KIMSನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಬೆಳ್ಳಂಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ಪತ್ತೆಯಾದ ಕಂದಮ್ಮ

ಕಿಮ್ಸ್ ಆವರಣದಲ್ಲಿ 300 ಸಿಸಿ ಕ್ಯಾಮೆರಾಗಳಿವೆ. ಎಲ್ಲಿ ನೋಡಿದರಲ್ಲಿ, ಎಲ್ಲ ವಾರ್ಡ್ ಗಳಲ್ಲಿಯೂ ಸಿಸಿ ಕ್ಯಾಮರಾಗಳಿವೆ. ಆದರೆ ಎಲ್ಲಿಯೂ ಮಗುವನ್ನು ತೆಗೆದುಕೊಂಡು ಹೋಗ್ತಿರುವ ಅಥವಾ ಮಗುವನ್ನು ವಾಪಸ್ ತಂದಿಡ್ತಿರೋ ದೃಶ್ಯಗಳು ಸೆರೆಯಾಗದೇ ಇರೋದು ಅಚ್ಚರಿಗೆ ಕಾರಣವಾಗಿದೆ.

ಮಗುವಿನ ತಾಯಿ

ಮಗುವಿನ ತಾಯಿ

  • Share this:
ಹುಬ್ಬಳ್ಳಿಯ ಕಿಮ್ಸ್ ನಲ್ಲಿ (KIMS, Hubballi) ಮಗು ನಾಪತ್ತೆ ಪ್ರಕರಣಕ್ಕೆ (Baby Missing Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಮ್ಸ್ ಆವರಣದಲ್ಲೇ ಮಗು ದಿಢೀರ್ ಪ್ರತ್ಯಕ್ಷವಾಗಿದೆ. ನಾಪತ್ತೆಯಾಗಿದ್ದ ಮಗು ಕಿಮ್ಸ್ ನಲ್ಲೇ ಪತ್ತೆಯಾಗಿರೋದು ಅಚ್ಚರಿಗೆ ಕಾರಣವಾಗಿದೆ. ಮಗು ನಾಪತ್ತೆ ಹಿಂದೆ ತಾಯಿ (Mother) ಕೈವಾಡವಿರೋ ಶಂಕೆ ವ್ಯಕ್ತವಾಗಿದೆ. ಮಗು ಕಳುವಾಗಿದ್ದರೂ ಹೆತ್ತ ಕರುಳು ಮಾತ್ರ ನಿನ್ನೆ ರಾತ್ರಿಯೇ ತಮ್ಮ ಊರಿಗೆ ವಾಪಸ್ಸಾಗಿರೋದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೂರು ತಂಡ ರಚಿಸುವ ಮೂಲಕ ಮಗು ಪತ್ತೆಗೆ ಪೊಲೀಸರು (Police) ಜಾಲ ಬೀಸಿದ್ದರು. ಪೊಲೀಸ್ ತನಿಖೆ ಚುರುಕುಗೊಂಡ ಹಿನ್ನೆಲೆ ಭಯಗೊಂಡ ಆರೋಪಿತರು, ಮಗುವನ್ನ ಕಿಮ್ಸ್ ಆವರಣಕ್ಕೆ (KIMS Hospital Ground) ವಾಪಸ್ ತಂದಿಟ್ಟು ಪರಾರಿಯಾಗಿದ್ದಾರೆ.

ಕಿಮ್ಸ್ ಒಳಗೆ ಕಾಂಪೌಂಡ್ ಬಳಿ ಮಗುವನ್ನಿಟ್ಟು ಪರಾರಿಯಾಗಿದ್ದಾರೆ. ಕಾಂಪೌಂಡ್ ಬಳಿ ಇಟ್ಟು ಹೋಗಿರೋದು ನಿನ್ನೆ ಕಳ್ಳತನವಾಗಿದ್ದ ಮಗು ಅನ್ನೋದು ಖಾತ್ರಿಯಾಗಿದ್ದು ಅದನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಮಗುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಪೊಲೀಸರ ತನಿಖೆಯ ನಂತರವಷ್ಟೆ ಮಗು ಎಲ್ಲಿತ್ತು...? ಯಾರು ಕಳುವು ಮಾಡಿದ್ರು ಅನ್ನೋದು ಬೆಳಕಿಗೆ ಬರಬೇಕಾಗಿದೆ.

ಈ ನಡುವೆ ಮಗುವನ್ನು ತನಗೆ ನೀಡುವಂತೆ ತಾಯಿ ಸಲ್ಮಾ ಮನವಿ ಮಾಡಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಪೊಲೀಸರು ಮಗುವನ್ನು ತಾಯಿಯ ಸುಪರ್ದಿಗೆ ಕೊಟ್ಟಿಲ್ಲ. ಮಗು ಸಿಕ್ಕಿರೋದಕ್ಕೆ ತಾಯಿ ಸಲ್ಮಾ ಹಾಗೂ ತಂದೆ ಹುಸೇನ್ ಶೇಖ್ ಇಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಮಗು ಸಿಕ್ಕಿದ್ದಕ್ಕೆ ಪೋಷಕರ ಸಂತಸ

ರಾತ್ರಿ 12 ಗಂಟೆವರೆಗೂ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದೆವು. ಆದರೂ ಮಗುವನ್ನು ಯಾರು ತೆಗೆದುಕೊಂಡು ಹೋದರೆಂಬ ಮಾಹಿತಿ ಸಿಗಲಿಲ್ಲ. ಆದ್ರೆ ಬೆಳಿಗ್ಗೆ ಮಗುವನ್ನು ಕಾಂಪೌಂಡ್ ಬಳಿ ಬಿಟ್ಟು ಹೋಗಿರೊ ಮಾಹಿತಿ ಸಿಕ್ಕಿತು. ಮಗು ಸಿಕ್ಕಿದ್ದು ನಮಗೆ ಖುಷಿ ತಂದಿದೆ. ಮಗು ಕಳ್ಳತನ ಮಾಡಿದ್ದರಿಂದ ನಮಗೆ ಭಯವಾಗಿತ್ತು. ಮಗು ಕಳ್ಳತನ ಮಾಡಿದವನನ್ನ ಪೊಲೀಸರು ಬಂಧಿಸಬೇಕಿದೆ.

ಇದನ್ನೂ ಓದಿ:  Viral News: ಕೋಳಿ ಮೊಟ್ಟೆ ಇಟ್ಟಿದ್ದೇ ದೊಡ್ಡ ಸುದ್ದಿ! 6 ಗಂಟೆಲಿ 24 ಮೊಟ್ಟೆ ಇಟ್ಟ ಚಿನ್ನು!

ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ತನಿಖೆ ಮಾಡಿದ್ದಾರೆ. ತನಿಖೆಯಿಂದ ಭಯಗೊಂಡು ಮಗುವನ್ನ ವಾಪಸ್ ತಂದಿಟ್ಟಿರಬಹುದು ಎಂದು ಮಗುವಿನ ತಂದೆ ಹುಸೇನ್ ತಿಳಿಸಿದ್ದಾರೆ.

ಮಗು ಸಿಕ್ಕಿರುವುದಕ್ಕೆ ಖುಷಿಯಾಗಿದೆ ನನ್ನ ಸುಪರ್ದಿಗೆ ಕೊಟ್ರೆ ಮತ್ತಷ್ಟು ಖುಷಿಯಾಗುತ್ತೆ ಆದಷ್ಟು ಬೇಗ ನನ್ನ ಮಗುವನ್ನು ನನಗೆ ಕೊಡಿಸಿ ಎಂದು ತಾಯಿ ಸಲ್ಮಾ ಮನವಿ ಮಾಡಿದ್ದಾರೆ.

ಮಗು ಆರೋಗ್ಯದ ಮೇಲೆ ತೀವ್ರ ನಿಗಾ

ಹುಬ್ಬಳ್ಳಿಯ ಕಿಮ್ಸ್ ನಿಂದ ಕಳ್ಳತನವಾಗಿದ್ದ ಮಗುವಿನ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರುಗಳಾಗಿಲ್ಲ. ಮಗು ಆರೋಗ್ಯದಿಂದ ಇದೆ ಎಂದು ಕಿಮ್ಸ್ ನ ನಿರ್ದೇಶಕ ಡಾ.ರಾಮಲಿಂಗಪ್ಪ ತಿಳಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಯಲ್ಲಿ ಕಳ್ಳತನವಾಗಿದ್ದ ಮಗು, ಅದೇ ಆವರಣದಲ್ಲಿ ಪತ್ತೆಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಅವರು, ಬೆಳಿಗ್ಗೆ 6.30 ರ ವೇಳೆಗೆ ಮಗು ಪತ್ತೆಯಾಗಿದೆ. ಕದ್ದುಕೊಂಡು ಹೋದವರೇ ಕಿಮ್ಸ್ ನ ಹಳೆಯ ಕಟ್ಟಡದ ಬಳಿ ಇಟ್ಟು ಹೋಗಿದ್ದಾರೆ. ಬೆಳಗ್ಗೆ ಸೆಕ್ಯೂರಿಟಿ ಗಮನಕ್ಕೆ ಬಂದ ನಂತರ ಮಗುವನ್ನು ರಕ್ಷಿಸಿ, ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.

ಕಿಮ್ಸ್ ನ ಎಲ್ಲಾ ಮೂಲೆಗಳಲ್ಲಿ ಕ್ಯಾಮೆರಾ ಕಣ್ಣು

ಮಗು ಆರೋಗ್ಯದಿಂದ ಇದೆ. ರಾತ್ರಿ ಸೊಳ್ಳೆ ಕಚ್ಚಿರೋದು ಬಿಟ್ಟರೆ ಮತ್ತೇನು ಆಗಿಲ್ಲ. ಸದ್ಯಕ್ಕೆ ಮಗುವನ್ನು ಡಿಸ್ಚಾರ್ಜ್ ಮಾಡುತ್ತಿಲ್ಲ. 48 ಗಂಟೆಗಳ ಕಾಲ ಅಬ್ಸರ್ವೇಷನ್ ನಲ್ಲಿ ಇಡಲಾಗುತ್ತದೆ. ಮಗುವಿನ ಕಳ್ಳತನಕ್ಕೆ ಭದ್ರತಾ ವೈಫಲ್ಯ ಕಾರಣ ಎನ್ನಲಾಗುವುದಿಲ್ಲ.

Missing baby found in KIMS Hospital ground saklb mrq
ಕಿಮ್ಸ್


ಕಿಮ್ಸ್ ನ ಎಲ್ಲ ವಿಭಾಗಗಳಲ್ಲಿಯೂ ಸಿಸಿ ಕ್ಯಾಮೆರಾಗಳಿವೆ. ಆದರೆ ಎಲ್ಲಿಯೂ ಮಗುವನ್ನು ತೆಗೆದುಕೊಂಡು ಹೋಗುತ್ತಿರೋ ದೃಶ್ಯಗಳು ಸೆರೆಯಾಗಿಲ್ಲ. ಮಗುವಿನ ತಾಯಿಯೂ ಕಳ್ಳನನ್ನು ಗುರುತು ಹಿಡಿದಿಲ್ಲ. ಈ ಕುರಿತು ಪೊಲೀಸರು ತನಿಖೆ ಮಾಡ್ತಿದ್ದಾರೆ. ಸದ್ಯಕ್ಕೆ ನಾವು ಮಗುವಿನ ಆರೈಕೆ ಬಗ್ಗೆ ಗಮನ ಹಸಿರಿದ್ದೇವೆ ಎಂದು ಡಾ.ರಾಮಲಿಂಗಪ್ಪ ತಿಳಿಸಿದ್ದಾರೆ.

300 ಕ್ಯಾಮೆರಾಗಳಿದ್ದರೂ ಸೆರೆಯಾಗದ ದೃಶ್ಯಗಳು

ಕಿಮ್ಸ್ ಆವರಣದಲ್ಲಿ 300 ಸಿಸಿ ಕ್ಯಾಮೆರಾಗಳಿವೆ. ಎಲ್ಲಿ ನೋಡಿದರಲ್ಲಿ, ಎಲ್ಲ ವಾರ್ಡ್ ಗಳಲ್ಲಿಯೂ ಸಿಸಿ ಕ್ಯಾಮರಾಗಳಿವೆ. ಆದರೆ ಎಲ್ಲಿಯೂ ಮಗುವನ್ನು ತೆಗೆದುಕೊಂಡು ಹೋಗ್ತಿರುವ ಅಥವಾ ಮಗುವನ್ನು ವಾಪಸ್ ತಂದಿಡ್ತಿರೋ ದೃಶ್ಯಗಳು ಸೆರೆಯಾಗದೇ ಇರೋದು ಅಚ್ಚರಿಗೆ ಕಾರಣವಾಗಿದೆ.

ಕರಿ ಮುಖದ ವ್ಯಕ್ತಿ ನನ್ನ ಬಳಿ ಇದ್ದ ಮಗುವನ್ನು ಕಿತ್ತುಕೊಂಡು ಹೋಗಿದ್ದಾನೆ ಅಂತ ಹೇಳೋ ತಾಯಿ, ಸಿಸಿ ಕ್ಯಾಮೆರಾದಲ್ಲಿ ಹೋಗಿ ಬರುವ ವ್ಯಕ್ತಿಗಳಲ್ಲಿ ಕಳ್ಳ ಯಾರೆಂಬುದನ್ನು ಗುರುತು ಹಚ್ಚುವಲ್ಲಿ ವಿಫಲವಾಗಿದ್ದಾಳೆ.

ಇದನ್ನೂ ಓದಿ:  Kodagu: ಪ್ರೀತಿಯಿಂದ ಬೆಳೆದಿದ್ದ ಶಿಬಿರವನ್ನು 400 ಕಿಲೋ ಮೀಟರ್ ದೂರದಿಂದ ಹುಡುಕಿ ಬಂದ ಕುಶ ಆನೆ 

ಅಚ್ಚರಿಗೆ ಕಾರಣವಾದ ತಾಯಿಯ ನಡೆ

ಇದರ ಜೊತೆ ಮಗುವಿನ ತಾಯಿ ಮತ್ತು ಕುಟುಂಬದ ಸದಸ್ಯರು ರಾತ್ರಿಯೇ ತಮ್ಮ ಊರಿಗೆ ಹೋಗಿರೋದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಮಗು ಕಳುವುದ ಎಷ್ಟೋ ಹೊತ್ತಿನ ನಂತರ ಮಗುವನ್ನು ಯಾರೋ ಅಪರಿಚಿತ ವ್ಯಕ್ತಿ ಕದ್ದೊಯ್ದಿದ್ದಾನೆ ಎಂದು ತಾಯಿ ಸಲ್ಮಾ ಕಿಮ್ಸ್ ಸಿಬ್ಬಂದಿ ಗಮನಕ್ಕೆ ತಂದಿದ್ದರು.

ತಾಯಿ ಸುತ್ತವೇ ಅನುಮಾನದ ಹುತ್ತ

ನಿನ್ನೆಯಲ್ಲಾ ಪೊಲೀಸರು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಸಿಸಿ ಕ್ಯಾಮೆರಾದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಮಗುವಿನ ತಾಯಿ ಮಾತ್ರ ರಾತ್ರಿಯೇ ತಮ್ಮ ಊರಿಗೆ ವಾಪಸ್ಸಾಗಿದ್ದಾಳೆ. ಮಗು ಪತ್ತೆಯಾಗಿದೆ ಎಂದು ಬೆಳಗ್ಗೆ 6.30ಕ್ಕೇ ಹೇಳಿದ್ದರೂ, ಬಂದಿರೋದು ಮಾತ್ರ 9 ಗಂಟೆ ವೇಳೆಗೆ. ಇದೆಲ್ಲವನ್ನು ಗಮನಿಸಿದಾಗ ಅನುಮಾನಕ್ಕೆಡೆ ಮಾಡಿಕೊಡುತ್ತಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published by:Mahmadrafik K
First published: