ಬಿಜೆಪಿಯಲ್ಲಿ ಸಭೆಯಲ್ಲಿ ಭಿನ್ನಮತ: ಆರ್​. ಅಶೋಕ್​ ಮೇಲೆ ಕೋಪ, ಬಿಎಸ್​ವೈ ಕ್ಯಾಂಪ್​ ಗೈರು..!


Updated:August 12, 2018, 8:57 PM IST
ಬಿಜೆಪಿಯಲ್ಲಿ ಸಭೆಯಲ್ಲಿ ಭಿನ್ನಮತ: ಆರ್​. ಅಶೋಕ್​ ಮೇಲೆ ಕೋಪ, ಬಿಎಸ್​ವೈ ಕ್ಯಾಂಪ್​ ಗೈರು..!

Updated: August 12, 2018, 8:57 PM IST
ಕೃಷ್ಣ ಜಿವಿ, ನ್ಯೂಸ್ 18 ಕನ್ನಡ

ಬೆಂಗಳೂರು(ಆ.12): ಪ್ರಧಾನಿ ಮೋದಿ 2019ಕ್ಕೂ ನಾವೇ ಗೆಲ್ಲುತ್ತೇವೆ ಎಂದಿದ್ದಾರೆ. ಇತ್ತ ರಾಜ್ಯ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಪ್ಲ್ಯಾನ್​ ಮಾಡುತ್ತಿದೆ. ಆದರೆ ಇಂದು ಬೆಂಗಳೂರಿನಲ್ಲಿ ನಡೆದ ಶಕ್ತಿ ಕೇಂದ್ರದ ನಾಯಕರ ಸಭೆಯಲ್ಲಿ ಭಿನ್ನಮತ ಜೋರಾಗಿತ್ತು.. ಅನಂತ್​ ಕುಮಾರ್​, ಆರ್​ ಅಶೋಕ್​ಗೂ ಮುಜುಗರದ ವೇದಿಕೆಯಾಗಿತ್ತು. ಅಷ್ಟಕ್ಕೂ ಅಲ್ಲಿ ಏನಾಗಿದ್ದು? ಇಲ್ಲಿದೆ ವಿವರ

ಇಂದು ಬೆಂಗೂಳರಲ್ಲಿ ನಡೆದ ಶಕ್ತಿ ಕೇಂದ್ರದ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಬಿಎಸ್​ ಯಡಿಯೂರಪ್ಪ ಕರೆ ನೀಡಿದ್ದಾರೆ. ಆರ್​. ಅಶೋಕ್​ ಮೇಲಿನ ಮುನಿಸಿನಿಂದ ಬಿಎಸ್​ವೈ ಕ್ಯಾಂಪ್​ನ ನಾಯಕರಾದ ಅರವಿಂದ್ ಲಿಂಬಾವಳಿ, ಡಾ ಅಶ್ವಥ್ ನಾರಾಯಣ್, ಸುರೇಶ್ ಕುಮಾರ್, ವೈ ಎ ನಾರಾಯಣಸ್ವಾಮಿ ಗೈರಾಗಿದ್ದರು.

ಕಾಂಗ್ರೆಸ್​ಗೆ ಲೀಡರ್​ ಇಲ್ಲ.. ಮೀಟರೂ ಇಲ್ಲ..!

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನಂತ್​ ಕುಮಾರ್​, ಕಾಂಗ್ರೆಸ್​ ವಿರುದ್ಧ ಟೀಕೆ ಮಾಡಿದ್ದಾರೆ.. ಕಾಂಗ್ರೆಸ್​ನಲ್ಲಿ ಲೀಡರ್ ಆಗಲಿ, ಮೀಟರ್ ಆಗಲಿ ಇಲ್ಲ. ಜೀವಂತ ಮತದಾರರ ಮೇಲೆ ನಂಭಿಕೆ ಇಲ್ಲದ ಕಾಂಗ್ರೆಸ್​, ಸತ್ತವರು, ಭೂತಪ್ರೇತದ ಮೇಲೆ ಅವಲಂಭಿತವಾಗಿದೆ ಎಂದಿದ್ದಾರೆ.

ಬೆಂಗಳೂರಿನ ಕಾರ್ಪೋರೇಟರ್​ಗಳು ತಾವೂ ಶ್ರೀಮಂತರಾಗುವುದನ್ನು ಬಿಟ್ಟು, ಪಕ್ಷ ಸಂಘಟನೆ ಮಾಡ್ಬೇಕು ಎಂದು ಬಿಎಸ್​ವೈ ಹೇಳಿದಾಗ ಅನಂತ್​ ಕುಮಾರ್​ ಹಾಗೂ ಅಶೋಕ್​ ಮುಜುಗರಕ್ಕೆ ಒಳಗಾದ್ರು ಬಳಿಕ ಮಾತನಾಡಿದ ಅಶೋಕ್​, ಪಕ್ಷ ಸಂಘಟನೆ ಮಾಡದ ಕಾರ್ಪೊರೇಟರ್​ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದ್ದು, ಮುಂದಿನ ಬಾರಿ ಟಿಕೆಟ್​ ಕೊಡುವುದಿಲ್ಲ ಎಂದೂ ಹೇಳಿದ್ದಾರೆ.

ಒಟ್ಟಾರೆyAgi, ಬಿಜೆಪಿ 20 ಪ್ಲಸ್​ ಟಾರ್ಗೆಟ್​ ಜೊತೆ ಲೋಕಸಭಾ ಚುನಾವಣೆಗೆ ಹೋಗುತ್ತಿದ್ದು, ಆರಂಭದಲ್ಲೇ ಹುಳುಕು ಪ್ರದರ್ಶನವಾಗಿದೆ ಅಂದ್ರೆ ಸುಳ್ಳಲ್ಲ..
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ