• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಚಿವರಿಗೆ ಸುಳ್ಳು ಮಾಹಿತಿ ಕೊಟ್ಟ ಎಂಇಎಸ್ ಮುಖಂಡನಿಗೆ ಶಾಸಕ ಅಭಯ ಪಾಟೀಲ್ ಹಿಗ್ಗಾಮುಗ್ಗಾ ತರಾಟೆ

ಸಚಿವರಿಗೆ ಸುಳ್ಳು ಮಾಹಿತಿ ಕೊಟ್ಟ ಎಂಇಎಸ್ ಮುಖಂಡನಿಗೆ ಶಾಸಕ ಅಭಯ ಪಾಟೀಲ್ ಹಿಗ್ಗಾಮುಗ್ಗಾ ತರಾಟೆ

ಶಾಸಕ ಅಭಯ ಪಾಟೀಲ್

ಶಾಸಕ ಅಭಯ ಪಾಟೀಲ್

ಸಭೆಯಲ್ಲಿ ಸಚಿವ ಭೈರತಿ ಬಸವರಾಜ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಶಾಸಕರು, ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನೆ ನಡೆಸಿದರು. ಕಾಮಗಾರಿ ಬಗ್ಗೆ ಏನಾದರೂ ಲೋಪಗಳಿದ್ದರೆ ಹೇಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ರು. ಆಗಲೇ ಈ ಎಂಇಎಸ್ ಮಾಜಿ ಮೇಯರ್ ನಾಗೇಶ ಸಾತೇರಿ ಸರ್ಕಾರಿ ಕಾಮಗಾರಿಗಳ ಬಗ್ಗೆ ಆರೋಪ ಮಾಡಲು ಆರಂಭಿಸಿದ್ರು. ಇದರಿಂದ ಸಭೆಯಲ್ಲಿ ಶಾಸಕರು ಎಂಇಎಸ್ ಮುಖಂಡನ ಮಧ್ಯೆ ಜಟಾಪಟಿಗೆ ಕಾರಣವಾಯಿತು.

ಮುಂದೆ ಓದಿ ...
  • Share this:

ಬೆಳಗಾವಿ(ಜ.9): ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಎಂಇಎಸ್ ಮಾಜಿ ಮೇಯರ್ ಮಧ್ಯೆ ವಾಗ್ವಾದ ನಡೆಯಿತು. ಎಂಇಎಸ್ ಮಾಜಿ ಮೇಯರ್ ಸುಳ್ಳು ಆರೋಪಕ್ಕೆ ಶಾಸಕ ಅಭಯ ಪಾಟೀಲ್ ಫುಲ್ ಗರ್ಂ ಆದರು. ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಮ್ಮುಖದಲ್ಲಿ ವಾಗ್ವಾದ ನಡೆಯಿತು. ಸ್ಮಾರ್ಟ್ ಸಿಟಿ ಕಾಮಗಾರಿ ಸರಿಯಾಗಿಲ್ಲ ಎಂದು ಮಾಜಿ ಎಂಇಎಸ್ ಮೇಯರ್ ನಾಗೇಶ ಸಾತೇರಿ ಸಚಿವರ ಮುಂದೆ ಆರೋಪ ಮಾಡಿದ್ರು. ಎಂಇಎಸ್ ಮುಖಂಡರ ಆರೋಪವನ್ನು ತಳ್ಳಿ ಹಾಕಿದ ಶಾಸಕ ಅಭಯ ಪಾಟೀಲ್ ಸಚಿವರಿಗೆ ನಿಖರವಾದ ಕಾಮಗಾರಿ ಬಗ್ಗೆ ಹೇಳಿ ಅದನ್ನ ಬಿಟ್ಟು ಸುಮ್ಮನೆ ಸುಳ್ಳು ಆರೋಪ ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿದರು. 


ಈ ಸಂದರ್ಭದಲ್ಲಿ ಕೆಲ ಕಾಲ ಇಬ್ಬರು ಮಧ್ಯೆ ಮಾತಿನ ಚಕಮಕಿ ನಡೆಯಿತು. ಯಾವಾಗ ಬಿಜೆಪಿ ಶಾಸಕ ಅಭಯ ಪಾಟೀಲ್ ಅವರಿಗೆ ಕೀಪ್ ಕ್ವಾಯ್ಟ್ ಎಂದ ಎಂಇಎಸ್ ಮಾಜಿ ಮೇಯರ್ ನಾಗೇಶ ಸಾತೇರಿ ಉದ್ಧಟತನದ ಪದ ಬಳಸಿದರು. ಈ ಕೀಪ್ ಕ್ವಾಯ್ಟ್ ಹೇಳಿಕೆ ಕೆರಳಿದ ಶಾಸಕ ಅಭಯ ಪಾಟೀಲ್ ಸರಿಯಾಗಿ ಮಾತನಾಡುವುದನ್ನ ಕಲಿಯಿರಿ ಎಂದು ಎಂಇಎಸ್ ಮುಖಂಡ ನನ್ನ ತರಾಟೆಗೆ ತೆಗೆದುಕೊಂಡರು ಶಾಸಕ ಅಭಯ ಪಾಟೀಲ್. ಅಲ್ಲದೆ ಎಂಇಎಸ ಮುಖಂಡನಿಗೆ ಮಾತಿನ ಚಾಟಿ ಬೀಸಿದರು.


ಡಿಸಿಎಂ ಲಕ್ಷ್ಮಣ ಸವದಿ ಕಾರಿಗೆ ಡೀಸೆಲ್ ಹಾಕಿದ ಸಿಬ್ಬಂದಿಗೆ ಶೋಕಾಸ್ ನೋಟಿಸ್; ಗುಬ್ಬಿ ಮೇಲೆ ಬ್ರಹ್ಮಾಸ್ತ್ರ..!


ಸಭೆಯಲ್ಲಿ ಸಚಿವ ಭೈರತಿ ಬಸವರಾಜ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಶಾಸಕರು, ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನೆ ನಡೆಸಿದರು. ಕಾಮಗಾರಿ ಬಗ್ಗೆ ಏನಾದರೂ ಲೋಪಗಳಿದ್ದರೆ ಹೇಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ರು. ಆಗಲೇ ಈ ಎಂಇಎಸ್ ಮಾಜಿ ಮೇಯರ್ ನಾಗೇಶ ಸಾತೇರಿ ಸರ್ಕಾರಿ ಕಾಮಗಾರಿಗಳ ಬಗ್ಗೆ ಆರೋಪ ಮಾಡಲು ಆರಂಭಿಸಿದ್ರು. ಇದರಿಂದ ಸಭೆಯಲ್ಲಿ ಶಾಸಕರು ಎಂಇಎಸ್ ಮುಖಂಡನ ಮಧ್ಯೆ ಜಟಾಪಟಿಗೆ ಕಾರಣವಾಯಿತು.


ಸಚಿವ ಭೈರತಿ ಬಸವರಾಜ ಸಹ ಕೆಲ ಕಾಲ ಸುಮ್ಮನೆ ಕುಳಿತುಕೊಂಡರು. ಆನಂತರ ಇಬ್ಬರನ್ನು ಸಮಾಧಾನ ಪಡಿಸಿ, ಏನೇ ಕಾಮಗಾರಿ ಲೋಪಗಳಿದ್ದರೂ ಸರಿಪಡಿಸಲಾಗುವುದು ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ಜನಪ್ರತಿನಿಧಿಗೆ ಸುಮ್ಮನೆ ಇರಿ ಅಂತಾ ಹೇಳುವ ಮೂಲಕ ಎಂಇಎಸ್ ಮುಖಂಡ ಉದ್ಧಟತನ ಪ್ರದರ್ಶನ ಮಾಡಿದ್ದಾನೆ. ಇತ್ತ ರಾಜ್ಯದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಎಂಇಎಸ್ ಮುಖಂಡನಿಗೆ ಶಾಸಕ ಅಭಯ ಪಾಟೀಲ್ ಮಾತಿನಲ್ಲೇ ಚಳಿ ಬಿಡಿಸಿದ್ದಾರೆ.

Published by:Latha CG
First published: