ranjan asks 2018 kodagu relief fund data rsk mrq
ಕೊಡಗು ಪ್ರವಾಹ


ಹೀಗಾಗಿ ವಿಧಾನಸಭೆಯ ಸಾರ್ವಜನಿಕ ಅರ್ಜಿ ಸಮಿತಿಗೆ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದು, ಒಟ್ಟು ಎಷ್ಟು ಹಣ ಬಂತು, ಎಷ್ಟು ಹಣ ಕೊಡಗಿಗಾಗಿ ವಿನಿಯೋಗವಾಯಿತು ಎಂದು ಸಭೆಯಲ್ಲಿ ಪ್ರಶ್ನಿಸಲಾಗುವುದು ಎಂದಿದ್ದಾರೆ. ಹಾಗಾದರೆ ಕೊಡಗಿಗೆ ಬಂದ ಹಣವನ್ನು ಬೇರೆ ಜಿಲ್ಲೆಗಳಿಗೆ ಬಳಸಿದ್ದಾದರೂ ಹೇಗೆ, ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ:  Kodagu Rains: ವರುಣಾರ್ಭಟ; ಕಾವೇರಿಯ ರುದ್ರ ಪ್ರತಾಪ, ಸಂಪರ್ಕ ಕಡಿತ, ಮನೆ ಕುಸಿತ , ಜನಜೀವನ ಅಸ್ತವ್ಯಸ್ತ

ಕೊಡಗು ಉಸ್ತುವಾರಿ ಕಾರ್ಯದರ್ಶಿ ಹೇಳೋದೇನು?

ಈ ಕುರಿತು 2018 ರಿಂದಲೂ ಕೊಡಗು ಉಸ್ತುವಾರಿ ಕಾರ್ಯದರ್ಶಿಯಾಗಿರುವ ವಿ. ಅನ್ಬುಕುಮಾರ್ ಅವರನ್ನು ಕೇಳಿದರೆ, ಕೊಡಗಿಗೆ ಸಾಕಷ್ಟು ಹಣ ಬಂದಿದ್ದು, ಜಿಲ್ಲಾಧಿಕಾರಿ ಅವರ ಖಾತೆಗೆ ಬಂದ ಹಣವನ್ನೆಲ್ಲಾ ಸದ್ವಿನಿಯೋಗ ಮಾಡಲಾಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಆಗುತ್ತಿವೆ. ವಸತಿ ಪುನರ್ ನಿರ್ಮಾಣದ ಕೆಲಸಗಳನ್ನು ಉತ್ತಮವಾಗಿ ಆಗಿವೆ ಎಂದಿದ್ದಾರೆ.

MLA Appachu ranjan asks 2018 kodagu relief fund data rsk mrq
ಪುನರ್ವಸತಿ ಕೇಂದ್ರ


ಆದರೆ ಕೊಡಗು ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಸಂಬಂಧಿಸಿದಂತೆ ಮತ್ತು ಕೊಡಗಿನ ಅಭಿವೃದ್ಧಿಗೆ ಬಂದ ಹಣ ಸರ್ಕಾರದಲ್ಲಿ ಎಷ್ಟು ಉಳಿದಿದೆ ಎನ್ನುವುದು ಗೊತ್ತಾಗುವುದಿಲ್ಲ. ಆದರೆ ಜಿಲ್ಲಾಧಿಕಾರಿ ಅವರ ಖಾತೆಗೆ ಬಂದಿರುವ ಹಣವನ್ನು ಬಳಸಿಕೊಂಡು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದಿದ್ದಾರೆ.

ಮತ್ತೆ ಮತ್ತೆ ಪ್ರಾಕೃತಿಕ ವಿಕೋಪಗಳು

ಒಟ್ಟಿನಲ್ಲಿ 2018 ರಲ್ಲಿ ಆದ ಅನಾಹುತದಿಂದ ಕೊಡಗು ಇಂದಿಗೂ ಹಿಂದಿನ ಸ್ಥಿತಿಗೆ ಮರುಕಳಿಸಲು ಸಾಧ್ಯವಾಗಿಲ್ಲ. ಆದರೆ ಮತ್ತೆ ಮತ್ತೆ ಪ್ರಾಕೃತಿಕ ವಿಕೋಪಗಳು ಎದುರಾಗುತ್ತಲೇ ಇವೆ.

MLA Appachu ranjan asks 2018 kodagu relief fund data rsk mrq
ಕೊಡಗು ಭೂಕುಸಿತ


ಇದನ್ನೂ ಓದಿ:  Kodagu: ರಾಜಕೀಯದ ರಾಡಿಯಾದ ಕೊಡಗಿನ ಕೊಯಿನಾಡಿನ ಕಿಂಡಿ ಅಣೆಕಟ್ಟು

ಹೀಗಿರುವಾಗ ಜಿಲ್ಲೆಯ ಅಭಿವೃದ್ಧಿಗೆ ಹಣ ವಿನಿಯೋಗವಾಗುತ್ತಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಪ್ರಶ್ನಿಸಿರುವುದು ಮತ್ತೊಂದು ರಾಜಕೀಯ ಗುದ್ದಾಟಕ್ಕೆ ಕಾರಣವಾಗುತ್ತಾ ಎನ್ನುವ ಅನುಮಾನ ದಟ್ಟವಾಗಿದೆ.
Published by:Mahmadrafik K
First published: