• Home
  • »
  • News
  • »
  • state
  • »
  • MP Renukacharya: ಕಾಣೆಯಾಗಿದ್ದ ರೇಣುಕಾಚಾರ್ಯ ತಮ್ಮನ ಮಗನ ಕೊಳೆತ ಶವ ಪತ್ತೆ: ಕಳೆದೈದು ದಿನಗಳಲ್ಲಿ ನಡೆದಿದ್ದೇನು?

MP Renukacharya: ಕಾಣೆಯಾಗಿದ್ದ ರೇಣುಕಾಚಾರ್ಯ ತಮ್ಮನ ಮಗನ ಕೊಳೆತ ಶವ ಪತ್ತೆ: ಕಳೆದೈದು ದಿನಗಳಲ್ಲಿ ನಡೆದಿದ್ದೇನು?

ಎಂ. ಪಿ. ರೇಣುಕಾಚಾರ್ಯ

ಎಂ. ಪಿ. ರೇಣುಕಾಚಾರ್ಯ

ಚಂದ್ರಶೇಖರ್ ಸಾವು ಪ್ರಕರಣದ ಸುತ್ತ ಕ್ಷಣ ಕ್ಷಣಕ್ಕೂ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ. ಯಾಕೆಂದರೆ ವಿನಯ್ ಗುರೂಜಿ ಆಶ್ರಮಕ್ಕೆಂದು ಹೋಗಿದ್ದ ಚಂದ್ರಶೇಖರ್ ಜೊತೆಗೆ ಗೌರಿಗದ್ದೆಗೆ ಯಾರೆಲ್ಲಾ ಹೋಗಿದ್ದರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಲ್ಲದೇ ಈ ಕಾರಿನಲ್ಲಿ ಬೇರೆಯವರು ಇದ್ದರಾ? ರೇಣುಕಾಚಾರ್ಯರು ಹೇಳುವ ಪ್ರಕಾರ ಚಂದ್ರಶೇಖರ್ ಗೌರಿಗದ್ದೆಗೆ ಕ್ರಿಸ್ಟಾ ಕಾರಿನಲ್ಲಿ ಹೋಗಿರಲಿಲ್ಲ. ಹಾಗಿದ್ದರೆ ಆ ಕಾರು ಯಾವುದು? ನಾಲೆಯಲ್ಲಿ ಪತ್ತೆಯಾದ ಕಾರಿನಲ್ಲಿ ಚಂದ್ರಶೇಖರ್ ಬಂದದ್ದು ಹೇಗೆ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಮುಂದೆ ಓದಿ ...
  • News18 Kannada
  • Last Updated :
  • Honnali, India
  • Share this:

ಹೊನ್ನಾಳಿ(ನ.04): ಅಕ್ಟೋಬರ್ 30ರಿಂದ ನಾಪತ್ತೆಯಾಗದ್ದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ (Honnali MLA MP Renukacharya) ತಮ್ಮನ ಮಗ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದಾನೆ. ಹೊನ್ನಾಳಿ ಮತ್ತು ನ್ಯಾಮತಿ ಮಧ್ಯದಲ್ಲಿರುವ ಕಡದ ಕಟ್ಟೆ ಬಳಿಯ ಭದ್ರಾ ನಾಲೆಯಲ್ಲಿ (Bhadra Canacl) ಕಾರ್ ಸಮೇತ 24 ವರ್ಷ ವಯಸ್ಸಿನ ಚಂದ್ರಶೇಖರ್ (Chandrashekhar) ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಮಗ ಮರಳಿ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸಾವಿನ ಸುದ್ದಿ ಆಘಾತ ನೀಡಿದೆ. ಭದ್ರಾ ನಾಲೆ ಬಳಿ ಚಂದ್ರು ಕಾರಿನ ಅವಶೇಷಗಳು ಪತ್ತೆಯಾಗಿದ್ದವು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದರು. ನೀರಿನಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿ ಗುರುವಾರ ಮಧ್ಯಾಹ್ನ ನಾಲೆಯಿಂದ ಕಾರು ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ಹೊರತೆಗೆದ ಕಾರಿನ ಹಿಂಭಾಗದ ಸೀಟಿನಲ್ಲಿ ಚಂದ್ರು ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಆದರೀಗ ಚಂದ್ರಶೇಖರ್‌ ಮೃತದೇಹ ಪತ್ತೆಯಾದ ಬೆನ್ನಲ್ಲೇ ಕಾರು ನಾಲೆಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದು ಆತ್ಮಹತ್ಯೆಯೋ? ಅಥವಾ ನಾಲೆಯಲ್ಲಿ ಕಾರು ಅಪಘಾತವಾಗಿ ಬಿದ್ದಿದಿಯೋ? ಇಲ್ಲ ಯಾರಾದರೂ ಚಂದ್ರಶೇಖರ್‌ನನ್ನು ಹತ್ಯೆ ಮಾಡಿ ಆ ಬಳಿಕ ಕಾರು ನಾಲೆಯಲ್ಲಿ ಹೋಗುವಂತೆ ಮಾಡಿದ್ದಾರಾ? ಇದರ ಹಿಂದೆ ಕಾಣದ ಕೈವಾಡಗಳಿವೆಯಾ? ಕಾರಿನ ಅವಶೇಷಗಳು ಒಂದೆಡೆ ಬಿದ್ದಿದ್ದು, ಮತ್ತೊಂದೆಡೆ ಕಾರು ಎಗರಿ ನಾಲೆಯೊಳಗೆ ಬೀಳಲು ಹೇಗೆ ಸಾಧ್ಯ? ಎಂಬಿತ್ಯಾದಿ ಹಲವಾರು ಪ್ರಶ್ನೆಗಳು ಈ ಪ್ರಕರಣವನ್ನು ಸುತ್ತುವರೆದಿವೆ.


ನಾಪತ್ತೆಯಾಗಿದ್ದ ಚಂದ್ರಶೇಖರ್, ಮೊಬೈಲ್ ಕೂಡ ಸ್ವಿಚ್ ಆಫ್, ಕಿಡ್ನ್ಯಾಪ್ ಆರೋಪ


ಚಂದ್ರಶೇಖರ್ ಕಳೆದ ಭಾನುವಾರ ಆಕ್ಟೋಬರ್ 30ರಂದು ಕಾಣೆಯಾದ ನಂತರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ರೇಣುಕಾಚಾರ್ಯ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ನಿನ್ನೆ, ಗುರುವಾರ ಬೆಳಗ್ಗೆ ರೇಣುಕಾಚಾರ್ಯರವರು ಈ ಬಗ್ಗೆ ಮಾತನಾಡುತ್ತಾ ತಮ್ಮನ ಮಗ ಕಿಡ್ನ್ಯಾಪ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದರು. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯವನಲ್ಲ. ಜೊತೆಗೆ ಆತ ಎಲ್ಲರೊಂದಿಗೆ ಬೆರೆಯುತ್ತಿದ್ದ. ಆಧ್ಯಾತ್ಮದಲ್ಲಿ ವಿಶೇಷ ಆಸಕ್ತಿ ಇತ್ತು. ಹೀಗಾಗಿ. ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿ ಬರುತ್ತಿದ್ದ. ಆತನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದಿದ್ದರು. ಆದರೆ ಸಂಜೆಯಾಗುವ ಹೊತ್ತಿಗೆ ಕಾರು ಹಾಗೂ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಅವಶೇಷ ನಾಲ್ಕು ದಿನದಿಂದ ಯಾರಿಗೂ ಕಾಣಿಸಿರಲಿಲ್ಲವಾ?


ಇನ್ನು ಕಳೆದ ನಾಲ್ಕು ದಿನಗಳ ಹಿಂದೆ ಈ ಕಾರು ನಾಲೆಯಲ್ಲಿ ಬಿದ್ದಿತ್ತಾದರೂ ಅವಶೇಷ ಯಾರಿಗೂ ಕಾಣಿಸಿರಲಿಲ್ಲ. ಜೊತೆಗೆ ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಓಡಾಡುವುದರಿಂದ ಈ ಕಾರಿನ ಅವಶೇಷಗಳು ಬಿದ್ದಿದ್ದರೂ ಯಾರೂ ಸಹ ಗಮನಿಸಿರಲಿಲ್ಲವಾ? ಎಂಬ ಅನುಮಾನಗಳೂ ಕಾಡಲಾರಂಭಿಸಿವೆ. ಪೊಲೀಸರು ಕೂಡಾ ಚಂದ್ರಶೇಖರ್​ಗಾಗಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ಸುಮಾರು ಕಡೆಗಳಲ್ಲಿ ಶೋಧ ನಡೆಸಿದ್ದರು.


ಚಂದ್ರಶೇಖರ್ ಸಾವು ಪ್ರಕರಣದ ಸುತ್ತ ಕ್ಷಣ ಕ್ಷಣಕ್ಕೂ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ. ಯಾಕೆಂದರೆ ವಿನಯ್ ಗುರೂಜಿ ಆಶ್ರಮಕ್ಕೆಂದು ಹೋಗಿದ್ದ ಚಂದ್ರಶೇಖರ್ ಜೊತೆಗೆ ಗೌರಿಗದ್ದೆಗೆ ಯಾರೆಲ್ಲಾ ಹೋಗಿದ್ದರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಲ್ಲದೇ ಈ ಕಾರಿನಲ್ಲಿ ಬೇರೆಯವರು ಇದ್ದರಾ? ರೇಣುಕಾಚಾರ್ಯರು ಹೇಳುವ ಪ್ರಕಾರ ಚಂದ್ರಶೇಖರ್ ಗೌರಿಗದ್ದೆಗೆ ಕ್ರಿಸ್ಟಾ ಕಾರಿನಲ್ಲಿ ಹೋಗಿರಲಿಲ್ಲ. ಹಾಗಿದ್ದರೆ ಆ ಕಾರು ಯಾವುದು? ನಾಲೆಯಲ್ಲಿ ಪತ್ತೆಯಾದ ಕಾರಿನಲ್ಲಿ ಚಂದ್ರಶೇಖರ್ ಬಂದದ್ದು ಹೇಗೆ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.


ಸಾವು ಪ್ರಕರಣ ಸಂಬಂಧ ಹಲವಾರು ಪ್ರಶ್ನೆಗಳು ಎದ್ದಿರುವ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುವುದು ಎಂದಿದ್ದಾರೆ. "ನನಗೆ ಆಘಾತವಾಗಿದೆ. ಈ ಘಟನೆಯ ಬಗ್ಗೆ ರೇಣುಕಾಚಾರ್ಯ ಮತ್ತು ಅವರ ಕುಟುಂಬದವರು ಏನು ಹೇಳಬೇಕೆಂದರೂ ನಾನು ಅವರ ಬಳಿ ಮಾತನಾಡುತ್ತೇನೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತೇವೆ. ಎಸ್‌ಪಿ ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ" ಎಂದು ಬೊಮ್ಮಾಯಿ ತಿಳಿಸಿದ್ದಾರೆ.


ಇನ್ನು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ ಅಪಘಾತದ ನಂತರ ಕಾರು ಕಾಲುವೆಯೊಳಗೆ ಬಿದ್ದಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ದಾವಣಗೆರೆ ಪೊಲೀಸರು ಹೇಳಿದ್ದಾರೆ. ಪೊಲೀಸರಿಂದ ವರದಿಗಾಗಿ ಕಾಯುತ್ತಿದ್ದೇನೆ. ಇಲಾಖೆಯು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತದೆ ಎಂದೂ ಹೇಳಿದ್ದಾರೆ.

Published by:Precilla Olivia Dias
First published: