ವಿಧಾನಸಭೆ ಸಚಿವಾಲಯದಿಂದ ನಾಪತ್ತೆಯಾಗಿದ್ದ ಕಡತಗಳು ಕಡೆಗೂ ಪತ್ತೆ

news18
Updated:September 9, 2018, 4:26 PM IST
ವಿಧಾನಸಭೆ ಸಚಿವಾಲಯದಿಂದ ನಾಪತ್ತೆಯಾಗಿದ್ದ ಕಡತಗಳು ಕಡೆಗೂ ಪತ್ತೆ
news18
Updated: September 9, 2018, 4:26 PM IST
ರಮೇಶ್​ ಹಿರೇಜಂಬೂರು, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.9): ವಿಧಾನಸಭೆ ಸಚಿವಾಲಯದಲ್ಲಿ ಅಕ್ರಮವಾಗಿ ನಾಪತ್ತೆಯಾಗಿದ್ದ ಕಡತಗಳು ಕಡೆಗೂ ಪತ್ತೆಯಾಗಿದೆ. ಶಾಸಕರ ಭವನದಲ್ಲಿ ಇರಿಸಲಾಗಿದ್ದ ಕೆಲವು ಪ್ರಮುಖ ಕಡತಗಳು ಲಭ್ಯವಾಗಿದ್ದು, ಅವುಗಳನ್ನು ಸ್ಪೀಕರ್​ ಕಚೇರಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ವಿಧಾನಸೌಧದ ಜಂಟಿ ಕಾರ್ಯದರ್ಶಿ ಅವರ ಅಧಿಕೃತ ಕೊಠಡಿ ಒಡೆದು ವಿಧಾನಸಭಾ ಕಾರ್ಯದರ್ಶಿ ಎಸ್​ ಮೂರ್ತಿ ಅಕ್ರಮವಾಗಿ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ. ತಮ್ಮ ಅಧಿಕಾರ ಮೊಟಕುಗೊಳಿಸಲು ಈ ಕಾರ್ಯ ಮಾಡಲಾಗಿದೆ  ಎಂದು ಈ ಹಿಂದೆ ಜಂಟಿ ಕಾರ್ಯದರ್ಶಿ ಶಶಿಕಲಾಭಟ್​ ಆರೋಪಿಸಿದ್ದರು. ಅಲ್ಲದೇ ಈ ಸಂಬಂಧ ವಿಧಾನ ಸೌಧ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು.

ಈ ಬೆಳವಣಿಗೆ ನಂತರ ಕಡತಗಳನ್ನು ಸ್ಪೀಕರ್ ಕಚೇರಿಗೆ ಒಪ್ಪಿಸುವಂತೆ ವಿಧಾನಸಭೆ  ಕಾರ್ಯದರ್ಶಿ ಎಸ್. ಮೂರ್ತಿಗೆ ಸೂಚನೆ ನೀಡಲಾಗಿತ್ತು. ಈಗ ಈ ಕಡತಗಳು ಶಾಸಕರ ಭವನದಲ್ಲಿ ಪತ್ತೆಯಾಗಿದ್ದು, ಸ್ಪೀಕರ್​  ರಮೇಶ್​ ಕುಮಾರ್​ ಈ ಕಡತಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ಅನುಮತಿಯಿಲ್ಲದೆ ಕಡತ ವರ್ಗಾವಣೆ; ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ವಿರುದ್ಧ ದೂರು

ವಿಧಾನಸೌಧದ ವಜ್ರಮಹೋತ್ಸವ ಖರ್ಚುವೆಚ್ಚ  , ಬೆಳಗಾವಿ ಸುವರ್ಣಸೌಧ ಅಧಿವೇಶನದ ಖರ್ಚುವೆಚ್ಚ, ಸಚಿವಾಲಯದಿಂದ ಹಲವು ಸಾಮಗ್ರಿ ಖರೀದಿಸಿರುವ ಹಾಗೂ ಟೆಂಡರ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಫೈಲ್​ಗಳು ನಾಪತ್ತೆಯಾಗಿದ್ದವು ಎಂದು ಈ ಹಿಂದೆ ದೂರು ನೀಡಲಾಗಿತ್ತು.

ವಿಧಾನಸೌಧ ವಜ್ರಮಹೋತ್ಸವ, ಬೆಳಗಾವಿ ಅಧಿವೇಶನದ ಖರ್ಚುವೆಚ್ಚಗಳಲ್ಲಿ ಭಾರೀ  ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿದ್ದ ಹಿನ್ನಲೆ ಈ ಪ್ರಕರಣ ಕುತೂಹಲ ಪಡೆದಿತ್ತು.
Loading...

ಈಗ ಖಚಿತ ಮಾಹಿತಿ ಮೇರೆಗೆ ಶಾಸಕರ ಭವನದಲ್ಲಿ ಸಂಗ್ರಹಿಸಿಟ್ಟಿದ್ದ ಫೈಲ್ ಗಳನ್ನು ಸ್ಪೀಕರ್ ನಿರ್ದೇಶನದ ಮೇರೆಗೆ ವಶಪಡಿಸಿಕೊಂಡಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮವನ್ನು ಸ್ಪೀಕರ್​ ರಮೇಶ್​ ಕುಮಾರ್ ಕೈಗೊಳ್ಳಲಿದ್ದಾರೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ