ಕೊರೊನಾ ಕರ್ತವ್ಯದ ನಡುವೆ ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾದ ಕಳ್ಳತನ, ನಾಪತ್ತೆ ಪ್ರಕರಣಗಳು

ಅಪರಾಧ ಪ್ರಕರಣಗಳು ನಡೆದ ತಕ್ಷಣ ಪೊಲೀಸರಿಗೆ ಸಹಾಯಕ್ಕೆ ಬರುತ್ತಿದ್ದ ಸಿಸಿ ಕ್ಯಾಮೆರಾಗಳು ಬಂದ್​ ಆಗಿರುವುದರಿಂದ ಅಪರಾಧಿಗಳನ್ನು ತಕ್ಷಣಕ್ಕೆ ಪತ್ತೆ ಹಚ್ಚುವ ಕಾರ್ಯ ವಿಳಂಬ ವಾಗಿದೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಹಾವೇರಿ (ಜೂ. 15): ವೀಕೆಂಡ್ ಕರ್ಪ್ಯೂ, ಲಾಕ್​ಡೌನ್​ ನಿಯಂತ್ರಣ ಸೇರಿದಂತೆ ಜನರ ರಕ್ಷಣೆಯ ಬಿಡುವಿಲ್ಲದ ಕೆಲಸದಲ್ಲಿ ನಿರತರಾಗಿರುವ ಹಾವೇರಿ ಪೊಲೀಸರಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ನಾಪತ್ತೆ ಮತ್ತು ಕಳ್ಳತನ ಪ್ರಕರಣಗಳು ದೊಡ್ಡ ತಲೆನೋವಾಗಿವೆ. ಯಾಕಂದ್ರೆ ಕಳ್ಳತನ, ಅಕ್ರಮ ಚಟುವಟಿಕೆಗಳು ಅಂತಹ ಅಪರಾಧ ಪ್ರಕರಣಗಳು ನಡೆದಾಗ ಪೊಲೀಸರಿಗೆ ಸಿಸಿ ಕ್ಯಾಮರಾಗಳು ನೆರವಾಗ್ತಿದ್ದವು. ಆದ್ರೆ ನಗರದಲ್ಲಿನ ಸಿಸಿ ಕ್ಯಾಮೆರಾಗಳು ಕೆಲಸ ನಿರ್ವಹಿಸದೆ ಕಣ್ಣು ಮುಚ್ಚಿವೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.  ನಗರದಲ್ಲಿ ಕಳ್ಳತನ, ಅಪಘಾತ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣ  ಪತ್ತೆ ಮಾಡಲು ಪೊಲೀಸರಿಗೆ ಸಿಸಿ ಕ್ಯಾಮರಗಳು ಸಹಾಯ ಮಾಡುತ್ತಿದ್ದವು. ವಿವಿಧ ಬಗೆಯ ಅಪರಾಧ ಪ್ರಕರಣಗಳು ನಡೆದಾಗ ಪೊಲೀಸರಿಗೆ ಅನುಕೂಲ ಆಗಲಿ ಅಂತಾ ನಗರದಲ್ಲಿ ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿತ್ತು. ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ನಗರದ ಇಪ್ಪತ್ತೈದಕ್ಕೂ ಅಧಿಕ ಕಡೆಗಳಲ್ಲಿ ಸಿಸಿ ಕ್ಯಾಮರಾಗಳು ಅಳವಡಿಕೆ ಆಗಿದ್ದವು. ಆದರೆ ಕಳೆದ ಕೆಲವು ತಿಂಗಳುಗಳಿಂದ ಸಿಸಿ ಕ್ಯಾಮರಾಗಳು ಕಣ್ಣು ಮುಚ್ಚಿವೆ. ಇದ್ರಿಂದ ಅಪರಾಧ ಪ್ರಕರಣಗಳನ್ನ ನಡೆಸೋರಿಗೆ ಭಯ ಇಲ್ಲದಂತಾಗಿದೆ. 

  ಜೆ.ಎಚ್.ಪಟೇಲ್ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಬಸವೇಶ್ವರ ನಗರ, ಗಾಂಧಿ ವೃತ್ತ, ಸುಭಾಸ ವೃತ್ತ ಹೀಗೆ ನಗರದ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನ ಹಾಕಲಾಗಿತ್ತು. ಎಲ್ಲೆಲ್ಲೂ ಹದ್ದಿನಕಣ್ಣು ಇದ್ದಿದ್ದರಿಂದ ಈ ಅಪರಾಧ ಪ್ರಕರಣಗಳಿಗೆ ಬಹುತೇಕ ಬ್ರೇಕ್ ಬಿದ್ದಿತ್ತು.

  ಇದನ್ನು ಓದಿ: ಹಾನಗಲ್ ಉಪಚುನಾವಣೆ ಅಭ್ಯರ್ಥಿ ಘೋಷಣೆ ಮಾಡಿದ ಜೆಡಿಎಸ್

  ಇನ್ನು ಲಾಕ್ ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ ನಾಲ್ವತ್ತೊಂಬತ್ತು ನಾಪತ್ತೆ ಪ್ರಕರಣಗಳು ನಡೆದಿವೆ. ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ಅದು ಇದು ಅಂತಾ ಒಂದಲ್ಲ ಒಂದು ಅಪರಾಧ ಪ್ರಕರಣಗಳು ನಡೆಯುತ್ತಲೆ ಇವೆ. ಅಪರಾಧ ಪ್ರಕರಣಗಳು ನಡೆದ ತಕ್ಷಣ ಪೊಲೀಸರಿಗೆ ಸಹಾಯಕ್ಕೆ ಬರುತ್ತಿದ್ದ ಸಿಸಿ ಕ್ಯಾಮೆರಾಗಳು ಬಂದ್​ ಆಗಿರುವುದರಿಂದ ಅಪರಾಧಿಗಳನ್ನು ತಕ್ಷಣಕ್ಕೆ ಪತ್ತೆ ಹಚ್ಚುವ ಕಾರ್ಯ ವಿಳಂಬ ವಾಗಿದೆ.

  ಇದನ್ನು ಓದಿ: ಬಾಲಿವುಡ್ ತಾರೆ ನೀನಾ ಗುಪ್ತಾ ಆತ್ಮಚರಿತ್ರೆ ಬಿಡುಗಡೆ; ವಿವಿಯನ್ ರಿಚರ್ಡ್ಸ್ ಸಂಬಂಧದ ಬಗ್ಗೆ ಹೇಳಿದ್ದೇನು?

  ನಗರದಲ್ಲಿ ಸಂಚಾರ ನಿಯಂತ್ರಣ ಉಲ್ಲಂಘನೆ ಮಾಡುವವರ‌ ಮೇಲೆ ಕ್ರಮ ಕೈಗೊಳ್ಳಲು  ಅನುಕೂಲ ಆಗುತ್ತದೆ. ಆದರೆ ಕೇವಲ ಬೆರಳೆಣಿಕೆಯಷ್ಟು ಸಿಸಿ ಕ್ಯಾಮರಾಗಳನ್ನ ಹೊರತುಪಡಿಸಿದರೆ ಬಹುತೇಕ ಕ್ಯಾಮರಾಗಳು ಕಣ್ಣು ಮುಚ್ಚಿವೆ. ಇದು ನಗರದಲ್ಲಿನ ಸಾರ್ವಜನಿಕರು ಹಾಗೂ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ.

  ನಗರದಲ್ಲಿ ಕೆಲವೇ ಕೆಲವು ಸಿಸಿ ಕ್ಯಾಮರಾಗಳನ್ನ ಹೊರತುಪಡಿಸಿದರೆ ಬಹುತೇಕ ಕ್ಯಾಮರಾಗಳು ಕಣ್ಣು ಮುಚ್ಚಿವೆ. ಇದು ಅಪರಾಧ ಪ್ರಕರಣಗಳು ನಡೆದಾಗ ತನಿಖೆಗೆ ಇಳಿಯುವ ಪೊಲೀಸರಿಗೆ ಕೊಂಚ ನಿರಾಸೆ ಮೂಡಿಸಿತ್ತಿದೆ. ಇದರ ಜೊತೆಗೆ ದೊಡ್ಡ ದೊಡ್ಡ ಅಂಗಡಿಗಳು, ಮಾಲ್ ಗಳು, ಬ್ಯಾಂಕ್ ಗಳು ಸೇರಿದಂತೆ ಹಲವು ಕಡೆಗಳಲ್ಲಿ ಅಂಗಡಿಯವರು, ಬ್ಯಾಂಕ್ ನವರು ಸಿಸಿ ಕ್ಯಾಮರಾಗಳನ್ನ ಅಳವಡಿಸಿ ಪೊಲೀಸರ ತನಿಖೆಗೆ ಅನುಕೂಲ ಕಲ್ಪಿಸಬೇಕಿದೆ. ಆ ಮೂಲಕ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕೋ ಕೆಲಸ ಮಾಡಬೇಕಿದೆ. ಆದಷ್ಟು ಬೇಗ ಪೊಲೀಸ್ ಇಲಾಖೆ ಅಧಿಕಾರಿಗಳು ಸಂಬಂಧಿಸಿದರ ಜೊತೆಗೆ ಮಾತುಕತೆ ಮಾಡಿ ನಗರದಲ್ಲಿ ಕಣ್ಣು ಮುಚ್ಚಿರೋ ಸಿಸಿ ಕ್ಯಾಮರಾಗಳು ಕಣ್ತೆರೆದು ನೋಡುವಂತೆ ಮಾಡಬೇಕಿದೆ.

  (ವರದಿ: ಮಂಜುನಾಥ್​ ತಳವಾರ)


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: