• Home
  • »
  • News
  • »
  • state
  • »
  • Shivaramegowda: ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಹೆಸರು ದುರ್ಬಳಕೆ; ಕೋಟಿ ಕೋಟಿ ಗುಳುಂ!?

Shivaramegowda: ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಹೆಸರು ದುರ್ಬಳಕೆ; ಕೋಟಿ ಕೋಟಿ ಗುಳುಂ!?

ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಂಸದ ಶಿವರಾಮೇಗೌಡ

ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಂಸದ ಶಿವರಾಮೇಗೌಡ

ನಿರ್ಮಲಾನಂದನಾಥ ಸ್ವಾಮೀಜಿ ಹೆಸರು ಹೇಳಿ 100 ಕೋಟಿ ರೂ ಕೆಲಸ ತಂದು ಲೂಟಿ ಮಾಡಲಾಗ್ತಿದೆ. ಕರ್ನಾಟಕದಲ್ಲಿ ಬಿಜೆಪಿ 40% ಕಮಿಷನ್​ಗೆ ಹೆಸರು ವಾಸಿಯಾಗಿದೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಕಿಡಿಕಾರಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ಮಂಡ್ಯ (ನ.10): ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ (Nirmalananda Swamiji) ಸ್ವಾಮೀಜಿ ಹೆಸರು ದುರ್ಬಳಕೆ ಮಾಡಿಕೊಂಡಿ ಕೋಟ್ಯಂತರ ರೂ ಟೆಂಡರ್ ನಲ್ಲಿ ಹಣ ಲೂಟಿ ಹೊಡೆದಿರುವ ಆರೋಪ ಕೇಳಿ ಬಂದಿದೆ. ಮಂಡ್ಯದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ (Shivarame Gowda) ಗಂಭೀರ ಆರೋಪ ಮಾಡಿದ್ದಾರೆ. ಯಾರೋ ಒಬ್ಬ ಬೆಳ್ಳೂರು ಕ್ರಾಸ್ ಬಳಿ 100 ಕೋಟಿ ರೂ ಕೆಲಸ ಮಾಡಿಸುತ್ತಿದ್ದಾನೆ. ಆತ ಸ್ವಾಮೀಜಿ ಹೆಸರು ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಬಳಿ ಟೆಂಡರ್ (Tender) ಪಡೆದಿದ್ದಾನೆ ಎಂದು ಹೇಳಿದ್ದಾರೆ. 


ಸ್ವಾಮೀಜಿ ಹೆಸರು ದುರ್ಬಳಕೆ


ನಿರ್ಮಲಾನಂದನಾಥ ಸ್ವಾಮೀಜಿ ಹೆಸರು ದುರ್ಬಳಕೆ ಮಾಡಿಕೊಂಡಿರೋ ಈ ವಿಚಾರ ಸ್ವಾಮೀಜಿಗಳಿಗೆ ಗೊತ್ತಿಲ್ಲ. ಸ್ವಾಮೀಜಿ ಹೆಸರು ಹೇಳ್ತಿದ್ದಂತೆ ಅಧಿಕಾರಿಗಳು ಕೆಲಸ ಮಾಡಿಕೊಡ್ತಾರೆ. ಸ್ವಾಮೀಜಿ ಹೆಸರು ಹೇಳಿ 100 ಕೋಟಿ ರೂ ಕೆಲಸ ತಂದು ಲೂಟಿ ಮಾಡಲಾಗ್ತಿದೆ. ಕರ್ನಾಟಕದಲ್ಲಿ ಬಿಜೆಪಿ 40% ಕಮಿಷನ್​ಗೆ ಹೆಸರು ವಾಸಿಯಾಗಿದೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಕಿಡಿಕಾರಿದ್ದಾರೆ.


Misuse of Adichunchanagiri Nirmalanandanath Swamiji's name; Former MP LR Sivaramegowda is a serious allegation
ಮಾಜಿ ಸಂಸದ ಶಿವರಾಮೇಗೌಡ


ನಾಗಮಂಗಲದಲ್ಲಿ 50% ಕಮಿಷನ್ ಆಡಳಿತ


ನಾಗಮಂಗಲ ಆಡಳಿತದಲ್ಲಿ ಬಿಜೆಪಿ ಸರ್ಕಾರಕ್ಕಿಂತ ಅಡಿಷನಲ್ 10% ಎಕ್ಟ್ರಾ, ನಾಗಮಂಗಲದಲ್ಲಿ 50% ಕಮಿಷನ್ ಆಡಳಿತ ನಡೆಯುತ್ತಿದೆ. ನಾಗಮಂಗಲ ಶಾಸಕ ಸುರೇಶ್ ಗೌಡರ ಹೆಸರು ಹೇಳದೆ ಅವರ ವಿರುದ್ದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಗಂಭೀರ ಆರೋಪ ಮಾಡಿದ್ದಾರೆ.ಜ್ಞ


ಮಂಡ್ಯದಲ್ಲಿ ರಂಗೇರಿದ ರಾಜಕೀಯ


ಚುನಾವಣೆಗೆ ಇನ್ನು 6 ತಿಂಗಳಿರುವಾಗಲೇ ಅಬ್ಬರದ ಪ್ರಚಾರಕ್ಕೆ ಮಾಜಿ ಸಂಸದ ಶಿವರಾಮೇಗೌಡ ಚಾಲನೆ ನೀಡಿದ್ದಾರೆ. ಮಂಡ್ಯದ ನಾಗಮಂಗಲದ ಚೀಣ್ಯಾದಲ್ಲಿ ಪ್ರಚಾರ ಆರಂಭವಾಗಿದೆ. ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಎಲ್‌ಆರ್‌ ಶಿವರಾಮೇಗೌಡ ಹೇಳಿದ್ದಾರೆ. ಚೀಣ್ಯ ಹೋಬಳಿಯ 15ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರಚಾರ ನಡೆಸಲಾಗ್ತಿದೆ. ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದ ತೊಡೆ ತಟ್ಟಿರುವ ಎಲ್ ಆರ್ ಶಿವರಾಮೇಗೌಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


ಇದನ್ನೂ ಓದಿ: BBMP Tax Fraud: ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ತೆರಿಗೆ ವಂಚನೆ; 130 ಕೋಟಿ ಗುಳುಂ


ಶಿವರಾಮೇಗೌಡ  ಅಳಿಯನ ಪುಂಡಾಟ


ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ  ಅಳಿಯ ಪುಂಡಾಟ ಮೆರೆದಿದ್ದಾನೆ. ಸ್ಯಾಂಡಲ್‌ವುಡ್ ನಟನೂ ಆಗಿರುವ ರಾಜೀವ್ ರಾಥೋಡ್ ಬೆಂಗಳೂರಿನ ವಿಜಯನಗರದಲ್ಲಿ ಆಡಿ ಕಾರಿಗೆ ಆ್ಯಂಬುಲೆನ್ಸ್ ಸೈರನ್ ಹಾಕೊಂಡು ನ್ಯೂಸೆನ್ಸ್ ಮಾಡಿದ್ದಾರೆ. ಆ್ಯಂಬುನೆಲ್ಸ್‌ ಸೈರನ್ ಹಾಕಿಕೊಂಡು ತನ್ನ ಆಡಿ ಕಾರಿನಲ್ಲಿ (Car) ಇಷ್ಟ ಬಂದ ಹಾಗೆ ಓಡಾಡಿದ್ದಾನೆ. ಸಂಚಾರ ನಿಯಮ ಉಲ್ಲಂಘನೆ (Traffic Rules) ಹಿನ್ನೆಲೆ ವಿಜಯನಗರ ಸಂಚಾರಿ ಠಾಣೆ ಪೊಲೀಸರು ಕೇಸ್ ದಾಖಲಿಸಿ, ದಂಡ ಹಾಕಿದ್ದಾರೆ.


ಇತ್ತ ಎಲ್‌.ಆರ್ ಶಿವರಾಮೇಗೌಡರು ಮುಂಬರುವ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಎಲ್ ಆರ್ ಶಿವರಾಮೇಗೌಡ, ಮಂಡ್ಯದ ನಾಗಮಂಗಲದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ.

ನಾಗಮಂಗದಲ್ಲಿ ಶಿವರಾಮೇಗೌಡರ ಪ್ರಚಾರ

ನಾಗಮಂಗಲ ಕ್ಷೇತ್ರದಲ್ಲಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಪ್ರತಿ ಗ್ರಾಮ ಗ್ರಾಮಗಳಿಗೂ LRS ಸಂಕಲ್ಪ ಯಾತ್ರೆ ತೆರಳಲಿದೆ. ಈ ಮೂಲಕ ಈಗಿನಿಂದ್ಲೇ ಮತದಾರರನ್ನು ಸೆಳೆಯಲು L.R ಶಿವರಾಮೇಗೌಡ ಮುಂದಾಗಿದ್ದಾರೆ.


ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್​ ನ್ಯೂಸ್​; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ


ಜೆಡಿಎಸ್‌ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಇದೀಗ ಮತ್ತೆ ಬಿಜೆಪಿ ಪಕ್ಷ ಸೇರುವ ಲಕ್ಷಣ ಕಂಡುಬರುತ್ತಿದೆ ಎಂದು ಹೇಳಲಾಗ್ತಿದೆ. ಆದ್ರೆ ಮುಂದಿನ ದಿನ ವಿಧಾನಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ನಡೆಸಲು ಸಿದ್ದತೆ ನಡೆಸುತ್ತಿದ್ದ
ಶಿವರಾಮೇಗೌಡ, ಇದೀಗ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ನಾಗಮಂಗಲ ತಾಲೂಕಿನಲ್ಲಿ ಪ್ರಚಾರ ಮಾಡಿರುವುದು ಗಮನ ಸೆಳೆದಿದ್ರು. ಇದೀಗ ಬಿಜೆಪಿ ವಿರುದ್ಧ ಕಮೀಷನ್​ ಆರೋಪ ಮಾಡಿ ಕಿಡಿಕಾರಿದ್ದಾರೆ.

Published by:ಪಾವನ ಎಚ್ ಎಸ್
First published: