Parrot: ಕೊನೆಗೂ ಮಾಲೀಕರ ಕೈ ಸೇರಿದ ನಾಪತ್ತೆಯಾಗಿದ್ದ ಗಿಣಿ, 50ರ ಬದಲು 75 ಸಾವಿರ ರೂ. ಬಹುಮಾನ!

ತುಮಕೂರಿನಲ್ಲಿ ನಾಪತ್ತೆಯಾಗಿದ್ದ ಗಿಣಿ ಕೊನೆಗೂ ಮಾಲೀಕರ ಕೈ ಸೇರಿದೆ. ಸಿದ್ದಗಂಗಾ ಮಠದ ಬಂಡೆ ಪಾಳ್ಯದಲ್ಲಿ ಗಿಣಿ ಪತ್ತೆಯಾಗಿದೆ . ಗಿಳಿ ಸಿಕ್ಕ ಖುಷಿಯಲ್ಲಿ ಹುಡುಕಿ ಕೊಟ್ಟವರಿಗೆ ದಂಪತಿ 75 ಸಾವಿರ ರೂ. ಬಹುಮಾನ ಕೊಟ್ಟಿದ್ದಾರೆ.

ಗಿಣಿ ಹುಡುಕಿಕೊಡುವಂತೆ ಜಾಹೀರಾತು ಕೊಟ್ಟಿದ್ದ ದಂಪತಿ

ಗಿಣಿ ಹುಡುಕಿಕೊಡುವಂತೆ ಜಾಹೀರಾತು ಕೊಟ್ಟಿದ್ದ ದಂಪತಿ

  • Share this:
ಗಿಳಿ (Parrot) ಅಂದರೆ ಯಾರಿಗೆ ಪ್ರೀತಿ (Love) ಇಲ್ಲ ಹೇಳಿ. ಕೆಲವು ಗಿಣಿಗಳು ಮನುಷ್ಯರ ಮಾತನ್ನು ಅನುಕರಿಸಿ, ತಾವೂ ಅವರಂತೆ ಮಾತನಾಡುತ್ತವೆ. ಕೆಲವರು ಪ್ರೀತಿಯಿಂದ ಗಿಣಿಯನ್ನು ಮನೆಯಲ್ಲಿ ಸಾಕಿ, ಅದನ್ನು ತಮ್ಮ ಮನೆ ಸದಸ್ಯನಂತೆ (Family Member) ನೋಡಿಕೊಳ್ಳುತ್ತಾರೆ. ತುಮಕೂರಿನಲ್ಲಿ ಜುಲೈ 16ರಂದು ಅರ್ಜುನ್ ಮತ್ತು ರಂಜನಾ ದಂಪತಿ ಸಾಕಿದ್ದ ಪ್ರೀತಿಯ ಗಿಣಿ ನಾಪತ್ತೆಯಾಗಿತ್ತು. ಅದರಿಂದ ಕಂಗಾಲಾಗಿದ್ದ ದಂಪತಿ ಗಿಣಿ ಹುಡುಕುತ್ತಾ ತುಮಕೂರು ನಗರದ ಬೀದಿ ಬೀದಿ ಸುತ್ತಿದ್ದರು. ಗಿಣಿಯನ್ನು ಹುಡುಕಿ ಕೊಡುವಂತೆ ಜಾಹೀರಾತು (Advertisement)) ನೀಡಿದ್ದರು. ಅಲ್ಲದೇ ಗಿಣಿ ಹುಡುಕಿ ಕೊಟ್ರೆ 50 ಸಾವಿರ ಬಹುಮಾನ (Reward) ಕೊಡುವುದಾಗಿ ಘೋಷಿದಿದ್ರು. ಇದೀಗ ನಾಪತ್ತೆಯಾಗಿದ್ದ ಗಿಣಿ ಕೊನೆಗೂ ಮಾಲೀಕರ ಕೈ ಸೇರಿದೆ. ಸಿದ್ದಗಂಗಾ ಮಠದ ಬಂಡೆ ಪಾಳ್ಯದಲ್ಲಿ ಗಿಣಿ ಪತ್ತೆಯಾಗಿದೆ . ಗಿಳಿ ಸಿಕ್ಕ ಖುಷಿಯಲ್ಲಿ ಹುಡುಕಿ ಕೊಟ್ಟವರಿಗೆ ದಂಪತಿ 75 ಸಾವಿರ ಬಹುಮಾನ ಕೊಟ್ಟಿದ್ದಾರೆ.

ಸಿದ್ದಗಂಗಾ ಮಠದ ಬಂಡೆ ಪಾಳ್ಯದಲ್ಲಿ ಗಿಣಿ ಪತ್ತೆ
ತುಮಕೂರಿನಲ್ಲಿ ಜುಲೈ 16ರಂದು ನಾಪತ್ತೆಯಾಗಿದ್ದ ಗಿಣಿ ಸಿದ್ದಗಂಗಾ ಮಠದ ಬಂಡೆ ಪಾಳ್ಯದಲ್ಲಿ ಪತ್ತೆಯಾಗಿದೆ. ಶ್ರೀನಿವಾಸ್ ಎಂಬುವರ ಮನೆಯ ಟೆರೆಸ್ ಮೇಲೆ ಗಿಳಿ ಇತ್ತಂತೆ. ಅರ್ಜುನ್ ಮತ್ತು ರಂಜನಾ ದಂಪತಿಯ ಜಾಹೀರಾತು ನೋಡಿದ್ದ ಶ್ರೀವಾಸ್, ಅದನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.

50 ಸಾವಿರದ ಬದಲು 75 ಸಾವಿರ ಬಹುಮಾನ
ಮನೆಯಿಂದ ಕಣ್ಮರೆಯಾದ ಸಾಗಿದ ಗಿಣಿಯನ್ನು ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ದಂಪತಿ ಘೋಷಿಸಿದ್ದರು. ಗಿಣಿ ಹುಡುಕಿ ಕೊಡುವಂತೆ ನಗರದ ತುಂಬಾ 40 ಕಡೆಗಳಲ್ಲಿ ಬಹುಮಾನದ ಬ್ಯಾನರ್ ಕಟ್ಟಿ ಹಗಲಿರುಳೆನ್ನದೆ, ನೆಚ್ಚಿನ ಸಾಕು ಗಿಣಿಯ ಹುಡುಕಾಟ ನಡೆಸುತ್ತಿದ್ದರು. ಇಂದು ಶ್ರೀನಿವಾಸ್ ಎಂಬುವವರು ಗಿಣಿಯನ್ನು ಹುಡುಕಿ ಕೊಟ್ಟಿದ್ದಾರೆ. ಅದಕ್ಕೆ ಸಂತೋಷದಿಂದ ದಂಪತಿ 50 ಸಾವಿರದ ಬದಲು 75 ಸಾವಿರ ಬಹುಮಾನ ನೀಡಿದ್ದಾರೆ.

ಇದನ್ನೂ ಓದಿ: Parrot: ಗಿಣಿಯು ಪಂಜರದೊಳಿಲ್ಲ, ಹುಡುಕಿ ಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ!

ದಂಪತಿ ಪ್ರೀತಿಯಿಂದ ಸಾಕಿದ್ದ ಗಿಣಿ
ತುಮಕೂರು ನಗರ ನಿವಾಸಿ ದಂಪತಿ ಪ್ರೀತಿಯಿಂದ ಗಿಣಿಯೊಂದನ್ನು ಸಾಕಿದ್ದರು. ಜಯನಗರ ಬಡಾವಣೆಯ ನಿವಾಸಿ ಅರ್ಜುನ್, ಪತ್ನಿ ರಂಜನಾ ಪ್ರೀತಿಯಿಂದ ಸಾಕಿದ್ದ ಗಿಣಿ ನಾಪತ್ತೆಯಾಗಿತ್ತು. ಆಫ್ರೀನ್ ಗ್ರೇ (ಂಜಿಡಿiಛಿಚಿಟಿ gಡಿeಥಿ ಠಿಚಿಡಿಡಿoಣ) ಜಾತಿಗೆ ಸೇರಿದ ಗಿಣಿ ಸಾಕಿದ್ದು, ಅದು ಮನೆಯಿಂದ ಇದೇ ಜುಲೈ 16ರಂದು ತಪ್ಪಿಸಿಕೊಂಡಿತ್ತು.

ಮನೆ ಮಕ್ಕಳಂತೆ ಇದ್ದ ಗಿಣಿ
ಮನೆಯಲ್ಲೇ ಮಕ್ಕಳಂತೆ ಪ್ರೀತಿಯಿಂದ ಸಾಕಿರುವ, ಈ ಗಿಣಿಗೆ ಹೊರಗೆ ತಾನೇ ಸ್ವತಂತ್ರವಾಗಿ ಆಹಾರ ಹುಡುಕಿ ತಿನ್ನುವ ಅಭ್ಯಾಸವಿಲ್ಲವಂತೆ. ಹೀಗಾಗಿ ಗಿಣಿ ಇನ್ನು ಎರಡು ದಿನದಲ್ಲಿ ಪತ್ತೆಯಾಗದಿದ್ದರೆ ಸಾವನಪ್ಪಲಿದೆಯಂತೆ. ಗಿಣಿ ಕಣ್ಮರೆಯಾಗಿ ಮೂರು ದಿನಗಳು ಕಳೆದು ಹೋಗಿವೆ. ಆದ್ದರಿಂದ ಕುಟುಂಬದ ಸದಸ್ಯರು ಗಿಣಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಅದು ಈಗ ಸಿಕ್ಕಿದೆ.

ಗಿಣಿಗಾಗಿ ಹಗಲಿರುಳು ಹುಡುಕಾಟ
ಮನೆಯಿಂದ ಹೊರಗೆ ಹಾರಿ ಹೋದ ಗಿಣಿಯನ್ನು ಕುಟುಂಬಸ್ಥರು ಹಗಲಿರುಳು ಹುಡುಕಾಟ ನಡೆಸುತ್ತಿದ್ದರು. ಮನೆಯವರೊಂದಿಗೆ ಪ್ರೀತಿಯಿಂದ ಹೊಂದಿಕೊಂಡಿದ್ದ ಗಿಣಿ ಕಣ್ಮರೆ ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿತ್ತು.

ಗಿಳಿಗಳಲ್ಲಿ ಅನೇಕ ವಿಧ

ಗಿಳಿಗಳು ಪ್ರಪಂಚದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಇರುವ 390 ಜಾತಿಗಳ ವರ್ಗಕ್ಕೆ ಸೇರಿದ ಸುಂದರವಾದ ಪಕ್ಷಿಗಳಾಗಿವೆ. ಗಿಳಿಯ ವೈಜ್ಞಾನಿಕ ಹೆಸರು ಸಿಟ್ಟಾಸಿಫಾರ್ಮ್ಸ್ ಎಂದು ಕರೆಯಲ್ಪಡುತ್ತದೆ. ಗಿಳಿಗಳು ಜನರ ನೆಚ್ಚಿನ ಸಾಕುಪ್ರಾಣಿಗಳಲ್ಲಿ ಒಂದಾಗಿದೆ. ಅಂಕಿಅಂಶಗಳ ಪ್ರಕಾರ, ಸುಮಾರು 15 ಮಿಲಿಯನ್ ಗಿಳಿಗಳಿವೆ.

ಇದನ್ನೂ ಓದಿ:  Viral Video: ಮೊದಲ ಬಾರಿಗೆ ಕನ್ನಡಿಯಲ್ಲಿ ಮುಖ ನೋಡಿಕೊಂಡ ನಾಯಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಪ್ರತಿ ಗಿಳಿಯ ವಿವರಣೆಗಳು ವಿಭಿನ್ನವಾಗಿವೆ, ಆದರೆ ಎಲ್ಲಾ ಜಾತಿಗಳು ಸಾಮಾನ್ಯವಾದದ್ದನ್ನು ಹೊಂದಿವೆ. ಈ ಹಕ್ಕಿಯ ವಿಶಿಷ್ಟ ಲಕ್ಷಣವೆಂದರೆ ಅದರ ಪ್ರಕಾಶಮಾನವಾದ ಬಣ್ಣ, ಹೆಚ್ಚಿನವು ಉದ್ದನೆಯ ಶಿಖರಗಳು ಮತ್ತು ಬಾಲಗಳನ್ನು ಹೊಂದಿವೆ. ಮುಖ್ಯ ಭಾಗ ಚೆನ್ನಾಗಿ ಹಾರುತ್ತದೆ ಮತ್ತು ಮರಗಳನ್ನು ಏರುತ್ತದೆ. ಗಿಳಿಯು ಪ್ರತಿ ಕಾಲಿನ ಮೇಲೆ ನಾಲ್ಕು ಕಾಲ್ಬೆರಳುಗಳನ್ನು ಹೊಂದಿರುತ್ತದೆ, ಇವುಗಳನ್ನು ಜೋಡಿಯಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ನಿರ್ದೇಶಿಸಲಾಗುತ್ತದೆ. ಕಳಪೆಯಾಗಿ ಹಾರುವ ಆ ಜಾತಿಗಳು ಎಲೆಗಳಲ್ಲಿ ಅಡಗಿಕೊಳ್ಳಲು ಹೆಚ್ಚಾಗಿ ಹಸಿರು ಬಣ್ಣದಲ್ಲಿರುತ್ತವೆ. ಕೊಕ್ಕೆಯ ಆಕಾರದ ಮತ್ತು ತೀಕ್ಷ್ಣವಾದ ಕೊಕ್ಕು ಹಕ್ಕಿಗೆ ಆಹಾರವನ್ನು ಕತ್ತರಿಸಲು ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ಮತ್ತು ಚಲನೆಯ ಸಮಯದಲ್ಲಿ ಇದನ್ನು ಹೆಚ್ಚುವರಿ ಬೆಂಬಲವಾಗಿ ಬಳಸಲಾಗುತ್ತದೆ.
Published by:Savitha Savitha
First published: