ಆಗಿನ ಕಾಲದಲ್ಲಿ ಅದೆಷ್ಟೋ ಮಂದಿ ಜೂಜಾಟ (Gambling) ದ ಜಾಲಕ್ಕೆ ಸಿಲುಕಿ ಹಣ (Money) , ಮನೆ (Home) ಕಳೆದುಕೊಂಡು ಕೊನೆಗೆ ಜೀವ ಬಿಡುತ್ತಿದ್ದರು. ಅಷ್ಟೇ ಅಲ್ಲದೇ ಹೆಂಡತಿ (Wife) , ಮಕ್ಕಳು (Childrens) ಜೀವನವನ್ನು ಬೀದಿಗೆ ಬರುವಂತೆ ಮಾಡುತ್ತಿದ್ದರು. ಕಾಲ ಬದಲಾಗಿದೆ, ಈಗ ಅದೇ ಜೂಜಾಟಕ್ಕೆ ಅನೇಕರು ದಾಸರಾಗುತ್ತಿದ್ದಾರೆ. ಆದರೆ, ಆಡುವ ವಿಧಾನ ಬದಲಾಗಿದೆ. ಹೌದು, ಆನ್ಲೈನ್ ಜೂಜಾಟ (Online Gambling) ಕ್ಕೆ ಸಾಕಷ್ಟು ಮಂದಿ ಅಡಿಕ್ಟ್ (Addict) ಆಗಿದ್ದಾರೆ. ಪ್ರತಿದಿನ ಡಿಫ್ರೆಂಟ್ ಡಿಫ್ರೆಂಟ್ ಹೊಸ ಹೊಸ ಆನ್ಲೈನ್ ಜೂಜಾಟದ ವೆಬ್ಸೈಟ್ಗಳು ಎಂಟ್ರಿ ಕೊಡುತ್ತಲೇ ಇದೆ. ಅದಕ್ಕೆ ಜಾಹೀರಾತು (Advertisement) ನೀಡಿ ಯುವಪೀಳಿಗೆಯನ್ನು ಅಟ್ರ್ಯಾಕ್ ಮಾಡುತ್ತಿದೆ. ಬಣ್ಣ ಬಣ್ಣದ ಮಾತಿಗೆ ಯುವಕ, ಯುವತಿಯರು ಮಾರು ಹೋಗಿದ್ದಾರೆ.
ಜೂಜಾಟಕ್ಕೆ ದಾಸರಾಗುತ್ತಿದ್ದಾರೆ ಯುವಪೀಳಿಗೆ!
ಹೌದು, ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ. ಫೋನ್ ಅನ್ಲಾಕ್ ಮಾಡಿದ್ರೆ ಸಾಕು. ಇಲ್ಲಿ ಆಟ ಆಡಿ ದುಡ್ಡು ಗೆಲ್ಲಿ, ಅಲ್ಲಿ ಇಷ್ಟು ಹಣ ಹಾಕಿ ಗೆಲ್ಲಿ ಎನ್ನುವ ಜೂಜಾಟದ ಜಾಹೀರಾತು ಕಾಣಿಸುತ್ತೆ. ಮೊದಲಿಗೆ ಒಂದು ಆಟ ಅಂತ ಶುರುಮಾಡಿ, ಕೊನೆಗೆ ಅಕೌಂಟ್ನಲ್ಲಿ ಇರೋ ಬರೋ ದುಡ್ಡೆಲ್ಲ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಸುರೇಶ್ ಕುಮಾರ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಯುವಪೀಳಿಗೆ ಹೇಗೆ ಈ ಆನ್ಲೈನ್ ಜೂಟಾಟಕ್ಕೆ ಬಲಿಯಾಗ್ತಿದೆ ಅಂತ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿತ್ತ ಸಚಿವೆಗೆ ಪತ್ರ ಬರೆದ ಮಾಜಿ ಸಚಿವ!
ಮಾಜಿ ಸಚಿವ ಸುರೇಶ್ ಕುಮಾರ್, ವಿತ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಯುವಜನತೆ ಆನ್ಲೈನ್ ಜೂಜಾಟಕ್ಕೆ ದಾಸರಾಗುತ್ತಿದ್ದರು. ಅದನ್ನು ತಡೆದು ಯುವಪೀಳಿಗೆಯನ್ನು ಉಳಿಸಿ ಎಂದು ಅವರು ಬರೆದಿದ್ದಾರೆ. ಜೊತೆಗೆ ನನ್ನ ಸ್ನೇಹಿತರು ಹಾಗೂ ಸಂಬಂಧಿಕರ ಫೋನ್ಗಳಿಗೆ ಕಳೆದ ಕೆಲವು ದಿನಗಳಿಂದ ಆನ್ಲೈನ್ ರಮ್ಮಿ ಕಡೆಯಿಂದ ಮೆಸೇಜ್ ಬರುತ್ತಲೇ ಇದೆ. ಆ ಲಿಂಕ್ ಓಪನ್ ಮಾಡಿ ಆನ್ಲೈನ್ ರಮ್ಮಿ ಆಡುವುದಕ್ಕೆ ಪ್ರಚೋದನೆ ನೀಡುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: 16ರ ಬಾಲೆಗೆ ನಶೆ ಏರಿಸಿ ವೃದ್ಧನಿಂದ ಅತ್ಯಾಚಾರ, ವಿಷಯ ಗೊತ್ತಾಗಿ ಮನೆಗೇ ನುಗ್ಗಿ ಕೊಂದ ಪೋಷಕರು!
ಬ್ಲಾಕ್ ಮಾಡಿದ್ರೂ ಮೆಸೇಜ್ ನಿಲ್ತಿಲ್ಲ!
'ಹಣವನ್ನು ಬೆಟ್ ಮಾಡಿ ಗೆಲ್ಲಿ ಅಂತ ಮೆಸೇಜ್ ಬರುತ್ತಿದೆಯಂತೆ. ಜೊತೆಗೆ ಈ ನಂಬರ್ಗಳನ್ನು ಬ್ಲಾಕ್ ಮಾಡಿದ್ರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಬೇರೆ ಬೇರೆ ನಂಬರ್ಗಳಿಂದ ಈ ರೀತಿಯ ಮೆಸೇಜ್ಗಳು ಬರುತ್ತಲೇ ಇದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಬರೆದಿದ್ದಾರೆ. ಈ ಮದ್ಯ ಹಾಗೂ ಸಿಗರೇಟ್ ಚಟದಂತೆ ಈ ಆನ್ಲೈನ್ ರಮ್ಮಿ ಕೂಡ ಒಂದು ಚಟದಂತೆ. ಮದ್ಯ ಹಾಗೂ ಸಿಗರೇಟ್ ಸರ್ಕಾರದ ಅಡಿಯಲ್ಲಿ ಬರುತ್ತೆ. ಇದನ್ನು ಸೇವಿಸುವಂತೆ ಪ್ರಚೋದನೆ ನೀಡುವಂತಿಲ್ಲ. ಇನ್ನೂ ಸರ್ಕಾರವೇ ಇದನ್ನು ಮಾಡ್ಬೇಡಿ ಅಂತ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಶಾಲಾ-ಕಾಲೇಜು ಸುತ್ತ ಮುತ್ತ ಮದ್ಯ ಹಾಗೂ ಸಿಗರೇಟ್ ಮಾರುವಂತಿಲ್ಲ ಅಂತ ಹೇಳಿದೆ' ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಉಲ್ಕಾಪಾತ! ಈ ಸಮಯಕ್ಕೆ ರೆಡಿ ಇರಿ
ಇದೇ ರೀತಿಯ ಕಠಿಣ ಕ್ರಮಗಳು ಈ ಆನ್ಲೈನ್ ರಮ್ಮಿಯಲ್ಲೂ ಬರಬೇಕು ಅಂತ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಈ ಆನ್ಲೈನ್ ಜೂಜಾಟದ ಜಾಹೀರಾತುಗಳನ್ನು ಈ ಕೂಡಲೇ ನಿಲ್ಲಿಸುವಂತೆ ಪತ್ರದಲ್ಲಿ ಬರೆದಿದ್ದಾರೆ. ಈ ಆನ್ಲೈನ್ ಗೇಮ್ಗೆ ರಾಜ್ಯದ ಮೂಲೆ ಮೂಲೆಯಲ್ಲೂ ಸಾವಾಗುತ್ತಿದೆ. ಹೆಂಡತಿ, ಮಕ್ಕಳು ಬೀದಿಗೆ ಬರುತ್ತಿದ್ದಾರೆ. ಹೀಗಾಗಿ ಈ ಕೂಡಲೇ ಜಾಹೀರಾತು ನೀಡುವುದು, ಮಾರ್ಕೆಟಿಂಗ್ ಮಾಡುವುದು ಮತ್ತು ಈ ರೀತಿಯ ಮೆಸೇಜ್ ಬರುವುದನ್ನು ಬ್ಯಾನ್ ಮಾಡಿಸಿ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ