• Home
  • »
  • News
  • »
  • state
  • »
  • Mysuru Dasara: ಸುದೀಪ್ ಬರಲಿಲ್ಲ, ಮಂಗ್ಲಿ ಹಾಡಲಿಲ್ಲ, ಸರ್ಕಾರದ ಎಡವಟ್ಟುಗಳು; ದಸರೆಯಲ್ಲೊಂದು ದುಬಾರಿ ಸೇವೆ

Mysuru Dasara: ಸುದೀಪ್ ಬರಲಿಲ್ಲ, ಮಂಗ್ಲಿ ಹಾಡಲಿಲ್ಲ, ಸರ್ಕಾರದ ಎಡವಟ್ಟುಗಳು; ದಸರೆಯಲ್ಲೊಂದು ದುಬಾರಿ ಸೇವೆ

ಮೈಸೂರು ಅರಮನೆ

ಮೈಸೂರು ಅರಮನೆ

ಇಂದು ಇಡೀ ದಿನ ಅಪ್ಪು ಅಭಿನಯದ ಚಿತ್ರಗಳ ಪ್ರದರ್ಶನ ಆಗಬೇಕಿತ್ತು. ರಾತ್ರೋರಾತ್ರಿ ಪಟ್ಟಿ ಬದಲಾಗಿದ್ದರಿಂದ ಅಪ್ಪು ಚಿತ್ರಗಳ ಪ್ರದರ್ಶನ ನಾಳೆಗೆ ಮುಂದೂಡಿಕೆಯಾಗಿದೆ. ಶಕ್ತಿಧಾಮದ ಮಕ್ಕಳೊಂದಿಗೆ ಬೆಟ್ಟದ ಹೂವು ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ವೀಕ್ಷಿಸಲಿದ್ದಾರೆ.

  • Share this:

ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara 2022) ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಚಾಲನೆ ನೀಡಿದ್ದರು. ಆ ಬಳಿಕ ಸಾಕಷ್ಟು ಎಡವಟ್ಟುಗಳನ್ನು ಸರ್ಕಾರ ಮಾಡಿಕೊಂಡರೂ ವಿದ್ಯುತ್ ದೀಪಾಲಂಕಾರ ಜಗಮಗಿಸಿದೆ. ಮೈಸೂರಿನ 96 ವೃತ್ತ ಸೇರಿದಂತೆ 126 ಕಿ.ಮೀ. ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಕೆಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ ಝಗಮಗಿಸುತ್ತಿದೆ. ಇನ್ನೂ ಮೃತರಾಗಿರುವ ಕವಿಗಳನ್ನು ಮೈಸೂರು ದಸರಾ ಕವಿಗೋಷ್ಠಿಗೆ (Kavigoshthi) ಆಹ್ವಾನ ನೀಡಿರುವುದು ಸರ್ಕಾರದ ಎಡವಟ್ಟಿಗೆ ಮತ್ತೊಂದು ಉದಾಹರಣೆ ಎನ್ನಬಹುದು. ದಸರಾ ಉದ್ಘಾಟನೆ ಬಳಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಗೊಂದಲ ಮಾಡಿಕೊಂಡಿದೆ. ಇಂದು ಸಂಜೆ ಉದ್ಘಾಟನೆ ಆಗಬೇಕಿದ್ದ ಯುವ ದಸರಾ ನಾಳೆಗೆ ಮುಂದೂಡಿಕೆಯಾಗಿದೆ.


ಈ ಬಾರಿ ಯುವ ದಸರಾ ಕಾರ್ಯಕ್ರಮವನ್ನು ಏಳು ದಿನ ಮಾಡಲಾಗುವುದು ಮತ್ತು ಎರಡನೇ ದಿನವನ್ನು ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರಿಗಾಗಿ ಮೀಸಲಿರಿಸಲಾಗಿತ್ತು. ಆದ್ರೆ ಇಂದಿನ ಯುವ ದಸರಾ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಉದ್ಘಾಟಕರು ಲಭ್ಯವಾಗದ ಹಿನ್ನೆಲೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಸುದೀಪ್ ಬರಲಿಲ್ಲ, ಮಂಗ್ಲಿ ಹಾಡಲಿಲ್ಲ


ಪೂರ್ವ ಯೋಜನೆಯಂತೆ ಸೋಮವಾರ ನಟ ಕಿಚ್ಚ ಸುದೀಪ್ ಯುವ ದಸರಾಕ್ಕೆ ಚಾಲನೆ ನೀಡಬೇಕಿತ್ತು. ಆದ್ರೆ ಸುದೀಪ್ ಕಾರಣಾಂತರಗಳಿಂದ ದಸರಾಗೆ ಆಗಮಿಸಲು ಆಗಲ್ಲ ಎಂದು ತಿಳಿಸಿದ್ದರು. ಆದ್ರೆ ಸುದೀಪ್ ಬದಲಾಗಿ ಬೇರೆ ಅತಿಥಿಗಳನ್ನು ಹುಡುಕಲು ಸರ್ಕಾರ ವಿಳಂಬ ಮಾಡಿದೆ. ಒಂದು ವೇಳೆ ನಿನ್ನೆ ಸುದೀಪ್ ಯುವ ದಸರಾ ಉದ್ಘಾಟನೆ ಮಾಡಿದ್ರೆ, ಗಾಯಕಿ ಮಂಗ್ಲಿ ಗಾಯನ ಇರಬೇಕಿತ್ತು. ಆದ್ರೆ ನಿನ್ನೆ ಸುದೀಪ್ ಸಹ ಬರಲಿಲ್ಲ, ಇತ್ತ ಮಂಗ್ಲಿ ಅವರು ಹಾಡು ಹಾಡಲಿಲ್ಲ.


mistakes by government in mysuuru dasara mrq
ಮೈಸೂರು ದಸರಾ


ಇಂದು ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯ ಪ್ರಕಾಶ್, ಗುರುಕಿರಣ್ ಹಾಡಬೇಕಿತ್ತು. ಆದರೆ ಇಂದಿನ ಕಾರ್ಯಕ್ರಮವೂ ರದ್ದಾಗಿದೆ ಎಂದು ತಿಳಿದು ಬಂದಿದೆ. ನಾಳೆ ಬರುತ್ತಾರೋ ಇಲ್ಲವೋ ಅನ್ನೋದು ಖಚಿತವಾಗಿಲ್ಲ.


ಬುಧವಾರ ಡಾ.ಪುನೀತ್ ರಾಜ್​​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಂದ ಯುವ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ 


ಚಲನಚಿತ್ರೋತ್ಸವವೂ ಗೊಂದಲದ ಗೂಡು


ಇಂದು ಇಡೀ ದಿನ ಅಪ್ಪು ಅಭಿನಯದ ಚಿತ್ರಗಳ ಪ್ರದರ್ಶನ ಆಗಬೇಕಿತ್ತು. ರಾತ್ರೋರಾತ್ರಿ ಪಟ್ಟಿ ಬದಲಾಗಿದ್ದರಿಂದ ಅಪ್ಪು ಚಿತ್ರಗಳ ಪ್ರದರ್ಶನ ನಾಳೆಗೆ ಮುಂದೂಡಿಕೆಯಾಗಿದೆ. ಶಕ್ತಿಧಾಮದ ಮಕ್ಕಳೊಂದಿಗೆ ಬೆಟ್ಟದ ಹೂವು ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ವೀಕ್ಷಿಸಲಿದ್ದಾರೆ.


mistakes by government in mysuuru dasara mrq
ದಸರಾಗೆ ತಯಾರಿ


ದಸರೆಯಲ್ಲೊಂದು ದುಬಾರಿ ಸೇವೆ


ಈ ಬಾರಿ ದಸರಾ ಸಮಿತಿ ಹಲಿಕಾಪ್ಟರ್ ರೈಡ್ ಆಯೋಜನೆ ಮಾಡಲಾಗಿದೆ. ಚಿಪ್ಸನ್ ಏವಿಷನ್ ಖಾಸಗಿ ಸಂಸ್ಥೆ ಎಂಟು ನಿಮಿಷಗಳ ಹೆಲಿಕಾಪ್ಟರ್ ಪ್ರದರ್ಶನಕ್ಕೆ ಒಬ್ಬರಿಗೆ ತಲಾ 4,000 ರೂ. ನಿಗಧಿ ಮಾಡಿದೆ. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ರೈಡ್ ಸೇವೆ ಕಲ್ಪಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ಹೆಲಿಕಾಪ್ಟರ್ ಹಾಗೂ ಏರ್ ಶೋ ಸೇವೆಗಳು ಸ್ಥಗಿತಗೊಳಿಸಲಾಗಿತ್ತು.


ಇದನ್ನೂ ಓದಿ:  PFI ಮುಖಂಡರಿಗೆ ಮುಗಿಯದ ಕಂಟಕ, ಅನುಮಾನಾಸ್ಪದರ ವಿಚಾರಣೆ; ಪೊಲೀಸರಿಂದ ಮಾರ್ನಿಂಗ್ ಶಾಕ್


PFI ಮುಖಂಡರಿಗೆ ಮುಗಿಯದ ಕಂಟಕ, ಅನುಮಾನಾಸ್ಪದರ ವಿಚಾರಣೆ


ಪಿಎಫ್​ಐ ಮುಖಂಡರ (PFI Leaders) ನಿವಾಸ ಮತ್ತು ಕಚೇರಿಗಳ ಮೇಲೆ ಎರಡನೇ ಸುತ್ತಿನ ದಾಳಿ ನಡೆದಿದೆ. ಕರ್ನಾಟಕ ಸೇರಿ ಒಟ್ಟು ಏಳು ರಾಜ್ಯಗಳಲ್ಲಿ ಪಿಎಫ್​ಐ ವಿರುದ್ಧ ಎನ್​ಐಎ (NIA Raids) ಎರಡನೇ ಹಂತದ ಕಾರ್ಯಚರಣೆ ನಡೆಸಿದೆ. ಕರ್ನಾಟಕ, ಗುಜರಾತ್, ದೆಹಲಿ ಸೇರಿ 7 ರಾಜ್ಯಗಳಲ್ಲಿ ರೇಡ್ ಮಾಡಲಾಗಿದೆ. ಕರ್ನಾಟಕದ ಉಡುಪಿ, ಶಿವಮೊಗ್ಗ, ಕೋಲಾರ, ಚಿತ್ರದುರ್ಗ, ಚಾಮರಾಜನಗರ ರಾಯಚೂರು, ವಿಜಯಪುರ, ಕಲಬುರಗಿ ಸೇರಿ 10 ಜಿಲ್ಲೆಗಳಲ್ಲಿ ಪೊಲೀಸರು ಹಲವೆಡೆ ಕಾರ್ಯಾಚರಣೆ ನಡೆಸಿದೆ. ನಿದ್ದೆಯ ಮಂಪರಿನಲ್ಲಿದ್ದ ನಾಯಕರಿಗೆ ಪೊಲೀಸರು ಮಾರ್ನಿಂಗ್ ಶಾಕ್ ನೀಡಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

Published by:Mahmadrafik K
First published: